Login or Register ಅತ್ಯುತ್ತಮ CarDekho experience ಗೆ
Login

2023ರ ಹ್ಯುಂಡೈ ವರ್ನಾದ ಹೊಸ ಟರ್ಬೋ-ಪೆಟ್ರೋಲ್ ಇಂಜಿನ್: ನೀವಿದನ್ನು ತಿಳಿದುಕೊಳ್ಳಲೇಬೇಕು

ಹುಂಡೈ ವೆರ್ನಾ ಗಾಗಿ shreyash ಮೂಲಕ ಮಾರ್ಚ್‌ 02, 2023 08:39 pm ರಂದು ಪ್ರಕಟಿಸಲಾಗಿದೆ

ಈ ಹೊಸ ಪೀಳಿಗೆ ವರ್ನಾ ಮಾರ್ಚ್ 21, 2023 ರಂದು ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ; ಬುಕಿಂಗ್‌ಗಳು ತೆರೆದಿವೆ.

  • ಹೊಸ ಪೀಳಿಗೆ ವರ್ನಾವನ್ನು ರೂ. 25,000 ಮುಂಗಡ ಹಣ ಪಾವತಿಸುವ ಮೂಲಕ ಕಾಯ್ದಿರಿಸಬಹುದು.
  • ಸ್ಪೈ ಶಾಟ್‌ಗಳಲ್ಲಿ ಮತ್ತು ಟೀಸರ್‌ಗಳ ಮೂಲಕ ಈಗಾಗಲೇ ಮುಂಬರುವ ಸೆಡಾನ್‌ನ ಡಿಸೈನ್ ಸೋರಿಕೆಯಾಗಿದೆ.
  • ಹ್ಯುಂಡೈ ಈ ಸೆಡಾನ್‌ಗೆ ಎರಡು ಇಂಜಿನ್ ಆಯ್ಕೆಗಳನ್ನು ನೀಡುತ್ತಿದೆ, ಅವುಗಳೆಂದರೆ: 1.5-ಲೀಟರ್ T-GDi (ಟರ್ಬೋ) ಪೆಟ್ರೋಲ್ ಮತ್ತು 1.5-ಲೀಟರ್ MPi (ಸ್ವಾಭಾವಿಕವಾಗಿ ಚೋಷಿಸುವ) ಪೆಟ್ರೋಲ್ ಇಂಜಿನ್.
  • ವರ್ನಾ ಇನ್ನು ಮುಂದೆ ಡೀಸೆಲ್ ಇಂಜಿನ್‌ನೊಂದಿಗೆ ಲಭ್ಯವಿರುವುದಿಲ್ಲ.
  • ADAS ನಂತಹ ಹೆಚ್ಚಿನ ಫೀಚರ್‌ಗಳನ್ನು ಪಡೆದಿದೆ.

ಹ್ಯುಂಡೈ ಹೊಸ ಫೀಚರ್‌ಗಳು ಮತ್ತು ನವೀಕೃತ ತಂತ್ರಜ್ಞಾನ ಹೊಂದಿರುವ ಹೊಸ ಪೀಳಿಗೆ ವರ್ನಾವನ್ನು ಭಾರತಕ್ಕೆ ಪರಿಚಯಿಸಲು ಸಿದ್ಧವಾಗಿದೆ. ಈ ಕಾಂಪ್ಯಾಕ್ಟ್ ಸೆಡಾನ್ ಈಗಾಗಲೇ ಇರುವ1.5-ಲೀಟರ್ ಸ್ವಾಭಾವಿಕವಾಗಿ ಚೋಷಿಸುವ (MPi) ಪೆಟ್ರೋಲ್ ಇಂಜಿನ್‌ನೊಂದಿಗೆ ಹೊಸ 1.5-ಲೀಟರ್ T-GDi ಟರ್ಬೋಚಾರ್ಜ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಇದರ ಪಾದಾರ್ಪಣೆಗೂ ಮೊದಲು, ನವೀಕೃತ ಅಲ್ಕಝಾರ್‌ನಲ್ಲಿ ನೀಡಲಾಗುವ ಹೊಸ ಟರ್ಬೋ-ಪೆಟ್ರೋಲ್ ಇಂಜಿನ್ ಉತ್ಪಾದಿಸುವ ಪವರ್ ಮತ್ತು ಟಾರ್ಕ್ ವಿವರಗಳನ್ನೂ ನಾವು ಪಡೆದಿದ್ದೇವೆ.

ನಿರ್ದಿಷ್ಟತೆಗಳು

1.5-ಲೀಟರ್ ಟರ್ಬೋ

1.5-ಲೀಟರ್ NA

ಪವರ್

160PS

115PS

ಟಾರ್ಕ್

253Nm

144Nm

ಟ್ರಾನ್ಸ್‌ಮಿಷನ್

6-ಸ್ಪೀಡ್ MT/7-ಸ್ಪೀಡ್ DCT

6-ಸ್ಪೀಡ್ MT/CVT

ಮೇಲೆ ಹೇಳಲಾದ ಎರಡೂ ಇಂಜಿನ್‌ಗಳು ಮುಂಬರುವ BS6 ಹಂತ II ನಿಯಮಗಳಿಗೆ ಅನುಸಾರವಾಗಿರುತ್ತದೆ, ಹಾಗೂ ಅವುಗಳು E20 ಇಂಧನ (ಶೇಕಡಾ 20 ಇಥೆನಾಲ್ –ಮಿಶ್ರಿತ ಪೆಟ್ರೋಲ್)ದಲ್ಲೂ ಓಡುತ್ತದೆ. ಅಲ್ಲದೇ, ಈ ಕಾರು ತಯಾರಕರು ಈ ಸೆಡಾನ್‌ನಿಂದ 1.5-ಲೀಟರ್ ಡೀಸೆಲ್ ಇಂಜಿನ್ ಆಯ್ಕೆಯನ್ನು ಕೈಬಿಟ್ಟಿದ್ದಾರೆ.

ಇದನ್ನೂ ನೋಡಿ: ಹೊಸ ಹ್ಯುಂಡೈ ಸಬ್‌ಕಾಂಪ್ಯಾಕ್ಟ್ SUV ಅನ್ನು ಟಾಟಾ ಪಂಚ್‌ಗೆ ಸಮರ್ಥ ಪ್ರತಿಸ್ಪರ್ಧಿ ಎಂದು ಊಹಿಸಲಾಗಿದೆ

ಈ ಹೊಸ ಟರ್ಬೋ-ಪೆಟ್ರೋಲ್ ಇಂಜಿನ್ ವರ್ನಾ ಸ್ಪರ್ಧಿಸುವ ಈ ವಿಭಾಗದಲ್ಲಿ ಅತ್ಯಂತ ಸಮರ್ಥ ಮಾತ್ರವಲ್ಲದೇ ಯೋಗ್ಯ ಇಂಧನ ಆರ್ಥಿಕರತೆಯ ಭರವಸೆ ನೀಡುತ್ತದೆ. ಈ ಎಂಜಿನ್ ಅನ್ನೇ ಹೊಂದಿರುವ ದೊಡ್ಡದಾದ ಮತ್ತು ಬಾಕ್ಸ್ ಆಕಾರದ ಅಲ್ಕಾಝಾರ್‌ಗೆ (18kmpl ತನಕ) ಮೈಲೇಜ್ ಕ್ಲೈಮ್ ಮಾಡಲಾಗಿದ್ದರೆ, ಸಣ್ಣ ಮತ್ತು ಹೆಚ್ಚು ಏರೋಡೈನಾಮಿಕ್ ವರ್ನಾದಲ್ಲಿ ಇದು ಸುಮಾರು 20kmpl ಅನ್ನು ನೀಡಲಿದೆ.

ತೀಕ್ಷ್ಣ ಹೊಸ ನೋಟಗಳು

ಈ ಹೊಸ ಪೀಳಿಗೆ ವರ್ನಾದ ಡಿಸೈನ್ ಅನ್ನು ಈಗಾಗಲೇ ಟೀಸರ್‌ಗಳು ಮತ್ತು ಸ್ಪೈ ಶಾಟ್‌ಗಳ ಮೂಲಕ ಅನಾವರಣಗೊಳಿಸಲಾಗಿದೆ. ಈ ಸೆಡಾನ್‌ನ ಮುಂಭಾಗವು ಉದ್ದ ಪಟ್ಟಿಯ LED DRL ನೊಂದಿಗೆ 'ಪ್ಯಾರಮೆಟ್ರಿಕ್ ಜ್ಯುವೆಲ್' ಡಿಸೈನ್ ಗ್ರಿಲ್ ಅನ್ನು ಹೊಂದಿದೆ.

ಇಳಿಜಾರಿನ ರೂಫ್‌ಲೈನ್, ಬದಿಯಿಂದ ನೋಡಿದಾಗ ಚೂಪಾಗಿ ಕಾಣುತ್ತದೆ ಮತ್ತು ಸಿಲ್ಹೊಯೆಟ್ ಜಾಗತಿಕವಾಗಿ ಲಭ್ಯವಿರುವ ಎಲಾಂಟ್ರಾದಿಂದ ಪ್ರೇರಿತವಾದಂತೆ ತೋರುತ್ತದೆ. ಈ ಹೊಸ ವರ್ನಾದ ಹಿಂಬದಿಯಲ್ಲಿ ಸಂಪರ್ಕಿತ LED ಟೈಲ್‌ಲೈಟ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ಹ್ಯುಂಡೈ ನೀಡುತ್ತದೆ ನವೀಕೃತ ಅಲ್ಕಝಾರ್ ಟರ್ಬೋ ಪೆಟ್ರೋಲ್ ಇಂಜಿನ್, ಬುಕಿಂಗ್‌ಗಳು ತೆರೆದಿವೆ

ನಿರೀಕ್ಷಿಸಬಹುದಾದ ಫೀಚರ್‌ಗಳು

ಈ ಹೊಸ ವರ್ನಾ ಹೊಸ ಇಂಟೆಗ್ರೇಟೆಡ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿರುವ ಸಾಧ್ಯತೆ ಇದೆ (ಇನ್ಫೊಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್). ಅಲ್ಲದೇ ಇದು ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ADAS ನ ಸಂಪೂರ್ಣ ಸೂಟ್‌ನೊಂದಿಗೆ ಸಜ್ಜುಗೊಂಡಿದೆ. ಇತರ ನಿರೀಕ್ಷಿತ ಫೀಚರ್‌ಗಳೆಂದರೆ ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವಾತಾಯನದ ಮುಂಭಾಗದ ಸೀಟುಗಳು ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಮ್.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹ್ಯುಂಡೈ ಹೊಸ ವರ್ನಾದ ಬೆಲೆಗಳನ್ನು ಮಾರ್ಚ್ 21 ರಂದು ಬಹಿರಂಗಪಡಿಸಲಿದ್ದು, ಇದು ರೂ 10 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದೆಂಬ ನಿರೀಕ್ಷೆ ಹೊಂದಿದ್ದೇವೆ. ಬಿಡುಗಡೆಗೊಂಡ ನಂತರ, ಇದು ಸ್ಕೋಡಾ ಸ್ಲಾವಿಯಾ, ಫೋಕ್ಸ್‌ವಾಗನ್ ವರ್ಟಸ್, ಮಾರುತಿ ಸಿಯಾಝ್ ಮತ್ತು ನವೀಕೃತ ಹೋಂಡಾ ಸಿಟಿಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ.

Share via

Write your Comment on Hyundai ವೆರ್ನಾ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ಹೊಸ ವೇರಿಯೆಂಟ್
Rs.6 - 9.50 ಲಕ್ಷ*
ಹೊಸ ವೇರಿಯೆಂಟ್
Rs.11.07 - 17.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ