Login or Register ಅತ್ಯುತ್ತಮ CarDekho experience ಗೆ
Login

Mahindra XUV 3XOನ ವೇರಿಯೆಂಟ್‌-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ

7.49 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಮಹೀಂದ್ರಾ 3XOವು 5 ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.

Mahindra XUV 3XO ಅನ್ನು ಕ್ಸ್‌ಯುವಿ300 ಸಬ್-4ಮೀ ಎಸ್‌ಯುವಿಯ ಫೇಸ್‌ಲಿಫ್ಟ್ ಆಗಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆಗಳು ರೂ 7.49 ಲಕ್ಷ ರೂ.ನಿಂದ ಪ್ರಾರಂಭವಾಗಿ 15.49 ಲಕ್ಷ ರೂ.ವರೆಗೆ (ಪರಿಚಯಾತ್ಮಕ, ಎಕ್ಸ್ ಶೋರೂಂ) ಇದೆ ಮತ್ತು ಇದರ ಬುಕಿಂಗ್ ಮೇ 15 ರಿಂದ ಪ್ರಾರಂಭವಾಗಲಿದೆ. ಮಹೀಂದ್ರಾ 3XOವು MX1, MX2, MX3, AX5, ಮತ್ತು AX7 ಎಂಬ 5 ವಿಶಾಲವಾದ ವೇರಿಯೆಂಟ್‌ಗಳಲ್ಲಿ ಹಾಗು "ಪ್ರೊ" ಮತ್ತು "L" ಎಂದು ಗುರುತಿಸಲಾದ ಉಪ-ವೇರಿಯಂಟ್‌ಗಳೊಂದಿಗೆ ಲಭ್ಯವಿದೆ. ನೀವು ಈ ಎಸ್‌ಯುವಿಯನ್ನು ಖರೀದಿಸಲು ಬಯಸಿದರೆ, ಪ್ರತಿಯೊಂದು ಆವೃತ್ತಿಯು ಏನನ್ನೆಲ್ಲಾ ಒಳಗೊಂಡಿದೆ ಎಂಬುದನ್ನು ನೋಡೋಣ.

ಇದನ್ನು ಓದಿ: Mahindra XUV 3XO ಬಿಡುಗಡೆ, ಬೆಲೆಗಳು 7.49 ಲಕ್ಷ ರೂ.ನಿಂದ ಪ್ರಾರಂಭ

3XO MX1

ಎಂಜಿನ್: 1.2-ಲೀಟರ್ ಟರ್ಬೊ-ಪೆಟ್ರೋಲ್

ಬೆಲೆ: 7.49 ಲಕ್ಷ ರೂ

ಬೇಸ್-ಮೊಡೆಲ್‌ MX1 ರೂಪಾಂತರವು ಈ ವೈಶಿಷ್ಟ್ಯಗಳನ್ನು ನೀಡುತ್ತದೆ:

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

  • ಪ್ರೊಜೆಕ್ಟರ್ ಹ್ಯಾಲೋಜೆನ್ ಹೆಡ್‌ಲೈಟ್‌ಗಳು

  • ORVM ಒಆರ್‌ವಿಎಮ್‌ನಲ್ಲಿ ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು

  • ಎಲ್ಇಡಿ ಟೈಲ್ ಲೈಟ್‌ಗಳು

  • 16 ಇಂಚಿನ ಸ್ಟೀಲ್ ವೀಲ್‌ಗಳು

  • ಫ್ಯಾಬ್ರಿಕ್ ಅಪ್ಹೋಲ್ಸ್‌ಟೆರಿ

  • 2 ನೇ ಸಾಲಿನಲ್ಲಿ ಹೊಂದಿಸಬಹುದಾದ ಹೆಡ್‌ರೆಸ್ಟ್

  • ಇಲ್ಲ

  • ಸ್ಟೋರೇಜ್‌ನೊಂದಿಗೆ ಮುಂಭಾಗದ ಆರ್ಮ್ ರೆಸ್ಟ್

  • 60:40 ಹಿಂದಿನ ಸೀಟ್ ಸ್ಪ್ಲಿಟ್

  • ವಿದ್ಯುತ್ ಹೊಂದಾಣಿಕೆ ಮಡಬಹುದಾದ ಒಆರ್‌ವಿಎಮ್‌ಗಳು

  • ಮ್ಯಾನುಯಲ್ ಎಸಿ

  • ಹಿಂದಿನ ಎಸಿ ವೆಂಟ್‌ಗಳು

  • ಎಲ್ಲಾ ಪವರ್ ವಿಂಡೋಗಳು

  • 12V ಸಾಕೆಟ್

  • ಮುಂಭಾಗದ ಯುಎಸ್‌ಬಿ ಟೈಪ್-ಎ ಪೋರ್ಟ್ ಮತ್ತು ಹಿಂದಿನ ಯುಎಸ್‌ಬಿ ಟೈಪ್-ಸಿ ಪೋರ್ಟ್

  • 6 ಏರ್‌ಬ್ಯಾಗ್‌ಗಳು

  • ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು

  • ISOFIX ಚೈಲ್ಡ್ ಸೀಟ್ ಆಂಕರ್‌ಗಳು

  • ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು

  • ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳು

  • ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು

ಎಕ್ಸ್‌ಯುವಿ 3XOನ ಬೇಸ್‌ ಮೊಡೆಲ್‌ನಲ್ಲಿ, ನೀವು ವಿನ್ಯಾಸದ ವಿಷಯದಲ್ಲಿ ಕನಿಷ್ಠವನ್ನು ಪಡೆಯುತ್ತೀರಿ ಮತ್ತು ಇನ್ಫೋಟೈನ್‌ಮೆಂಟ್ ಪ್ಯಾಕೇಜ್ ಇಲ್ಲ. ಆದರೆ, ಈ ಆವೃತ್ತಿಯು ಅನುಕೂಲತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ ಉತ್ತಮವಾಗಿ ಸಜ್ಜುಗೊಂಡಿದೆ. ಈ ಆವೃತ್ತಿಯು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಬರುತ್ತದೆ.

ಎಕ್ಸ್‌ಯುವಿ 3XO MX2

ಎಂಜಿನ್: 1.5-ಲೀಟರ್ ಡೀಸೆಲ್

ಬೆಲೆ: 9.99 ಲಕ್ಷ ರೂ

ಬೇಸ್-ಮೊಡೆಲ್‌ಗಿಂತ ಒಂದು ಮೇಲಿನ ಆವೃತ್ತಿಯಾದ MX2 ವೇರಿಯೆಂಟ್‌ ಈ ವೈಶಿಷ್ಟ್ಯಗಳನ್ನು ನೀಡುತ್ತದೆ:

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

  • ಫಾಲೋ ಮಿ ಹೋಂ ಹೆಡ್‌ಲ್ಯಾಂಪ್‌ಗಳು

  • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • 4-ಸ್ಪೀಕರ್ ಸೌಂಡ್ ಸಿಸ್ಟಮ್

  • ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು

  • ಕೀಲೆಸ್‌ ಎಂಟ್ರಿ

MX2 ಆವೃತ್ತಿಯು ದೊಡ್ಡ ಟಚ್‌ಸ್ಕ್ರೀನ್ ಅನ್ನು ವೈಶಿಷ್ಟ್ಯದ ಪಟ್ಟಿಗೆ ಸೇರಿಸಲಾಗಿದೆ ಮತ್ತು ಹೆಚ್ಚುವರಿ ಸೌಕರ್ಯಗಳೊಂದಿಗೆ ಬರುತ್ತದೆ. ಈ ವೇರಿಯೆಂಟ್‌ನಿಂದ ನೀವು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತೀರಿ.

3XO MX2 ಪ್ರೋ

ಎಂಜಿನ್: 1.2-ಲೀಟರ್ ಟರ್ಬೊ-ಪೆಟ್ರೋಲ್, 1.5-ಲೀಟರ್ ಡೀಸೆಲ್

ಬೆಲೆ: 8.99 ಲಕ್ಷದಿಂದ 10.39 ಲಕ್ಷ ರೂ.

MX2 ಆವೃತ್ತಿಗಿಂತ MX2 ಪ್ರೊ ಆವೃತ್ತಿಯು ಏನು ನೀಡುತ್ತದೆ ಎಂಬುವುದು ಇಲ್ಲಿದೆ:

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

ವೀಲ್‌ ಕವರ್‌

ಸಿಂಗಲ್ ಪೇನ್ ಸನ್‌ರೂಫ್

MX2 ಆವೃತ್ತಿಯ ಪ್ರೊ ಆವೃತ್ತಿಯು ಸಿಂಗಲ್-ಪೇನ್ ಸನ್‌ರೂಫ್ ಸೇರಿದಂತೆ ಕೆಲವು ಉತ್ತಮ ವೈಶಿಷ್ಟ್ಯಗಳನ್ನು ಮಾತ್ರ ಸೇರಿಸುತ್ತದೆ ಆದರೆ 3XO ನ ಪ್ರಾಯೋಗಿಕತೆ ಅಥವಾ ಸುರಕ್ಷತೆಯ ಅಂಶವನ್ನು ಸುಧಾರಿಸುವುದಿಲ್ಲ. ಈ ಆವೃತ್ತಿಯು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ 3XO ಗೆ ಎಂಟ್ರಿ-ಲೆವೆಲ್‌ನ ಆಟೋಮ್ಯಾಟಿಕ್‌ ಆಗಿದೆ.

ಇದನ್ನು ಓದಿ: Mahindra XUV 3XO ವರ್ಸಸ್ Mahindra XUV300: ಪ್ರಮುಖ ವ್ಯತ್ಯಾಸಗಳು

3XO MX3

ಎಂಜಿನ್: 1.2-ಲೀಟರ್ ಟರ್ಬೊ-ಪೆಟ್ರೋಲ್, 1.5-ಲೀಟರ್ ಡೀಸೆಲ್

ಬೆಲೆ: 10.99 ಲಕ್ಷದಿಂದ 11.69 ಲಕ್ಷ ರೂ.

ನೀವು MX2 Pro ಆವೃತ್ತಿಗಿಂತ MX3 ಆವೃತ್ತಿಯಲ್ಲಿ ಯಾವುದೆಲ್ಲಾ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ ಎಂಬುವುದು ಇಲ್ಲಿದೆ:

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ

  • ವೈರ್ಡ್ ಆಪಲ್ ಕಾರ್ಪ್ಲೇ

  • 10.25-ಇಂಚಿನ ಟಚ್‌ಸ್ಕ್ರೀನ್‌ಗಾಗಿ HD ಡಿಸ್ಪ್ಲೇ

  • ವೈರ್‌ಲೆಸ್ ಫೋನ್ ಚಾರ್ಜರ್

  • ಕ್ರೂಸ್ ಕಂಟ್ರೋಲ್

MX3 ಆವೃತ್ತಿಗಿಂತ ಮೇಲಿನ ಆವೃತ್ತಿಗಳಲ್ಲಿ ನೀವು ಇನ್ಫೋಟೈನ್‌ಮೆಂಟ್ ಪ್ಯಾಕೇಜ್‌ನಲ್ಲಿ ಸುಧಾರಣೆಗಳನ್ನು ಪಡೆಯುತ್ತೀರಿ, ಜೊತೆಗೆ ಕ್ರೂಸ್ ಕಂಟ್ರೋಲ್‌ನಂತಹ ಕೆಲವು ಹೆಚ್ಚುವರಿ ಅನುಕೂಲತೆಗಳನ್ನು ಪಡೆಯುತ್ತೀರಿ. ಈ ಆವೃತ್ತಿ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಮತ್ತು ಇಲ್ಲಿ ಡೀಸೆಲ್ ಎಂಜಿನ್ 6-ಸ್ಪೀಡ್ AMT ಆಯ್ಕೆಯನ್ನು ಪಡೆಯುತ್ತದೆ.

3XO MX3 ಪ್ರೋ

ಎಂಜಿನ್: 1.2-ಲೀಟರ್ ಟರ್ಬೊ-ಪೆಟ್ರೋಲ್, 1.5-ಲೀಟರ್ ಡೀಸೆಲ್

ಬೆಲೆ: 9.99 ಲಕ್ಷದಿಂದ 11.49 ಲಕ್ಷ ರೂ.

MX3 ಗಿಂತ MX3 Pro ಆವೃತ್ತಿಯು ನಿಮಗೆ ಈ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ:

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

  • ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • ಟರ್ನ್‌ ಇಂಡಿಕೇಟರ್‌ನೊಂದಿಗೆ ಎಲ್ಇಡಿ ಡಿಆರ್‌ಎಲ್‌ಗಳು

  • ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು

  • ಸ್ಟೈಲ್‌ ಆದ 16 ಇಂಚಿನ ಸ್ಟೀಲ್‌ ವೀಲ್‌ಗಳು

MX3 ಪ್ರೊ ಆವೃತ್ತಿಯು ಎಲ್ಇಡಿ ಲೈಟಿಂಗ್ ಸೆಟಪ್‌ನೊಂದಿಗೆ ಬಾಹ್ಯ ಬದಲಾವಣೆಗಳನ್ನು ಮಾತ್ರ ನೀಡುತ್ತದೆ ಆದರೆ ಇನ್ನೂ ಸ್ಟೈಲ್‌ ಆದ 16 ಇಂಚಿನ ಸ್ಟೀಲ್‌ ಮೇಲೆ ಇರುತ್ತದೆ. ಈ ಆವೃತ್ತಿಯಲ್ಲಿ, ನೀವು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತೀರಿ, ಆದರೆ ಡೀಸೆಲ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.

3XO AX5

ಎಂಜಿನ್: 1.2-ಲೀಟರ್ ಟರ್ಬೊ-ಪೆಟ್ರೋಲ್, 1.5-ಲೀಟರ್ ಡೀಸೆಲ್

ಬೆಲೆ: 10.69 ಲಕ್ಷದಿಂದ 12.89 ಲಕ್ಷ ರೂ.

AX5 ಆವೃತ್ತಿಯು MX3 ಪ್ರೋ ಅವೃತ್ತಿಗಿಂತ ಹೆಚ್ಚುವರಿಯಾಗಿ ಈ ವೈಶಿಷ್ಟ್ಯಗಳೊಂದಿಗೆ ಬರುತ್ತದೆ:

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

  • 16 ಇಂಚಿನ ಅಲಾಯ್ ವೀಲ್‌ಗಳು

  • ರೂಫ್ ರೇಲ್ಸ್‌

  • ಹಿಂಭಾಗದ ಸ್ಪಾಯ್ಲರ್

  • ಲೆದರ್ ಸ್ಟೀರಿಂಗ್ ವ್ಹೀಲ್ ಮತ್ತು ಗೇರ್ ನಾಬ್

  • 2 ನೇ ಸಾಲಿನಲ್ಲಿ ಮಧ್ಯಮ ಪ್ರಯಾಣಿಕರಿಗೆ ಹೊಂದಿಸಬಹುದಾದ ಹೆಡ್‌ರೆಸ್ಟ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • ವೈರ್ಲೆಸ್ ಆಪಲ್ ಕಾರ್ಪ್ಲೇ

  • ಅಡ್ರೆನಾಕ್ಸ್ ಕಾರ್ ಟೆಕ್ ಅನ್ನು ಇನ್‌-ಬಿಲ್ಟ್‌ ಅಮೆಜಾನ್ ಅಲೆಕ್ಸಾದೊಂದಿಗೆ ಕನೆಕ್ಷನ್‌

  • 6 ಸ್ಪೀಕರ್‌ಗಳು

  • ಇನ್‌-ಬಿಲ್ಟ್‌ ಆನ್‌ಲೈನ್ ನ್ಯಾವಿಗೇಷನ್

  • ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್

  • ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

  • ಎಲೆಕ್ಟ್ರಿಕಲ್ ಫೋಲ್ಡಬಲ್ ಒಆರ್‌ವಿಎಮ್‌ಗಳು

  • ಕಪ್ ಹೋಲ್ಡರ್‌ಗಳೊಂದಿಗೆ ಹಿಂಭಾಗದ ಆರ್ಮ್‌ರೆಸ್ಟ್

  • ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್

  • ಆಟೋಮ್ಯಾಟಿಕ್‌ ಹೆಡ್‌ಲ್ಯಾಂಪ್‌ಗಳು

  • ಡ್ರೈವರ್‌ಗಾಗಿ ಒನ್-ಟಚ್ UP ಪವರ್ ವಿಂಡೋ

  • ಹಿಂದಿನ ವೈಪರ್ ಮತ್ತು ವಾಷರ್

  • ಹಿಂದಿನ ನೋಟದ ಕ್ಯಾಮೆರಾ

  • ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್

  • ಆಟೋಮ್ಯಾಟಿಕ್ ವೈಪರ್‌

  • ಹಿಂದಿನ ಡಿಫಾಗರ್

AX5 ಆವೃತ್ತಿಯು ಕೊಡುಗೆಗಳ ಪಟ್ಟಿಯನ್ನು ಹೆಚ್ಚಿಸುತ್ತದೆ ಮತ್ತು ವಿನ್ಯಾಸ,ಇಂಫೋಟೈನ್‌ಮೆಂಟ್‌, ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಯ ವಿಷಯದಲ್ಲಿ ಬಹಳಷ್ಟು ನೀಡುತ್ತದೆ. ಈ ವೇರಿಯೆಂಟ್‌ನೊಂದಿಗೆ, ನೀವು ಈಗ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ (ಡೀಸೆಲ್‌ಗಾಗಿ AMT) ಪಡೆಯುತ್ತೀರಿ.

3XO AX5L

ಎಂಜಿನ್: 1.2-ಲೀಟರ್ TGDi ಟರ್ಬೊ-ಪೆಟ್ರೋಲ್

ಬೆಲೆ: 11.99 ಲಕ್ಷ ರೂ.ನಿಂದ 13.49 ಲಕ್ಷ ರೂ.

AX5 ಆವೃತ್ತಿಗಿಂತ AX5L ಆವೃತ್ತಿಯು ಏನು ಹೆಚ್ಚುವರಿಯಾಗಿ ನೀಡುತ್ತದೆ ಎಂಬುವುದು ಇಲ್ಲಿದೆ

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

  • ಕೂಲ್‌ ಆದ ಗ್ಲೋವ್‌ಬಾಕ್ಸ್‌

  • ಆಟೋ ಡಿಮ್ಮಿಂಗ್ ಐಆರ್‌ವಿಎಮ್‌

  • 360 ಡಿಗ್ರಿ ಕ್ಯಾಮೆರಾ

  • ಬ್ಲೈಂಡ್ ವ್ಯೂ ಮಾನಿಟರ್

  • ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ

  • ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

  • ಲೇನ್ ಕೀಪ್ ಅಸಿಸ್ಟ್

  • ಹೈ ಬೀಮ್ ಅಸಿಸ್ಟ್

  • ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್

AX5L ಆವೃತ್ತಿಯು ಸೌಕರ್ಯಗಳ ವಿಷಯದಲ್ಲಿ ಹೆಚ್ಚಿನದನ್ನು ಪಡೆಯುವುದಿಲ್ಲ ಆದರೆ ಇದು ಮಹೀಂದ್ರಾ 3XO ನ ಸುರಕ್ಷತೆಯ ಅಂಶವನ್ನು ಬಹಳಷ್ಟು ಹೆಚ್ಚಿಸುತ್ತದೆ, ಏಕೆಂದರೆ ಇದು 360-ಡಿಗ್ರಿ ಕ್ಯಾಮೆರಾವನ್ನು ನೀಡುವುದು ಮಾತ್ರವಲ್ಲದೇ, ಆದರೆ ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ವೇರಿಯೆಂಟ್‌ನೊಂದಿಗೆ, ನೀವು ಅಂತಿಮವಾಗಿ ಹೆಚ್ಚು ಶಕ್ತಿಶಾಲಿ 1.2-ಲೀಟರ್ TGDi ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ಪಡೆಯುತ್ತೀರಿ ಆದರೆ ಇತರ ಎಂಜಿನ್ ಆಯ್ಕೆಗಳಿಲ್ಲ.

ಇದನ್ನು ಓದಿ: ಈ ವಿವರವಾದ ಗ್ಯಾಲರಿಯಿಂದ Force Gurkha 5-door ಕುರಿತು ತಿಳಿದುಕೊಳ್ಳೋಣ

3XO AX7

ಎಂಜಿನ್: 1.2-ಲೀಟರ್ TGDi ಟರ್ಬೊ-ಪೆಟ್ರೋಲ್, 1.5-ಲೀಟರ್ ಡೀಸೆಲ್

ಬೆಲೆ: 12.49 ಲಕ್ಷದಿಂದ 14.49 ಲಕ್ಷ ರೂ.

AX5 ಆವೃತ್ತಿಗಿಂತ AX7 ಆವೃತ್ತಿಯು ಈ ವೈಶಿಷ್ಟ್ಯಗಳನ್ನು ನೀಡುತ್ತದೆ

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

  • 17 ಇಂಚಿನ ಅಲಾಯ್ ವೀಲ್‌ಗಳು

  • ಎಲ್ಇಡಿ ಫಾಗ್ ಲ್ಯಾಂಪ್ಸ

  • ಲೆಥೆರೆಟ್ ಸೀಟ್‌ಗಳು

  • ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳಲ್ಲಿ ಲೆಥೆರೆಟ್ ಪ್ಯಾಡಿಂಗ್

  • 7-ಸ್ಪೀಕರ್ ಹರ್ಮನ್ ಕಾರ್ಡನ್ ಪ್ರೀಮಿಯಂ ಸೌಂಡ್ ಸಿಸ್ಟಮ್

  • ಇಲ್ಯೂಮಿನೇಶನ್‌ನೊಂದಿಗೆ ಕೂಲ್ಡ್ ಗ್ಲೋವ್‌ಬಾಕ್ಸ್

  • 65W ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್

  • ಪನೋರಮಿಕ್ ಸನ್‌ರೂಫ್

  • ಮುಂಭಾಗದ ಪಾರ್ಕಿಂಗ್ ಅಸಿಸ್ಟ್ ಸಿಸ್ಟಮ್

ಟಾಪ್‌ ವೇರಿಯೆಂಟ್‌ಗಿಂತ ಒಂದು ಹಂತ ಕೆಳಗಿರುವ AX7 ಆವೃತ್ತಿಯಲ್ಲಿ, ನೀವು 65W ಟೈಪ್-C ಫಾಸ್ಟ್ ಚಾರ್ಜಿಂಗ್ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಬಹಳಷ್ಟು ಸೌಲಭ್ಯಗಳನ್ನು ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಪಡೆಯುತ್ತೀರಿ. ಈ ಆವೃತ್ತಿಯು ಹೆಚ್ಚು ಪ್ರೀಮಿಯಂ ಕ್ಯಾಬಿನ್ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ. ದುರದೃಷ್ಟವಶಾತ್, ಈ ಆವೃತ್ತಿಯು ADAS ಅನ್ನು ಪಡೆಯುವುದಿಲ್ಲ, ಏಕೆಂದರೆ ಇದು "L" ಆವೃತ್ತಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ. AX7 ಆವೃತ್ತಿಯು TGDi ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು ಎರಡೂ ಎಂಜಿನ್‌ಗಳು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಗಳನ್ನು (ಡೀಸೆಲ್‌ಗಾಗಿ AMT) ಪಡೆಯುತ್ತವೆ.

3XO AX7L

ಎಂಜಿನ್: 1.2-ಲೀಟರ್ TGDi ಟರ್ಬೊ-ಪೆಟ್ರೋಲ್, 1.5-ಲೀಟರ್ ಡೀಸೆಲ್

ಬೆಲೆ: 13.99 ಲಕ್ಷದಿಂದ 15.49 ಲಕ್ಷ ರೂ.

ಕೊನೆಯದಾಗಿ, AX7 ಆವೃತ್ತಿಗಿಂತ ಟಾಪ್-ಸ್ಪೆಕ್ AX7L ಆವೃತ್ತಿಯು ಏನೆಲ್ಲಾ ಹೆಚ್ಚುವರಿಯಾಗಿ ನೀಡುತ್ತದೆ ಎಂಬುವುದು ಇಲ್ಲಿದೆ.

ಹೊರಭಾಗ

ಇಂಟೀರಿಯರ್

ಇನ್ಫೋಟೈನ್ಮೆಂಟ್

ಸೌಕರ್ಯ ಸೌಲಭ್ಯ

ಸುರಕ್ಷತೆ

  • 360 ಡಿಗ್ರಿ ಕ್ಯಾಮೆರಾ

  • ಬ್ಲೈಂಡ್ ವ್ಯೂ ಮಾನಿಟರ್

  • ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ

  • ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

  • ಲೇನ್ ಕೀಪ್ ಅಸಿಸ್ಟ್

  • ಹೈ ಬೀಮ್ ಅಸಿಸ್ಟ್

  • ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್

AX7 ನಲ್ಲಿ ನೀಡದಿರುವ ಲೆವೆಲ್ 2 ADAS ವೈಶಿಷ್ಟ್ಯಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು AX7L ಆವೃತ್ತಿಯು ಮರಳಿ ತರುತ್ತದೆ. ಮಹೀಂದ್ರಾ XUV 3XOನ ಟಾಪ್-ಸ್ಪೆಕ್ ಆವೃತ್ತಿಯು TGDi ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಆದರೆ ಡೀಸೆಲ್ ಕೇವಲ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಗಮನಿಸಿ: ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಬಿಲ್ಟ್-ಇನ್ ಅಲೆಕ್ಸಾವನ್ನು ನಂತರ ಓವರ್‌-ದಿ-ಏರ್‌ (OTA) ಅಪ್‌ಡೇಟ್‌ಗಳ ಮೂಲಕ ಸೇರಿಸಲಾಗುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಮಹೀಂದ್ರಾ ಎಕ್ಸ್‌ಯುವಿ 3XO ಬೆಲೆಯು 7.49 ಲಕ್ಷ ರೂ.ನಿಂದ ಪ್ರಾರಂಭವಾಗಿ 15.49 ಲಕ್ಷ ರೂ.ವರೆಗೆ (ಪರಿಚಯಾತ್ಮಕ, ಎಕ್ಸ್-ಶೋರೂಂ) ಇರಲಿದೆ, ಮತ್ತು ಇದು ಟಾಟಾ ನೆಕ್ಸಾನ್‌, ಕಿಯಾ ಸೋನೆಟ್ ಮತ್ತು ಹ್ಯುಂಡೈ ವೆನ್ಯೂಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ. ಇದು ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಬ್ರೆಝಾ ಮುಂತಾದವುಗಳಿಗೂ ಸ್ಪರ್ಧೆಯನ್ನು ಒಡ್ಡುತ್ತದೆ.

ಮೇಲೆ ತಿಳಿಸಲಾದ ಎಲ್ಲಾ ಬೆಲೆಗಳು ಪರಿಚಯಾತ್ಮಕ ಎಕ್ಸ್ ಶೋರೂಂಗಳಾಗಿವೆ

ಇನ್ನಷ್ಟು ಓದಿ: XUV 3XOನ ಆನ್‌ರೋಡ್‌ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 31 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ XUV 3XO

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ