Tata Nexon : ಸಾಕಷ್ಟು ಡಿಜಿಟಲ್ ಫೀಚರ್‌ಗಳನ್ನು ಹೊಂದಿರುವ ನವೀಕೃತ ಆವೃತ್ತಿ
ಹೊಸ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಹೊಸ ನೆಕ್ಸಾನ್‌ನ ರಾತ್ರಿಯ ಲೈಟ್-ಅಪ್ ಇಂಟೀರಿಯರ್ ಅನ್ನು ಅನಾವರಣಗೊಳಿಸುತ್ತವೆ
- 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಇನ್‌ಸ್ಟೃಮೆಂಟ್ ಕ್ಲಸ್ಟರ್ ಮತ್ತು ಬ್ಯಾಕ್‌ಲಿಟ್ ಟಾಟಾ ಲೋಗೋದೊಂದಿಗೆ ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ.
- ಹೊಸ ಡ್ರೈವ್ ಸೆಲೆಕ್ಟರ್‌ನೊಂದಿಗೆ ನೂತನ ಸೆಂಟರ್ ಕನ್ಸೋಲ್ ವಿನ್ಯಾಸ.
- ಹೊಸ ಹೊರಭಾಗದ ಶೇಡ್ ಮತ್ತು ಹೊಸ ಪರ್ಪಲ್ ಕ್ಯಾಬಿನ್ ಥೀಮ್‌ನೊಂದಿಗೆ ಲಭ್ಯವಾಗಲಿದೆ.
- 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಯಿದೆ.
- ರೂ. 8 ಲಕ್ಷದಿಂದ (ಎಕ್ಸ್ ಶೋರೂಂ) ಬೆಲೆ ಪ್ರಾರಂಭವಾಗುವ ನಿರೀಕ್ಷೆಯಿದೆ.
ನವೀಕೃತ ಟಾಟಾ ನೆಕ್ಸಾನ್ ಬಿಡುಗಡೆಗೆ ಮುಂಚೆಯೇ, ಈ ಕಾರಿನ ಸಾಕಷ್ಟು ಸ್ಪೈ ಶಾಟ್‌ಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಇತ್ತೀಚಿಗೆ ಟಾಟಾ ನೆಕ್ಸಾನ್‌ನ ಕ್ಯಾಬಿನ್ ಸಹ ಬಹಿರಂಗಗೊಂಡಿದೆ, ಇದರಲ್ಲಿ ಬಹಳಷ್ಟು ಡಿಜಿಟಲ್ ಫೀಚರ್‌ಗಳು ರಾತ್ರಿಯಲ್ಲಿ ಇಂಟೀರಿಯರ್ ಅನ್ನು ಲೈಟ್ ಅಪ್ ಮಾಡುತ್ತವೆ. ಆ ಫೀಚರ್‌ಗಳ ಬಗ್ಗೆ ಮುಂದೆ ತಿಳಿದುಕೊಳ್ಳೋಣ:
ತಂತ್ರಜ್ಞಾನ
ಪ್ರಸ್ತುತ-ಪೀಳಿಗೆಯ ಟಾಟಾ ನೆಕ್ಸಾನ್ ಅನ್ನು ಸಾಮಾನ್ಯವಾಗಿ ಔಟ್‌ಡೇಟ್ ಆದ ಡ್ಯಾಶ್‌ಬೋರ್ಡ್ ವಿಷಯಕ್ಕಾಗಿ ಟೀಕಿಸಲಾಗುತ್ತದೆ, ನವೀಕರಣದ ಮೂಲಕ ಅದನ್ನು ಬದಲಾಯಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹೊಸ ಟಾಟಾ ನೆಕ್ಸಾನ್ ಹ್ಯಾರಿಯರ್ ಮತ್ತು ಸಫಾರಿಯಲ್ಲಿರುವಂತಹ ಯೂಸರ್ ಇಂಟರ್‌ಫೇಸ್‌ಗೆ ದೊಡ್ಡ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಅನ್ನು ಬಳಸುತ್ತದೆ, ಬಣ್ಣದ ವ್ಯತ್ಯಾಸವನ್ನು ಮಾತ್ರ ಗಮನಿಸಬಹುದಾಗಿದೆ.
ಇನ್ಫೋಟೈನ್‌ಮೆಂಟ್‌ನ ಕೆಳಗೆ ಹೊಸ ಕ್ಲೈಮೇಟ್ ಕಂಟ್ರೋಲ್ ಯುನಿಟ್ ಇದೆ. ತಾಪಮಾನ ಮತ್ತು ಫ್ಯಾನ್ ಸ್ಪೀಡ್‌ಗಾಗಿ ಎರಡು ಟಾಗಲ್ ಸ್ವಿಚ್‌ಗಳನ್ನು ನೀಡಲಾಗಿದೆ, ಮತ್ತು ಉಳಿದವು ಕ್ಲಿಕ್ ಮಾಡಬಹುದಾದ ಬಟನ್‌ಗಳ ಬದಲಿಗೆ ಬ್ಯಾಕ್‌ಲಿಟ್ ಹ್ಯಾಪ್ಟಿಕ್ ಕಂಟ್ರೋಲ್‌ಗಳಾಗಿವೆ. ಇದು ಈಗ ಸಂಪೂರ್ಣ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ ಅನ್ನು ಪಡೆಯುತ್ತದೆ, ಇದರ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಂನ ಕಲರ್ ಸ್ಕೀಮ್ ಒಂದೇ ಆಗಿದೆ.
ಕೊನೆಯದಾಗಿ, ಸ್ಟೀರಿಂಗ್ ವ್ಹೀಲ್ ಮಧ್ಯದಲ್ಲಿ ಬ್ಯಾಕ್‌ಲಿಟ್ ಟಾಟಾ ಲೋಗೋವನ್ನು ಹೊಂದಿದೆ ಮತ್ತು ಸ್ಪೋಕ್ಸ್‌ನಲ್ಲಿ ಸ್ಟೀರಿಂಗ್-ಮೌಂಟೆಡ್ ಬಟನ್‌ಗಳನ್ನು ಸಹ ಇದೇ ರೀತಿ ವಿನ್ಯಾಸಗೊಳಿಸಲಾಗಿದೆ.
ಇತರ ವಿನ್ಯಾಸ ಬದಲಾವಣೆಗಳು
ಕಂಪನಿಯು ಟಾಟಾ ನೆಕ್ಸಾನ್‌ನ ಹೊಸ ಮಾಡೆಲ್‌ನ ಹೊರಭಾಗದಲ್ಲೂ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೊಸ ಗ್ರಿಲ್ ವಿನ್ಯಾಸ, ಶಾರ್ಪರ್ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು ಮತ್ತು ವರ್ಟಿಕಲ್ ಹೆಡ್‌ಲೈಟ್‌ಗಳಿಂದಾಗಿ, ಅದರ ಮುಂಭಾಗದ ಪ್ರೊಫೈಲ್ ಈಗ ಸಾಕಷ್ಟು ಸ್ಲೀಕರ್ ಆಗಿ ಮಾರ್ಪಾಡಾಗಿದೆ. ಇದರ ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಇಲ್ಲಿ ಕೇವಲ ಹೊಸ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ ಮತ್ತು ಸಂಪರ್ಕಿತ ಟೈಲ್ ಲ್ಯಾಂಪ್‌ಗಳನ್ನು ಈಗ ಹಿಂಭಾಗದಲ್ಲಿ ನೀಡಲಾಗಿದೆ, ಇದರಿಂದಾಗಿ ಹಿಂಭಾಗದ ವಿನ್ಯಾಸವು ಹೆಚ್ಚು ಪ್ರಬಲವಾಗಿದೆ.
ಒಳಭಾಗದಲ್ಲಿ, ಕ್ಯಾಬಿನ್ ಅನ್ನು ಹೊಸ ಡ್ಯಾಶ್‌ಬೋರ್ಡ್ ಲೇಔಟ್, ಸ್ಲಿಮ್ ಎಸಿ ವೆಂಟ್‌ಗಳು ಮತ್ತು ಹೊಸ ಪರ್ಪಲ್ ಕ್ಯಾಬಿನ್ ಥೀಮ್‌ನೊಂದಿಗೆ ನವೀಕರಿಸಲಾಗಿದೆ.
ಪವರ್‌ಟ್ರೇನ್
ಹೊಸ ಟಾಟಾ ನೆಕ್ಸಾನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಹಿಂದಿನ 1.5-ಲೀಟರ್ ಡೀಸೆಲ್ ಎಂಜಿನ್ (115PS /260Nm) ಅನ್ನು ಉಳಿಸಿಕೊಳ್ಳುತ್ತದೆ. ಹೊಸ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು DCT ಆಟೋಮ್ಯಾಟಿಕ್‌ನೊಂದಿಗೆ ನೀಡುವ ನಿರೀಕ್ಷೆಯಿದೆ. ಈ ಯುನಿಟ್ 125PS ಮತ್ತು 225Nm ಔಟ್‌ಪುಟ್ ಅನ್ನು ಹೊಂದಿದೆ ಮತ್ತು ಹೊಸ BS6 ಫೇಸ್ 2 ಮಾನದಂಡಗಳೊಂದಿಗೆ ನವೀಕರಿಸಲಾಗಿದೆ.
ಫೀಚರ್‌ಗಳು ಸುರಕ್ಷತೆ
ಇಲ್ಲಿಯವರೆಗೆ ಲಭ್ಯವಾದ ಸ್ಪೈಶಾಟ್‌ಗಳ ಪ್ರಕಾರ, ಟಾಟಾ ನೆಕ್ಸನ್‌ನ ನವೀಕರಿಸಿದ ಮಾಡೆಲ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾಗಳು ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಗಳಂತಹ ಫೀಚರ್‌ಗಳನ್ನು ಪಡೆದುಕೊಳ್ಳಲಿದೆ. ಇಷ್ಟೇ ಅಲ್ಲದೇ, ಇದು ಪ್ರಸ್ತುತ ಲಭ್ಯವಿರುವ ಮಾಡೆಲ್‌ನಂತೆಯೇ ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳಂತಹ ಫೀಚರ್‌ಗಳನ್ನು ಪಡೆಯುತ್ತದೆ.
ಇದನ್ನೂ ಓದಿ: ಬಿಡುಗಡೆಗೆ ಮುಂಚಿತವಾಗಿ ಬಹಿರಂಗಗೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ಹೊರಭಾಗದ ವಿನ್ಯಾಸ
ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ರಿಯರ್ ವ್ಯೂ ಕ್ಯಾಮೆರಾದಂತಹ ಫೀಚರ್‌ಗಳನ್ನು ಪಡೆದುಕೊಳ್ಳಬಹುದು.
ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಜೊತೆಗೆ ನವೀಕೃತ ನೆಕ್ಸಾನ್ ಅನ್ನು ಸೆಪ್ಟೆಂಬರ್ 14 ರಂದು ಬಿಡುಗಡೆ ಮಾಡಲಿದೆ. ಇದು ರೂ. 8 ಲಕ್ಷ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯನ್ನು ಹೊಂದುವ ನಿರೀಕ್ಷೆಯಿದೆ ಮತ್ತು ಕಿಯಾ ಸಾನೆಟ್, ಹುಂಡೈ ವೆನ್ಯೂ, ಮಾರುತಿ ಬ್ರೆಝಾ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ನೊಂದಿಗೆ ಪೈಪೋಟಿಯನ್ನು ಮುಂದುವರಿಸುತ್ತದೆ.
ಇನ್ನಷ್ಟು ಓದಿ: ನೆಕ್ಸಾನ್ ಆಟೋಮ್ಯಾಟಿಕ್