Login or Register ಅತ್ಯುತ್ತಮ CarDekho experience ಗೆ
Login

ಹೋಂಡಾ ಎಲಿವೇಟ್ ನ ಮೈಲೇಜ್ ನ ಅಂಕಿಗಳು ಬಹಿರಂಗ!

published on ಜುಲೈ 26, 2023 08:02 pm by tarun for ಹೊಂಡಾ ಇಲೆವಟ್

ಈ ಕಾಂಪ್ಯಾಕ್ಟ್ SUV ಯು ಸಿಟಿಯ 1.5-ಲೀಟರ್ i-VTEC ಇಂಜಿನ್‌ನಿಂದ ಚಾಲಿತವಾಗಿದೆ.

  • ಹೋಂಡಾ ಎಲಿವೇಟ್‌ನ ಮ್ಯಾನುವಲ್ ವೇರಿಯೆಂಟ್‌ಗಳು 15.31 kmpl ಇಂಧನ ದಕ್ಷತೆಯನ್ನು ಕ್ಲೈಮ್ ಮಾಡುತ್ತವೆ.

  • CVT ವೇರಿಯೆಂಟ್‌ಗಳು ಕ್ಲೈಮ್ ಮಾಡಿದಂತೆ 16.92kmpl ಇಂಧನ ದಕ್ಷತೆಯನ್ನು ನೀಡುತ್ತದೆ.

  • ಈ SUV, 121PS 1.5-ಲೀಟರ್ ಪೆಟ್ರೋಲ್ ಇಂಜಿನ್ ಪಡೆಯುತ್ತದೆ; ಈ ಪೈಪ್‌ಲೈನ್‌ನಲ್ಲಿ ಯಾವುದೇ ಹೈಬ್ರಿಡ್ ಅಥವಾ ಡೀಸೆಲ್ ಆಯ್ಕೆ ಇರುವುದಿಲ್ಲ

  • ಎಲಿವೇಟ್ 2025 ರ ವೇಳೆಗೆ EV ಆವೃತ್ತಿಯನ್ನು ಸಹ ಪಡೆಯಲಿದೆ.

  • ಎಕ್ಸ್-ಶೋರೂಂ ಬೆಲೆಗಳು 11 ಲಕ್ಷ ರೂ.ದಿಂದ ಪ್ರಾರಂಭವಾಗಿ 18 ಲಕ್ಷ ರೂ. ತನಕ ಇರುವ ಸಾಧ್ಯತೆ ಇದೆ.

ಹೋಂಡಾ ಎಲಿವೇಟ್‌ನ ಇಂಧನ ದಕ್ಷತೆಯ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಕಾಂಪ್ಯಾಕ್ಟ್ SUV ಜೂನ್‌ನಲ್ಲಿ ವಿಶ್ವಾದ್ಯಂತ ಪಾದಾರ್ಪಣೆ ಮಾಡಿತು ಮತ್ತು ಇದರ ಬೆಲೆಗಳನ್ನು ಸೆಪ್ಟೆಂಬರ್‌ನಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ಈ ಹೋಂಡಾ ಎಲಿವೇಟ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಅದೇ ಪರಿಚಯದ 1.5ಲೀಟರ್ i-VTEC ಪೆಟ್ರೋಲ್ ಇಂಜಿನ್‌ನೊಂದಿಗೆ ನೀಡಲಾಗಿದೆ. ಇದರ ಮ್ಯಾನುವಲ್ ಆಯ್ಕೆಯು 15.31kmpl ಇಂಧನ ದಕ್ಷತೆಯನ್ನು ಕ್ಲೈಮ್ ಮಾಡುತ್ತದೆ, ಹಾಗೆಯೇ ಇದರ CVT ಹೆಚ್ಚಿನ, ಅಂದರೆ 16.92kmpl ಇಂಧನ ದಕ್ಷತೆಯ ಭರವಸೆ ನೀಡುತ್ತದೆ. ಎರಡೂ ಟ್ರಾನ್ಸ್‌ಮಿಷನ್‌ಗಳು ಮೈಲೇಜ್ ಮತ್ತು ಆರಾಮದಾಯಕ ಡ್ರೈವಿಂಗ್ ಅನುಭವವನ್ನು ಜೊತೆಯಾಗಿ ನೀಡುವಂತೆ ಟ್ಯೂನ್ ಮಾಡಲಾಗಿದೆ ಎಂದು ಹೋಂಡಾ ಹೇಳಿಕೊಂಡಿದೆ.

ಇತರ ಪವರ್‌ಟ್ರೇನ್ ವಿವರಗಳು

ಹೋಂಡಾ ಸಿಟಿ ಸೆಡಾನ್‌ನಲ್ಲಿರುವಂತೆಯೇ, ಈ ಇಂಜಿನ್ ಅನ್ನು 121PS ಮತ್ತು 145Nmಗೆ ರೇಟ್ ಮಾಡಲಾಗಿದೆ. ಸಿಟಿಯಲ್ಲಿ ಇರುವಂತೆ, ಯಾವುದೇ ಡೀಸೆಲ್ ಪವರ್‌ಟ್ರೇನ್ ಅನ್ನು ನೀಡಲಾಗಿಲ್ಲ, ಸ್ಟ್ರಾಂಗ್-ಹೈಬ್ರಿಡ್ ಆಯ್ಕೆಯನ್ನೂ ಕೈಬಿಡಲಾಗಿದೆ.

ಆದಾಗ್ಯೂ, 2025ರ ವೇಳೆಗೆ ಈ ಎಲಿವೇಟ್ EV ಆವೃತ್ತಿಯನ್ನು ಪಡೆಯಲಿದೆ. ಇದು 400-450 ಕಿಲೋಮೀಟರ್‌ಗಳ ಡ್ರೈವಿಂಗ್ ರೇಂಜ್ ನೀಡುವ ನಿರೀಕ್ಷೆ ಇದ್ದು, ಇದರ ಬೆಲೆ ಸುಮಾರು ರೂ 20-ಲಕ್ಷದ ಆಸುಪಾಸು ಇರಲಿದೆ. MG ZS EV ಮತ್ತು ಭಾರತದಲ್ಲಿ ಮುಂಬರುವ ಹ್ಯುಂಡೈ ಇವಿ ಇದಕ್ಕೆ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಹೋಂಡಾ ಎಲಿವೇಟ್‌ನ ಎಕ್ಸ್‌ಟೀರಿಯರ್ ಅನ್ನು ಈ 10 ಚಿತ್ರಗಳಲ್ಲಿ ಪರಿಶೀಲಿಸಿ

ಹೋಂಡಾ ಎಲಿವೇಟ್ ವಿವರಗಳ ಸಂಕ್ಷಿಪ್ತನೋಟ

ಈ ಹೋಂಡಾ ಎಲಿವೇಟ್, ಸಿಂಗಲ್-ಪೇನ್ ಸನ್‌ರೂಫ್, 10.25-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಆಟೋಮ್ಯಾಟಿಕ್ AC ನೀಡುತ್ತದೆ. ಸುರಕ್ಷತಾ ಫೀಚರ್‌ಗಳು ಆರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ರಡಾರ್-ಆಧಾರಿತ ADAS ತಂತ್ರಜ್ಞಾನವನ್ನು ಒಳಗೊಂಡಿದೆ.

ಇದರ ಬೆಲೆಯನ್ನು ರೂ 11 ಲಕ್ಷದಿಂದ ರೂ 18 ಲಕ್ಷದ ತನಕ (ಎಕ್ಸ್-ಶೋರೂಂ) ನಿಗದಿಪಡಿಸುವ ನಿರೀಕ್ಷೆ ಇದೆ. ಈ ಎಲಿವೇಟ್ ತನ್ನ ವಿಭಾಗದ ದೊಡ್ಡ ಕಾರುಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೋಯೋಟಾ ಹೈರೈಡರ್, ಫೋಕ್ಸ್‌ವಾಗನ್ ಟೈಗನ್, ಸಿಟ್ರನ್ C3 ಏರ್‌ಕ್ರಾಸ್, ಸ್ಕೋಡಾ ಕುಶಕ್, ಮತ್ತು MG ಎಸ್ಟರ್‌ಗೆ ಪ್ರತಿಸ್ಪರ್ಧಿಯಾಗಿದೆ.

t
ಅವರಿಂದ ಪ್ರಕಟಿಸಲಾಗಿದೆ

tarun

  • 19 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹೋಂಡಾ ಇಲೆವಟ್

P
pravin
Jul 25, 2023, 1:22:52 PM

First came the car colours and then the fuel economy..i don't know what so secret about the car. This much secrecy even the government has not kept

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ