Login or Register ಅತ್ಯುತ್ತಮ CarDekho experience ಗೆ
Login

Hyundai Creta Facelift ಸುರಕ್ಷತಾ ಫೀಚರ್‌ಗಳ ವಿವರ

published on ಜನವರಿ 08, 2024 04:46 pm by rohit for ಹುಂಡೈ ಕ್ರೆಟಾ

ಸುರಕ್ಷತಾ ಫೀಚರ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು, 19 ADAS ಫೀಚರ್‌ಗಳನ್ನು ಮತ್ತು ಒಟ್ಟಾಗಿ ಸುಮಾರು 70 ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ

  • ಹ್ಯುಂಡೈ ಜನವರಿ 16 ರಂದು ನವೀಕೃತ ಕ್ರೆಟಾವನ್ನು ಬಿಡುಗಡೆ ಮಾಡಲಿದೆ.
  • ಕ್ರೆಟಾ ಮೊದಲ ಬಾರಿಗೆ ADAS ಅನ್ನು ಸೆಲ್ಟೋಸ್ ADAS ಸೂಟ್‌ಗಿಂತಲೂ ಹೆಚ್ಚಿನ ಫೀಚರ್‌ಗಳೊಂದಿಗೆ ಪಡೆಯುತ್ತಿದೆ.
  • ಇತರ ಸುರಕ್ಷತ ಫೀಚರ್‌ಗಳು ESC, ಆರು ಏರ್‌ಬ್ಯಾಗ್‌ಗಳು ಮತ್ತು ಆಲ್-ವ್ಹೀಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರುತ್ತದೆ.
  • ಆಯ್ಕೆ ಮಾಡಿದ ವೇರಿಯೆಂಟ್ ಅನ್ನು ಆಧರಿಸಿ ಮೂರು ಇಂಜಿನ್‌ಗಳು ಮತ್ತು ನಾಲ್ಕು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆದಿದೆ.
  • ಬೆಲೆಗಳು ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು.

ನವೀಕೃತ ಹ್ಯುಂಡೈ ಕ್ರೆಟಾ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಇದರ ಬೆಲೆಗಳ ಪ್ರಕಟಣೆಗೂ ಮುನ್ನವೇ, ಕಾರುತಯಾರಕರು ಈಗ ನವೀಕೃತ ಕಾಂಪ್ಯಾಕ್ಟ್ SUVಯಲ್ಲಿರುವ ಸುರಕ್ಷತಾ ಫೀಚರ್‌ಗಳನ್ನು ಹಂಚಿಕೊಂಡಿದ್ದಾರೆ. ಹೊಸ ಹ್ಯುಂಡೈ ಕ್ರೆಟಾಗೆ ಇರುವ ಪ್ರಮುಖ ಸೇರ್ಪಡೆಗಳಲ್ಲಿ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ಕೂಡಾ ಒಂದು ಆಗಿರುತ್ತದೆ.

ಸ್ಟಾಂಡರ್ಡ್ ಸುರಕ್ಷತಾ ಕಿಟ್

ಇದರ ನಿರ್ಗಮಿತ ಆವೃತ್ತಿಯಂತೆ, ಕ್ರೆಟಾ ಫೇಸ್‌ಲಿಫ್ಟ್ ಕೂಡಾ ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಆಲ್-ವ್ಹೀಲ್ ಡಿಸ್ಕ್ ಬ್ರೇಕ್ ಅನ್ನು ಸ್ಟಾಂಡರ್ಡ್ ಆಗಿ ಅಳವಡಿಸಲಾಗಿದೆ. ಇತರ ನಿರೀಕ್ಷಿತ ಸ್ಟಾಂಡರ್ಡ್ ಫೀಚರ್‌ಗಳು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ರಿಮೈಂಡರ್, ABS ಜೊತೆಗೆ EBD, ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಒಳಗೊಂಡಿದೆ. ಈ SUV 36 ಸುರಕ್ಷತಾ ಫೀಚರ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದೆ ಎಂದು ಹ್ಯುಂಡೈ ಹೇಳುತ್ತದೆ.

19 ADAS ಫೀಚರ್‌ಗಳು

ಮಧ್ಯಂತರ ನವೀಕರಣದೊಂದಿಗೆ, ಹ್ಯುಂಡೈ ತನ್ನ ಈ ಕಾಂಪ್ಯಾಕ್ಟ್ SUVಗೆ ಹೊಸ ವರ್ನಾದಲ್ಲಿರುವಂತೆ ಸೆನ್ಸರ್‌ಗಳು ಮತ್ತು ಫ್ರಂಟ್ ಕ್ಯಾಮರಾ ಬಳಸಿಕೊಂಡು ಲೆವೆಲ್ 2 ADAS ಅನ್ನೂ ನೀಡುತ್ತಿದೆ. ಆದಾಗ್ಯೂ, ಇದರ ADAS ಪಟ್ಟಿಯನ್ನು ಅನ್ನೂ ಬಹಿರಂಗಪಡಿಸಿಲ್ಲವಾದರೂ, ನಾವು ಈ ನವೀಕೃತ ವರ್ನಾದಲ್ಲಿ ಕೊಲಿಶನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಲೇನ್ ಡಿಪಾರ್ಚರ್ ವಾರ್ನಿಂಗ್ ಅನ್ನು ನಿರೀಕ್ಷಿಸಬಹುದು.

ಬಳಸಿದ ಕಾರು ಮೌಲ್ಯಮಾಪನ

ನಿಮ್ಮ ಬಾಕಿ ಉಳಿದಿರುವ ಚಲನ್ ಅನ್ನು ಪರಿಶೀಲಿಸಿ

ಆನ್‌ ಬೋರ್ಡ್‌ನಲ್ಲಿರುವ ಇತರ ಫೀಚರ್‌ಗಳು

ಅಲ್ಲದೇ ಈ ನವೀಕೃತ ಕ್ರೆಟಾ ಡ್ಯುಯಲ್-ಝೋನ್ AC, 8-ವೇ ಪವರ್-ಅಡ್ಜಸ್ಟಿಬಲ್ ಡ್ರೈವರ್ ಸೀಟ್, 360-ಡಿಗ್ರಿ ಕ್ಯಾಮರಾ ಮತ್ತು 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹೊಂದಿರುವುದನ್ನು ದೃಢಪಡಿಸಿದೆ. ಈ SUV ಗೆ ವಿಹಂಗಮ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟಡ್ ಫ್ರಂಟ್ ಸೀಟುಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನೂ ನೀಡಲಾಗುತ್ತಿದೆ.

ಸಂಬಂಧಿತ: 2024 ಹ್ಯುಂಡೈ ಕ್ರೆಟಾ: ಇದಕ್ಕಾಗಿ ನೀವು ಕಾಯಬೇಕೆ ಅಥವಾ ಇದರ ಪ್ರತಿಸ್ಪರ್ಧಿಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕೆ?

ಪವರ್‌ಟ್ರೇನ್‌ಗಳ ವ್ಯಾಪಕ ಆಯ್ಕೆಗಳು

ಕ್ರೆಟಾ ಫೇಸ್‌ಲಿಫ್ಟ್ ಈ ಕೆಳಗಿನ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ:

ನಿರ್ದಿಷ್ಠತೆ

1.5-ಲೀಟರ್ N.A. ಪೆಟ್ರೋಲ್

1.5-ಲೀಟರ್ ಟರ್ಬೋ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್

115 PS

160 PS

116 PS

ಟಾರ್ಕ್

144 Nm

253 Nm

250 Nm

ಟ್ರಾನ್ಸ್‌ಮಿಷನ್

6-ಸ್ಪೀಡ್ MT, CVT

7-ಸ್ಪೀಡ್ DCT

6-ಸ್ಪೀಡ್ MT, 6-ಸ್ಪೀಡ್ AT

ಹ್ಯುಂಡೈಯು ವರ್ನಾದ 1.5-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ ಅನ್ನು ಹೊಸ ಕ್ರೆಟಾಗೆ ಅಳವಡಿಸಿದೆ, ಆದರೆ ಇದರ ಇಂಜಿನ್‌ಗೆ ಹಳೆಯದರಲ್ಲಿ ಲಭ್ಯವಿದ್ದಂತೆ 6-ಸ್ಪೀಡ್ MTಅನ್ನು ನೀಡಿರುವುದಿಲ್ಲ. ಉಳಿದ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಅಳವಡಿಸಲಾಗಿದೆ

ಕಾರ್‌ದೇಖೋ ಮೂಲಕ ಕಾರು ಲೋನ್

ಮನೆಬಾಗಿಲಿಗೆ ಕಾರು ಸರ್ವೀಸ್

ಹೊಸ ಕ್ರೆಟಾ ಬಿಡುಗಡೆ ಮತ್ತು ಬೆಲೆ

ನವೀಕೃತ ಹ್ಯುಂಡೈ ಕ್ರೆಟಾ ಅನ್ನು ಜನವರಿ 16ರಂದು ಮಾರಾಟಕ್ಕೆ ಬರುವಾಗ ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಬೆಲೆ ನಿಗದಿಪಡಿಸುವ ನಿರೀಕ್ಷೆ ಇದೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಸ್ಕೋಡಾ ಕುಶಕ್, MG ಎಸ್ಟರ್, ಫೋಕ್ಸ್‌ವಾಗನ್ ಟೈಗನ್, ಮತ್ತು ಸಿಟ್ರನ್ C3 ಏರ್‌ಕ್ರಾಸ್ ಗೆ ಪ್ರತಿಸ್ಪರ್ಧಿಯಾಗಲಿದೆ.

ಇನ್ನಷ್ಟು ಓದಿ : ಕ್ರೆಟಾ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 103 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕ್ರೆಟಾ

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ