• English
    • Login / Register

    ಹ್ಯುಂಡೈ ವೆರ್ನಾ ಬೆಲೆಯಲ್ಲಿ ಹೆಚ್ಚಳ, ಈಗ ಹಿಂಭಾಗದ ಸ್ಪಾಯ್ಲರ್ ಮತ್ತು ಹೊಸ ಕಲರ್‌ನೊಂದಿಗೆ ಲಭ್ಯ

    ಹುಂಡೈ ವೆರ್ನಾ ಗಾಗಿ dipan ಮೂಲಕ ನವೆಂಬರ್ 05, 2024 07:29 pm ರಂದು ಪ್ರಕಟಿಸಲಾಗಿದೆ

    • 100 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹ್ಯುಂಡೈ ವೆರ್ನಾದ ಬೇಸ್-ಸ್ಪೆಕ್ EX ವೇರಿಯಂಟ್‌ಗೆ ಮಾತ್ರ ಬೆಲೆ ಏರಿಕೆಯನ್ನು ಮಾಡಲಾಗಿಲ್ಲ

    Hyundai Verna prices hiked by Rs 6,000

    ಭಾರತದಲ್ಲಿನ ಅತ್ಯಂತ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ಒಂದಾದ ಹ್ಯುಂಡೈ ವೆರ್ನಾ ಇದೀಗ ಇನ್ನಷ್ಟು ದುಬಾರಿಯಾಗಿದೆ. ಬೆಲೆ ಹೆಚ್ಚಳದ ಜೊತೆಗೆ, ಹ್ಯುಂಡೈ ವೆರ್ನಾ ಈಗ ಹೊಸ ಅಮೆಜಾನ್ ಗ್ರೇ ಕಲರ್‌ನಲ್ಲಿ ಸಿಗಲಿದೆ ಮತ್ತು ಸ್ಪೋರ್ಟಿಯರ್ ಲುಕ್ ಅನ್ನು ನೀಡಲು ಹಿಂಭಾಗದ ಸ್ಪಾಯ್ಲರ್ ಅನ್ನು ಸೇರಿಸಲಾಗಿದೆ. ಬನ್ನಿ, 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರುವ ವೇರಿಯಂಟ್‌ನೊಂದಿಗೆ ಪ್ರಾರಂಭಿಸುವ ಮೂಲಕ ಹ್ಯುಂಡೈ ವೆರ್ನಾದ ಹೊಸ ಬೆಲೆಗಳನ್ನು ನಾವು ನೋಡೋಣ:

     ವೇರಿಯಂಟ್

     ಹೊಸ ಬೆಲೆ

     ಹಳೆಯ ಬೆಲೆ

     ವ್ಯತ್ಯಾಸ

    EX MT

     ರೂ. 11 ಲಕ್ಷ

     ರೂ. 11 ಲಕ್ಷ

     ಯಾವುದೇ ವ್ಯತ್ಯಾಸವಿಲ್ಲ

    S MT

     ರೂ. 12.05 ಲಕ್ಷ

     ರೂ. 11.99 ಲಕ್ಷ

     ರೂ. 6,000

    SX MT

     ರೂ. 13.08 ಲಕ್ಷ

     ರೂ. 13.02 ಲಕ್ಷ

     ರೂ. 6,000

    SX CVT

     ರೂ. 14.33 ಲಕ್ಷ

     ರೂ. 14.27 ಲಕ್ಷ

     ರೂ. 6,000

    SX(O) MT

     ರೂ. 14.76 ಲಕ್ಷ

     ರೂ. 14.70 ಲಕ್ಷ

     ರೂ. 6,000

    SX(O) CVT

     ರೂ. 16.29 ಲಕ್ಷ

     ರೂ. 16.23 ಲಕ್ಷ

     ರೂ. 6,000

     ಬೇಸ್-ಸ್ಪೆಕ್ EX ವೇರಿಯಂಟ್ ಅನ್ನು ಹೊರತುಪಡಿಸಿ, ಎಲ್ಲಾ ಇತರ ವೇರಿಯಂಟ್‌ಗಳಿಗೆ ರೂ 6,000 ಹೆಚ್ಚಿಸಲಾಗಿದೆ. ಬನ್ನಿ, ಈಗ ನಾವು 1.5-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯಂಟ್‌ಗಳ ಬೆಲೆ ಏರಿಕೆಯ ಬಗ್ಗೆ ನೋಡೋಣ:

     ವೇರಿಯಂಟ್

     ಹೊಸ ಬೆಲೆ

     ಹಳೆಯ ಬೆಲೆ

     ವ್ಯತ್ಯಾಸ

     SX ಟರ್ಬೊ MT

     ರೂ. 14.93 ಲಕ್ಷ

     ರೂ. 14.87 ಲಕ್ಷ

     ರೂ. 6,000

     SX ಟರ್ಬೊ MT ಡ್ಯುಯಲ್ ಟೋನ್ 

    ರೂ. 14.93 ಲಕ್ಷ

     ರೂ. 14.87 ಲಕ್ಷ

     ರೂ. 6,000

     SX ಟರ್ಬೊ DCT

     ರೂ. 16.18 ಲಕ್ಷ

     ರೂ. 16.12 ಲಕ್ಷ

     ರೂ. 6,000

     SX ಟರ್ಬೊ DCT ಡ್ಯುಯಲ್ ಟೋನ್

     ರೂ. 16.18 ಲಕ್ಷ

     ರೂ. 16.12 ಲಕ್ಷ

     ರೂ. 6,000

     SX(O) ಟರ್ಬೊ MT

     ರೂ. 16.09 ಲಕ್ಷ

     ರೂ. 16.03 ಲಕ್ಷ

     ರೂ. 6,000

     SX(O) ಟರ್ಬೊ ಡ್ಯುಯಲ್ ಟೋನ್

     ರೂ. 16.09 ಲಕ್ಷ

     ರೂ. 16.03 ಲಕ್ಷ

     ರೂ. 6,000

     SX(O) ಟರ್ಬೊ DCT

     ರೂ. 17.48 ಲಕ್ಷ

     ರೂ. 17.42 ಲಕ್ಷ

     ರೂ. 6,000

     SX(O) ಟರ್ಬೊ DCT ಡ್ಯುಯಲ್ ಟೋನ್

     ರೂ. 17.48 ಲಕ್ಷ

     ರೂ. 17.42 ಲಕ್ಷ

     ರೂ. 6,000

     ಈ ವೇರಿಯಂಟ್‌ಗಳು ಸಹ ಅವುಗಳ ಬೆಲೆಗಳಲ್ಲಿ ಇದೇ ರೀತಿಯ ಹೆಚ್ಚಳವನ್ನು ಕಂಡಿವೆ. ಹುಂಡೈ ವೆರ್ನಾಗೆ ಹೊಸ ಕಲರ್ ಥೀಮ್ ಮತ್ತು ಹಿಂಭಾಗದ ಸ್ಪಾಯ್ಲರ್ ಅನ್ನು ಹೊರತುಪಡಿಸಿ ಬೇರೆ ಯಾವುದೇ ಅಪ್ಡೇಟ್ ಅನ್ನು ನೀಡಲಾಗಿಲ್ಲ. 

     ಇದನ್ನು ಕೂಡ ಓದಿ: ರೂ 15 ಲಕ್ಷದೊಳಗೆ ಸಿಗುವ ವೆಂಟಿಲೇಟೆಡ್ ಸೀಟ್‌ಗಳನ್ನು ಹೊಂದಿರುವ ಅತ್ಯಂತ ಕೈಗೆಟುಕುವ ಬೆಲೆಯ ಕಾರುಗಳ ಪಟ್ಟಿ ಇಲ್ಲಿದೆ

    ಹ್ಯುಂಡೈ ವೆರ್ನಾ: ಒಂದು ಸಣ್ಣ ಪರಿಚಯ

    2024 Hyundai Verna

    ಪ್ರಸ್ತುತ ಅದರ ಐದನೇ ಜನರೇಷನ್‌ನಲ್ಲಿ ಇರುವ ಹ್ಯುಂಡೈ ವೆರ್ನಾವನ್ನು ಆಲ್-LED ಲೈಟಿಂಗ್ ಸೆಟಪ್, 16-ಇಂಚಿನ ಅಲೊಯ್ ವೀಲ್ಸ್ ಮತ್ತು ಹೊಸ ಟೈಲ್‌ಗೇಟ್-ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ನೀಡಲಾಗುತ್ತದೆ. ಇದು ಹೊಸ ಸಿಂಗಲ್-ಟೋನ್ ಅಮೆಜಾನ್ ಗ್ರೇ ಕಲರ್ ಸೇರಿದಂತೆ ಎಂಟು ಕಲರ್ ಥೀಮ್‌ಗಳಲ್ಲಿ ಲಭ್ಯವಿದೆ.

    Hyundai Verna interior

     ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್-ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ (10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ ಸೇರಿದೆ). ಇದು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, 64-ಕಲರ್ ಆಂಬಿಯೆಂಟ್ ಲೈಟಿಂಗ್, ಸಿಂಗಲ್-ಪೇನ್ ಸನ್‌ರೂಫ್, ಏರ್ ಪ್ಯೂರಿಫೈಯರ್ ಮತ್ತು ವೆಂಟಿಲೇಟೆಡ್ ಮತ್ತು ಹೀಟೆಡ್ ಫ್ರಂಟ್ ಸೀಟುಗಳನ್ನು ಕೂಡ ಪಡೆಯುತ್ತದೆ.

     ಸುರಕ್ಷತೆಯ ದೃಷ್ಟಿಯಿಂದ, ಇದು ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ ಮತ್ತು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ನಂತಹ ಫೀಚರ್‌ಗಳೊಂದಿಗೆ ಬರುತ್ತದೆ. ಇದು ಫಾರ್ವರ್ಡ್-ಕೊಲಿಷನ್ ವಾರ್ನಿಂಗ್ ಮತ್ತು ಬ್ಲೈಂಡ್-ಸ್ಪಾಟ್ ಅಲರ್ಟ್‌ನಂತಹ ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಹೊಂದಿದೆ.

    ಹ್ಯುಂಡೈ ವೆರ್ನಾ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS/253 Nm) ಮತ್ತು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಯೂನಿಟ್ (115 PS/144 Nm) ಸೇರಿದಂತೆ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡಿಸಿಟಿಯೊಂದಿಗೆ ಜೋಡಿಸಲಾಗಿದೆ, ಮತ್ತು ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

    ಹ್ಯುಂಡೈ ವೆರ್ನಾ: ಪ್ರತಿಸ್ಪರ್ಧಿಗಳು

    Hyundai Verna

     ಹ್ಯುಂಡೈ ವೆರ್ನಾ ಹೋಂಡಾ ಸಿಟಿ, ಮಾರುತಿ ಸಿಯಾಜ್, ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾಗೆ ಪ್ರತಿಸ್ಪರ್ಧಿಯಾಗಿದೆ.

     ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು  ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

     ಇನ್ನಷ್ಟು ಓದಿ: ವೆರ್ನಾ ಆನ್ ರೋಡ್ ಬೆಲೆ

    was this article helpful ?

    Write your Comment on Hyundai ವೆರ್ನಾ

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಸೆಡಾನ್‌ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience