• English
  • Login / Register

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಆಗುತ್ತಿರುವ ಫೇಸ್‌ಲಿಪ್ಟೆಡ್‌ Nissan Magnite

ನಿಸ್ಸಾನ್ ಮ್ಯಾಗ್ನೈಟ್ ಗಾಗಿ dipan ಮೂಲಕ ನವೆಂಬರ್ 19, 2024 09:10 pm ರಂದು ಪ್ರಕಟಿಸಲಾಗಿದೆ

  • 47 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೇಸ್‌ಲಿಫ್ಟೆಡ್ ಮ್ಯಾಗ್ನೈಟ್ ಅನ್ನು ಎಡಗೈ-ಡ್ರೈವ್‌ನ ಮಾರುಕಟ್ಟೆಗಳು ಸೇರಿದಂತೆ 65ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ

2024 Nissan Magnite exported to South Africa

  • ದಕ್ಷಿಣ ಆಫ್ರಿಕಾದ-ಸ್ಪೆಕ್ ಮ್ಯಾಗ್ನೈಟ್ ಬೆಲೆಯು R 2,46,200ರಿಂದ R 3,23,900 ವರೆಗೆ ಇದೆ(11.59 ಲಕ್ಷದಿಂದ ರೂ.ನಿಂದ 15.21 ಲಕ್ಷ ರೂ.- ದಕ್ಷಿಣ ಆಫ್ರಿಕಾದ ರಾಂಡ್‌ನಿಂದ ಅಂದಾಜು ಪರಿವರ್ತನೆ).

  • ಇದು ವಿಸಿಯ, ಆಕ್ಸೆಂಟಾ ಮತ್ತು ಆಕ್ಸೆಂಟಾ ಪ್ಲಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ.

  • ಅಲಾಯ್ ವೀಲ್ ವಿನ್ಯಾಸ, ಇಂಟೀರಿಯರ್ ಥೀಮ್ ಮತ್ತು ಸೀಟ್ ಕವರ್‌ ಸೇರಿದಂತೆ ಹೊರಭಾಗ ಮತ್ತು ಇಂಟೀರಿಯರ್‌ ವಿನ್ಯಾಸವು ಒಂದೇ ಆಗಿರುತ್ತದೆ.

  • ಫೀಚರ್‌ನ ಸೂಟ್ 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಹೋಲುತ್ತದೆ.

  • ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿವೆ.

  • ಎಂಜಿನ್ ಆಯ್ಕೆಗಳು ಒಂದೇ ರೀತಿಯ ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ಒಂದೇ ಆಗಿರುತ್ತವೆ.

  • ಮ್ಯಾಗ್ನೈಟ್‌ನ 1.5 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಇಲ್ಲಿಯವರೆಗೆ ಜಾಗತಿಕವಾಗಿ ಮಾರಾಟವಾಗಿವೆ.

ನಿಸ್ಸಾನ್ ಮ್ಯಾಗ್ನೈಟ್ ಇತ್ತೀಚೆಗೆ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ, ಇದು ಒಳಗೆ ಮತ್ತು ಹೊರಗೆ ಹೊಸ ವಿನ್ಯಾಸ ಅಂಶಗಳನ್ನು ತಂದಿದೆ. ಈ ಮೇಡ್-ಇನ್-ಇಂಡಿಯಾ ಸಬ್-4m ಎಸ್‌ಯುವಿಯ ಫೇಸ್‌ಲಿಫ್ಟೆಡ್ ಮಾಡೆಲ್‌ನ ರಫ್ತು ಭಾರತದಿಂದ ಪ್ರಾರಂಭವಾಗಿದ್ದು, 2,700 ಕ್ಕೂ ಹೆಚ್ಚು ಯುನಿಟ್‌ಗಳನ್ನು ಈಗ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತಿದೆ. ನಿಸ್ಸಾನ್ ಹೊಸ ಮ್ಯಾಗ್ನೈಟ್ ಅನ್ನು 65 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುವುದು ಎಂದು ಹೇಳಿದೆ, ಇದರಲ್ಲಿ ಎಡಗೈ-ಡ್ರೈವ್‌ನ ಪ್ರದೇಶಗಳು ಸೇರಿವೆ. ದಕ್ಷಿಣ ಆಫ್ರಿಕಾದ ಸ್ಪೆಕ್ ಮ್ಯಾಗ್ನೈಟ್ ಅನ್ನು ನಾವು ಸಂಕ್ಷಿಪ್ತವಾಗಿ ತಿಳಿಯೋಣ, ಬೆಲೆಗಳಿಂದ ಪ್ರಾರಂಭವಾಗಲಿ:

ಬೆಲೆಗಳು 

2024 Nissan Magnite exported to South Africa

ನಿಸ್ಸಾನ್ ಮ್ಯಾಗ್ನೈಟ್‌ನ ದಕ್ಷಿಣ ಆಫ್ರಿಕಾ ಆವೃತ್ತಿ

(ದಕ್ಷಿಣ ಆಫ್ರಿಕಾದ ರಾಂಡ್‌ನಿಂದ ಅಂದಾಜು ಪರಿವರ್ತನೆ)

ನಿಸ್ಸಾನ್ ಮ್ಯಾಗ್ನೈಟ್‌ನ ಭಾರತೀಯ ಮೊಡೆಲ್‌

R 2,46,200 ರಿಂದ R 3,23,900

(11.59 ಲಕ್ಷ ರೂ.ನಿಂದ 15.21 ಲಕ್ಷ ರೂ.ಗೆ ಪರಿವರ್ತಿಸಲಾಗಿದೆ)

5.99 ಲಕ್ಷ ರೂ.ನಿಂದ 11.50 ಲಕ್ಷ ರೂ. (ಪರಿಚಯಾತ್ಮಕ)

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ

ಎರಡೂ ಮಾರುಕಟ್ಟೆಗಳಲ್ಲಿ ನೀಡಲಾಗುವ ನಿಸ್ಸಾನ್ ಮ್ಯಾಗ್ನೈಟ್‌ನ ಆರಂಭಿಕ ಬೆಲೆಗಳ ನಡುವೆ ಸಂಪೂರ್ಣ ವ್ಯತ್ಯಾಸವಿದೆ. ಆದರೆ, ದಕ್ಷಿಣ ಆಫ್ರಿಕಾ-ಸ್ಪೆಕ್ ಮ್ಯಾಗ್ನೈಟ್ ಅನ್ನು ವಿಸಿಯ, ಆಕ್ಸೆಂಟಾ ಮತ್ತು ಆಕ್ಸೆಂಟಾ ಪ್ಲಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ ಎಂದು ಗಮನಿಸಬೇಕಾದ ಅಂಶವಾಗಿದೆ. 

ಇದಕ್ಕೆ ಹೋಲಿಸಿದರೆ, ಇಂಡಿಯಾ-ಸ್ಪೆಕ್ ಮಾಡೆಲ್ ವಿಸಿಯ, ವಿಸಿಯ ಪ್ಲಸ್‌, ಆಕ್ಸೆಂಟಾ, ಎನ್‌ ಕನೆಕ್ಟಾ, ಟೆಕ್ನಾ, ಮತ್ತು ಟೆಕ್ನಾ ಪ್ಲಸ್‌ ಎಂಬ ಆರು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹಾಗೆಯೇ, ಎರಡೂ ಮೊಡೆಲ್‌ಗಳ ಟಾಪ್-ಸ್ಪೆಕ್ ವೇರಿಯೆಂಟ್‌ಗಳು 3.5 ಲಕ್ಷ ರೂ.ಗಿಂತ ಹೆಚ್ಚಿನ ವ್ಯತ್ಯಾಸವನ್ನು ಹೊಂದಿವೆ.

ನಿಸ್ಸಾನ್ ಮ್ಯಾಗ್ನೈಟ್‌ನ ದಕ್ಷಿಣ ಆಫ್ರಿಕಾ ಆವೃತ್ತಿ: ಸಂಪೂರ್ಣ ಚಿತ್ರಣ

Nissan Magnite facelift

ದಕ್ಷಿಣ ಆಫ್ರಿಕಾದಲ್ಲಿ ಲಭ್ಯವಿರುವ ನಿಸ್ಸಾನ್ ಮ್ಯಾಗ್ನೈಟ್ ಮತ್ತು ಭಾರತೀಯ ಮೊಡೆಲ್‌ನ ಹೊರಗೆ ಮತ್ತು ಒಳಗೆ ಒಂದೇ ಆಗಿರುತ್ತದೆ. ಇದು ಸಂಪೂರ್ಣ-ಎಲ್‌ಇಡಿ ಲೈಟಿಂಗ್ ಸೆಟಪ್ ಅನ್ನು ಪಡೆಯುತ್ತದೆ, ಕಪ್ಪು ಸುತ್ತುವರೆದಿರುವ ದೊಡ್ಡ ಗ್ರಿಲ್ ಮತ್ತು ಎರಡು ಸಿ-ಆಕಾರದ ಕ್ರೋಮ್ ಬಾರ್‌ಗಳು ಎರಡೂ ಬದಿಯಲ್ಲಿ ಮತ್ತು ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳನ್ನು ಹೊಂದಿದೆ. ಇದು 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಸಿಲ್ವರ್ ರೂಫ್ ರೈಲ್‌ಗಳನ್ನು ಸಹ ಪಡೆಯುತ್ತದೆ. ಬಾಡಿ ಕಲರ್‌ನ ಆಯ್ಕೆಗಳು ಎರಡೂ ಮೊಡೆಲ್‌ಗಳಲ್ಲಿ ಒಂದೇ ಆಗಿರುತ್ತವೆ.

Nissan Magnite facelift cabin

ಒಳಭಾಗದಲ್ಲಿ, ಇದು ಆಸನಗಳ ಮೇಲೆ ಕಪ್ಪು ಮತ್ತು ಕಂದು ಬಣ್ಣದ ಲೆಥೆರೆಟ್ ಕವರ್‌ನೊಂದಿಗೆ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದೆ. ಫೀಚರ್‌ಗಳ ವಿಷಯದಲ್ಲಿ, ಇದು 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ-ಡಿಮ್ಮಿಂಗ್ IRVM (ಒಳಭಾಗದ ರಿಯರ್‌ವ್ಯೂ ಮಿರರ್) ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆಯುತ್ತದೆ. ಇದು ತಂಪಾಗುವ ಗ್ಲೋವ್‌ಬಾಕ್ಸ್, ಅದರ ಕೆಳಗೆ ಸ್ಟೋರೇಜ್‌ ಸ್ಥಳದೊಂದಿಗೆ ಮುಂಭಾಗದ ಆರ್ಮ್‌ರೆಸ್ಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಸಹ ಪಡೆಯುತ್ತದೆ. ಇದು ರಿಮೋಟ್ ಎಂಜಿನ್ ಸ್ಟಾರ್ಟ್ ಫೀಚರ್‌ ಅನ್ನು ಸಹ ಪಡೆಯುತ್ತದೆ.

ಇದನ್ನೂ ಓದಿ: Mahindraದ ಈ ಹೊಸ 3 ಮೊಡೆಲ್‌ಗಳಿಗೆ Bharat NCAPಯಲ್ಲಿ 5-ಸ್ಟಾರ್ ರೇಟಿಂಗ್‌, ಯಾವುದು ಆ ಮೊಡೆಲ್‌ಗಳು?

Nissan Magnite facelift 360-degree camera

ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), 360-ಡಿಗ್ರಿ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಫೀಚರ್‌ಗಳೊಂದಿಗೆ ಸುರಕ್ಷತಾ ಸೂಟ್ ಕೂಡ ಒಂದೇ ಆಗಿರುತ್ತದೆ.

Nissan Magnite facelift 1-litre turbo-petrol engine

2024ರ ಮ್ಯಾಗ್ನೈಟ್ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆನ್ನು ಹೊಂದಿದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್

1-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

72 ಪಿಎಸ್‌

100 ಪಿಎಸ್‌

ಟಾರ್ಕ್‌

96 ಎನ್‌ಎಮ್‌

160 ಎನ್‌ಎಮ್‌ (ಮ್ಯಾನುವಲ್‌), 152 ಎನ್‌ಎಮ್‌ (ಸಿವಿಟಿ)

ಗೇರ್‌ಬಾಕ್ಸ್‌*

5-ಸ್ಪೀಡ್ ಮ್ಯಾನುವಲ್‌/5-ಸ್ಪೀಡ್ ಎಎಮ್‌ಟಿ 

5-ಸ್ಪೀಡ್ ಮ್ಯಾನುವಲ್‌/ಸಿವಿಟಿ

*ಎಎಮ್‌ಟಿ = ಆಟೋಮೆಟೆಡ್‌ ಮ್ಯಾನ್ಯುವಲ್ ಟ್ರಾನ್ಸ್ಮಿಷನ್, ಸಿವಿಟಿ = ಕಂಟಿನ್ಯೂವಸ್ಲಿ ವೇರಿಯೇಬಲ್‌ ಟ್ರಾನ್ಸ್‌ಮಿಷನ್‌

ಇಂಡಿಯಾ-ಸ್ಪೆಕ್ ನಿಸ್ಸಾನ್ ಮ್ಯಾಗ್ನೈಟ್: ಪ್ರತಿಸ್ಪರ್ಧಿಗಳು

Nissan Magnite facelift rear

 2024ರ ನಿಸ್ಸಾನ್ ಮ್ಯಾಗ್ನೈಟ್ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಾದ ರೆನಾಲ್ಟ್ ಕಿಗರ್, ಸ್ಕೋಡಾ ಕೈಲಾಕ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸನ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಮತ್ತು ಮಾರುತಿ ಬ್ರೆಜ್ಜಾಗಳೊಂದಿಗೆ ತನ್ನ ಸ್ಪರ್ಧೆಯನ್ನು ಒಡ್ಡುತ್ತದೆ. ಇದನ್ನು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಸಬ್‌-4m ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು.

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಲು : ಮ್ಯಾಗ್ನೈಟ್‌ ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Nissan ಮ್ಯಾಗ್ನೈಟ್

1 ಕಾಮೆಂಟ್
1
H
harichandra mohan ghadi
Nov 22, 2024, 9:58:45 PM

I purchase xe variant in 2023

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience