ಭಾರತದ ರಸ್ತೆಯಲ್ಲಿ ಮೊದಲ ಬಾರಿಗೆ ಕಂಡುಬಂದ ಮಾರುತಿ ಗ್ರ್ಯಾಂಡ್ ವಿಟಾರಾದ ಪ್ರತಿಸ್ಪರ್ಧಿ ಹೋಂಡಾದ ಹೊಚ್ಚ ಹೊಸ SUV ..!
ಈ ಕಾಂಪ್ಯಾಕ್ಟ್ SUV, ಸೆಡಾನ್‌ನ ಬಲಿಷ್ಠ ಹೈಬ್ರಿಡ್ ಡ್ರೈವ್‌ಟ್ರೇನ್ ಸಹಿತ ಹೋಂಡಾ ಸಿಟಿಯಂತೆಯೇ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಬಹುದೆಂಬ ನಿರೀಕ್ಷೆ ಇದೆ.
- 2023 ಹೋಂಡಾ SUV ದಪ್ಪನೆಯ ಫ್ರಂಟ್-ಎಂಡ್ ಸ್ಟೈಲಿಂಗ್ ಮತ್ತು ನಯವಾದ ಕ್ರಾಸ್-ಓವರ್‌ನಂತಹ ರಿಯರ್ ಎಂಡ್ ಅನ್ನು ಹೊಂದಿದೆ.
- ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ADAS ನಂತಹ ಫೀಚರ್‌ಗಳೊಂದಿಗೆ ಸುಸಜ್ಜಿತಗೊಂಡಿರುವ ನಿರೀಕ್ಷೆ ಇದೆ.
- ಸಿಟಿ e-HEV ಯ ಬಲಿಷ್ಠ-ಹೈಬ್ರಿಡ್ ಜೊತೆಗೆ ಸಿಟಿಯ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆಯುವ ಸಾಧ್ಯತೆ ಇದೆ.
- 2023 ರ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ ಮತ್ತು ರೂ 11 ಲಕ್ಷ (ಎಕ್ಸ್-ಶೋರೂಂ) ಬೆಲೆ ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ.
ಹೋಂಡಾ ಭಾರತಕ್ಕೆ ಶೀಘ್ರದಲ್ಲೇ ಹೊಸ SUV ಯನ್ನು ತರಲಿದೆ ಮತ್ತು ಇದರ ಹೊಸ ಸ್ಪೈ ಶಾಟ್‌ಗಳು ಭಾರತದಲ್ಲಿ ಈ ಕಾರಿನ ರೋಡ್ ಟೆಸ್ಟ್‌ಗಳನ್ನು ಪ್ರಾರಂಭಿಸಿದೆ ಎಂಬುದನ್ನು ಬಹಿರಂಗಪಡಿಸಿದೆ. ಈ ಮುಂಬರುವ ರಹಸ್ಯ SUV ಯ ಮೊದಲ ನೋಟವನ್ನು 2023 ರ ಮಧ್ಯಭಾಗದಲ್ಲಿ ನೋಡುವ ನಿರೀಕ್ಷೆಯನ್ನು ಹೊಂದಿದ್ದೇವೆ. ಇದೊಂದು ಮಾರುತಿ ಗ್ರ್ಯಾಂಡ್ ವಿಟಾರಾ ಗೆ ಪ್ರತಿಸ್ಪರ್ಧಿಯಾಗಿರಲಿದ್ದು ಇದರ ಬೆಲೆ ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.
ಸ್ಪೈ ಶಾಟ್‌ಗಳು ಏನು ಹೇಳುತ್ತವೆ
ಈ ಹೊಸ ಹೋಂಡಾ ಕಾಂಪ್ಯಾಕ್ಟ್ SUV ಒಂದು ಹೊಚ್ಚ ಹೊಸ ಉತ್ಪನ್ನವಾಗಿದ್ದು, ಇದು ಯಾವುದರಂತೆ ಕಾಣುತ್ತದೆ ಮತ್ತು ಇದಕ್ಕೆ ಏನು ಹೇಳಲಾಗುತ್ತದೆ ಎಂಬುದು ನಮಗೆ ಇನ್ನೂ ಖಚಿತವಾಗಿಲ್ಲ. ಸ್ಪೈ ಶಾಟ್‌ಗಳಲ್ಲಿ, ಈ SUV, LED DRLಗಳೊಂದಿಗೆ ಕೂಲ್ ಲುಕಿಂಗ್ ಹೆಡ್‌ಲೈಟ್‌ಗಳು ಮತ್ತು ದೊಡ್ಡ ಗ್ರಿಲ್ ಅನ್ನು ಪಾರ್ಶ್ವದಲ್ಲಿ ಪಡೆದಿರುವುದನ್ನು ಕಾಣಬಹುದು.
ಭಾರಿ ಮುಸುಕಿನ ಹೊರತಾಗಿಯೂ, ಕೆಳಗಿನ ಗ್ರಿಲ್‌ನೊಂದಿಗೆ ಕಾಮ್‌ಶೆಲ್ ಬೋನೆಟ್ ಮತ್ತು ಚಂಕಿ ಫ್ರಂಟ್ ಬಂಪರ್ ಹೊಂದಿರುವುದು ಕಾಣುತ್ತದೆ. ಇದರ ಒಟ್ಟಾರೆ ರೂಪವು ನೇರವಾಗಿ ಮತ್ತು SUVಯಂತೆ ಇದೆ.
ಹಿಂಭಾಗದ 45 ಡಿಗ್ರಿ ಕೋನದಿಂದ ನೋಡಿದಾಗ, ಈ ಎಸ್‌ಯುವಿ ಹೆಚ್ಚು ನಯವಾಗಿ ಮತ್ತು ಹೊಳಪಿನಿಂದ ಕೂಡಿದ್ದು ಇಳಿಜಾರಿನ ರಿಯರ್ ವಿಂಡ್‌ಶೀಲ್ಡ್ ಅನ್ನು ಹೊಂದಿರುವಂತೆ ಕಾಣುತ್ತದೆ. ಇದರ ಲೈಟ್‌ಗಳು ವಿಭಜಿಸಲ್ಪಟ್ಟಂತೆ, ರ‍್ಯಾಪ್ ಅರೌಂಡ್ ಯೂನಿಟ್‌ಗಳು ಮತ್ತು ನಂಬರ್ ಪ್ಲೇಟ್ ಅನ್ನು ಟೈಲ್‌ಗೇಟ್ ಮೇಲೆ ಜೋಡಿಸಿದಂತೆ ತೋರುತ್ತದೆ.
ಇಂಜಿನ್‌ಗಳು ಮತ್ತು ಫೀಚರ್‌ಗಳು
SUVಯ ಬೋನೆಟ್ ಅಡಿಯಲ್ಲಿ, ಹೋಂಡಾ ಸಿಟಿಯಲ್ಲಿರುವಂತೆಯೇ 1.5-ಲೀಟರ್ NA ಪೆಟ್ರೋಲ್ ಇಂಜಿನ್ ಇರಬಹುದೆಂದು ಊಹಿಸಲಾಗಿದ್ದು, ಇದು ಸಿಕ್ಸ್-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿರಬಹುದಾಗಿದೆ. ಇದರೊಂದಿಗೆ, 126PS ಹೊಂದಿರುವ ಸಿಟಿ ಹೈಬ್ರಿಡ್‌ನ ಸ್ಟ್ರಾಂಗ್ ಹೈಬ್ರಿಡ್-ಪವರ್‌ಟ್ರೇನ್ ಅನ್ನೂ SUV ನಲ್ಲಿ ನೀಡಿರುವ ಸಂಭವವಿದೆ. ಡೀಸೆಲ್ ಪವರ್‌ಟ್ರೇನ್ ನೀಡಿರುವ ಸಾಧ್ಯತೆ ಇಲ್ಲ.
ಹೋಂಡಾ ಸಿಟಿ ಹೈಬ್ರಿಡ್ ಪವರ್‌ಟ್ರೇನ್ ತಂತ್ರಜ್ಞಾನದ ವಿವರಣೆ
ಫೀಚರ್‌ಗಳ ವಿಷಯಕ್ಕೆ ಬಂದರೆ, ಸ್ಪೈ ಶಾಟ್‌ಗಳಲ್ಲಿ ಸನ್‌ರೂಫ್ ಈಗಾಗಲೇ ಕಂಡುಬರುತ್ತಿದ್ದು, ಎಕ್ವಿಪ್‌ಮೆಂಟ್ ಪಟ್ಟಿಯು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯೊಂದಿಗೆ, ದೊಡ್ಡದಾದ ಟಚ್‌ಸ್ಕ್ರೀನ್, ಸೆಮಿ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ವಯರ್‌ಲೆಸ್ ಫೋನ್ ಚಾರ್ಜಿಂಗ್, ಆರು ಏರ್‌ಬ್ಯಾಗ್‌ಗಳು ಮತ್ತು ಒಂದು 360-ಡಿಗ್ರಿ ಕ್ಯಾಮೆರಾ ಹೊಂದಿರುವ ಸಾಧ್ಯತೆ ಇದೆ.
ಮುಂಬರುವ ಹೋಂಡಾ ಕಾಂಪ್ಯಾಕ್ಟ್ SUV, ಮೇಲೆ ತಿಳಿಸಿದ ಗ್ರ್ಯಾಂಡ್ ವಿಟಾರಾವನ್ನು ಹೊರತುಪಡಿಸಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವಾಗನ್ ಟೈಗನ್, ಸ್ಕೋಡಾ ಕುಶಕ್, ಟೊಯೋಟಾ ಹೈರೈಡರ್ ಮತ್ತು MG ಎಸ್ಟರ್‌ಗೆ ಪ್ರತಿಸ್ಪರ್ಧಿಯಾಗಲಿದೆ.
ಚಿತ್ರದ ಮೂಲ
ಇನ್ನಷ್ಟು ಓದಿ : ಮಾರುತಿ ಗ್ರ್ಯಾಂಡ್ ವಿಟಾರಾದ ಆನ್ ರೋಡ್ ಬೆಲೆ