Login or Register ಅತ್ಯುತ್ತಮ CarDekho experience ಗೆ
Login

ಈಗ ಮತ್ತಷ್ಟು ಕಡಿಮೆ ಬೆಲೆಯಲ್ಲಿ Hyundai Auraದ ಡ್ಯುಯಲ್ ಸಿಎನ್‌ಜಿ ಸಿಲಿಂಡರ್‌ ಆವೃತ್ತಿ ಲಭ್ಯ

ಹುಂಡೈ ಔರಾ ಗಾಗಿ dipan ಮೂಲಕ ಸೆಪ್ಟೆಂಬರ್ 03, 2024 07:28 pm ರಂದು ಪ್ರಕಟಿಸಲಾಗಿದೆ

ಈ ಆಪ್‌ಡೇಟ್‌ನ ಮೊದಲು, ಹ್ಯುಂಡೈ ಔರಾ ಮಿಡ್-ಸ್ಪೆಕ್ ಎಸ್ ಮತ್ತು ಎಸ್‌ಎಕ್ಸ್ ಟ್ರಿಮ್‌ಗಳೊಂದಿಗೆ ಸಿಎನ್‌ಜಿ ಆಯ್ಕೆಯನ್ನು ಪಡೆದುಕೊಂಡಿತ್ತು ಮತ್ತು ಇದರ ಬೆಲೆ ರೂ 8.31 ಲಕ್ಷದಿಂದ ಪ್ರಾರಂಭವಾಗುತ್ತಿತ್ತು

ಹ್ಯುಂಡೈ ಔರಾ ಈಗ ಡ್ಯುಯಲ್-ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಲಭ್ಯವಿದೆ, ಇದನ್ನು ಇತ್ತೀಚೆಗೆ ಎಕ್ಸ್‌ಟರ್ ಮತ್ತು ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಪರಿಚಯಿಸಲಾಗಿತ್ತು. ಇದಲ್ಲದೆ, ಬೇಸ್-ಸ್ಪೆಕ್ 'ಇ' ಆವೃತ್ತಿಯನ್ನು ಈಗ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯೊಂದಿಗೆ ನೀಡಲಾಗಿದೆ ಮತ್ತು ದೆಹಲಿಯಲ್ಲಿ ಇದರ ಎಕ್ಸ್ ಶೋರೂಂ ಬೆಲೆ 7.49 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ಇಲ್ಲಿ ಗಮನಿಸಬೇಕಾದದ್ದು, ಈ ಆಪ್‌ಡೇಟ್‌ನ ಮೊದಲು ಸಿಎನ್‌ಜಿ ಆಯ್ಕೆಯು ಔರಾದ ಮಿಡ್-ಸ್ಪೆಕ್ ಎಸ್‌ ಮತ್ತು ಎಸ್‌ಎಕ್ಸ್‌ ಆವೃತ್ತಿಗಳೊಂದಿಗೆ ಮಾತ್ರ ಲಭ್ಯವಿತ್ತು, ಇದರ ಬೆಲೆ ರೂ 8.31 ಲಕ್ಷದಿಂದ ಪ್ರಾರಂಭವಾಗುತ್ತಿತ್ತು. ಆದಾಗಿಯೂ, ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಈ ಎರಡು ಟ್ರಿಮ್‌ಗಳ ಬೆಲೆಗಳನ್ನು ಹ್ಯುಂಡೈ ಇನ್ನೂ ಬಹಿರಂಗಪಡಿಸಿಲ್ಲ. ಆದ್ದರಿಂದ, ಈಗ ಡ್ಯುಯಲ್ ಸಿಎನ್‌ಜಿ ಸಿಲಿಂಡರ್‌ಗಳ ಸೆಟಪ್ ಅನ್ನು ಪಡೆಯುವ 'ಇ' ಟ್ರಿಮ್ ಏನನ್ನು ಒಳಗೊಂಡಿದೆ ಎಂಬುದನ್ನು ನೋಡೋಣ:

ಹುಂಡೈ ಔರಾ ಇ ಸಿಎನ್‌ಜಿ: ಹೊರಭಾಗ

ಬೇಸ್-ಸ್ಪೆಕ್ ಮಾಡೆಲ್ ಆಗಿರುವುದರಿಂದ, ಔರಾದ E ಟ್ರಿಮ್ ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಟರ್ನ್‌ ಇಂಡಿಕೇಟರ್‌ಗಳನ್ನು ಮುಂಭಾಗದ ಫೆಂಡರ್‌ಗಳಲ್ಲಿ ಅಳವಡಿಸಲಾಗಿದೆ. ಇದು ಫಾಗ್‌ ಲ್ಯಾಂಪ್‌ಗಳನ್ನು ಪಡೆಯುವುದಿಲ್ಲ. ಹಾಗೆಯೇ, ಇದು Z- ಆಕಾರದ ಸುತ್ತುವ ಎಲ್ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ. ಔರಾದ ಇ ಸಿಎನ್‌ಜಿಯು 14-ಇಂಚಿನ ಸ್ಟೀಲ್‌ ಚಕ್ರಗಳನ್ನು ಹೊಂದಿದೆ. ಇದು ಕಪ್ಪು ORVM ಗಳು ಮತ್ತು ಡೋರ್ ಹ್ಯಾಂಡಲ್‌ಗಳನ್ನು ಸಹ ಒಳಗೊಂಡಿದೆ.

ಹುಂಡೈ ಔರಾ ಇ ಸಿಎನ್‌ಜಿ: ಇಂಟೀರಿಯರ್‌, ಫೀಚರ್‌ಗಳು ಮತ್ತು ಸುರಕ್ಷತೆ

ಹ್ಯುಂಡೈ ಔರಾ ಇ ಸಿಎನ್‌ಜಿ ಒಳಭಾಗವು ಹೊರಭಾಗದಂತೆಯೇ ಬೇಸಿಕ್‌ ಆಗಿದೆ. ಕ್ಯಾಬಿನ್ ಬೂದು ಮತ್ತು ಮರಳು ಬಣ್ಣದ ಥೀಮ್ ಅನ್ನು ಹೊಂದಿದೆ ಮತ್ತು ಸೀಟುಗಳು ಉಣ್ಣೆಬಟ್ಟೆಯ ಫ್ಯಾಬ್ರಿಕ್ ಅಪ್ಹೋಲ್ಸ್ಟರಿಯನ್ನು ಹೊಂದಿವೆ. ಎಲ್ಲಾ ಸೀಟ್‌ಗಳು ಸ್ಥಿರವಾದ ಹೆಡ್‌ರೆಸ್ಟ್‌ಗಳನ್ನು ಪಡೆಯುತ್ತವೆ, ಆದರೆ 3-ಪಾಯಿಂಟರ್ ಸೀಟ್‌ಬೆಲ್ಟ್‌ಗಳನ್ನು ಹೊಂದಿವೆ.

ಫೀಚರ್‌ನ ಪಟ್ಟಿಯಲ್ಲಿ, ಇದು ಮಧ್ಯದಲ್ಲಿ ಮಲ್ಟಿ-ಇಂಫೋರ್ಮೆಶನ್‌ ಡಿಸ್‌ಪ್ಲೇಯೊಂದಿಗೆ (MID) ಅನಲಾಗ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಪಡೆಯುತ್ತದೆ. ಇದು ಮ್ಯಾನುಯಲ್‌ ಎಸಿ, ಕೂಲ್ಡ್ ಗ್ಲೋವ್‌ಬಾಕ್ಸ್, ಮುಂಭಾಗದ ಪವರ್ ವಿಂಡೋಗಳು ಮತ್ತು 12V ಚಾರ್ಜಿಂಗ್ ಸಾಕೆಟ್ ಅನ್ನು ಪಡೆಯುತ್ತದೆ. ಸುರಕ್ಷತೆಯ ವಿಷಯದಲ್ಲಿ, ಇದು 6 ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ), ಇಬಿಡಿ ಜೊತೆಗೆ ಎಬಿಎಸ್‌, ಎಲ್ಲಾ ಆಸನಗಳಿಗೆ ಸೀಟ್‌ಬೆಲ್ಟ್ ರಿಮೈಂಡೈರ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.

ಇದನ್ನೂ ಓದಿ: ಕಂಪನಿ ಅಳವಡಿಸಿದ CNG ಆಯ್ಕೆಯೊಂದಿಗೆ ಲಭ್ಯವಿರುವ ಟಾಪ್ 10 ಅತ್ಯಂತ ಕೈಗೆಟುಕುವ ಕಾರುಗಳು

ಹುಂಡೈ ಔರಾ ಇ ಸಿಎನ್‌ಜಿ: ಪವರ್‌ಟ್ರೇನ್

ಹುಂಡೈ ಔರಾ ಇ ಸಿಎನ್‌ಜಿ 1.2-ಲೀಟರ್ ಎಂಜಿನ್‌ನೊಂದಿಗೆ 69 ಪಿಎಸ್ ಮತ್ತು 95 ಎನ್‌ಎಂ ಉತ್ಪಾದಿಸುತ್ತದೆ. ಇದು ಎಕ್ಸ್‌ಕ್ಲೂಸಿವ್‌ ಆಗಿ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಇಲ್ಲಿ ಎಎಮ್‌ಟಿ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲು ಯಾವುದೇ ಆಯ್ಕೆಗಳಿಲ್ಲ.

ಹ್ಯುಂಡೈ ಔರಾ ಇ ಸಿಎನ್‌ಜಿ: ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹ್ಯುಂಡೈ ಔರಾದ ಇ ಸಿಎನ್‌ಜಿ ಟ್ರಿಮ್‌ನ ಬೆಲೆಗಳು 7.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಹ್ಯುಂಡೈ ಔರಾದ ಬೆಲೆಗಳು 6.49 ಲಕ್ಷ ರೂ.ನಿಂದ 9.05 ಲಕ್ಷದವರೆಗೆ ಇರುತ್ತದೆ. ಅಂತೆಯೇ, ಇದು ಹೋಂಡಾ ಅಮೇಜ್, ಟಾಟಾ ಟಿಗೋರ್ ಮತ್ತು ಮಾರುತಿ ಸುಜುಕಿ ಡಿಜೈರ್‌ಗೆ ಪ್ರತಿಸ್ಪರ್ಧಿಯಾಗಿದೆ. ಇಲ್ಲಿ ಗಮನಿಸಬೇಕಾದದ್ದು, ಹೋಂಡಾ ಅಮೇಜ್ ಹೊರತುಪಡಿಸಿ ಎಲ್ಲಾ ಪ್ರತಿಸ್ಪರ್ಧಿಗಳು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಆಯ್ಕೆಯನ್ನು ಪಡೆಯುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಔರಾ ಎಎಮ್‌ಟಿ

Share via

Write your Comment on Hyundai ಔರಾ

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6 - 9.50 ಲಕ್ಷ*
ಹೊಸ ವೇರಿಯೆಂಟ್
Rs.11.07 - 17.55 ಲಕ್ಷ*
ಫೇಸ್ ಲಿಫ್ಟ್
ಫೇಸ್ ಲಿಫ್ಟ್
Rs.8 - 10.90 ಲಕ್ಷ*
Rs.1.99 ಸಿಆರ್*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ