• English
  • Login / Register

ಮಹೀಂದ್ರಾ ಥಾರ್‌ನ ಈ ವೇರಿಯೆಂಟ್‌ಗಾಗಿ ನೀವು ಒಂದು ವರ್ಷ ಕಾಯಲೇಬೇಕು..!

ಮಹೀಂದ್ರ ಥಾರ್‌ ಗಾಗಿ tarun ಮೂಲಕ ಮಾರ್ಚ್‌ 06, 2023 03:10 pm ರಂದು ಮಾರ್ಪಡಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಒಂದನ್ನು ಹೊರತುಪಡಿಸಿ ಥಾರ್‌ನ ಉಳಿದೆಲ್ಲಾ ವೇರಿಯೆಂಟ್‌ಗಳು ಒಂದು ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿರುತ್ತದೆ.

Mahindra Thar RWD

  • ಥಾರ್ ಡಿಸೇಲ್ RWD ವೇರಿಯೆಂಟ್ ಸುಮಾರು 1.5 ವರ್ಷಗಳ ಕಾಯುವಿಕೆ ಅವಧಿಯನ್ನು ಹೊಂದಿವೆ. 
  • ಆದಾಗ್ಯೂ, ಈ 4WD ಮತ್ತು ಪೆಟ್ರೋಲ್ RWD ವೇರಿಯೆಂಟ್‌ಗಳನ್ನು ಇನ್ನು ಸುಮಾರು ಒಂದು ತಿಂಗಳಲ್ಲಿ ಹೊಂದಬಹುದು. 
  • ಡಿಸೇಲ್ RWD ಗೆ ನಿಗದಿಪಡಿಸಲಾದ ರೂ. 10 ಲಕ್ಷ ಬೆಲೆಯು ಅದರ ಜನಪ್ರಿಯತೆಯ ಕಾರಣಗಳಲ್ಲಿ ಪ್ರಮುಖವಾಗಿದೆ.
  • ಥಾರ್ RWD ವೇರಿಯೆಂಟ್‌ಗಳು 118PS 1.5-ಲೀಟರ್ ಡಿಸೇಲ್ ಮತ್ತು 150PS 2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ಗಳನ್ನು ಪಡೆಯುತ್ತವೆ. 

ಮಹೀಂದ್ರಾ 2022 ರ ಅಂತಿಮ ತ್ರೈಮಾಸಿಕದಲ್ಲಿ ಥಾರ್‌ನ ರಿಯರ್-ವ್ಹೀಲ್ ಡ್ರೈವ್ (RWD) ವೇರಿಯೆಂಟ್‌ ಅನ್ನು ಪರಿಚಯಿಸಿತು ಮತ್ತು  2020 ರಲ್ಲಿ ಎರಡನೇ-ಪೀಳಿಗೆಯ ಫೋರ್-ವ್ಹೀಲ್ ಡ್ರೈವ್ ಥಾರ್ ಬಂದಾಗ ಸಂಭವಿಸಿದಂತೆಯೇ, ಈ ಕೈಗೆಟಕುವ RWD ಮಾಡೆಲ್‌ನ ಕಾಯುವಿಕೆಯ ಅವಧಿಯು ಸಹ ಗಗನಕ್ಕೇರುತ್ತಿದೆ. ಹೆಚ್ಚಿನ ವೇರಿಯೆಂಟ್‌ಗಳನ್ನು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಹೊಂದಬಹುದಾದರೂ, ಆಫ್-ರೋಡರ್‌ನ ಒಂದು ನಿರ್ದಿಷ್ಟ ವೇರಿಯೆಂಟ್ ಅನ್ನು ಪಡೆಯಲು ಒಂದು ವರ್ಷದವರೆಗೆ ಕಾಯಬೇಕಾಗಿದೆ.

ಕಾಯುವಿಕೆಯ ಅವಧಿಯ ವಿಸ್ತೃತ ಮಾಹಿತಿ

ಮಾಡೆಲ್

ಕಾಯುವಿಕೆಯ ಅವಧಿ

ಹಾರ್ಡ್ ಟಾಪ್ ಡಿಸೇಲ್ 4WD

3-4 ವಾರಗಳು

ಹಾರ್ಡ್ ಟಾಪ್ ಪೆಟ್ರೋಲ್ 4WD

3-4 ವಾರಗಳು

ಕನ್ವರ್ಟಬಲ್ ಸಾಫ್ಟ್ ಟಾಪ್ 4WD

3-4 ವಾರಗಳು

ಹಾರ್ಡ್ ಟಾಪ್ ಡಿಸೇಲ್ RWD (ರಿಯರ್-ವ್ಹೀಲ್ ಡ್ರೈವ್)

72-74 ವಾರಗಳು

ಹಾರ್ಡ್ ಟಾಪ್ ಪೆಟ್ರೋಲ್ RWD

3-5 ವಾರಗಳು

4WD ಥಾರ್ ಇನ್ನು ಸುಮಾರು ಒಂದು ತಿಂಗಳಲ್ಲಿ ನಿಮ್ಮ ಮನೆ ಬಾಗಿಲಲ್ಲಿ ಬರಲಿದೆ, ಮತ್ತು ಇದು ಪೆಟ್ರೋಲ್ ಚಾಲಿತ ರಿಯರ್-ವ್ಹೀಲ್ ಡ್ರೈವ್ ವೇರಿಯೆಂಟ್‌ಗಳಿಗೂ ಅನ್ವಯಿಸುತ್ತದೆ. ಆದಾಗ್ಯೂ, ಡಿಸೇಲ್ RWD ಗೆ ಅದರ ವೇರಿಯೆಂಟ್ ಮತ್ತು ಖರೀದಿಸುವ ಸ್ಥಳವನ್ನು ಅವಲಂಬಿಸಿ 1.5 ವರ್ಷಗಳವರೆಗೆ ಕಾಯಬೇಕಾಗುತ್ತದೆ. ನೀವು ಈಗ ಒಂದನ್ನು ಬುಕ್ ಮಾಡಿದರೆ, 2024 ರ ಹಬ್ಬಗಳ ಕಾಲದಲ್ಲಿ ಅದನ್ನು ಪಡೆಯಬಹುದು! 

ಇದನ್ನೂ ಓದಿ: ವೈರಲ್ ಆದ ಟಾಟಾ ನ್ಯಾನೋ ಜೊತೆಗಿನ ಅಪಘಾತದಲ್ಲಿ ಮಹೀಂದ್ರಾ ಥಾರ್ ಪಲ್ಟಿಯಾಗಿದ್ದೇಕೆ?

Mahindra Thar rear

ಡಿಸೇಲ್ RWD ಏಕೆ?

ಮಹೀಂದ್ರಾ SUV ಗಾಗಿ ಡಿಸೇಲ್ ಅತ್ಯಂತ ಜನಪ್ರಿಯ ಎಂಜಿನ್ ಆಗಿದೆ ಮತ್ತು ಇದನ್ನು RWD ಸೆಟಪ್‌ನಲ್ಲಿ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ. ಥಾರ್ ಡಿಸೇಲ್ RWD AX (O) ವೇರಿಯೆಂಟ್ ರೂ. 9.99 ಲಕ್ಷ ಬೆಲೆಯನ್ನು ಹೊಂದಿದ್ದು, ಇದು ಅತ್ಯಂತ ಕೈಗೆಟಕುವ ಆಯ್ಕೆಯಾಗಿದೆ. ಮುಖ್ಯವಾಗಿ, ಥಾರ್‌ನ ಕೈಗೆಟಕುವ ವೇರಿಯೆಂಟ್ ತನ್ನ ಆರಂಭಿಕ ಹಂತದ 4WD ವೇರಿಯೆಂಟ್‌ಗಳ ಬೆಲೆಯನ್ನು ರೂ. 4 ಲಕ್ಷಗಳಷ್ಟು ಕಡಿಮೆಗೊಳಿಸುತ್ತಿದೆ.

4WD ಆವೃತ್ತಿಯ ಬೇರ್-ಬೋನ್ಸ್ ಬೇಸ್ ವೇರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ನಂತರ, ರಿಯರ್-ವ್ಹೀಲ್ ಡ್ರೈವ್ ವೇರಿಯೆಂಟ್‌ಗಳನ್ನು ಕೈಗೆಟಕುವ ಆವೃತ್ತಿಯಾಗಿ ಪರಿಚಯಿಸಲಾಗಿದ್ದು ಇದು ನಂತರ ಅನೇಕ ಬೆಲೆ ಏರಿಕೆಗಳನ್ನು ಕಂಡಿದೆ. ಥಾರ್ ಅನ್ನು ಅನೇಕರು ಇಷ್ಟಪಟ್ಟರೂ, 4WD ಯ ಬಳಕೆ ಮತ್ತು ಸಂಪೂರ್ಣ ಸಾಮರ್ಥ್ಯವು ಕೆಲವೇ ಖರೀದಿದಾರರಿಗೆ ಸೀಮಿತವಾಗಿದೆ. RWD ಯೊಂದಿಗೆ, ಖರೀದಿದಾರರು ಇನ್ನೂ ಥಾರ್ ಅನ್ನು ಹೊಂದಿದ್ದಾರೆ ಮತ್ತು ಇದು ಒಂದು ಹಂತದವರೆಗೆ ಆಫ್-ರೋಡಿಂಗ್ ಅನ್ನು ನಿಭಾಯಿಸಿದರೂ ಹಣವನ್ನು ಉಳಿಸುತ್ತದೆ. 

ಇದನ್ನೂ ಓದಿ: ChatGPT ಪ್ರಕಾರ ಭಾರತದ 4 ಉತ್ಕೃಷ್ಟ ಕಾರುಗಳು

ಡಿಸೇಲ್ RWD ವೇರಿಯೆಂಟ್ ಅನ್ನು ಹೆಚ್ಚು ಕೈಗೆಟಕುವಂತೆ ಮಾಡುವುದು ಯಾವುದು?

4WD ಅನ್ನು ಕೈಬಿಟ್ಟಿರುವುದು ಈಗಾಗಲೇ ಥಾರ್‌ನ ಬೆಲೆಯನ್ನು ಸ್ವಲ್ಪ ಕಡಿಮೆಗೊಳಿಸಲು ಸಹಾಯವಾಗಿದೆ. 4WD ಆವೃತ್ತಿಯ 130PS 2.2-ಲೀಟರ್ ಡಿಸೇಲ್ ಇಂಜಿನ್ ಅನ್ನು ಚಿಕ್ಕದಾದ 118PS 1.5-ಲೀಟರ್ ಡಿಸೇಲ್ ಇಂಜಿನ್‌ನೊಂದಿಗೆ ಬದಲಾಯಿಸುವುದರೊಂದಿಗೆ ಈ ವೇರಿಯೆಂಟ್‌ಗಳು ಸಹಜವಾಗಿ ಕೈಗೆಟಕುವ ಬೆಲೆಯನ್ನು ಪಡೆದಿವೆ

ಈ ಮಹೀಂದ್ರಾ ಥಾರ್ ರೂ. 9.99 ಲಕ್ಷದಿಂದ ರೂ. 16.49 ಲಕ್ಷಗಳವರೆಗಿದೆ (ಎಕ್ಸ್-ಶೋರೂಮ್). ಇದು ಫೋರ್ಸ್ ಗುರ್ಖಾ ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ಮಾರುತಿ ಸುಝುಕಿ ಜಿಮ್ನಿ ಗೆ ಪ್ರತಿಸ್ಪರ್ಧಿಯಾಗಲಿದೆ.

 ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಥಾರ್ ಡಿಸೇಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌

Read Full News

explore ಇನ್ನಷ್ಟು on ಮಹೀಂದ್ರ ಥಾರ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience