ಈ ಜುಲೈನಲ್ಲಿ ಹುಂಡೈ ಕಾರುಗಳ ಮೇಲೆ 1 ಲಕ್ಷ ರೂ.ವರೆಗೆ ಭರ್ಜರಿ ರಿಯಾಯಿತಿ
ಹು ಂಡೈ ಔರಾ ಗಾಗಿ tarun ಮೂಲಕ ಜುಲೈ 14, 2023 10:57 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಈ ತಿಂಗಳು ಈ ಹುಂಡೈ ಕಾರುಗಳ ಮೇಲೆ ನೀವು ನಗದು ರಿಯಾಯಿತಿಗಳು, ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಪಡೆಯಬಹುದು
-
ಗ್ರ್ಯಾಂಡ್ i10 ನಿಯೋಸ್‌ಗೆ ರೂ. 38,000 ವರೆಗಿನ ರಿಯಾಯಿತಿಗಳನ್ನು ಪಡೆಯಿರಿ.
-
ಔರಾಗೆ ರೂ. 33,000 ವರೆಗೆ ಉಳಿತಾಯವನ್ನು ಮಾಡಬಹುದಾಗಿದೆ.
-
i20 ಮತ್ತು i20 N ಲೈನ್‌ನಲ್ಲಿ ರೂ. 20,000 ವರೆಗಿನ ಪ್ರಯೋಜನಗಳು ಲಭ್ಯವಿವೆ.
-
ಹ್ಯುಂಡೈ ಅಲ್ಕಾಜರ್ ಕಾರಿಗೆ 20,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಅನ್ನು ನೀಡಲಾಗುತ್ತಿದೆ.
-
ಕೋನಾ ಎಲೆಕ್ಟ್ರಿಕ್ ಕಾರಿಗೆ ರೂ. 1 ಲಕ್ಷ ಮೌಲ್ಯದ ಗರಿಷ್ಠ ಪ್ರಯೋಜನಗಳು ಲಭ್ಯವಿವೆ.
2023 ರ ಜುಲೈ ತಿಂಗಳಲ್ಲಿ, ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್, ಔರಾ, i20, i20 N ಲೈನ್, ಅಲ್ಕಾಜರ್ ಮತ್ತು ಕೋನಾ EV ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ವೆನ್ಯೂ, ವೆನ್ಯೂ N ಲೈನ್, ವೆರ್ನಾ, ಕ್ರೆಟಾ ಮತ್ತು ಟಕ್ಸನ್‌ನಂತಹ ಜನಪ್ರಿಯ ಮಾದರಿಗಳಲ್ಲಿ ಈ ತಿಂಗಳು ಯಾವುದೇ ರಿಯಾಯಿತಿಯನ್ನು ನೀಡಲಾಗುತಿಲ್ಲ. ಜುಲೈ 31 ರವರೆಗೆ ಮಾನ್ಯವಾಗಿರುವ ಮಾಡೆಲ್‌ವಾರು ಆಫರ್‌ಗಳ ಮಾಹಿತಿ ಇಲ್ಲಿವೆ:
ಹುಂಡೈ ಗ್ರ್ಯಾಂಡ್ i10 ನಿಯೋಸ್
ಆಫರ್‌ಗಳು |
ಮೊತ್ತ |
ನಗದು ರಿಯಾಯಿತಿ |
ರೂ. 25,000 ವರೆಗೆ |
ಹೆಚ್ಚುವರಿ ಎಕ್ಸ್‌ಚೇಂಜ್ ರಿಯಾಯಿತಿ |
ರೂ. 10,000 |
ಕಾರ್ಪೋರೇಟ್ ರಿಯಾಯಿತಿಗಳು |
ರೂ. 3,000 |
ಒಟ್ಟು ರಿಯಾಯಿತಿ |
ರೂ. 38,000 ವರೆಗೆ |
-
ಮೇಲೆ ತಿಳಿಸಿದ ಆಫರ್‌ಗಳು ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್‌ನ ಸ್ಪೋರ್ಟ್ಜ್ ಎಕ್ಸಿಕ್ಯುಟಿವ್ ಮ್ಯಾನುಯಲ್ ವೇರಿಯಂಟ್‌ಗಳಿಗೆ ಅನ್ವಯವಾಗುತ್ತವೆ.
-
AMT ವೇರಿಯಂಟ್ ಅನ್ನು ಹೊರತುಪಡಿಸಿ ಎಲ್ಲಾ ವೇರಿಯಂಟ್‌ಗಳಿಗೆ 20,000 ರೂಪಾಯಿಗಳ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ನಿಯೋಸ್ ಕಾರಿನ AMT ವೇರಿಯಂಟ್‌ಗಳಿಗೆ ಯಾವುದೇ ನಗದು ರಿಯಾಯಿತಿ ನೀಡಲಾಗಿಲ್ಲ.
-
ಹ್ಯಾಚ್‌ಬ್ಯಾಕ್ ಬೆಲೆ ರೂ. 5.73 ಲಕ್ಷದಿಂದ ರೂ. 8.51 ಲಕ್ಷದವರೆಗೆ ಇದೆ.
ಹುಂಡೈ ಔರಾ
ಆಫರ್‌ಗಳು |
ಮೊತ್ತ |
ನಗದು ರಿಯಾಯಿತಿ |
ರೂ. 20,000 ವರೆಗೆ |
ಹೆಚ್ಚುವರಿ ಎಕ್ಸ್‌ಚೇಂಜ್ ರಿಯಾಯಿತಿ |
ರೂ. 10,000 |
ಕಾರ್ಪೋರೇಟ್ ರಿಯಾಯಿತಿಗಳು |
ರೂ. 3,000 |
ಒಟ್ಟು ರಿಯಾಯಿತಿ |
ರೂ. 33,000 ವರೆಗೆ |
-
ಹ್ಯುಂಡೈ ಔರಾ ಸಿಎನ್‌ಜಿಯನ್ನು ಖರೀದಿಸುವ ಗ್ರಾಹಕರು ಅದೃಷ್ಟವಂತರಾಗಿದ್ದಾರೆ, ಏಕೆಂದರೆ ಅವರು ಈ ಜುಲೈನಲ್ಲಿ ಗರಿಷ್ಠ 20,000 ರೂಪಾಯಿಗಳ ನಗದು ರಿಯಾಯಿತಿಯನ್ನು ಪಡೆಯಲಿದ್ದಾರೆ.
-
ಮ್ಯಾನುಯಲ್ ಅಥವಾ AMT ಆಗಿರುವ ಸಾಮಾನ್ಯ ಪೆಟ್ರೋಲ್ ವೇರಿಯಂಟ್‌ಗಳಿಗೆ, ರೂ. 10,000 ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ.
-
ಸಬ್‌ಕಾಂಪ್ಯಾಕ್ಟ್ ಸೆಡಾನ್ ಬೆಲೆಗಳು ರೂ.6.33 ಲಕ್ಷದಿಂದ ರೂ.8.90 ಲಕ್ಷದವರೆಗೆ ಇದೆ.
ಇದನ್ನೂ ಓದಿ: ಟಾಟಾ ಪಂಚ್‌ಗೆ ಹೋಲಿಸಿದರೆ ಈ 7 ಫೀಚರ್‌ಗಳನ್ನು ಹೆಚ್ಚುವರಿಯಾಗಿ ಪಡೆಯುವ ಹ್ಯುಂಡೈ ಎಕ್ಸ್‌ಟರ್
ಹುಂಡೈ i20 ಮತ್ತು i20 N ಲೈನ್
ಆಫರ್‌ಗಳು |
ಮೊತ್ತ |
ನಗದು ರಿಯಾಯಿತಿ |
ರೂ. 10,000 |
ಹೆಚ್ಚುವರಿ ಎಕ್ಸ್‌ಚೇಂಜ್ ರಿಯಾಯಿತಿ |
ರೂ. 10,000 |
ಕಾರ್ಪೊರೇಟ್ ರಿಯಾಯಿತಿಗಳು |
- |
ಒಟ್ಟು ರಿಯಾಯಿತಿ |
ರೂ. 20,000 ವರೆಗೆ |
-
ಜುಲೈನಲ್ಲಿ, ಹ್ಯುಂಡೈ i20 ನ ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟಾ (O) DCT ವೇರಿಯಂಟ್‌ಗಳು ಮಾತ್ರ ಮೇಲೆ ತಿಳಿಸಲಾದ ನಗದು ಮತ್ತು ಎಕ್ಸ್‌ಚೇಂಜ್ ಆಫರ್‌ಗಳೊಂದಿಗೆ ಲಭ್ಯವಿವೆ.
-
ಇದೇ ಆಫರ್‌ಗಳು i20 N ಲೈನ್‌ನ DCT ವೇರಿಯಂಟ್‌ಗಳಿಗೂ ಅನ್ವಯವಾಗುತ್ತವೆ.
-
ಇತರ ಟ್ರಿಮ್‌ಗಳಿಗೆ ಯಾವುದೇ ಪ್ರಯೋಜನಗಳು ಲಭ್ಯವಿಲ್ಲ.
-
i20 ರೂ. 7.46 ಲಕ್ಷದಿಂದ ರೂ. 11.89 ಲಕ್ಷದವರೆಗಿನ ಬೆಲೆಗೆ ಮಾರಾಟವಾಗುತ್ತದೆ ಮತ್ತು N ಲೈನ್ ಬೆಲೆ ರೂ. 10.19 ಲಕ್ಷದಿಂದ ರೂ. 12.31 ಲಕ್ಷದವರೆಗೆ ಇದೆ.
ಹುಂಡೈ ಅಲ್ಕಾಜರ್
ಆಫರ್‌ಗಳು |
ಮೊತ್ತ |
ನಗದು ರಿಯಾಯಿತಿ |
- |
ಹೆಚ್ಚುವರಿ ಎಕ್ಸ್‌ಚೇಂಜ್ ರಿಯಾಯಿತಿ |
ರೂ. 20,000 |
ಕಾರ್ಪೋರೇಟ್ ರಿಯಾಯಿತಿಗಳು |
- |
ಒಟ್ಟು ರಿಯಾಯಿತಿ |
ರೂ. 20,000 |
-
ಹುಂಡೈ ಅಲ್ಕಾಜರ್ ಕಾರಿಗೆ ಯಾವುದೇ ನಗದು ರಿಯಾಯಿತಿ ಅಥವಾ ಕಾರ್ಪೊರೇಟ್ ಆಫರ್‌ಗಳನ್ನು ನೀಡಲಾಗುತ್ತಿಲ್ಲ. ಆದಾಗ್ಯೂ, ಈ ಕಾರಿಗೆ 20,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಅನ್ನು ನೀಡಲಾಗುತ್ತಿದೆ.
-
ಥ್ರೀ-ರೋ ಎಸ್‌ಯುವಿ ಬೆಲೆಗಳು ರೂ. 16.78 ಲಕ್ಷದಿಂದ ರೂ. 21.13 ಲಕ್ಷದವರೆಗೆ ಇದೆ.
ಹುಂಡೈ ಕೋನಾ EV
ಆಫರ್‌ಗಳು |
ಮೊತ್ತ |
ನಗದು ರಿಯಾಯಿತಿ |
ರೂ. 1,00,000 |
ಹೆಚುವರಿ ಎಕ್ಸ್‌ಚೇಂಜ್ ರಿಯಾಯಿತಿ |
- |
ಕಾರ್ಪೋರೇಟ್ ರಿಯಾಯಿತಿಗಳು |
- |
ಒಟ್ಟು ರಿಯಾಯಿತಿ |
ರೂ. 1,00,000 |
-
ಈ ತಿಂಗಳು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ 1 ಲಕ್ಷ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ.
-
ಈ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ರೂ. 23.84 ಲಕ್ಷದಿಂದ ರೂ. 24.03 ಲಕ್ಷದವರೆಗೆ ಇದೆ.
(ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಗಳಾಗಿವೆ)
ನಿಮ್ಮ ಕಾರಿನ ಮಾಡೆಲ್ ಮತ್ತು ಖರೀದಿಯ ಸ್ಥಳವನ್ನು ಅವಲಂಬಿಸಿ ನಿಖರವಾದ ರಿಯಾಯಿತಿಗಳು ಬದಲಾಗಬಹುದು, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಸಮೀಪದ ಹುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
ಇನ್ನಷ್ಟು ಓದಿ: ಔರಾ AMT