Login or Register ಅತ್ಯುತ್ತಮ CarDekho experience ಗೆ
Login

ಹೊಚ್ಚ ಹೊಸ ಇಂಟೀರಿಯರ್ ಡಿಸೈನ್ ಪಡೆಯಲಿರುವ ನವೀಕೃತ ಟಾಟಾ ನೆಕ್ಸಾನ್ – ಸ್ಪೈ ಶಾಟ್‌ಗಳು

published on ಏಪ್ರಿಲ್ 12, 2023 10:39 pm by tarun for ಟಾಟಾ ನೆಕ್ಸಾನ್‌

ಅತಿಯಾಗಿ ನವೀಕರಿಸಲ್ಪಟ್ಟ ನೆಕ್ಸಾನ್ ತಾಜಾ ಸ್ಟೈಲಿಂಗ್ ಮತ್ತು ಫೀಚರ್‌ಗಳ ನವೀಕರಣವನ್ನು ಹೊಂದಿದೆ.

  • ನವೀಕೃತ ನೆಕ್ಸಾನ್‌ನ ಒಳಭಾಗವು ಹೊಸ ಮೇಲ್ಗವಸಿನೊಂದಿಗೆ ತಾಜಾ ವಿನ್ಯಾಸವನ್ನು ಹೊಂದಿರುತ್ತದೆ.
  • ಅವಿನ್ಯಾ-ಪ್ರೇರಿತ ಸ್ಟಿಯರಿಂಗ್ ವ್ಹೀಲ್, ಹೊಸ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ದೊಡ್ಡ ಟಚ್‌ಸ್ಕ್ರೀನ್ ಅನ್ನು ಪಡೆಯಬಹುದಾಗಿದೆ.
  • ಮರುವಿನ್ಯಾಸಗೊಳಿಸಲಾದ ಫ್ರಂಟ್ ಮತ್ತು ರಿಯರ್ ಪ್ರೊಫೈಲ್‌ನೊಂದಿಗೆ ಸಂಪರ್ಕಿತ ಎಲ್‌ಇಡಿ ಅಂಶಗಳನ್ನು ಸಹ ಎಕ್ಸ್‌ಟೀರಿಯರ್ ಪಡೆಯುವ ಸಾಧ್ಯತೆಯಿದೆ.
  • ಹೊಸ 125PS 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುವ ಸಾಧ್ಯತೆಯಿದೆ; ಡಿಸೇಲ್ ಎಂಜಿನ್ ಅನ್ನು ಸಹ ಉಳಿಸಿಕೊಳ್ಳುತ್ತದೆ.
  • ಅದರ ಪ್ರಸ್ತುತ ಬೆಲೆಯ ರೇಂಜ್ ರೂ. 7.8 ಲಕ್ಷದಿಂದ ರೂ. 14.35 ಲಕ್ಷದವರೆಗೆ ಪ್ರೀಮಿಯಂ ಅನ್ನು ಹೊಂದಿದೆ (ಎಕ್ಸ್-ಶೋರೂಮ್ ದೆಹಲಿ).

ಟಾಟಾ ನೆಕ್ಸಾನ್ 2023 ಅನ್ನು ಮತ್ತೊಮ್ಮೆ ಸ್ಪೈಡ್ ಟೆಸ್ಟಿಂಗ್ ಮಾಡಲಾಗಿದ್ದು ಈ ಬಾರಿ ತುಂಬಾ ಹತ್ತಿರದಿಂದ ಮತ್ತು ಪಾರ್ಕ್ ಮಾಡಲಾದ ಜಾಗದಿಂದ ಟೆಸ್ಟಿಂಗ್ ನಡೆಸಲಾಗಿದೆ. ನವೀಕೃತ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟೀರಿಯರ್ ಅನ್ನು ಸ್ಪೈ ವೀಡಿಯೋದಲ್ಲಿ ಕಾಣಬಹುದು, ಇದು ಆನ್‌ಬೋರ್ಡ್‌ನಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ನವೀಕೃತ ಆವೃತ್ತಿಯು ಈ ವರ್ಷದ ಕೊನೆಯಲ್ಲಿ ಮಾರಾಟಕ್ಕೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ವಿವರವಾದ ಹೊಸ ಇಂಟೀರಿಯರ್

ಈ 2023 ಟಾಟಾ ನೆಕ್ಸಾನ್ ಕೂಲಂಕುಷವಾದ ಕ್ಯಾಬಿನ್ ಡಿಸೈನ್ ಅನ್ನು ಪಡೆದಿದೆ. ನೀವು ಗುರುತಿಸಬಹುದಾದ ಮೊದಲ ವಿಷಯವೆಂದರೆ ಟಾಟಾ ಅವಿನ್ಯಾ-ಪ್ರೇರಿತ ಸ್ಟಿಯರಿಂಗ್ ವ್ಹೀಲ್ ಮತ್ತು ಅದರ ನಡುವೆ ಆಯತಾಕಾರದ ಚಪ್ಪಟೆ ಮೇಲ್ಮೈ ಅನ್ನು ಹೊಂದಿದೆ. ಇದು ಹೊಳೆಯುವ ಟಾಟಾ ಲೋಗೋವನ್ನು ಹೊಂದಿರುವ ಸಾಧ್ಯತೆಯಿದೆ. ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಪ್ಯಾನಲ್ ಈಗ ದೊಡ್ಡದಾಗಿ ಕಾಣುತ್ತದೆ, ಇದು ಹ್ಯಾರಿಯರ್‌ನ ಹೊಸ ಏಳು ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಪಡೆದಿರಬಹುದು ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: 25 ವರ್ಷಗಳ ಟಾಟಾ ಸಫಾರಿ: ಐಕಾನಿಕ್ ಎಸ್‌ಯುವಿ ಹೆಚ್ಚು ಕುಟುಂಬ ಸ್ನೇಹಿ ಇಮೇಜ್‌ಗಾಗಿ ಅದರ ಗಟ್ಟುಮುಟ್ಟಾದ ಮ್ಯಾಚೋ ಟ್ಯಾಗ್ ಅನ್ನು ಹೊರಹಾಕಿದ ಬಗೆ

ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಾಗಿ ಹೊಚ್ಚ ಹೊಸ ಗೇರ್ ಲಿವರ್ ಅನ್ನು ವಿಭಿನ್ನ ಫೋನ್ ಡಾಕಿಂಗ್ ಸ್ಥಳದಂತಹ ಕೆಲವು ಪರಿಷ್ಕರಣೆಗಳೊಂದಿಗೆ ಸೆಂಟರ್ ಕನ್ಸೋಲ್ ಅನ್ನು ಸಹ ಕಾಣಬಹುದು. ಹೊಸ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್ ಅನ್ನು ಹೊಂದಿರುವ ಎಸಿ ವೆಂಟ್‌ಗಳ ಕೆಳಗೆ ಹೊಳಪಿನಿಂದ ಕೂಡಿದ ಹೊಸ ಅಪ್ಲಿಕ್ ಅನ್ನು ಕಾಣಬಹುದಾಗಿದೆ. ನವೀಕೃತ ನೆಕ್ಸಾನ್ ಇತ್ತೀಚಿಗೆ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಪ್ರಾರಂಭವಾದ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ. ಕೊನೆಯದಾಗಿ, ಮೇಲ್ಗವಸು ಈಗ ನೀಲಿ ಬಣ್ಣವನ್ನು ಹೊಂದಿದ್ದು, ಇದು ಹೆಚ್ಚು ಪ್ರೀಮಿಯಂ ನೋಟವನ್ನು ನೀಡುತ್ತದೆ.

ಎಕ್ಸ್‌ಟೀರಿಯರ್‌ನಲ್ಲಿನ ಬದಲಾವಣೆಗಳು

ಹೊಸ ನೆಕ್ಸಾನ್‌ನ ಫ್ರಂಟ್ ಪ್ರೊಫೈಲ್ ಸಂಪೂರ್ಣ ಅಗಲದ ಎಲ್‌ಇಡಿ ಡಿಆರ್‌ಎಲ್‌ಗಳು, ಹೆಚ್ಚು ಗಮನ ಸೆಳೆಯುವ ಬೂಟ್ ಆಕಾರ, ಲಂಬವಾಗಿ ಲೇಸ್ ಮಾಡಲಾದ ಹೆಡ್‌ಲ್ಯಾಂಪ್‌ಗಳು, ಮತ್ತು ಸ್ಪ್ಲಿಟ್ ಏರ್ ಡ್ಯಾಮ್ ಡಿಸೈನ್‌ನಂತಹ ನೋಟದ ಅಂಶಗಳನ್ನು ಹೊಂದಿರುತ್ತದೆ. ಸ್ಪೈ ಶಾಟ್‌ಗಳು ಹೊಸ ಅಲಾಯ್ ವ್ಹೀಲ್‌ಗಳ ಡಿಸೈನ್ ಅನ್ನು ಸಹ ತೋರಿಸುತ್ತವೆ. ರಿಯರ್ ಪ್ರೊಫೈಲ್ ಅನ್ನು ಹೊಸ ಬಂಪರ್, ವಿಭಿನ್ನ ಬೂಟ್ ಆಕಾರ ಮತ್ತು ಸಂಪರ್ಕಿತ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಟೆಸ್ಟ್ ಮ್ಯೂಲ್ ಟಾಪ್ ವೇರಿಯೆಂಟ್ ಆಗಿರಬೇಕು ಮತ್ತು ರೇಂಜ್ ರೋವರ್ ಶೈಲಿಯ ರೂಫ್-ಮೌಂಟೆಡ್ ರಿಯರ್ ವೈಪರ್ ಮತ್ತು ವಾಷರ್ ಅನ್ನು ಸಹ ನೋಡಬಹುದಾಗಿದೆ.

ಹೊಸ ಫೀಚರ್‌ಗಳು

( ಹ್ಯಾರಿಯರ್‌ನಲ್ಲಿ ಪ್ರಾರಂಭವಾದ ಟಚ್‌ಸ್ಕ್ರೀನ್ ಸಿಸ್ಟಮ್)

ಈಗಾಗಲೇ ಹೇಳಿರುವಂತೆ ಹೊಸ ನೆಕ್ಸಾನ್, ಹೊಸ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಪಡೆಯಬಹುದು. ಇದು ಈಗಾಗಲೇ ವೆಂಟಿಲೇಟೆಡ್ ಸೀಟುಗಳು, ವೈರ್‌ಲೆಸ್ ಚಾರ್ಜರ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾದೊಂದಿಗೆ ಫೀಚರ್-ಭರಿತವಾಗಿದೆ. 360-ಡಿಗ್ರಿ ಕ್ಯಾಮರಾ, ADAS (ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಮತ್ತು ಆರು ಏರ್‌ಬ್ಯಾಗ್‌ಗಳ ಸೇರ್ಪಡೆಯೊಂದಿಗೆ ಸುರಕ್ಷತೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮಾರುತಿ ಫ್ರಾಂಕ್ಸ್ ವರ್ಸಸ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ತುಲನೆ

ಪವರ್‌ಟ್ರೇನ್‌ನಲ್ಲಿ ಬದಲಾವಣೆಯಿದೆಯೇ?

2023 ನೆಕ್ಸಾನ್ ತನ್ನ ಅದೇ 1.5-ಲೀಟರ್ ಡಿಸೇಲ್ ಎಂಜಿನ್ ಜೊತೆಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ. ಆದಾಗ್ಯೂ, ಇದು ಹೊಸ ಮತ್ತು ನವೀಕೃತ 1.2-ಲೀಟರ್ TGDi ಎಂಜಿನ್ ಅನ್ನು ಪಡೆಯಬಹುದು, ಮತ್ತು ಇದು 125PS ಮತ್ತು 225Nm ಅನ್ನು ಕ್ಲೈಮ್ ಮಾಡುತ್ತದೆ. ಪ್ರಸ್ತುತ AMT ಯೂನಿಟ್ ಅನ್ನು ಬದಲಿಸುವ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ಟ್ರಾನ್ಸ್‌ಮಿಷನ್ ಅನ್ನು ಸಹ ನಾವು ನಿರೀಕ್ಷಿಸಬಹುದು.

ನಿರೀಕ್ಷಿತ ಬೆಲೆ

ನವೀಕೃತ ನೆಕ್ಸಾನ್‌ ಅದರ ಪ್ರಸ್ತುತ ಬೆಲೆಯಾದ ರೂ. 7.80 ಲಕ್ಷದಿಂದ ರೂ.14.35 ಲಕ್ಷದ ರೇಂಜ್‌ಗಿಂತ (ಎಕ್ಸ್-ಶೋರೂಮ್ ದೆಹಲಿ) ದುಬಾರಿಯಾಗಿರಲಿದೆ. ಇದು ಕಿಯಾ ಸೋನೆಟ್, ಮಹೀಂದ್ರಾ XUV300, ರೆನಾಲ್ಟ್ ಕಿಗರ್, ಮಾರುತಿ ಸುಝುಕಿ ಬ್ರೆಝಾ, ನಿಸಾನ್ ಮ್ಯಾಗ್ನೈಟ್ ಮತ್ತು ಹ್ಯುಂಡೈ ವೆನ್ಯು ಗೆ ಪ್ರತಿಸ್ಪರ್ಧಿಯಾಗಿದೆ. ನೆಕ್ಸಾನ್ ಸ್ಪೈಡ್‌ನ ಎಲ್ಲಾ ದೃಶ್ಯ ಮತ್ತು ಫೀಚರ್ ನವೀಕರಣಗಳು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯಲ್ಲಿಯೂ ಸಹ ಲಭ್ಯವಿರುವ ನಿರೀಕ್ಷೆಯಿದೆ.

ಚಿತ್ರ ಕೃಪೆ

ಇನ್ನಷ್ಟು ಇಲ್ಲಿ ಓದಿ : ನೆಕ್ಸಾನ್ AMT

t
ಅವರಿಂದ ಪ್ರಕಟಿಸಲಾಗಿದೆ

tarun

  • 12 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ನೆಕ್ಸ್ಂನ್‌

Read Full News

explore ಇನ್ನಷ್ಟು on ಟಾಟಾ ನೆಕ್ಸಾನ್‌

ಟಾಟಾ ನೆಕ್ಸಾನ್‌

ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ