Hyundai Creta Facelift ವೇರಿಯಂಟ್ ಗಳು ಮತ್ತು ಪವರ್ ಟ್ರೆನ್ ಆಯ್ಕೆಗಳ ವಿವರ ಬಹಿರಂಗ
ಹುಂಡೈ ಕ್ರೆಟಾ ಗಾಗಿ rohit ಮೂಲಕ ಜನವರಿ 04, 2024 03:50 pm ರಂದು ಪ್ರಕಟಿಸಲಾಗಿದೆ
- 43 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಸಂಸ್ಥೆಯು ಕ್ರೆಟಾವನ್ನು ಈಗ ನಿವೃತ್ತಿ ಹೊಂದಲಿರುವ ಮಾದರಿಯಲ್ಲಿ ಇರುವಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೆರಡರಲ್ಲೂ ನೀಡಲಿದ್ದು, ಹೊಸ ವೆರ್ನಾದ ಟರ್ಬೊ ಪೆಟ್ರೋಲ್ ಘಟಕವನ್ನು ಸಹ ಈ ಪಟ್ಟಿಗೆ ಸೇರಿಸಲಾಗುತ್ತದೆ
- ಪರಿಷ್ಕೃತ ಹ್ಯುಂಡೈ ಕ್ರೆಟಾ ವಾಹನಕ್ಕೆ ಅನ್ಲೈನ್ ಮೂಲಕ ಮತ್ತು ಡೀಲರ್ ಗಳಲ್ಲಿ ರೂ.25,000 ಕೊಟ್ಟು ಬುಕಿಂಗ್ ಮಾಡಿಸಿಕೊಳ್ಳಬಹುದು
- ಜನವರಿ 16ರಂದು ಇದು ಬಿಡುಗಡೆಯಾಗಲಿದ್ದು ಈ ವಾಹನದ ಅಧಿಕೃತ ಟೀಸರ್ ಗಳು ಈಗಾಗಲೇ ಬರತೊಡಗಿವೆ.
- ಇದನ್ನು ಒಟ್ಟು ಏಳು ವಿಸ್ತೃತ ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ: E, EX, S, S (O), SX, SX ಟೆಕ್, ಮತ್ತು SX (O).
- ಮೂರು ಎಂಜಿನ್ ಆಯ್ಕೆಗಳು ಮತ್ತು ನಾಲ್ಕು ಟ್ರಾನ್ಸ್ ಮಿಶನ್ ಗಳ ಆಯ್ಕೆಗಳಲ್ಲಿ ಲಭ್ಯ.
- ಬೆಲೆಯು ರೂ. 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ.
2024 ವರ್ಷವು ಅಟೋ ಉದ್ಯಮದ ಪಾಲಿಗೆ ಆಶಾದಾಯಕ ಪ್ರಾರಂಭವನ್ನು ನೀಡಿದ್ದು, ಖರೀದಿದಾರರು ಪರಿಷ್ಕೃತ ಹ್ಯುಂಡೈ ಕ್ರೆಟಾ ಕಾರಿನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆರಂಭಿಕ ಟೀಸರ್ ಗಳು ಈಗಾಗಲೇ ಬಿಡುಗಡೆಯಾಗಿದ್ದು, ರೂ. 25,000ಕ್ಕೆ ಆನ್ಲೈನ್ ಮತ್ತು ಇದರ ಡೀಲರ್ ಜಾಲದಲ್ಲಿ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ, ಪ್ರತಿ ವೇರಿಯಂಟ್ ನಲ್ಲಿ ದೊರೆಯಬಹುದಾದ ಎಂಜಿನ್ - ಗೇರ್ ಬಾಕ್ಸ್ ಸಂಯೋಜನೆಯ ಜೊತೆಗೆ ವೇರಿಯಂಟ್ ಗಳ ಸಂಪೂರ್ಣ ಪಟ್ಟಿ ನಮಗೆ ದೊರೆತಿದೆ.
ಆಯ್ಕೆಗಳ ದೀರ್ಘ ಪಟ್ಟಿ
ಹ್ಯುಂಡೈ ಸಂಸ್ಥೆಯು ಈ ಹಿಂದಿನಂತೆಯೇ ಕ್ರೆಟಾವನ್ನು 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅಯ್ಕೆಗಳೆರಡರಲ್ಲೂ ಮಾರಾಟ ಮಾಡಲಿದೆ. ಇದೀಗ ಹೊಸ ವೆರ್ನಾದ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿಯೂ ದೊರೆಯಲಿದ್ದು, ಇದರಲ್ಲಿ ಒಂದು ಟ್ರಾನ್ಸ್ ಮಿಶನ್ ಆಯ್ಕೆಯೊಂದಿಗೆ ಬರಲಿದೆ. ಅವುಗಳ ಎಲ್ಲಾ ತಾಂತ್ರಿಕ ವಿವರಗಳು ಇಲ್ಲಿವೆ:
ವಿವರಗಳು |
1.5-ಲೀಟರ್ N.A. ಪೆಟ್ರೋಲ್ |
1.5-ಲೀಟರ್ ಟರ್ಬೊ ಪೆಟ್ರೋಲ್ (ಹೊಸತು) |
1.5-ಲೀಟರ್ ಡೀಸೆಲ್ |
ಪವರ್ |
115 PS |
160 PS |
116 PS |
ಟಾರ್ಕ್ |
144 Nm |
253 Nm |
250 Nm |
ಟ್ರಾನ್ಸ್ ಮಿಶನ್ |
6-ಸ್ಪೀಡ್ MT, CVT |
7-ಸ್ಪೀಡ್ DCT |
6-ಸ್ಪೀಡ್ MT, 6-ಸ್ಪೀಡ್ AT |
ವೆರ್ನಾದ ಟರ್ಬೊ ಪವರ್ ಟ್ರೇನ್ ಗೆ ಹೋಲಿಸಿದರೆ ಇಲ್ಲಿ ಒಂದು ಬದಲಾವಣೆಯನ್ನು ಮಾತ್ರವೇ ಮಾಡಲಾಗಿದೆ. ಸೆಡಾನ್ ಕಾರು ಟರ್ಬೊ ಯೂನಿಟ್ ನಲ್ಲಿ 6-ಸ್ಪೀಡ್ MT ಮತ್ತು 7-ಸ್ಪೀಡ್ DCT ಆಯ್ಕೆಗಳೆರಡರಲ್ಲೂ ಬಂದರೆ, ಕ್ರೆಟಾವು 7 ಸ್ಪೀಡ್ ಅಟೋಮ್ಯಾಟಿಕ್ ಗೆ ಮಾತ್ರವೇ ಸೀಮಿತವಾಗಿದೆ.
ವೇರಿಯಂಟ್ ವಾರು ಪವರ್ ಟ್ರೇನ್ ಆಯ್ಕೆಗಳು
ಹೊಸ ಕ್ರೆಟಾವನ್ನು 7 ವಿಸ್ತೃತ ವೇರಿಯಂಟ್ ಗಳಲ್ಲಿ ಮಾರಲಾಗುತ್ತದೆ: E, EX, S, S (O), SX, SX ಟೆಕ್, ಮತ್ತು SX (O). ವೇರಿಯಂಟ್ ವಾರು ಎಂಜಿನ್ - ಗೇರ್ ಬಾಕ್ಸ್ ಕೋಂಬೊಗಳ ವಿವರವು ಇಲ್ಲಿದೆ:
ವೇರಿಯಂಟ್ |
1.5-ಲೀಟರ್ ಪೆಟ್ರೋಲ್ MT |
1.5-ಲೀಟರ್ ಪೆಟ್ರೋಲ್ CVT |
1.5-ಲೀಟರ್ ಟರ್ಬೊ ಪೆಟ್ರೋಲ್ |
1.5-ಲೀಟರ್ ಡೀಸೆಲ್ MT |
1.5-ಲೀಟರ್ ಡೀಸೆಲ್ AT |
E |
✅ |
❌ |
❌ |
✅ |
❌ |
EX |
✅ |
❌ |
❌ |
✅ |
❌ |
S |
✅ |
❌ |
❌ |
✅ |
❌ |
S (O) |
✅ |
✅ |
❌ |
✅ |
✅ |
SX |
✅* |
❌ |
❌ |
❌ |
❌ |
SX ಟೆಕ್ |
✅* |
✅* |
❌ |
✅* |
❌ |
SX (O) |
✅* |
✅* |
✅* |
✅* |
✅* |
*ಡ್ಯುವಲ್ ಟೋನ್ ಆಯ್ಕೆಯಲ್ಲಿಯೂ ಲಭ್ಯ
ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಬರುವ 1.5 ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಹೊಸ ಕ್ರೆಟಾದ ಇಡೀ ವೇರಿಯಂಟ್ ಸಾಲಿನಲ್ಲಿ ನೀಡಲಾಗುವ ಏಕೈಕ ಪವರ್ ಟ್ರೇನ್ ಅಗಿದೆ. ಇನ್ನೊಂದೆಡೆ ಡೀಸೆಲ್ ಎಂಜಿನ್ ಅನ್ನು ಈ ಶ್ರೇಣಿಯಲ್ಲಿ ಉನ್ನತ ಕ್ರಮಾಂಕದಲ್ಲಿ ಬರುವ SX (O) ಟ್ರಿಮ್ ಗೆ ಮೀಸಲಿಡಲಾಗಿದೆ. ಇದೇ ವೇಳೆ ಡೀಸೆಲ್ ಎಂಜಿನ್ ಅನ್ನು ಹೊಸ ಕ್ರೆಟಾ SX ಹೊರತುಪಡಿಸಿ ಎಲ್ಲಾ ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ.
ಮಿಡ್ ಸ್ಪೆಕ್ S (O) ಮತ್ತು ಟಾಪ್ ಸ್ಪೆಕ್ SX (O) ಗಳು ಮಾತ್ರವೇ ಗರಿಷ್ಠ ಪವರ್ ಟ್ರೇನ್ ಆಯ್ಕೆಗಳನ್ನು (ಕ್ರಮವಾಗಿ ನಾಲ್ಕು ಮತ್ತು ಐದು) ಹೊಂದಿರುವ ವೇರಿಯಂಟ್ ಗಳಾಗಿವೆ.
ಇದನ್ನು ಸಹ ಓದಿರಿ: ಭಾರತಕ್ಕೆ 2024ರಲ್ಲಿ 5 ಕಾರುಗಳನ್ನು ತರಲಿರುವ ಹ್ಯುಂಡೈ, ಅವುಗಳ ಮಾಹಿತಿಯನ್ನು ಇಲ್ಲಿ ಪಡೆಯಿರಿ...
ಇದರಲ್ಲಿ ಏನೆಲ್ಲ ಹೊಸತು ಇದೆ?
ಹ್ಯುಂಡೈ ಸಂಸ್ಥೆಯು ತನ್ನಲ್ಲಿ ಅತೀ ಹೆಚ್ಚು ಮಾರಾಟವಾಗುವ ಈ SUV ಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಂಪೂರ್ಣ ಬದಲಾವಣೆಯನ್ನು ಮಾಡಿದ್ದು, ಇದು ಹೆಚ್ಚು ಸದೃಢವಾಗಿ ಕಂಡರೆ ಒಳಗಡೆಯಲ್ಲಿ ಇನ್ನಷ್ಟು ಐಷಾರಾಮಿವಾಗಿ ಮೂಡಿ ಬಂದಿದೆ. ಸಂಪೂರ್ಣ LED ಲೈಟಿಂಗ್ ವ್ಯವಸ್ಥೆ, ದಪ್ಪನೆಯ ಬಂಪರ್ ಗಳು ಮತ್ತು ಮರುವಿನ್ಯಾಸಕ್ಕೆ ಒಳಪಟ್ಟ ಗ್ರಿಲ್ ಇತ್ಯಾದಿ ಬದಲಾವಣೆಯನ್ನು ಇದರಲ್ಲಿ ಗಮನಿಸಬಹುದು. ಒಳಗಡೆಯಲ್ಲಿ ಡ್ಯಾಶ್ ಬೋರ್ಡ್ ಅನ್ನು ಸಂಪೂರ್ಣವಾಗಿ ಮಾರ್ಪಡಿಸಲಾಗಿದ್ದು, ಇಂಟಗ್ರೇಟೆಡ್ ಡ್ಯುವಲ್ ಡಿಜಿಟಲ್ ಡಿಸ್ಪ್ಲೆಗಳು ಇದರಲ್ಲಿ ಎದ್ದು ಕಾಣುತ್ತವೆ. ಇದರ ವಿನ್ಯಾಸ ಮತ್ತು ವೈಶಿಷ್ಟ್ಯದಲ್ಲಿ ಮಾಡಲಾಗಿರುವ ಬದಲಾವಣೆಗಳನ್ನು ಅರಿತುಕೊಳ್ಳಲು ನಮ್ಮ “ಕ್ರೆಟಾ ಫೇಸ್ ಲಿಫ್ಟ್ ಬುಕಿಂಗ್ ಆರಂಭ” ವರದಿಯನ್ನು ನೀವು ಓದಬಹುದು.
ಇದನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ?
ಪರಿಷ್ಕೃತ ಹ್ಯುಂಡೈ ಕ್ರೆಟಾ ಕಾರು ಜನವರಿ 16ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಬೆಲೆಯು ರೂ. 11 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಇದು ಮಾರುತಿ ಗ್ರಾಂಡ್ ವಿಟಾರ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಹೋಂಡಾ ಎಲೆವೇಟ್, ಕಿಯಾ ಸೆಲ್ಟೋಸ್, ಫೋಕ್ಸ್ ವ್ಯಾಗನ್ ಟೈಗುನ್, MG ಆಸ್ಟರ್, ಸ್ಕೋಡಾ ಕುಶಕ್, ಮತ್ತು ಸಿಟ್ರಾನ್ C3 ಏರ್ ಕ್ರಾಸ್ ಜೊತೆಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ ಕ್ರೆಟಾ ಅಟೋಮ್ಯಾಟಿಕ್