ಇಲ್ಲಿದೆ ಹೊಸ ಹ್ಯುಂಡೈ ವರ್ನಾದ ಡಿಸೈನ್ ಸ್ಕೆಚ್‌ಗಳ ಒಂದು ನೋಟ
ಹುಂಡೈ ವೆರ್ನಾ ಗಾಗಿ rohit ಮೂಲಕ ಫೆಬ್ರವಾರಿ 21, 2023 07:14 pm ರಂದು ಪ್ರಕಟಿಸಲಾಗಿದೆ
- 53 Views
- ಕಾಮೆಂಟ್ ಅನ್ನು ಬರೆಯಿರಿ
ಜನರೇಷನ್ ಅಪ್‌ಗ್ರೇಡ್ ಈ ಹ್ಯುಂಡೈ ಸೆಡಾನ್ ಅನ್ನು ಹೆಚ್ಚು ಮೌಲ್ಯಯುತ ಮತ್ತು ನಯವಾಗಿ ಕಾಣುವಂತೆ ಮಾಡಿದೆ
-
ಹ್ಯುಂಡೈ ಮಾರ್ಚ್ 21 ರಂದು ಭಾರತದಲ್ಲಿ ಹೊಸ ವರ್ನಾವನ್ನು ಬಿಡುಗಡೆ ಮಾಡಲಿದೆ.
-
ದೊಡ್ಡ ಟಚ್‌ಸ್ಕ್ರೀನ್ ಮತ್ತು ADAS ಈ ಸೆಡಾನ್‌ನ ಫೀಚರ್‌ಗಳಾಗಿವೆ.
-
ಇದು ಭಾರತದಲ್ಲಿ ಹ್ಯುಂಡೈ ಗ್ರೂಪ್‌ನ ಇತ್ತೀಚಿನ 1.5-ಲೀಟರ್ ಟರ್ಬೋ-ಪೆಟ್ರೋಲ್ ಅನ್ನು ಪ್ರಾರಂಭಿಸುತ್ತಿದೆ.
-
ಡಿಸೇಲ್ ಇಂಜಿನ್ ಅನ್ನು ಸಂಪೂರ್ಣವಾಗಿ ತೊರೆದು ಪೆಟ್ರೋಲ್ ಇಂಜಿನ್ ಅನ್ನು ಪಡೆದುಕೊಂಡಿದೆ.
-
ರೂ. 10 ಲಕ್ಷದಿಂದ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯನ್ನು ನಿರೀಕ್ಷಿಸಲಾಗಿದೆ.
ಭಾರತಕ್ಕಾಗಿ ತಯಾರಿಸಲ್ಪಟ್ಟ ಹ್ಯುಂಡೈನ ಕಾಂಪ್ಯಾಕ್ಟ್ ಸೆಡಾನ್, ವರ್ನಾ, ತನ್ನ ಆರನೇ-ಜನರೇಷನ್ ಅವತಾರ್ ಅನ್ನು ಮಾರ್ಚ್‌ನಲ್ಲಿ ಬಿಡುಗಡೆಗೊಳಿಸಲು ಎಲ್ಲಾ ರೀತಿಯಲ್ಲಿಯೂ ಸಿದ್ಧವಾಗಿದೆ (ನಿಖರವಾಗಿ ಮಾರ್ಚ್ 21). ಈ ಕಾರು ತಯಾರಕರು ಮಾಡೆಲ್‌ನ ಬುಕಿಂಗ್ ಅನ್ನು ಈಗಾಗಲೇ ತೆರೆದಿದ್ದು ಈಗ ಇದರ ಡಿಸೈನ್ ಸ್ಕೆಚ್‌ಗಳ ಇನ್ನೊಂದು ಸೆಟ್ ಅನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳು ಈ ಸೆಡಾನ್‌ನ ಫ್ರಂಟ್ ಮತ್ತು ಸೈಡ್ ಪ್ರೊಫೈಲ್‌ಗಳನ್ನು ಪ್ರದರ್ಶಿಸುತ್ತವೆ. ಈ ಆರನೇ-ಜನರೇಷನ್ ಮಾಡೆಲ್ ಅದರ ಗ್ರಿಲ್‌ಗೆ ‘ಪ್ಯಾರಮೆಟ್ರಿಕ್ ಜ್ಯುವೆಲ್’ ಡಿಸೈನ್ ಅನ್ನು ಹೊಂದಿದ್ದು, ಇದು ಹೊಸ ಟಕ್ಸನ್ ಮತ್ತು ಜಾಗತಿಕವಾಗಿ ಮಾರಾಟವಾದ ಸೆವೆಂಥ್-ಜನರೇಷನ್ ಎಲಾಂಟ್ರಾವನ್ನು ಹೋಲುತ್ತದೆ. ಇದರಲ್ಲಿನ ಇತರ ಡಿಸೈನ್‌ಗಳನ್ನು ಪಟ್ಟಿ ಮಾಡುವುದಾದರೆ, ಇದರಲ್ಲಿ ಸ್ಟೆರಿಯಾ MPV ನಲ್ಲಿರುವಂತೆಯೇ ಮುಂಭಾಗದಲ್ಲಿ ಉದ್ದನೆಯ ಮತ್ತು ಅಗಲವಾದ LED DRL ಸ್ಟ್ರಿಪ್‌ಗಳನ್ನು ಕಾಣಬಹುದಾಗಿದ್ದು, ಬಂಪರ್‌ನಲ್ಲಿ ADAS ರಾಡರ್ ಮತ್ತು ಥ್ರೀ-ಪೀಸ್ ಹೆಡ್‌ಲೈಟ್ ಯೂನಿಟ್‌ಗಳನ್ನು ಇದು ಹೊಂದಿದೆ.
ಪ್ರೊಫೈಲ್‌ನಲ್ಲಿ, ಈ ಸೆಡಾನ್ ಅನೇಕ ಚೂಪಾದ ಗೆರೆಗಳು ಮತ್ತು ಡ್ಯಾಪರ್ ಅಲೋಯ್ ವ್ಹೀಲ್‌ಗಳನ್ನು ಹೊಂದಿದ್ದು, ಅದರ ಹೆಚ್ಚಿನ ಉದ್ದದ ಇಳಿಜಾರು ರೂಫ್‌ಲೈನ್ ಅನ್ನು ನಾವು ಕಾಣಬಹುದಾಗಿದೆ. ರಿಯರ್‌ನ ಯಾವುದೇ ಸ್ಪಷ್ಟ ನೋಟವಿಲ್ಲದಿದ್ದರೂ ಹಿಂದೆ ಬಿಡುಗಡೆಯಾದ ಟೀಸರ್ ಇಮೇಜ್ ಹೊಸ ಎಲಾಂಟ್ರಾವನ್ನು ಹೋಲುವ LED ಟೈಲ್‌ಲೈಟ್ ಸೆಟಪ್ ಅನ್ನು ಸೂಚಿಸಿದೆ.
ಸಂಬಂಧಿತ: ಡಿಸೇಲ್ ಆಯ್ಕೆಯನ್ನು ಎಸ್‌ಯುವಿಗಳಿಗೆ ಮಾತ್ರ ಸೀಮಿತಗೊಳಿಸಿದ ಹ್ಯುಂಡೈ ಇಂಡಿಯಾ
ಯಾವುದೇ ಇಂಟೀರಿಯರ್ ಸ್ಕೆಚ್‌ಗಳನ್ನು ಇದುವರೆಗೂ ಹಂಚಿಕೊಂಡಿಲ್ಲ. ಆರನೇ-ಜನರೇಷನ್ ವರ್ನಾ ಅಸ್ತಿತ್ವದಲ್ಲಿರುವ ಮಾಡೆಲ್‌ನ ಫೀಚರ್ ಲಿಸ್ಟ್ ಅನ್ನು ಹೊಂದುವ ಸಾಧ್ಯತೆಯಿದ್ದು, ಇದು ದೊಡ್ಡ ಟಚ್‌ಸ್ಕ್ರೀನ್ ಯೂನಿಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೆಯನ್ನು ಪಡೆಯುವ ಸಾಧ್ಯತೆಯಿದೆ. ಅಸ್ತಿತ್ವದಲ್ಲಿರುವ ಮಾಡೆಲ್‌ನಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಪೆಡಲ್ ಶಿಫ್ಟರ್‌ಗಳನ್ನು ನೋಡಬಹುದು.
ಈ ಹೊಸ ವರ್ನಾದ ಸುರಕ್ಷತಾ ಕಿಟ್ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಅನ್ನು ಹೊಂದಿದೆ. ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು ಮತ್ತು ಫ್ರಂಟ್ ಹಾಗೂ ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಇದು ಒಳಗೊಂಡಿರಬೇಕು.
ಇದನ್ನೂ ಓದಿ: ತನ್ನ ವರ್ಗದ ಅತ್ಯಂತ ಶಕ್ತಿಶಾಲಿ ಸೆಡಾನ್ ಆಗಬಹುದಾದ ಹೊಸ ಹ್ಯುಂಡೈ ವರ್ನಾ!
ಜನರೇಷನ್ ಅಪ್‌ಗ್ರೇಡ್‌ನೊಂದಿಗೆ, ಹ್ಯುಂಡೈನ ಕಾಂಪ್ಯಾಕ್ಟ್ ಸೆಡಾನ್, ಡಿಸೇಲ್ ಇಂಜಿನ್ ಆಯ್ಕೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ. ಇದು ಎರಡು ಪೆಟ್ರೋಲ್ ಇಂಜಿನ್‌ಗಳೊಂದಿಗೆ ಬರಲಿದೆ –1.5-ಲೀಟರ್ ನ್ಯಾಚುರಲಿ ಆ್ಯಸ್ಪಿರೇಟೆಡ್ ಯೂನಿಟ್ (115PS/144Nm) ಮತ್ತು ಹೊಸ1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (159PS/253Nm ಬಿಡುಗಡೆಗಾಗಿ ವಿಶೇಷವಾಗಿ ತಯಾರಿಸಲಾಗಿದೆ) – ಎರಡನೆಯದು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪ್ರವೇಶ ಮಾಡುತ್ತಿದೆ. ಮೊದಲನೆಯದು ಸಿಕ್ಸ್-ಸ್ಪೀಡ್ ಮ್ಯಾನ್ಯುವಲ್ ಮತ್ತು CVT ಆಯ್ಕೆಗಳೊಂದಿಗೆ ಬಂದರೆ, ಎರಡನೆಯದು ಕೇವಲ ಸೆವೆನ್-ಸ್ಪೀಡ್ DCT ಅನ್ನು ಹೊಂದಿರಬಹುದಾಗಿದೆ.
ಹ್ಯುಂಡೈ ಹೊಸ ವರ್ನಾವನ್ನು EX, S, SX ಮತ್ತು SX(O) ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಮಾರಾಟ ಮಾಡುತ್ತದೆ. ಕಾರು ತಯಾರಕರು ಹೊಸ ಸೆಡಾನ್ ಬೆಲೆಯನ್ನು ರೂ. 10 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭಿಸಬಹುದೆಂದು ನಿರೀಕ್ಷಿಸಿದ್ದೇವೆ. ಈ ಆರನೇ-ಜನರೇಷನ್ ವರ್ನಾ, ನವೀಕೃತ ಹೋಂಡಾ ಸಿಟಿ, ಫೋಕ್ಸ್‌ವ್ಯಾಗನ್ ವರ್ಚಸ್, ಮಾರುತಿ ಸಿಯಾಝ್ ಮತ್ತು ಸ್ಕೋಡಾ ಸ್ಲೇವಿಯಾಗಳನ್ನು ಎದುರಿಸಲಿದೆ.
0 out of 0 found this helpful