ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಭಾರತದಲ್ಲಿ 1 ಲಕ್ಷ ಬುಕಿಂಗ್ ಮೈಲಿಗಲ್ಲನ್ನು ದಾಟಿದ Hyundai Creta Facelift, ಸನ್‌ರೂಫ್ ವೇರಿಯಂಟ್‌ಗೆ ಹೆಚ್ಚಿನ ಡಿಮ್ಯಾಂಡ್..
ಹುಂಡೈ ಕ್ರೆಟಾ ಗಾಗಿ rohit ಮೂಲಕ ಏಪ್ರಿಲ್ 12, 2024 10:40 am ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಈ ಒಟ್ಟು ಬುಕಿಂಗ್‌ಗಳಲ್ಲಿ 71 ಪ್ರತಿಶತದಷ್ಟು ಜನರು ಸನ್‌ರೂಫ್-ಹೊಂದಿರುವ ವೇರಿಯಂಟ್ ಅನ್ನು ಖರೀದಿಸಿದ್ದಾರೆ ಎಂದು ಹ್ಯುಂಡೈ ಹೇಳಿದೆ
- ಹುಂಡೈ ಭಾರತದಲ್ಲಿ ಫೇಸ್‌ಲಿಫ್ಟ್ ಆಗಿರುವ ಕ್ರೆಟಾವನ್ನು 2024 ರ ಜನವರಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.
- ಇದರ ಬುಕಿಂಗ್‌ಗಳನ್ನು ಜನವರಿಯ ಆರಂಭದಲ್ಲಿ ಶುರುಮಾಡಲಾಯಿತು ಮತ್ತು ಒಂದು ತಿಂಗಳೊಳಗೆ ಈ ಮಾಡೆಲ್ 50,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ.
- ಮಾಡಿರುವ ಎಲ್ಲಾ ಬುಕಿಂಗ್‌ಗಳಲ್ಲಿ 52 ಪ್ರತಿಶತವು ಕನೆಕ್ಟೆಡ್ ಕಾರ್ ಟೆಕ್ನೋಲೊಜಿಯನ್ನು ಹೊಂದಿರುವ ಕಾರಿನ ವರ್ಷನ್ ಗಳಿಗೆ ಆಗಿದೆ.
- ಈ SUV ಯು ಇತ್ತೀಚೆಗೆ ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಯೂನಿಟ್ ಅನ್ನು ಮಾರಾಟ ಮಾಡಿದೆ.
- ಹುಂಡೈ ತನ್ನ ಕ್ರೆಟಾವನ್ನು ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡುತ್ತದೆ: ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್.
- SUV ಬೆಲೆಯು ರೂ. 11 ಲಕ್ಷದಿಂದ ರೂ 20.15 ಲಕ್ಷದವರೆಗೆ ಇದೆ (ಎಕ್ಸ್ ಶೋರೂಂ ದೆಹಲಿ).
ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾದ ಬುಕಿಂಗ್‌ಗಳು ಜನವರಿ 2 ರಂದು ಪ್ರಾರಂಭವಾಯಿತು ಮತ್ತು ಈಗಾಗಲೇ ಈ ಕಾಂಪ್ಯಾಕ್ಟ್ SUV 1 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಂಡಿದೆ. ನೆನಪಿರಲಿ, SUVಯು ಮಾರುಕಟ್ಟೆಗೆ ಬಂದ ಕೇವಲ ಒಂದು ತಿಂಗಳಲ್ಲಿ 50,000 ಬುಕಿಂಗ್‌ಗಳನ್ನು ತಲುಪಿತು.
ಸನ್‌ರೂಫ್ ವೇರಿಯಂಟ್ ಗಳು ಹೆಚ್ಚು ಜನಪ್ರಿಯ
ಹುಂಡೈ ಪ್ರಕಾರ, ಒಟ್ಟು ಬುಕಿಂಗ್‌ಗಳಲ್ಲಿ 71 ಪ್ರತಿಶತವು ಸನ್‌ರೂಫ್ (ಪನೋರಮಿಕ್ ಯುನಿಟ್) ಹೊಂದಿರುವ ವೇರಿಯಂಟ್ ಗಳಿಗೆ ಮಾಡಲಾಗಿದೆ. ಈ ಫೀಚರ್ ಅನ್ನು ಕಾರು ತಯಾರಕರು ಕಾಂಪ್ಯಾಕ್ಟ್ SUV ಯ ಮಿಡ್-ಸ್ಪೆಕ್ S(O) ವೇರಿಯಂಟ್ ನಿಂದ ನೀಡುತ್ತಿದ್ದಾರೆ. ಒಟ್ಟು ಬುಕಿಂಗ್‌ಗಳಲ್ಲಿ 52 ಪ್ರತಿಶತದಷ್ಟು ಬುಕಿಂಗ್ ಗಳು ಕನೆಕ್ಟೆಡ್ ಕಾರ್ ಟೆಕ್ ಹೊಂದಿರುವ SUV ವೇರಿಯಂಟ್ ಗಳಿಗೆ ಸೇರಿದೆ ಎಂದು ಹ್ಯುಂಡೈ ತಿಳಿಸಿದೆ. ಈ ಕನೆಕ್ಟೆಡ್ ಕಾರ್ ಟೆಕ್ ಅನ್ನು ನೀವು ಹೊಸ ಕ್ರೆಟಾದ ಟಾಪ್-ಸ್ಪೆಕ್ SX, SX ಟೆಕ್ ಮತ್ತು SX(O) ಟ್ರಿಮ್‌ಗಳಲ್ಲಿ ಪಡೆಯಬಹುದು.
ಹುಂಡೈ ಕ್ರೆಟಾ: ಸಂಕ್ಷಿಪ್ತ ಪರಿಚಯ
ಎರಡನೇ ಜನರೇಷನ್ ಹುಂಡೈ ಕ್ರೆಟಾವನ್ನು ಭಾರತದಲ್ಲಿ ಮಾರ್ಚ್ 2020 ರಲ್ಲಿ ಪರಿಚಯಿಸಲಾಯಿತು ಮತ್ತು ಜನವರಿ 2024 ರಲ್ಲಿ ಅದಕ್ಕೆ ಮಿಡ್‌ಲೈಫ್ ಅಪ್ಡೇಟ್ ಅನ್ನು ನೀಡಲಾಯಿತು. ಈ SUVಯು ಭಾರತದಲ್ಲಿ ಇದುವರೆಗೆ 10 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಹ್ಯುಂಡೈ ಇತ್ತೀಚೆಗೆ ಬಹಿರಂಗಪಡಿಸಿದೆ.
ಇದು ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು (ಇನ್‌ಸ್ಟ್ರುಮೆಂಟೇಶನ್ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ತಲಾ 10.25-ಇಂಚಿನ ಸ್ಕ್ರೀನ್), ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್‌ನಂತಹ ಫೀಚರ್ ಗಳನ್ನು ಪಡೆದಿದೆ. ಸುರಕ್ಷತಾ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಒಳಗೊಂಡಿದೆ.
ಸಂಬಂಧಿಸಿದ ಲೇಖನ: ವೀಕ್ಷಿಸಿ: 2024 ಹ್ಯುಂಡೈ ಕ್ರೆಟಾ ವೇರಿಯಂಟ್ ವಿವರಗಳು ಇಲ್ಲಿದೆ: ನಿಮಗೆ ಯಾವುದು ಸೂಕ್ತ?
ಹುಂಡೈ 2024 ಕ್ರೆಟಾವನ್ನು ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡುತ್ತದೆ:
ಸ್ಪೆಸಿಫಿಕೇಷನ್ |
1.5-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
115 PS |
160 PS |
116 PS |
ಟಾರ್ಕ್ |
144 Nm |
253 Nm |
250 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, CVT |
7- ಸ್ಪೀಡ್ DCT* |
6-ಸ್ಪೀಡ್ MT, 6-ಸ್ಪೀಡ್ AT |
*DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಇತ್ತೀಚೆಗಷ್ಟೇ, ಹುಂಡೈ ಮೊಟ್ಟ ಮೊದಲ ಬಾರಿಗೆ ಕ್ರೆಟಾ N ಲೈನ್ ಅನ್ನು ಪರಿಚಯಿಸಿತು, ಇದು SUV ಯ ಸ್ಪೋರ್ಟಿಯರ್ ವರ್ಷನ್ ಆಗಿದೆ. ಇದು ಟರ್ಬೋಚಾರ್ಜ್ ಆಗಿರುವ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಬರುತ್ತದೆ. ಇದರ ಜೊತೆಗೆ, ಇದು 6-ಸ್ಪೀಡ್ ಮ್ಯಾನ್ಯುವಲ್ ಮತ್ತು 7-ಸ್ಪೀಡ್ DCT ಟ್ರಾನ್ಸ್‌ಮಿಷನ್ ಗಳ ಆಯ್ಕೆಯನ್ನು ಪಡೆಯುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾದ ಬೆಲೆಯು 11 ಲಕ್ಷದಿಂದ ಶುರುವಾಗಿ 20.15 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇದನ್ನು ಕೂಡ ಓದಿ: ಹ್ಯುಂಡೈ ಐಯೋನಿಕ್ 5 ಈಗ ಹೊಸ ಟೈಟಾನ್ ಗ್ರೇ ಎಕ್ಸ್ಟೀರಿಯರ್ ಪೇಂಟ್ ಆಯ್ಕೆಯಲ್ಲಿ ಲಭ್ಯ
ಇನ್ನಷ್ಟು ಓದಿ: ಕ್ರೆಟಾ ಆನ್ ರೋಡ್ ಬೆಲೆ