Login or Register ಅತ್ಯುತ್ತಮ CarDekho experience ಗೆ
Login

ಈ ಏಪ್ರಿಲ್‌ನಲ್ಲಿ Renault ಕಾರುಗಳ ಮೇಲೆ ರೂ. 52,000 ವರೆಗಿನ ಪ್ರಯೋಜನಗಳನ್ನು ಪಡೆಯಿರಿ

published on ಏಪ್ರಿಲ್ 12, 2024 10:49 am by shreyash for ರೆನಾಲ್ಟ್ ಕ್ವಿಡ್

ರೆನಾಲ್ಟ್ ತನ್ನ ಕಿಗರ್ ಸಬ್‌ಕಾಂಪ್ಯಾಕ್ಟ್‌ ಎಸ್‌ಯುವಿ ಮೇಲೆ ಅತಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ.

  • ರೆನಾಲ್ಟ್ ಕಿಗರ್ ನೊಂದಿಗೆ ರೂ. 52,000 ವರೆಗಿನ ಗರಿಷ್ಠ ಪ್ರಯೋಜನಗಳನ್ನು ನೀಡಲಾಗುತ್ತಿದೆ.
  • ರೆನಾಲ್ಟ್ ಕ್ವಿಡ್ ಮತ್ತು ರೆನಾಲ್ಟ್ ಟ್ರೈಬರ್ ರೂ 47,000 ವರೆಗಿನ ರಿಯಾಯಿತಿಯೊಂದಿಗೆ ಲಭ್ಯವಿದೆ.
  • ಎಲ್ಲಾ ಕೊಡುಗೆಗಳು ಏಪ್ರಿಲ್ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ರೆನಾಲ್ಟ್ ತನ್ನ ಮಾಡೆಲ್ ಗಳಾದ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಕಿಗರ್ ಮೇಲೆ ಏಪ್ರಿಲ್ 2024 ರ ಪ್ರಯೋಜನಗಳನ್ನು ಹೊರತಂದಿದೆ. ಕೊಡುಗೆಗಳಲ್ಲಿ ನಗದು ರಿಯಾಯಿತಿ, ವಿನಿಮಯ ಮತ್ತು ಲಾಯಲ್ಟಿ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಒಳಗೊಂಡಿವೆ. ಬನ್ನಿ, ಮಾಡೆಲ್-ವಾರು ಕೊಡುಗೆ ವಿವರಗಳನ್ನು ನೋಡೋಣ.

ರೆನಾಲ್ಟ್ ಕ್ವಿಡ್

ಕೊಡುಗೆಗಳು

ಮೊತ್ತ

ನಗದು ರಿಯಾಯಿತಿ

ರೂ. 10,000 ವರೆಗೆ

ವಿನಿಮಯ ಬೋನಸ್

ರೂ. 15,000 ವರೆಗೆ

ಲಾಯಲ್ಟಿ ಬೋನಸ್

ರೂ. 10,000 ವರೆಗೆ

ಕಾರ್ಪೊರೇಟ್ ರಿಯಾಯಿತಿ

ರೂ. 12,000 ವರೆಗೆ

ಗರಿಷ್ಠ ಪ್ರಯೋಜನಗಳು

ರೂ. 47,000 ವರೆಗೆ

  • ಬೇಸ್-ಸ್ಪೆಕ್ RXE ವೇರಿಯಂಟ್ ಅನ್ನು ಹೊರತುಪಡಿಸಿ, ಮೇಲೆ ತಿಳಿಸಲಾದ ರಿಯಾಯಿತಿಗಳು ರೆನಾಟ್ ಕ್ವಿಡ್‌ನ ಎಲ್ಲಾ ವೇರಿಯಂಟ್ ಗಳ ಮೇಲೆ ಲಭ್ಯವಿದೆ ಆದರೆ ನೀವು ಆಯ್ಕೆ ಮಾಡುವ ನಿರ್ದಿಷ್ಟ ಮಾಡೆಲ್ ನೊಂದಿಗೆ ರಿಯಾಯಿತಿ ಮೊತ್ತವು ಬದಲಾಗಬಹುದು.

  • ಬೇಸ್-ಸ್ಪೆಕ್ RXE ಗಾಗಿ, ರೂ. 10,000 ಗಳ ಲಾಯಲ್ಟಿ ಬೋನಸ್ ಮಾತ್ರ ಲಭ್ಯವಿದೆ.

  • ರೆನಾಲ್ಟ್ ಕ್ವಿಡ್ ಬೆಲೆಯು ರೂ. 4.70 ಲಕ್ಷದಿಂದ ರೂ. 6.45 ಲಕ್ಷದವರೆಗೆ ಇದೆ

ಇದನ್ನು ಕೂಡ ಓದಿ: ಹುಂಡೈ ಕಾರುಗಳು ಈ ಏಪ್ರಿಲ್‌ನಲ್ಲಿ ರೂ. 48,000 ವರೆಗಿನ ಪ್ರಯೋಜನಗಳನ್ನು ನೀಡುತ್ತಿವೆ

ರೆನಾಲ್ಟ್ ಟ್ರೈಬರ್

ಕೊಡುಗೆಗಳು

ಮೊತ್ತ

ನಗದು ರಿಯಾಯಿತಿ

ರೂ. 10,000 ವರೆಗೆ

ವಿನಿಮಯ ಬೋನಸ್

ರೂ. 15,000 ವರೆಗೆ

ಲಾಯಲ್ಟಿ ಬೋನಸ್

ರೂ. 10,000 ವರೆಗೆ

ಕಾರ್ಪೊರೇಟ್ ರಿಯಾಯಿತಿ

ರೂ. 12,000 ವರೆಗೆ

ಗರಿಷ್ಠ ಪ್ರಯೋಜನಗಳು

ರೂ. 47,000 ವರೆಗೆ

  • ಮೇಲಿನ ಟೇಬಲ್ ನಲ್ಲಿ ನೀಡಿರುವ ಗರಿಷ್ಠ ಪ್ರಯೋಜನಗಳು ರೆನಾಲ್ಟ್ ಟ್ರೈಬರ್‌ನ ನಿರ್ದಿಷ್ಟ ವೇರಿಯಂಟ್ ಗಳಿಗೆ ಮಾತ್ರ ಅನ್ವಯವಾಗಿರುತ್ತವೆ.

  • ಬೇಸ್-ಸ್ಪೆಕ್ RXE ವೇರಿಯಂಟ್ ನೊಂದಿಗೆ ಕೇವಲ ಲಾಯಲ್ಟಿ ಬೋನಸ್‌ ಮಾತ್ರ ಲಭ್ಯವಿದೆ.

  • ರೆನಾಲ್ಟ್ ಟ್ರೈಬರ್ ಬೆಲೆಯು ರೂ.6 ಲಕ್ಷದಿಂದ ರೂ.8.97 ಲಕ್ಷದವರೆಗೆ ಇದೆ.

ರೆನಾಲ್ಟ್ ಕಿಗರ್

ಕೊಡುಗೆಗಳು

ಮೊತ್ತ

ನಗದು ರಿಯಾಯಿತಿ

ರೂ. 15,000 ವರೆಗೆ

ವಿನಿಮಯ ಬೋನಸ್

ರೂ. 15,000 ವರೆಗೆ

ಲಾಯಲ್ಟಿ ಬೋನಸ್

ರೂ. 10,000 ವರೆಗೆ

ಕಾರ್ಪೊರೇಟ್ ರಿಯಾಯಿತಿ

ರೂ. 12,000 ವರೆಗೆ

ಗರಿಷ್ಠ ಪ್ರಯೋಜನಗಳು

ರೂ. 52,000 ವರೆಗೆ

  • ರೆನಾಲ್ಟ್ ಕಿಗರ್ ಇಲ್ಲಿ ಅತಿ ಹೆಚ್ಚು ರಿಯಾಯಿತಿ ಕೊಡುಗೆಗಳನ್ನು ಪಡೆಯುವ ಮಾಡೆಲ್ ಆಗಿದೆ. ಇದು 15,000 ರೂಪಾಯಿಗಳ ಅತ್ಯಂತ ಹೆಚ್ಚು ನಗದು ರಿಯಾಯಿತಿಯನ್ನು ಪಡೆಯುತ್ತದೆ.

  • ದಯವಿಟ್ಟು ಗಮನಿಸಿ, ಈ ಪ್ರಯೋಜನಗಳು ಕಿಗರ್‌ನ ಬೇಸ್-ಸ್ಪೆಕ್ RXE ವೇರಿಯಂಟ್ ಗೆ ಅನ್ವಯಿಸುವುದಿಲ್ಲ. ಈ ವೇರಿಯಂಟ್ ಕೇವಲ ಲಾಯಲ್ಟಿ ಬೋನಸ್‌ನೊಂದಿಗೆ ಮಾತ್ರ ಲಭ್ಯವಿದೆ.

  • ರೆನಾಲ್ಟ್ ಕಿಗರ್ ಬೆಲೆಯು ರೂ. 6 ಲಕ್ಷದಿಂದ ರೂ. 11.23 ಲಕ್ಷದವರೆಗೆ ಇದೆ.

ಗಮನಿಸಿ

  • ರೆನಾಲ್ಟ್ ಎಲ್ಲಾ ಕಾರುಗಳ ಮೇಲೆ ರೂ. 5,000 ಐಚ್ಛಿಕ ರೂರಲ್ ಡಿಸ್ಕೌಂಟ್ ಅನ್ನು ನೀಡುತ್ತಿದೆ, ಆದರೆ ಇದನ್ನು ಕಾರ್ಪೊರೇಟ್ ರಿಯಾಯಿತಿ ಜೊತೆಗೆ ಪಡೆಯಲು ಸಾಧ್ಯವಿಲ್ಲ.

  • 'R.E.Li.V.E' ಸ್ಕ್ರ್ಯಾಪ್‌ಪೇಜ್ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಕಾರುಗಳ ಮೇಲೆ ರೂ. 10,000 ಐಚ್ಛಿಕ ರಿಯಾಯಿತಿಯನ್ನು ಕೂಡ ನೀಡಲಾಗುತ್ತದೆ.

  • ರೆನಾಲ್ಟ್ ತನ್ನ ಮಾಡೆಲ್ ಗಳ ಮೇಲೆ ರೆಫರಲ್ ಪ್ರಯೋಜನಗಳನ್ನು ಕೂಡ ನೀಡುತ್ತಿದೆ.

  • ಮೇಲೆ ತಿಳಿಸಲಾದ ರಿಯಾಯಿತಿಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ

ಇನ್ನಷ್ಟು ಓದಿ: KWID AMT

s
ಅವರಿಂದ ಪ್ರಕಟಿಸಲಾಗಿದೆ

shreyash

  • 69 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ರೆನಾಲ್ಟ್ ಕ್ವಿಡ್

Read Full News

explore similar ಕಾರುಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ