• English
  • Login / Register

ಇಲ್ಲಿದೆ MG ಕಾಮೆಟ್ EVಯ ಇಂಟೀರಿಯರ್‌ನ ಸಂಪೂರ್ಣ ನೋಟ

ಎಂಜಿ ಕಾಮೆಟ್ ಇವಿ ಗಾಗಿ tarun ಮೂಲಕ ಏಪ್ರಿಲ್ 13, 2023 06:07 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ  ಸಣ್ಣ ನಗರ ಕೇಂದ್ರಿತ 2-ಡೋರ್‌ನ EV ಕ್ವರ್ಕಿ ಸ್ಟೈಲಿಂಗ್ ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ .

MG Comet EV

  • ಇತ್ತೀಚಿನ ಟೀಸರ್ ಡ್ಯುಯಲ್ ಫ್ಲೋಟಿಂಗ್ 10.25-ಇಂಚು ಡಿಸ್‌ಪ್ಲೇಗಳನ್ನು ಇನ್ಫೋಟೇನ್‌ಮೆಂಟ್ ಸಿಸ್ಟಮ್ ಮತ್ತು ಡ್ರೈವರ್ ಡಿಸ್‌ಪ್ಲೇನಲ್ಲಿ ಹೊಂದಿದೆ.
  •  ಇಕೋ/ಸ್ಪೋರ್ಟ್ಸ್ ಮೋಡ್‌ನಲ್ಲಿ ರೋಟರಿ ನಾಬ್‌ಗಳು ಮತ್ತು ಸ್ವಿಚ್ ಇರುವುದನ್ನು ಕೂಡಾ ಟೀಸರ್‌ನಲ್ಲಿ ತೋರಿಸಲಾಗಿದೆ.
  •  300 ಕಿಲೋಮೀಟರ್‌ಗಳ ತನಕದ ರೇಂಜ್ ಹೊಂದಿರುವ ಇದು 17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿರುವ ನಿರೀಕ್ಷೆ ಇದೆ.
  •  ಬೆಲೆಗಳು ಸುಮಾರು ರೂ 10ಲಕ್ಷದಿಂದ ರೂ 15 ಲಕ್ಷದ ತನಕ (ಎಕ್ಸ್-ಶೋರೂಂ) ಇರಬಹುದೆಂಬ ನಿರೀಕ್ಷೆ ಇದೆ.

 ಇದರ ಬಿಡುಗಡೆಗೂ ಮುಂಚಿತವಾಗಿ, ಕಾಮೆಟ್ EVಯ ಇನ್ನೊಂದು ಟೀಸರ್ ಅನ್ನು MG ಬಿಡುಗಡೆ ಮಾಡಿದೆ. ಇದರ ಇತ್ತೀಚಿನ ಚಿತ್ರವು ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಡ್ಯಾಶ್‌ಬೋರ್ಡ್ ಅನ್ನು ಸಂಪೂರ್ಣವಾಗಿ ತೋರಿಸುತ್ತದೆ. ಇದು ಸಿಟ್ರನ್ eC3 ಮತ್ತು ಟಾಟಾ ಟಿಯಾಗೋ EV ಗೆ ಪ್ರತಿಸ್ಪರ್ಧಿಯಾಗಿದೆ.

MG Comet EV

 ಇದರ ಇತ್ತೀಚಿನ ಟೀಸರ್ ಡ್ಯುಯಲ್ ಫ್ಲೋಟಿಂಗ್ ಇನ್‌ಫೋಟೇನ್‌ಮೆಂಟ್ ಸಿಸ್ಟಮ್ ಮತ್ತು ಡ್ರೈವರ್ ಡಿಸ್‌ಪ್ಲೇನಲ್ಲಿ 10.25-ಇಂಚು ಡಿಸ್‌ಪ್ಲೇಗಳನ್ನು ಪಡೆದಿದ್ದು, ವಿಭಿನ್ನ ವಿಜೆಟ್‌ಗಳು ಮತ್ತು ಕಸ್ಟಮೈಸ್ ಮಾಡಬಹುದಾದ ಪೇಜ್‌ಗಳನ್ನು ಪ್ಲೇ ಮಾಡಲು ಪಡೆಯುತ್ತದೆ. ಅಲ್ಲದೇ ನೀವು ಸಿಲ್ವರ್ ಬಣ್ಣದಿಂದ ಬ್ರಶ್ ಮಾಡಲಾದ ಡ್ಯಾಶ್‌ಬೋರ್ಡ್‌ನಲ್ಲಿ AC ವೆಂಟ್‌ಗಳನ್ನು ಕಾಣಬಹುದು. ಇದು ಮ್ಯಾನುವಲ್ AC, ಜೊತೆಗೆ ರೋಟರಿ ಡಯಲ್‌ಗಳು, ಸ್ಟೀರಿಂಗ್ ವ್ಹೀಲ್‌ಗಳಿಗೆ ಟಲಿಸ್ಕೋಪಿಕ್ ಹೊಂದಾಣಿಕೆಗಳು, ಇಕೋ ಮತ್ತು ಸ್ಪೋರ್ಟ್ಸ್ ಮೋಡ್‌ಗೆ ಬದಲಾಯಿಸಲು ಟಾಗಲ್ ಬಟನ್ ಅನ್ನು ಪಾಲಿಶ್ ಮಾಡಲಾದ ಬ್ಲ್ಯಾಕ್ ಹೌಸಿಂಗ್‌ನಲ್ಲಿ ಪಡೆಯುತ್ತದೆ.

 ಇದನ್ನೂ ಓದಿ: ಭಾರತದಲ್ಲಿ ಮುಂಬರುವ ಇಲೆಕ್ಟ್ರಿಕ್ ಕಾರುಗಳು 

 ಕಾಮೆಟ್ EVಯಲ್ಲಿನ ಇತರ ಫೀಚರ್‌ಗಳು, ಸ್ಟೀರಿಂಗ್‌ನಲ್ಲಿ ಮೌಂಟ್ ಮಾಡಲಾದ ನಿಯಂತ್ರಣಗಳು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಒಳಗೊಂಡಿದೆ. ಈ ಪುಟ್ಟ ಕ್ವರ್ಕಿ ಹ್ಯಾಚ್‌ಬ್ಯಾಕ್ 2-ಡೋರ್‌ನ ಮಾಡೆಲ್ ಆಗಿದ್ದು, ಇದರಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು. 

Air EV Indonesia

ಈ ಕಾಮೆಟ್ EV ಯ ಇಂಡೋನೇಷಿಯಾ-ಸ್ಪೆಕ್ ಆವೃತ್ತಿಯಾದ a.k.a, ದಿ ವುಲಿಂಗ್ ಏರ್, 17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿದೆ. ಇದರ ಸಣ್ಣ ಪ್ಯಾಕ್ 200km ತನಕದ ರೇಂಜ್ ನೀಡಿದರೆ, ಇದರ ದೊಡ್ಡ ಯೂನಿಟ್ 300km ತನಕದ ರೇಂಜ್ ನೀಡುತ್ತದೆ. ಭಾರತಕ್ಕಾಗಿ MG-ಬ್ಯಾಡ್ಜ್ ಮೈಕ್ರೋ EVಗೆ ಯಾವ ಬ್ಯಾಟರಿ ಆಯ್ಕೆಯನ್ನು ಮಾಡುತ್ತದೆ ಎಂಬುದನ್ನು ನೋಡಬೇಕಾಗಿದೆ. ಈ ಕಾಮೆಟ್ ಒಂದು 40PS ರಿಯರ್- ಆ್ಯಕ್ಸೆಲ್ ಹೊಂದಿರುವ ಮೋಟರ್‌ನಿಂದ ಚಾಲಿತವಾಗಿರುತ್ತದೆ.

 ಇದನ್ನೂ ಓದಿ: ಇಲ್ಲಿವೆ 2023ರ 2ನೇ ತ್ರೈಮಾಸಿಕದಲ್ಲಿ ಪಾದಾರ್ಪಣೆ ಮಾಡಬಹುದಾದ ಟಾಪ್ 10 ಕಾರುಗಳು

 ಇದರ ಸಂಪೂರ್ಣ ಅನಾವರಣ ಮತ್ತು ಬೆಲೆ ಪ್ರಕಟಣೆಯನ್ನು ಈ ಏಪ್ರಿಲ್ ಕೊನೆಯಲ್ಲಿ ಮಾಡುವ ನಿರೀಕ್ಷೆ ಇದ್ದು, ಕಾಮೆಟ್‌ನ ಬೆಲೆ ರೂ10 ಲಕ್ಷದಿಂದ 15 ಲಕ್ಷದ ತನಕ (ಎಕ್ಸ್-ಶೋರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ.

was this article helpful ?

Write your Comment on M g ಕಾಮೆಟ್ ಇವಿ

explore ಇನ್ನಷ್ಟು on ಎಂಜಿ ಕಾಮೆಟ್ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience