ಈ ಏಪ್ರಿಲ್‌ನಲ್ಲಿ Renault ಕಾರುಗಳ ಮೇಲೆ ರೂ. 52,000 ವರೆಗಿನ ಪ್ರಯೋಜನಗಳನ್ನು ಪಡೆಯಿರಿ
ರೆನಾಲ್ಟ್ ಕ್ವಿಡ್ ಗಾಗಿ shreyash ಮೂಲಕ ಏಪ್ರಿಲ್ 12, 2024 10:49 am ರಂದು ಪ್ರಕಟಿಸಲಾಗಿದ ೆ
- 69 Views
- ಕಾಮೆಂಟ್ ಅನ್ನು ಬರೆಯಿರಿ
ರೆನಾಲ್ಟ್ ತನ್ನ ಕಿಗರ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಮೇಲೆ ಅತಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ.
- ರೆನಾಲ್ಟ್ ಕಿಗರ್ ನೊಂದಿಗೆ ರೂ. 52,000 ವರೆಗಿನ ಗರಿಷ್ಠ ಪ್ರಯೋಜನಗಳನ್ನು ನೀಡಲಾಗುತ್ತಿದೆ.
- ರೆನಾಲ್ಟ್ ಕ್ವಿಡ್ ಮತ್ತು ರೆನಾಲ್ಟ್ ಟ್ರೈಬರ್ ರೂ 47,000 ವರೆಗಿನ ರಿಯಾಯಿತಿಯೊಂದಿಗೆ ಲಭ್ಯವಿದೆ.
- ಎಲ್ಲಾ ಕೊಡುಗೆಗಳು ಏಪ್ರಿಲ್ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.
ರೆನಾಲ್ಟ್ ತನ್ನ ಮಾಡೆಲ್ ಗಳಾದ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಕಿಗರ್ ಮೇಲೆ ಏಪ್ರಿಲ್ 2024 ರ ಪ್ರಯೋಜನಗಳನ್ನು ಹೊರತಂದಿದೆ. ಕೊಡುಗೆಗಳಲ್ಲಿ ನಗದು ರಿಯಾಯಿತಿ, ವಿನಿಮಯ ಮತ್ತು ಲಾಯಲ್ಟಿ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಒಳಗೊಂಡಿವೆ. ಬನ್ನಿ, ಮಾಡೆಲ್-ವಾರು ಕೊಡುಗೆ ವಿವರಗಳನ್ನು ನೋಡೋಣ.
ರೆನಾಲ್ಟ್ ಕ್ವಿಡ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 10,000 ವರೆಗೆ |
ವಿನಿಮಯ ಬೋನಸ್ |
ರೂ. 15,000 ವರೆಗೆ |
ಲಾಯಲ್ಟಿ ಬೋನಸ್ |
ರೂ. 10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ. 12,000 ವರೆಗೆ |
ಗರಿಷ್ಠ ಪ್ರಯೋಜನಗಳು |
ರೂ. 47,000 ವರೆಗೆ |
-
ಬೇಸ್-ಸ್ಪೆಕ್ RXE ವೇರಿಯಂಟ್ ಅನ್ನು ಹೊರತುಪಡಿಸಿ, ಮೇಲೆ ತಿಳಿಸಲಾದ ರಿಯಾಯಿತಿಗಳು ರೆನಾಟ್ ಕ್ವಿಡ್‌ನ ಎಲ್ಲಾ ವೇರಿಯಂಟ್ ಗಳ ಮೇಲೆ ಲಭ್ಯವಿದೆ ಆದರೆ ನೀವು ಆಯ್ಕೆ ಮಾಡುವ ನಿರ್ದಿಷ್ಟ ಮಾಡೆಲ್ ನೊಂದಿಗೆ ರಿಯಾಯಿತಿ ಮೊತ್ತವು ಬದಲಾಗಬಹುದು.
-
ಬೇಸ್-ಸ್ಪೆಕ್ RXE ಗಾಗಿ, ರೂ. 10,000 ಗಳ ಲಾಯಲ್ಟಿ ಬೋನಸ್ ಮಾತ್ರ ಲಭ್ಯವಿದೆ.
-
ರೆನಾಲ್ಟ್ ಕ್ವಿಡ್ ಬೆಲೆಯು ರೂ. 4.70 ಲಕ್ಷದಿಂದ ರೂ. 6.45 ಲಕ್ಷದವರೆಗೆ ಇದೆ
ಇದನ್ನು ಕೂಡ ಓದಿ: ಹುಂಡೈ ಕಾರುಗಳು ಈ ಏಪ್ರಿಲ್‌ನಲ್ಲಿ ರೂ. 48,000 ವರೆಗಿನ ಪ್ರಯೋಜನಗಳನ್ನು ನೀಡುತ್ತಿವೆ
ರೆನಾಲ್ಟ್ ಟ್ರೈಬರ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 10,000 ವರೆಗೆ |
ವಿನಿಮಯ ಬೋನಸ್ |
ರೂ. 15,000 ವರೆಗೆ |
ಲಾಯಲ್ಟಿ ಬೋನಸ್ |
ರೂ. 10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ. 12,000 ವರೆಗೆ |
ಗರಿಷ್ಠ ಪ್ರಯೋಜನಗಳು |
ರೂ. 47,000 ವರೆಗೆ |
-
ಮೇಲಿನ ಟೇಬಲ್ ನಲ್ಲಿ ನೀಡಿರುವ ಗರಿಷ್ಠ ಪ್ರಯೋಜನಗಳು ರೆನಾಲ್ಟ್ ಟ್ರೈಬರ್‌ನ ನಿರ್ದಿಷ್ಟ ವೇರಿಯಂಟ್ ಗಳಿಗೆ ಮಾತ್ರ ಅನ್ವಯವಾಗಿರುತ್ತವೆ.
-
ಬೇಸ್-ಸ್ಪೆಕ್ RXE ವೇರಿಯಂಟ್ ನೊಂದಿಗೆ ಕೇವಲ ಲಾಯಲ್ಟಿ ಬೋನಸ್ ಮಾತ್ರ ಲಭ್ಯವಿದೆ.
-
ರೆನಾಲ್ಟ್ ಟ್ರೈಬರ್ ಬೆಲೆಯು ರೂ.6 ಲಕ್ಷದಿಂದ ರೂ.8.97 ಲಕ್ಷದವರೆಗೆ ಇದೆ.
ರೆನಾಲ್ಟ್ ಕಿಗರ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 15,000 ವರೆಗೆ |
ವಿನಿಮಯ ಬೋನಸ್ |
ರೂ. 15,000 ವರೆಗೆ |
ಲಾಯಲ್ಟಿ ಬೋನಸ್ |
ರೂ. 10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ. 12,000 ವರೆಗೆ |
ಗರಿಷ್ಠ ಪ್ರಯೋಜನಗಳು |
ರೂ. 52,000 ವರೆಗೆ |
-
ರೆನಾಲ್ಟ್ ಕಿಗರ್ ಇಲ್ಲಿ ಅತಿ ಹೆಚ್ಚು ರಿಯಾಯಿತಿ ಕೊಡುಗೆಗಳನ್ನು ಪಡೆಯುವ ಮಾಡೆಲ್ ಆಗಿದೆ. ಇದು 15,000 ರೂಪಾಯಿಗಳ ಅತ್ಯಂತ ಹೆಚ್ಚು ನಗದು ರಿಯಾಯಿತಿಯನ್ನು ಪಡೆಯುತ್ತದೆ.
-
ದಯವಿಟ್ಟು ಗಮನಿಸಿ, ಈ ಪ್ರಯೋಜನಗಳು ಕಿಗರ್‌ನ ಬೇಸ್-ಸ್ಪೆಕ್ RXE ವೇರಿಯಂಟ್ ಗೆ ಅನ್ವಯಿಸುವುದಿಲ್ಲ. ಈ ವೇರಿಯಂಟ್ ಕೇವಲ ಲಾಯಲ್ಟಿ ಬೋನಸ್‌ನೊಂದಿಗೆ ಮಾತ್ರ ಲಭ್ಯವಿದೆ.
-
ರೆನಾಲ್ಟ್ ಕಿಗರ್ ಬೆಲೆಯು ರೂ. 6 ಲಕ್ಷದಿಂದ ರೂ. 11.23 ಲಕ್ಷದವರೆಗೆ ಇದೆ.
ಗಮನಿಸಿ
-
ರೆನಾಲ್ಟ್ ಎಲ್ಲಾ ಕಾರುಗಳ ಮೇಲೆ ರೂ. 5,000 ಐಚ್ಛಿಕ ರೂರಲ್ ಡಿಸ್ಕೌಂಟ್ ಅನ್ನು ನೀಡುತ್ತಿದೆ, ಆದರೆ ಇದನ್ನು ಕಾರ್ಪೊರೇಟ್ ರಿಯಾಯಿತಿ ಜೊತೆಗೆ ಪಡೆಯಲು ಸಾಧ್ಯವಿಲ್ಲ.
-
'R.E.Li.V.E' ಸ್ಕ್ರ್ಯಾಪ್‌ಪೇಜ್ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಕಾರುಗಳ ಮೇಲೆ ರೂ. 10,000 ಐಚ್ಛಿಕ ರಿಯಾಯಿತಿಯನ್ನು ಕೂಡ ನೀಡಲಾಗುತ್ತದೆ.
-
ರೆನಾಲ್ಟ್ ತನ್ನ ಮಾಡೆಲ್ ಗಳ ಮೇಲೆ ರೆಫರಲ್ ಪ್ರಯೋಜನಗಳನ್ನು ಕೂಡ ನೀಡುತ್ತಿದೆ.
-
ಮೇಲೆ ತಿಳಿಸಲಾದ ರಿಯಾಯಿತಿಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
-
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ
ಇನ್ನಷ್ಟು ಓದಿ: KWID AMT