• English
  • Login / Register

ಮತ್ತೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ Hyundai Creta EV ಯ ಇಂಟಿರೀಯರ್‌ ದೃಶ್ಯಗಳು, ಈ ಬಾರಿ ಡ್ಯುವಲ್‌ ಸ್ಕ್ರೀನ್‌ ಸೆಟಪ್‌ ಬಹಿರಂಗ

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಗಾಗಿ samarth ಮೂಲಕ ಜುಲೈ 09, 2024 05:31 pm ರಂದು ಮಾರ್ಪಡಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಪೈ ಶಾಟ್‌ ಗಳ ಪ್ರಕಾರ ಹೊಸ ಸ್ಟೀಯರಿಂಗ್‌ ವೀಲ್‌ ಜೊತೆಗೆ ರೆಗುಲರ್‌ ಕ್ರೆಟಾದ ಕ್ಯಾಬಿನ್‌ ಅನ್ನೇ ಈ ಇವಿಯು ಹೊಂದಿರಲಿದೆ

Hyundai Creta EV Spied

  • ಕ್ರೆಟಾ ಇ.ವಿ ಯು 2024ರ ಆರಂಭದಲ್ಲಿ ಬಿಡುಗಡೆಯಾದ ಪರಿಷ್ಕೃತ ಕ್ರೆಟಾವನ್ನೇ ಆಧರಿಸಿದೆ.
  • ಹ್ಯುಂಡೈ ಸಂಸ್ಥೆಯು ಕ್ರೆಟಾ ಇ.ವಿ ಯಲ್ಲಿ ಡ್ಯುವಲ್‌ 10.25 ಇಂಚ್‌ ಡಿಸ್ಪ್ಲೇಗಳು, ಪ್ಯಾನೊರಾಮಿಕ್‌ ಸನ್‌ ರೂಫ್‌ ಮತ್ತು ADAS ಅನ್ನು ಒದಗಿಸಲಿದೆ.
  • ಕ್ಲೋಸ್ಡ್‌ ಆಫ್‌ ಗ್ರಿಲ್‌, ಅಲೋಯ್‌ ವೀಲ್‌ ಗಳ ಹೊಸ ಸೆಟ್‌ ಮತ್ತು ಮರುವಿನ್ಯಾಸಕ್ಕೆ ಒಳಪಡಿಸಲಾದ ಬಂಪರ್‌ ಗಳನ್ನು ಹೊರತುಪಡಿಸಿದರೆ ಹೊರಾಂಗಣದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.
  • ಬ್ಯಾಟರಿ ಮತ್ತು ಎಲೆಕ್ಟ್ರಿಕ್‌ ಮೋಟಾರ್‌ ಸೆಟಪ್‌ ಅನ್ನು ಇನ್ನಷ್ಟೇ ದೃಢೀಕರಿಸಬೇಕಾಗಿದೆ. ಅದರೆ ಇದು 400 ಕಿ.ಮೀ ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಒದಗಿಸಲಿದೆ.
  • ಇದು 2025ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯು ರೂ. 20 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.

ಹ್ಯುಂಡೈ ಕ್ರೆಟಾ ಇ.ವಿ ವಾಹನವು ಕೆಲ ಕಾಲದಿಂದ ಅಭಿವೃದ್ಧಿಯ ಹಂತದಲ್ಲಿದ್ದು, 2025ರ ಆರಂಭದಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ, ಕ್ರೆಟಾ ಇ.ವಿ ಯ ಹೊಸ ಸ್ಪೈ ಶಾಟ್‌ ಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಇದರ ಒಳಾಂಗಣದ ಸ್ಪಷ್ಟ ನೋಟವನ್ನು ಒದಗಿಸುತ್ತಿವೆ.

ಇಂಟಿರೀಯರ್‌ನಲ್ಲಿ ಬದಲಾವಣೆ

Hyundai Creta EV Cabin

ಮೇಲ್ಗಡೆಯಲ್ಲಿರುವ ಚಿತ್ರದಲ್ಲಿ ತೋರಿಸಿದಂತೆ, ಡ್ಯುವಲ್‌ ಟೋನ್‌ ಥೀಮ್‌ ಮತ್ತು ಇಂಟಗ್ರೇಟೆಡ್‌ ಡ್ಯುವಲ್‌ ಡಿಜಿಟಲ್‌ ಡಿಸ್ಪ್ಲೇಗಳು ಸೇರಿದಂತೆ ಇಂಟರ್ನಲ್‌ ಕಂಬಷನ್‌ ಎಂಜಿನ್‌ (ಐ.ಸಿ.ಇ) ಹೊಂದಿರುವ ಕ್ರೆಟಾದ ಒಳಾಂಗಣ ವಿನ್ಯಾಸವನ್ನೇ ಈ ವಾಹನವೂ ಸಹ ಹೊಂದಿರಲಿದೆ.  ಆದರೆ, ಈ ಹಿಂದಿನ ಪರೀಕ್ಷಾರ್ಥ ವಾಹನದಲ್ಲಿ ಕಂಡಂತೆಯೇ, ಈ ಸಂಪೂರ್ಣ ಎಲೆಕ್ಟ್ರಿಕ್‌ ಕ್ರೆಟಾ ಕಾರು ಹೊಸ 3 ಸ್ಪೋಕ್‌ ಸ್ಟೀಯರಿಂಗ್‌ ವೀಲ್‌ ಅನ್ನು ಹೊಂದಿರುವುದನ್ನು ಸ್ಪೈ ಶಾಟ್‌ ಗಳು ಬಹಿರಂಗಪಡಿಸಿವೆ. ಹ್ಯುಂಡೈ ಸಂಸ್ಥೆಯ ಇನ್ನಷ್ಟು ಪ್ರೀಮಿಯಂ ವಾಹನ ಎನಿಸಿರುವ ಅಯೋನಿಕ್ 5 ಇ.ವಿ ವಾಹನದಲ್ಲಿ ಇರುವಂತೆಯೇ ಕ್ರೆಟಾ ಇ.ವಿ ಯಲ್ಲಿಯೂ ಡ್ರೈವ್‌ ಸೆಲೆಕ್ಟರ್‌ ಅನ್ನು ಸೆಂಟರ್‌ ಕನ್ಸೋಲ್‌ ಬದಲಿಗೆ ಸ್ಟೀಯರಿಂಗ್‌ ವೀಲ್‌ ಹಿಂದುಗಡೆ ನೀಡಲಾಗಿದೆ. 

ಸ್ವಲ್ಪ ಮಾರ್ಪಡಿಸಿದ ಹೊರಭಾಗ

Hyundai Creta EV Exterior

 ಹೊರಾಂಗಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸೈಡ್‌ ಪ್ರೊಫೈಲ್‌ ನಲ್ಲಿ ಹೊಸ ಅಲೋಯ್‌ ವೀಲ್‌ ವಿನ್ಯಾಸವನ್ನು ನೋಡಬಹುದು. ಕ್ರೆಟಾ ಇ.ವಿ ಯು ಸಾಮಾನ್ಯ ಮಾದರಿಯಲ್ಲಿ ಇರುವಂತೆಯೇ ಅದೇ ಸಂಪೂರ್ಣ ಎಲ್‌.ಇ.ಡಿ ಲೈಟಿಂಗ್‌ ಅನ್ನೇ ಹೊಂದಿರಲಿದ್ದು, ಹ್ಯುಂಡೈ ಸಂಸ್ಥೆಯು ಇದನ್ನು ಸ್ವಲ್ಪ ಮರುವಿನ್ಯಾಸಕ್ಕೆ ಒಳಪಡಿಸಿದ ಬಂಪರ್‌ ಗಳೊಂದಿಗೆ ಹೊರ ತರಲಿದೆ. ಕ್ಲೋಸ್ಡ್‌ ಆಫ್‌ ಗ್ರಿಲ್‌, ಮಾರ್ಪಡಿಸಿದ ಬಂಪರ್‌, ಮತ್ತು L ಆಕಾರದ LED DRL ಗಳು ಇತ್ಯಾದಿ ಬದಲಾವಣೆಗಳನ್ನು ವಿನ್ಯಾಸದಲ್ಲಿ ನಿರೀಕ್ಷಿಸಬಹುದು.

 ಇದನ್ನು ಸಹ ಓದಿರಿ: ಹ್ಯುಂಡೈ ಕ್ರೆಟಾ ಬಿಡುಗಡೆಯ ಸಮಯ ಬಹಿರಂಗ

ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ಸುರಕ್ಷತೆ 

 ಕ್ರೆಟಾ ಇ.ವಿ ಯು ಇದರ ಹೆಚ್ಚಿನ ವೈಶಿಷ್ಟ್ಯಗಳನ್ನು ಈ ಕಾರಿನ ಐ.ಸಿ.ಇ ಮಾದರಿಯಿಂದ ಎರವಲು ಪಡೆದಿದ್ದು, ಇದರಲ್ಲಿ  10.25 ಇಂಚಿನ ಟಚ್‌ ಸ್ಕ್ರೀನ್‌, 10.25 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, ಡ್ಯುವಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಪ್ಯಾನೊರಾಮಿಕ್‌ ಸನ್‌ ರೂಫ್‌, ವೈರ್‌ ಲೆಸ್‌ ಫೋನ್‌ ಚಾರ್ಜಿಂಗ್‌ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳು ಒಳಗೊಂಡಿವೆ. 

Hyundai Creta 360-degree camera

 ಸುರಕ್ಷತೆಗಾಗಿ ಆರು ಏರ್‌ ಬ್ಯಾಗ್‌ ಗಳು (ಪ್ರಮಾಣಿತ), 360 ಡಿಗ್ರಿ ಕ್ಯಾಮರಾ, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC),‌ ಮತ್ತು ಎಮರ್ಜೆನ್ಸಿ ಬ್ರೇಕಿಂಗ್‌, ಲೇನ್‌ ಅಸಿಸ್ಟ್‌ ಹಾಗೂ ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಇತ್ಯಾದಿಗಳನ್ನು ಹೊಂದಿರುವ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಅನ್ನು ಈ ವಾಹನದಲ್ಲಿ ನೀಡಲಾಗಿದೆ.

ಕ್ರೆಟಾ ಇವಿಯ ಎಲೆಕ್ಟ್ರಿಕ್‌ ಪವರ್‌ ಟ್ರೇನ್

ಹ್ಯುಂಡೈ ಸಂಸ್ಥೆಯು ಕ್ರೆಟಾ ಇ.ವಿ ಯ ಬ್ಯಾಟರಿ ಪ್ಯಾಕ್‌ ಮತ್ತು ಎಲೆಕ್ಟ್ರಿಕ್‌ ಮೋಟಾರ್‌ ಕುರಿತು ವಿವರಗಳನ್ನು ಇನ್ನೂ ಸಹ ಬಹಿರಂಗಪಡಿಸಿಲ್ಲ. ಆದರೆ ಇದು 400 ಕಿ.ಮೀ ಗಿಂತಲೂ ಹೆಚ್ಚಿನ ಶ್ರೇಣಿಯನ್ನು ಒದಗಿಸಬಲ್ಲ ದೊಡ್ಡದಾದ ಬ್ಯಾಟರಿ ಪ್ಯಾಕ್‌ ಜೊತೆಗೆ ಬರುವ ನಿರೀಕ್ಷೆ ಇದೆ. ಕ್ರೆಟಾ ಇ.ವಿ ಯು ಡಿ.ಸಿ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದ್ದು, ಮಲ್ಟಿ ಲೆವೆಲ್‌ ರೀಜನರೇಟಿವ್‌ ಬ್ರೇಕಿಂಗ್‌ ಅನ್ನು ಸಹ ಒಳಗೊಂಡಿರಲಿದೆ.

 ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಹ್ಯುಂಡೈ ಕ್ರೆಟಾ ಇ.ವಿ ಕಾರು ರೂ. 20 ಲಕ್ಷದಷ್ಟು (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಲಿದೆ. ಇದು MG ZS EV ಮತ್ತು ಟಾಟಾ ಕರ್ವ್‌ EV ಜತೆಗೆ ಸ್ಪರ್ಧಿಸಲಿದ್ದು,  ಟಾಟಾ ನೆಕ್ಸನ್‌ EV ಮತ್ತು  ಮಹೀಂದ್ರಾ XUV400 ಕಾರುಗಳಿಗೆ ಪ್ರೀಮಿಯಂ ಬದಲಿ ಆಯ್ಕೆ ಎನಿಸಲಿದೆ.

ತೀರಾ ಇತ್ತೀಚಿನ ಅಟೋಮೋಟಿವ್‌ ಸುದ್ದಿಗಳಿಗಾಗಿ ಕಾರ್‌ ದೇಖೊ ಸಂಸ್ಥೆಯ ವಾಟ್ಸಪ್‌ ಚಾನಲ್‌ ಅನ್ನು ಅನುಸರಿಸಿ

ಚಿತ್ರದ ಮೂಲ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ ಕ್ರೆಟಾ ಆನ್‌ ರೋಡ್‌ ಬೆಲೆ

was this article helpful ?

Write your Comment on Hyundai ಕ್ರೆಟಾ ಎಲೆಕ್ಟ್ರಿಕ್

explore ಇನ್ನಷ್ಟು on ಹುಂಡೈ ಕ್ರೆಟಾ ಎಲೆಕ್ಟ್ರಿಕ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ವೇವ್ ಮೊಬಿಲಿಟಿ eva
    ವೇವ್ ಮೊಬಿಲಿಟಿ eva
    Rs.7 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • ಸ್ಕೋಡಾ elroq
    ಸ್ಕೋಡಾ elroq
    Rs.50 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಸಫಾರಿ ಇವಿ
    ಟಾಟಾ ಸಫಾರಿ ಇವಿ
    Rs.32 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.57 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience