ಹ್ಯುಂಡೈನ ದೀಪಾವಳಿ ಹಬ್ಬದ ಕೊಡುಗೆಗಳು: 2 ಲಕ್ಷ ರೂ.ಗಳವರೆಗೆ ಲಾಭ!
ಹುಂಡೈ ಟಕ್ಸನ್ 2016-2020 ಗಾಗಿ rohit ಮೂಲಕ ಅಕ್ಟೋಬರ್ 11, 2019 01:44 pm ರಂದು ಪ್ರಕಟಿಸಲಾಗಿದೆ
- 28 Views
- ಕಾಮೆಂಟ್ ಅನ್ನು ಬರೆಯಿರಿ
ನೀವು ಕನಸು ಕಾಣುತ್ತಿರುವ ಹ್ಯುಂಡೈ ಅನ್ನು ಖರೀದಿಸಲು ಇದೀಗ ಸರಿಯಾದ ಸಮಯ ಇರಬಹುದು
-
ಹ್ಯುಂಡೈ ಟಕ್ಸನ್‌ಗೆ ಗರಿಷ್ಠ ರಿಯಾಯಿತಿ ನೀಡುತ್ತಿದೆ.
-
ಹೊಸದಾಗಿ ಪ್ರಾರಂಭಿಸಲಾದ ಎಲಾಂಟ್ರಾ, ಗ್ರ್ಯಾಂಡ್ ಐ 10 ನಿಯೋಸ್ ಅಥವಾ ವೆನ್ಯೂ ಗಳ ಮೇಲೆ ಯಾವುದೇ ರಿಯಾಯಿತಿ ಇಲ್ಲ.
-
ಗ್ರ್ಯಾಂಡ್ ಐ 10 ಮತ್ತು ಕ್ಸೆಂಟ್‌ನಲ್ಲಿ ಸುಮಾರು 1 ಲಕ್ಷ ರೂ.
-
ಇತರ ಮಾದರಿಗಳಿಗೆ ಹೋಲಿಸಿದರೆ ವೆರ್ನಾ ಕನಿಷ್ಠ 60,000 ರೂಗಳ ರಿಯಾಯಿತಿಯನ್ನು ಪಡೆಯುತ್ತದೆ.
ಹ್ಯುಂಡೈ ಇತ್ತೀಚೆಗೆ ಭಾರತದಲ್ಲಿ ಎಲಾಂಟ್ರಾ ಫೇಸ್‌ಲಿಫ್ಟ್ ಅನ್ನು 15.89 ಲಕ್ಷ ರೂ. (ಎಕ್ಸ್ ಶೋ ರೂಂ) ಗೆ ಬಿಡುಗಡೆ ಮಾಡಿತು. ಹಬ್ಬದ ತಿಂಗಳು ಈಗಾಗಲೇ ಪ್ರಾರಂಭವಾಗಿದ್ದರಿಂದ, ಕೊರಿಯನ್ ತಯಾರಕರು ತನ್ನ ಗ್ರಾಹಕರಿಗೆ ಅದರ ಹೆಚ್ಚಿನ ಮಾದರಿಗಳಲ್ಲಿ ಒಪ್ಪಂದಗಳು ಮತ್ತು ಪ್ರಯೋಜನಗಳನ್ನು ನೀಡುತ್ತಿದ್ದಾರೆ. ಮಾದರಿವಾರು ಕೊಡುಗೆಗಳ ವಿವರವಾದ ನೋಟ ಇಲ್ಲಿದೆ:
ಹ್ಯುಂಡೈ ಸ್ಯಾಂಟ್ರೊ
ಒಂದು ವೇಳೆ ನೀವು ಸ್ಯಾಂಟ್ರೊ ಖರೀದಿಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದರೆ, ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್ ಆವೃತ್ತಿಯಲ್ಲಿ ನೀವು ಒಟ್ಟು 65,000 ರೂ.ಗಳವರೆಗೆ ಲಾಭವನ್ನು ಪಡೆಯಬಹುದಾಗಿದೆ. ವಿಶೇಷವೆಂದರೆ, ರಿಯಾಯಿತಿಯೊಂದಿಗೆ ಹ್ಯುಂಡೈ ಹೆಚ್ಚುವರಿ 4 ನೇ ವರ್ಷದ ವಿಸ್ತೃತ ಖಾತರಿ ಮತ್ತು ರಸ್ತೆ-ಪಕ್ಕದ ಸೇವೆಯನ್ನೂ (ಆರ್‌ಎಸ್‌ಎ) ಸಹ ನೀಡುತ್ತಿದೆ.
ಹ್ಯುಂಡೈ ಗ್ರ್ಯಾಂಡ್ ಐ 10
ಗ್ರ್ಯಾಂಡ್ ಐ 10 ನಿಯೋಸ್ ಆಗಮನದೊಂದಿಗೆ, ಹ್ಯುಂಡೈ ಈಗ ಗ್ರ್ಯಾಂಡ್ ಐ 10 ನಲ್ಲಿ 95,000 ರೂ.ಗಳವರೆಗೆ ರಿಯಾಯಿತಿಯನ್ನು ನೀಡುತ್ತಿದೆ . ಸ್ಯಾಂಟ್ರೊದಂತೆಯೇ, ಗ್ರ್ಯಾಂಡ್ ಐ 10 ಸಹ ಹೆಚ್ಚುವರಿ 4 ನೇ ವರ್ಷದ ವಿಸ್ತೃತ ಖಾತರಿ ಮತ್ತು ಆರ್ಎಸ್ಎ ಅನ್ನು ಪಡೆಯುತ್ತದೆ.
ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್
ಹೊಸದಾಗಿ ಬಿಡುಗಡೆಯಾದ ಗ್ರ್ಯಾಂಡ್ ಐ 10 ನಿಯೋಸ್‌ನಲ್ಲಿ ಯಾವುದೇ ಕೊಡುಗೆಗಳು ಇಲ್ಲವಾದರೂ , ಹ್ಯುಂಡೈ ತನ್ನ ಎಲ್ಲಾ ಗ್ರಾಹಕರಿಗೆ ಕ್ಷಿಪ್ರವಾದ ವಿತರಣೆಯ ಭರವಸೆಯನ್ನು ನೀಡುತ್ತಿದೆ.
ಹ್ಯುಂಡೈ ಎಲೈಟ್ ಐ 20
ಎಲೈಟ್ ಐ 20 ಸಹ 4 ನೇ ವರ್ಷದ ಖಾತರಿ ಮತ್ತು ಇತರ ಮಾದರಿಗಳಲ್ಲಿ ನೀಡುವಂತೆ ಆರ್ಎಸ್ಎ ಸೌಲಭ್ಯಗಳನ್ನು ಪಡೆಯುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಪ್ರೀಮಿಯಂ ಹ್ಯಾಚ್‌ಬ್ಯಾಕ್ 65,000 ರೂ.ಗಳವರೆಗಿನ ಲಾಭಗಳೊಂದಿಗೆ ಲಭ್ಯವಿದೆ.
ಹ್ಯುಂಡೈ ಕ್ರೆಟಾ
ಹ್ಯುಂಡೈ ಕ್ರೆಟಾದೊಂದಿಗೆ ಹೆಚ್ಚುವರಿ 4 ನೇ ವರ್ಷದ ಖಾತರಿ ಮತ್ತು ಆರ್ಎಸ್ಎ ಅನ್ನು ನೀಡುವುದಲ್ಲದೆ, ಒಟ್ಟು 80,000 ರೂಗಳ ವರೆಗಿನ ಲಾಭವನ್ನೂ ಸಹ ನೀಡುತ್ತಿದೆ.
ಹ್ಯುಂಡೈ ಕ್ಸೆಂಟ್
ಹ್ಯುಂಡೈನಿಂದ ಬಂದ ಸಬ್ -4 ಎಂ ಸೆಡಾನ್ ಅನ್ನು 95,000 ರೂ.ಗಳವರೆಗೆ ಹೆಚ್ಚಿನ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಇತರ ಮಾದರಿಗಳಲ್ಲಿ ನೀಡಲಾಗುವ ಹೆಚ್ಚುವರಿ 4 ನೇ ವರ್ಷದ ವಿಸ್ತೃತ ಖಾತರಿ ಜೊತೆಗೆ ರಸ್ತೆ-ಪಕ್ಕದ ಸಹಾಯವೂ ಸಹ ಪ್ರಸ್ತಾಪದಲ್ಲಿದೆ.
ಹ್ಯುಂಡೈ ವರ್ನಾ
ನೀವು ಹ್ಯುಂಡೈ ವರ್ನಾವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಹ್ಯುಂಡೈ ಒಟ್ಟು 60,000 ರೂ.ಗಳ ಲಾಭವನ್ನು ನೀಡುತ್ತಿದೆ. ಇದಕ್ಕಿಂತ ಹೆಚ್ಚಾಗಿ, ನೀವು ಹೆಚ್ಚುವರಿ 4 ನೇ ವರ್ಷದ ವಿಸ್ತೃತ ಖಾತರಿ ಮತ್ತು ಆರ್‌ಎಸ್‌ಎಯನ್ನೂ ಸಹ ಪಡೆಯಬಹುದು.
ಹ್ಯುಂಡೈ ಟಕ್ಸನ್
ಹ್ಯುಂಡೈನಿಂದ ಅತಿದೊಡ್ಡ ಕೊಡುಗೆಯನ್ನು ಅದರ ಪ್ರಮುಖ ಎಸ್ಯುವಿ ಟಕ್ಸನ್ ನನ್ನು ಖರೀದಿಸುವುದರೂಂದಿಗೆ ಪಡೆಯಬಹುದು , ಇದು ಒಟ್ಟು 2 ಲಕ್ಷ ರೂಗಳ ಲಾಭವನ್ನು ತನ್ನ ಖರೀದಿದಾರರಿಗೆ ನೀಡುತ್ತದೆ. ಇತರ ಮಾದರಿಗಳಲ್ಲಿನ ಕೊಡುಗೆಗಳಂತೆಯೇ, ಹ್ಯುಂಡೈ ಟಕ್ಸನ್‌ನಲ್ಲೂ ವಿಸ್ತೃತ ಖಾತರಿ ಮತ್ತು ಆರ್‌ಎಸ್‌ಎ ನ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಮುಂದೆ ಓದಿ: ಹ್ಯುಂಡೈ ಟಕ್ಸನ್ ಸ್ವಯಂಚಾಲಿತ