• English
  • Login / Register

ಈ ದೀಪಾವಳಿಯಂದು ಮಾರುತಿಯಿಂದ ಬಂಪರ್‌ ಆಫರ್:‌ ಅರೆನಾ ಮೊಡೆಲ್‌ಗಳ ಮೇಲೆ 59,000 ರೂ.ವರೆಗೆ ರಿಯಾಯಿತಿ

ಮಾರುತಿ ಆಲ್ಟೊ 800 ಗಾಗಿ rohit ಮೂಲಕ ನವೆಂಬರ್ 07, 2023 04:58 pm ರಂದು ಪ್ರಕಟಿಸಲಾಗಿದೆ

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಕೆಳಗೆ ಉಲ್ಲೇಖಿಸಲಾದ ಎಲ್ಲಾ ಕೊಡುಗೆಗಳು ನವೆಂಬರ್‌ ತಿಂಗಳ 12ರ ತನಕ ದೊರೆಯಲಿದ್ದು, ತದನಂತರ ಅವುಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ

Maruti Arena Diwali discounts

  • ಮಾರುತಿ ಸೆಲೆರಿಯೊ ಕಾರನ್ನು ರೂ. 59,000 ದಷ್ಟು ಗರಿಷ್ಠ ರಿಯಾಯಿತಿಯನ್ನು ನೀಡಲಾಗುತ್ತದೆ.
  • ಮಾರುತಿ ಸಂಸ್ಥೆಯು S-ಪ್ರೆಸ್ಸೊ ಕಾರನ್ನು ರೂ. 54,000 ತನಕದ ಉಳಿತಾಯವನ್ನು ಒದಗಿಸುತ್ತಿದೆ.
  • ಏಳು ವರ್ಷಗಳಿಗಿಂತಲೂ ಹಳೆಯದಾದ ವಾಹನಗಳ ಮೇಲಿನ ವಿನಿಮಯ ಬೋನಸ್‌ ಮೂಲಕ ವ್ಯಾಗನ್‌ R ಮತ್ತು ಸ್ವಿಫ್ಟ್‌ ವಾಹನಗಳು ರೂ. 5,000 ದಷ್ಟು ಕಡಿಮೆ ಬೆಲೆಗೆ ಲಭ್ಯ.
  • ಆಲ್ಟೊ 800 ಮತ್ತು ಡಿಸೈರ್‌ ಕಾರುಗಳು ಕ್ರಮವಾಗಿ ರೂ. 15,000 ಮತ್ತು ರೂ. 10,000 ದಷ್ಟು ವಿನಿಮಯ ಬೋನಸ್‌ ಅನ್ನು ಪಡೆಯಲಿವೆ.

ದೀಪಾವಳಿಯ ಸಂಭ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಈ ಶುಭ ಸಂದರ್ಭದಲ್ಲಿ ಅನೇಕ ಜನರು ಕಾರು ಸೇರಿದಂತೆ ಸಾಕಷ್ಟು ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ಜೊತೆಗೆ ವಿಶೇಷ ರಿಯಾಯಿತಿಯ ಮೂಲಕ ಒಂದಷ್ಟು ಹಣವನ್ನು ಉಳಿಸಲು ಯತ್ನಿಸುತ್ತಾರೆ. ಮಾರುತಿ ಕೆಲವು ಅರೆನಾ ಕಾರುಗಳಲ್ಲಿ ದೀಪಾವಳಿ ರಿಯಾಯಿತಿಯನ್ನು ಘೋಷಿಸಿದ್ದು, ಇದು ನವೆಂಬರ್ 12, 2023ರ ತನಕ ದೊರೆಯಲಿದೆ. ಸರಿ, ನಾವೀಗ ಅದನ್ನು ಪರಿಶೀಲಿಸೋಣ.

 ಆಲ್ಟೊ 800

ಕೊಡುಗೆ

ಮೊತ್ತ

ವಿನಿಮಯ ಬೋನಸ್

ರೂ. 15,000

ಒಟ್ಟು ಲಾಭಗಳು

ರೂ. 15,000 ತನಕ

  • ರಿಯಾಯಿತಿಗೆ ಒಳಪಟ್ಟ ಹೊಸ ಮಾರುತಿ ಅಲ್ಟೊ 800 ಕಾರಿನ ಉಳಿದ ಸ್ಟಾಕ್‌ ಗಳನ್ನು ಮಾತ್ರವೇ ಮೇಲೆ ತಿಳಿಸಿದ ವಿನಿಮಯ ಬೋನಸ್‌ ಜೊತೆಗೆ ನೀಡಲಾಗುತ್ತದೆ.

  • ಆರಂಭಿಕ ಹಂತದ ಹ್ಯಾಚ್‌ ಬ್ಯಾಕ್‌ ಕಾರಿನ ಎಲ್ಲಾ ಪೆಟ್ರೋಲ್‌ (ಬೇಸ್‌ ಸ್ಪೆಕ್‌ Std ಹೊರತುಪಡಿಸಿ) ಮತ್ತು CNG ವೇರಿಯಂಟ್‌ ಗಳು ಈ ಪ್ರಯೋಜನವನ್ನು ಪಡೆಯಲಿವೆ.

  • ಆಲ್ಟೊ 800 ಕಾರಿನ ಮಾರಾಟವನ್ನು ನಿಲ್ಲಿಸುವ ಮೊದಲು ಮಾರುತಿ ಸಂಸ್ಥೆಯು ಇದನ್ನು ರೂ. 3.54 ಲಕ್ಷದಿಂದ ರೂ. 5.13 ಲಕ್ಷದವರೆಗಿನ ಬೆಲೆಯಲ್ಲಿ ಮಾರಾಟ ಮಾಡುತ್ತಿತ್ತು.

 

 ಆಲ್ಟೊ K10

 

ಕೊಡುಗೆ

ಮೊತ್ತ

ನಗದು ರಿಯಾಯಿತಿ

ರೂ. 30,000 ತನಕ

ವಿನಿಮಯ ಬೋನಸ್

ರೂ. 15,000

ಕಾರ್ಪೊರೇಟ್‌ ವಿನಾಯಿತಿ

ರೂ. 4,000

ಒಟ್ಟು ಲಾಭಗಳು

ರೂ. 49,000 ತನಕ

  • ಈ ಕಾರು ತಯಾರಕ ಸಂಸ್ಥೆಯು ಮಾರುತಿ ಆಲ್ಟೊ K10 ವಾಹನದ ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ವೇರಿಯಂಟ್‌ ಗಳೆರಡರಲ್ಲೂ ಈ ರಿಯಾಯಿತಿಗಳನ್ನು ನೀಡುತ್ತಿದೆ.
  • ಇದರ CNG ವೇರಿಯಂಟ್‌ ಗಳಲ್ಲಿ ಕೇವಲ ರೂ. 20,000 ದಷ್ಟು ನಗದು ರಿಯಾಯಿತಿ ದೊರೆಯಲಿದ್ದು, ಇದರ ಮೆಲೆ ಯಾವುದೇ ಕಾರ್ಪೊರೇಟ್‌ ರಿಯಾಯಿತಿ ದೊರೆಯದು.

  • ಆಲ್ಟೊ K10 ಈಗ ರೂ. 3.99 ರಿಂದ ರೂ. 5.96 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.

 

 S-ಪ್ರೆಸ್ಸೊ

ಕೊಡುಗೆ

ಮೊತ್ತ

ನಗದು ರಿಯಾಯಿತಿ

ರೂ. 30,000

ವಿನಿಮಯ ಬೋನಸ್

ರೂ. 20,000

ಕಾರ್ಪೊರೇಟ್‌ ವಿನಾಯಿತಿ

ರೂ. 4,000

ಒಟ್ಟು ಲಾಭಗಳು

ರೂ. 54,000 ತನಕ

  • ಮಾರುತಿ S-ಪ್ರೆಸ್ಸೊ ಕಾರಿನ ಎಲ್ಲಾ ವೇರಿಯಂಟ್‌ ಗಳು (CNG ಹೊರತುಪಡಿಸಿ) ಮೇಲೆ ತಿಳಿಸಿದ ಉಳಿತಾಯದೊಂದಿಗೆ ಬರುತ್ತವೆ.
  • CNG ವೇರಿಯಂಟ್‌ ಗಳು ಅದೇ ಮಟ್ಟದ ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್‌ ಅನ್ನು ಪಡೆಯಲಿದ್ದು, ಕಾರ್ಪೊರೇಟ್‌ ರಿಯಾಯಿತಿಯನ್ನು ಪಡೆಯುವುದಿಲ್ಲ.
  • ಮಾರುತಿ ಸಂಸ್ಥೆಯು ಈ ಹ್ಯಾಚ್‌ ಬ್ಯಾಕ್‌ ಅನ್ನು ಈಗ ರೂ. 4.26 ರಿಂದ ರೂ. 6.12 ಲಕ್ಷದ ವರೆಗಿನ ಬೆಲೆಯಲ್ಲಿ ಮಾರುತ್ತಿದೆ.

ಇದನ್ನು ಸಹ ನೋಡಿರಿ: ಬಾಕಿ ಇರುವ ನಿಮ್ಮ ಚಲನ್‌ ಗಳನ್ನು ಪಾವತಿಸಿ

 

 ಈಕೊ

ಕೊಡುಗೆ

ಮೊತ್ತ

ನಗದು ರಿಯಾಯಿತಿ

ರೂ. 15,000 ತನಕ

ವಿನಿಮಯ ಬೋನಸ್

ರೂ. 10,000

ಕಾರ್ಪೊರೇಟ್‌ ವಿನಾಯಿತಿ

ರೂ. 4,000 ತನಕ

ಒಟ್ಟು ಲಾಭಗಳು

ರೂ. 29,000 ತನಕ

ಈ ಉಳಿತಾಯಗಳನ್ನು ಮಾರುತಿ ಈಕೊ ಕಾರಿನ CNG ವೇರಿಯಂಟ್‌ ಗಳನ್ನು ಹೊರತುಪಡಿಸಿ ಎಲ್ಲಾ ಟ್ರಿಮ್‌ ಗಳಲ್ಲಿ ನೀಡಲಾಗುತ್ತದೆ.

CNG ವೇರಿಯಂಟ್‌ ಅನ್ನು ಅದೇ ವಿನಿಮಯ ಬೋನಸ್‌ ಜೊತೆಗೆ ಒದಗಿಸಲಾಗುತ್ತದೆ. ಆದರೆ ರೂ. 5,000 ಮೊತ್ತದ ನಗದು ಬೋನಸ್‌ ಇದ್ದು, ಇದರಲ್ಲಿ ಕಾರ್ಪೊರೇಟ್‌ ವಿನಾಯಿತಿ ದೊರೆಯದು.

ಮಾರುತಿಯ ಈ ಬೇಸಿಕ್‌ ಪೀಪಲ್‌ ಮೂವರ್ ಕಾರು ರೂ. 5.27 ರಿಂದ ರೂ. 6.53 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ.

 ಸೆಲೆರಿಯೊ

 

ಕೊಡುಗೆ

ಮೊತ್ತ

ನಗದು ರಿಯಾಯಿತಿ

ರೂ. 35,000 ತನಕ

ವಿನಿಮಯ ಬೋನಸ್

ರೂ. 20,000

ಕಾರ್ಪೊರೇಟ್‌ ವಿನಾಯಿತಿ

ರೂ. 4,000 ತನಕ

ಒಟ್ಟು ಲಾಭಗಳು

ರೂ. 59,000 ತನಕ

  • ಮೇಲೆ ತಿಳಿಸಿದ ಲಾಭಗಳು ಮಾರುತಿ ಸೆಲೆರಿಯೊ ಕಾರಿನ ಮಿಡ್‌ ಸ್ಪೆಕ್ VXi, ZXi ಮತ್ತು ZXi+ ಟ್ರಿಮ್‌ ಗಳಿಗೆ (ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ) ಮಾತ್ರವೇ ಲಭ್ಯ.
  • ಇದರ ಲೋವರ್‌ ಸ್ಪೆಕ್ LXi ಟ್ರಿಮ್‌ ಮತ್ತು ಎಲ್ಲಾ AMT ವೇರಿಯಂಟ್‌ ಗಳು ರೂ. 30,000 ಗಳಷ್ಟು ನಗದು ರಿಯಾಯಿತಿಯನ್ನು ಪಡೆಯಲಿದ್ದು, ಉಳಿದ ಕೊಡುಗೆಗಳು ಹಾಗೆಯೇ ಇರಲಿವೆ.
  • ಮಾರುತಿ ಸಂಸ್ಥೆಯು ಸೆಲೆರಿಯೊ CNG ಯನ್ನು ರೂ. 30,000 ರಷ್ಟು ನಗದು ರಿಯಾಯಿತಿಯನ್ನು ನೀಡಲಿದ್ದು, ಇದರಲ್ಲಿ ಯಾವುದೇ ಕಾರ್ಪೊರೇಟ್‌ ರಿಯಾಯಿತಿ ದೊರೆಯುವುದಿಲ್ಲ.
  • ಈ ಕಾಂಪ್ಯಾಕ್ಟ್‌ ಹ್ಯಾಚ್‌ ಬ್ಯಾಕ್‌ ಕಾರು ಈಗ ರೂ. 5.37 ರಿಂದ ರೂ. 7.14 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.

ಇದನ್ನು ಸಹ ಓದಿರಿ: ಪ್ರಮಾಣಿತ 6 ಏರ್‌ ಬ್ಯಾಗ್‌ ಗಳನ್ನು ಹೊಂದಿರುವ, ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ 8 ಕಾರುಗಳು

 

 ವ್ಯಾಗನ್ R

 

ಕೊಡುಗೆ

ಮೊತ್ತ

ನಗದು ರಿಯಾಯಿತಿ

ರೂ. 25,000

ವಿನಿಮಯ ಬೋನಸ್

ರೂ. 20,000 ತನಕ

ಕಾರ್ಪೊರೇಟ್‌ ವಿನಾಯಿತಿ

ರೂ. 4,000 ತನಕ

ಒಟ್ಟು ಲಾಭಗಳು

ರೂ. 49,000 ತನಕ

  • ಮಾರುತಿ ವ್ಯಾಗನ್ R ಕಾರಿನ CNG ಟ್ರಿಮ್‌ ಗಳನ್ನು ಹೊರತುಪಡಿಸಿ ಎಲ್ಲಾ ವೇರಿಯಂಟ್‌ ಗಳಲ್ಲಿ ಈ ಕೊಡುಗೆಗಳು ಲಭ್ಯ.
  • ಮಾರುತಿ ಸಂಸ್ತೆಯು ಈ ಕಾಂಪ್ಯಾಕ್ಟ್‌ ಹ್ಯಾಚ್‌ ಬ್ಯಾಕ್‌ ಕಾರಿನ CNG ವೇರಿಯಂಟ್‌ ಗಳಲ್ಲಿ ಅದೇ ಪ್ರಯೋಜನಗಳನ್ನು ನೀಡುತ್ತಿದ್ದು, ಇದರಲ್ಲಿ ಯಾವುದೇ ಕಾರ್ಪೊರೇಟ್‌ ವಿನಾಯಿತಿ ದೊರೆಯದು.
  • ಈ ಕಾರನ್ನು 7 ವರ್ಷಗಳಿಗಿಂತ ಕಡಿಮೆ ವಯಸ್ಸಿನ ವಾಹನದೊಂದಿಗೆ ವಿನಿಮಯ ಮಾಡಿಕೊಂಡರೆ ಮಾತ್ರವೇ ವಿನಿಮಯ ಬೋನಸ್‌ ದೊರೆಯುತ್ತದೆ. ಇದಕ್ಕಿಂತ ಹಳೆಯದಾಗಿದ್ದರೆ, ಈ ಪ್ರಯೋಜನವನ್ನು ರೂ. 15,000 ಕ್ಕೆ ಇಳಿಸಲಾಗುತ್ತದೆ.
  • ಮಾರುತಿ ಸಂಸ್ಥೆಯು ವ್ಯಾಗನ್‌ R ಅನ್ನು ಈಗ ರೂ. 5.54 ರಿಂದ ರೂ. 7.42 ಲಕ್ಷದ ವರೆಗಿನ ಬೆಲೆಯಲ್ಲಿ ಮಾರುತ್ತಿದೆ.

 ಸ್ವಿಫ್ಟ್

ಕೊಡುಗೆ

ಮೊತ್ತ

ನಗದು ರಿಯಾಯಿತಿ

ರೂ. 25,000

ವಿನಿಮಯ ಬೋನಸ್

ರೂ. 20,000 ತನಕ

ಕಾರ್ಪೊರೇಟ್‌ ವಿನಾಯಿತಿ

ರೂ. 4,000 ತನಕ

ಒಟ್ಟು ಲಾಭಗಳು

ರೂ. 49,000 ತನಕ

 ಮಾರುತಿ ಸ್ವಿಫ್ಟ್‌ ಕಾರಿನ ಎಲ್ಲಾ ವೇರಿಯಂಟ್‌ ಗಳು (CNG ಹೊರತುಪಡಿಸಿ) ಮೇಲಿನ ರಿಯಾಯಿತಿಯನ್ನು ಪಡೆಯುತ್ತವೆ.

ಈ ಹ್ಯಾಚ್‌ ಬ್ಯಾಕ್‌ ಕಾರಿನ CNG ವೇರಿಯಂಟ್‌ ಗಳು ನಗದು ರಿಯಾಯಿತಿಯೊಂದಿಗೆ ಮಾತ್ರವೇ ದೊರೆಯುತ್ತವೆ.

ಅಲ್ಲದೆ, 7 ವರ್ಷಗಳಿಗಿಂತಲೂ ಹಳೆಯ ವಾಹನವನ್ನು ಹೊಸ ಸ್ವಿಫ್ಟ್‌ ಜೊತೆಗೆ ವಿನಿಮಯ ಮಾಡಿಕೊಂಡರೆ, ರೂ. 15,000 ದಷ್ಟು ವಿನಿಮಯ ಬೋನಸ್‌ ದೊರೆಯಲಿದ್ದು, ಇತರ ವಾಹನಗಳ ಮೇಲೆ ರೂ. 20,000 ದಷ್ಟು ವಿನಿಮಯ ಬೋನಸ್‌ ನೀಡಲಾಗುತ್ತದೆ.

ಸ್ವಿಫ್ಟ್‌ ವಿಶೇಷ ಆವೃತ್ತಿಗೆ ಗ್ರಾಹಕರು ರೂ. 8,400 ದಷ್ಟು ಹೆಚ್ಚಿನ ಮೊತ್ತವನ್ನು ನೀಡಬೇಕು. ಆದರೂ ಇದು ರೂ. 20,000 ತನಕದ ವಿನಿಮಯ ಬೋನಸ್‌ ಮತ್ತು ರೂ. 4,000 ದಷ್ಟು ಕಾರ್ಪೊರೇಟ್‌ ವಿನಾಯಿತಿ ಪಡೆಯಲಿದೆ.

ಮಾರುತಿಯ ಈ ಮಿಡ್‌ ಸೈಜ್‌ ಹ್ಯಾಚ್‌ ಬ್ಯಾಕ್‌ ಕಾರು ರೂ. 5.99 ರಿಂದ ರೂ. 9.03 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ.

ಇದನ್ನು ಸಹ ಓದಿರಿ: ಪರೀಕ್ಷಾರ್ಥ ಚಾಲನೆ ವೇಳೆ ಕಾಣಿಸಿಕೊಂಡ 2024 ಮಾರುತಿ ಸ್ವಿಫ್ಟ್‌, ವಿನ್ಯಾಸದ ಹೊಸ ವಿವರಗಳ ಬಹಿರಂಗ

 

 ಡಿಜೈರ್

 

ಕೊಡುಗೆ

ಮೊತ್ತ

ವಿನಿಮಯ ಬೋನಸ್

ರೂ. 10,000

ಒಟ್ಟು ಲಾಭಗಳು

ರೂ. 10,000 ತನಕ

  • ಮಾರುತಿ ಡಿಜೈರ್ ಕಾರಿನ ಎಲ್ಲಾ ಲೈನಪ್‌ ಗಳಲ್ಲಿ ರೂ. 10,000 ದಷ್ಟು ಉಳಿತಾಯ ಉಂಟಾಗಲಿದೆ.
  • ಮಾರುತಿ ಸಂಸ್ಥೆಯು ಸಬ್-4m ಸೆಡಾನ್‌ ಕಾರಿನ CNG ವೇರಿಯಂಟ್‌ ಗಳಲ್ಲಿ ಯಾವುದೇ ಪ್ರಯೋಜನವನ್ನು ನೀಡುತ್ತಿಲ್ಲ.

  • ಡಿಜೈರ್‌ ಅನ್ನು ಈಗ ರೂ. 6.51 ರಿಂದ ರೂ. 9.39 ಲಕ್ಷದ ವರೆಗಿನ ಬೆಲೆಯಲ್ಲಿ ಮಾರಲಾಗುತ್ತಿದೆ.

ಗಮನಿಸಿ: ರಿಯಾಯಿತಿಗಳು ರಾಜ್ಯ ಮತ್ತು ನಗರವನ್ನು ಹೊಂದಿಕೊಂಡು ಬದಲಾಗಬಹುದು. ಅಲ್ಲದೆ ಮಾರುತಿ ಅರೇನಾವು ಈ ನವಂಬರ್‌ ತಿಂಗಳಿನಲ್ಲಿ ಯಾವುದೇ ಕಾಯುವಿಕೆ ಇಲ್ಲದೆಯೇ ದೊರೆಯಲಿದೆ. ಹೀಗಾಗಿ, ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕಾಗಿ ನಿಮ್ಮ ಸಮೀಪದ ಮಾರುತಿ ಅರೇನಾ ಡೀಲರ್‌ ಶಿಪ್‌ ಅನ್ನು ಸಂಪರ್ಕಿಸಲು ನಾವು ವಿನಂತಿಸುತ್ತೇವೆ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಆಲ್ಟೊ ಕಾರಿನ ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti Alto 800

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience