7 ಚಿತ್ರಗಳಲ್ಲಿ Hyundai Venue ಎಕ್ಸಿಕ್ಯೂಟಿವ್ ವೇರಿಯಂಟ್ ನ ಸಂಪೂರ್ಣ ಚಿತ್ರಣ
SUV ಯ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಖರೀದಿಸಲು ಬಯಸುವ ಜನರಿಗೆ ಇದು ಈಗ ಎಂಟ್ರಿ ಲೆವೆಲ್ ಮಾಡೆಲ್ ಆಗಿದೆ, ಆದರೆ ಇದು ಕೇವಲ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.
ಮಾರ್ಚ್ 2024 ರಲ್ಲಿ, ಹ್ಯುಂಡೈ ವೆನ್ಯೂ ಹೊಸ ಎಕ್ಸಿಕ್ಯೂಟಿವ್ ವೇರಿಯಂಟ್ ಅನ್ನು ಪರಿಚಯಿಸಿತು, ಇದನ್ನು ಮಿಡ್-ಸ್ಪೆಕ್ S ಮತ್ತು S(O) ಟ್ರಿಮ್‌ಗಳ ನಡುವೆ ಇರಿಸಲಾಗಿದೆ. ಈ ಹೊಸ ವೇರಿಯಂಟ್ ಈಗ ಸಬ್-4m SUV ಯ ಟರ್ಬೊ-ಪೆಟ್ರೋಲ್ ಶ್ರೇಣಿಯ ಎಂಟ್ರಿ ಲೆವೆಲ್ ಆಯ್ಕೆಯಾಗಿದೆ. ನೀವು ಇದನ್ನು ಖರೀದಿಸಲು ನೋಡುತ್ತಿದ್ದರೆ, ವೆನ್ಯೂ ಎಕ್ಸಿಕ್ಯೂಟಿವ್ ನ ವಿವರಗಳು ಇಲ್ಲಿದೆ:
ಹೊರಭಾಗ
ಇದರ ಮೇಲ್ಮಟ್ಟದ S(O) ವೇರಿಯಂಟ್ ನಲ್ಲಿ ಇರುವ ಪ್ರೊಜೆಕ್ಟರ್ ಯೂನಿಟ್‌ಗಳ ಬದಲಿಗೆ, ವೆನ್ಯೂ ಎಕ್ಸಿಕ್ಯುಟಿವ್ ಸರಳವಾದ ಆಟೋ-ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಹೊಂದಿದೆ. ಇದು S(O) ಟ್ರಿಮ್‌ನಲ್ಲಿ ಲಭ್ಯವಿರುವ LED DRLಗಳು ಮತ್ತು ಕಾರ್ನರಿಂಗ್ ಲ್ಯಾಂಪ್‌ಗಳನ್ನು ಕೂಡ ಪಡೆಯುವುದಿಲ್ಲ. ವೆನ್ಯೂ ಎಕ್ಸಿಕ್ಯೂಟಿವ್ ಗ್ರಿಲ್‌ನಲ್ಲಿ ಡಾರ್ಕ್ ಕ್ರೋಮ್ ಇನ್ಸರ್ಟ್ ಅನ್ನು ಹೊಂದಿದೆ, ಇದು ಈ SUV ಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.
ಸೈಡ್ ಗಳಲ್ಲಿ, ವೆನ್ಯೂ ಎಕ್ಸಿಕ್ಯೂಟಿವ್ ಬಾಡಿ ಕಲರ್ ಡೋರ್ ಹ್ಯಾಂಡಲ್‌ಗಳು ಮತ್ತು ORVM ಗಳನ್ನು ಹೊಂದಿರುವುದನ್ನು ನೀವು ಗಮನಿಸಬಹುದು. ಹ್ಯುಂಡೈ ಇಲ್ಲಿ 16 ಇಂಚಿನ ವೀಲ್ ಗಳನ್ನು ಶೈಲೀಕೃತ ವೀಲ್ ಕವರ್‌ಗಳು ಮತ್ತು ರೂಫ್ ರೈಲ್‌ಗಳೊಂದಿಗೆ ಒದಗಿಸಿದೆ.
ಹಿಂಭಾಗದಲ್ಲಿ, ನೀವು ಟೈಲ್‌ಗೇಟ್‌ನಲ್ಲಿ 'ಎಕ್ಸಿಕ್ಯೂಟಿವ್' ಮತ್ತು 'ಟರ್ಬೊ' ಬ್ಯಾಡ್ಜ್‌ಗಳನ್ನು ನೋಡಬಹುದು, ಆದರೆ ಇದು S(O) ವೇರಿಯಂಟ್ ನಲ್ಲಿರುವ ಕನೆಕ್ಟೆಡ್ LED ಟೈಲ್‌ಲೈಟ್‌ಗಳನ್ನು ಹೊಂದಿಲ್ಲ. ಲೈಟಿಂಗ್ ಸೆಟಪ್ ಕೆಳಗೆ, ನೀವು 'ಹ್ಯುಂಡೈ' ಲೋಗೋ ಮತ್ತು 'ವೆನ್ಯೂ' ಮಾನಿಕರ್ ಅನ್ನು ನೋಡಬಹುದು.
ಒಳಭಾಗ
ವೆನ್ಯೂ ಎಕ್ಸಿಕ್ಯುಟಿವ್ ಬ್ಲಾಕ್ ಮತ್ತು ಬೀಜ್ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ, ಜೊತೆಗೆ AC ವೆಂಟ್‌ಗಳು, ಸೆಂಟರ್ ಕನ್ಸೋಲ್ ಮತ್ತು ಸ್ಟೀರಿಂಗ್ ವೀಲ್‌ನ ಸುತ್ತಲೂ ಸಿಲ್ವರ್ ಅಕ್ಸೆಂಟ್ ಅನ್ನು ನೀಡಲಾಗಿದೆ. ಎಲ್ಲಾ ಪ್ರಯಾಣಿಕರಿಗೆ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, 60:40 ಸ್ಪ್ಲಿಟ್-ಫೋಲ್ಡಿಂಗ್ ಮಾಡಬಹುದಾದ ಹಿಂಬದಿಯ ಸೀಟ್ ಗಳು, ಸ್ಟೋರೇಜ್ ನೊಂದಿಗೆ ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಮತ್ತು ಹಿಂಭಾಗದ ಸೀಟ್ ಗಳಿಗೆ 2-ಸ್ಟೆಪ್ ರಿಕ್ಲೈನಿಂಗ್ ಫಂಕ್ಷನ್ ಕೂಡ ನೀಡಲಾಗಿದೆ. ಆದರೆ, ತನ್ನ S(O) ವೇರಿಯಂಟ್ ನಲ್ಲಿ ಲಭ್ಯವಿರುವ ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟನ್ನು ವೆನ್ಯೂ ಎಕ್ಸಿಕ್ಯೂಟಿವ್ ನಲ್ಲಿ ನೀಡಲಾಗಿಲ್ಲ.
ಫೀಚರ್ ಗಳ ವಿಷಯಕ್ಕೆ ಬಂದರೆ, ವೆನ್ಯೂ ಎಕ್ಸಿಕ್ಯುಟಿವ್ 8-ಇಂಚಿನ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಕ್ರೂಸ್ ಕಂಟ್ರೋಲ್‌ಗಳು, ಹಿಂಬದಿಯ ವೆಂಟ್ ಗಳೊಂದಿಗೆ ಮ್ಯಾನುಯಲ್ AC ಮತ್ತು ವಾಷರ್‌ನೊಂದಿಗೆ ಹಿಂಭಾಗದ ವೈಪರ್ ಅನ್ನು ಪಡೆಯುತ್ತದೆ.
ವೆನ್ಯೂ ಎಕ್ಸಿಕ್ಯೂಟಿವ್‌ನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ನೀಡಲಾಗಿದೆ.
ಇದನ್ನು ಕೂಡ ಓದಿ: ಈ ಏಪ್ರಿಲ್‌ನಲ್ಲಿ ಹ್ಯುಂಡೈ SUV ಗಾಗಿ ನೀವು ಎಷ್ಟು ಸಮಯ ಕಾಯಬೇಕು
ಹುಂಡೈ ವೆನ್ಯೂ ಎಕ್ಸಿಕ್ಯೂಟಿವ್ ಎಂಜಿನ್
ಹೊಸ ವೆನ್ಯೂ ಎಕ್ಸಿಕ್ಯುಟಿವ್ ವೇರಿಯಂಟ್ ಕೇವಲ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (120 PS/172 Nm) ಅನ್ನು ಮಾತ್ರ ಪಡೆಯುತ್ತದೆ. S(O) ವೇರಿಯಂಟ್, 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಕೂಡ ಪಡೆಯುತ್ತದೆ.
ಹ್ಯುಂಡೈ ತನ್ನ ಸಬ್‌ಕಾಂಪ್ಯಾಕ್ಟ್ SUV ಅನ್ನು ಎರಡು ಇತರ ಎಂಜಿನ್ ಆಯ್ಕೆಗಳೊಂದಿಗೆ ಕೂಡ ನೀಡುತ್ತಿದೆ: 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ (N/A) ಪೆಟ್ರೋಲ್ ಎಂಜಿನ್ (83 PS/114 Nm) ಮತ್ತು 1.5-ಲೀಟರ್ ಡೀಸೆಲ್ ಯೂನಿಟ್ (116 PS/250 Nm). ಮೊದಲನೆಯ ವರ್ಷನ್ 5-ಸ್ಪೀಡ್ MT ಪಡೆಯುತ್ತದೆ, ಎರಡನೆಯ ವರ್ಷನ್ ಅನ್ನು 6-ಸ್ಪೀಡ್ MT ಯೊಂದಿಗೆ ಬರುತ್ತದೆ.
ಇದನ್ನು ಕೂಡ ಓದಿ: ವೀಕ್ಷಿಸಿ: ಬೇಸಿಗೆಯಲ್ಲಿ ನಿಮ್ಮ ಕಾರಿನ ಟೈರ್ ಪ್ರೆಶರ್ ಅನ್ನು ಸರಿಯಾದ ಮಟ್ಟದಲ್ಲಿ ಏಕೆ ಕಾಪಾಡಿಕೊಳ್ಳಬೇಕು
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ವೆನ್ಯೂ ಎಕ್ಸಿಕ್ಯೂಟಿವ್ ಬೆಲೆಯು ರೂ. 10 ಲಕ್ಷ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ). ಈ ಹ್ಯುಂಡೈ ಸಬ್-4m SUV ಯು ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಮಾರುತಿ ಬ್ರೆಝಾ, ಮಹೀಂದ್ರಾ XUV300, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ:ಹ್ಯುಂಡೈ ವೆನ್ಯೂ ಆನ್ ರೋಡ್ ಬೆಲೆ