ಇಂಡಿಯಾ-ಸ್ಪೆಕ್ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ವರ್ಸಸ್ ಇಂಟರ್ನ್ಯಾಷನಲ್ ಕ್ರೆಟಾ ಫೇಸ್‌ಲಿಫ್ಟ್: ಏನೇನು ವ್ಯತ್ಯಾಸಗಳಿವೆ?
ಹುಂಡೈ ಕ್ರೆಟಾ 2020-2024 ಗಾಗಿ sonny ಮೂಲಕ ಜನವರಿ 11, 2024 06:35 pm ರಂದು ಪ್ರಕಟಿಸಲಾಗಿದೆ
- 168 Views
- ಕಾಮೆಂಟ್ ಅನ್ನು ಬರೆಯಿರಿ
ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಮಾಡಿದಂತೆ ಹುಂಡೈ ಭಾರತದಲ್ಲಿ ಕ್ರೆಟಾವನ್ನು ಅಪ್ಡೇಟ್ ಮಾಡಲಿಲ್ಲ, ಇದಕ್ಕೆ ಕಾರಣಗಳಿವೆ ಮತ್ತು ಆ ಕಾರಣಗಳು ಏನು ಎಂದು ತಿಳಿಯಲು ಮುಂದೆ ಓದಿ
ಇಂಡಿಯಾ-ಸ್ಪೆಕ್ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಅನ್ನು ಜನವರಿ 16 ರಂದು ಬೆಲೆಯನ್ನು ಬಹಿರಂಗಗೊಳಿಸುವ ಮೊದಲು ಅಧಿಕೃತವಾಗಿ ಪೂರ್ಣ ವಿವರಗಳೊಂದಿಗೆ ಅನಾವರಣಗೊಳಿಸಲಾಗಿದೆ. ಆದರೆ ಜಾಗತಿಕ ಮರುಕಟ್ಟೆಗಳಾದ ಇಂಡೋನೇಷ್ಯಾ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ಎರಡನೇ ಜನರೇಷನ್ ನ ಕ್ರೆಟಾ ಫೇಸ್ಲಿಫ್ಟ್ ಅನ್ನು ಈಗಾಗಲೇ ನೀಡಲಾಗಿದೆ. SUV ಯ ಎರಡು ವರ್ಷನ್ ಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ನೋಡೋಣ:
ಮುಂಭಾಗದ ಡಿಸೈನ್
ಇತರ ಮಾರುಕಟ್ಟೆಗಳಲ್ಲಿ ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಪ್ಯಾರಾಮೆಟ್ರಿಕ್ ಜ್ಯುವೆಲ್ LED ಲೈಟಿಂಗ್ನೊಂದಿಗೆ ಟಕ್ಸನ್ನಿಂದ ಸ್ಫೂರ್ತಿ ಪಡೆದ ಫಾಸಿಯಾವನ್ನು ಹೊಂದಿದೆ. ಆದರೆ, ಹೊಸ ಇಂಡಿಯಾ-ಸ್ಪೆಕ್ ಕ್ರೆಟಾವು ಗ್ರಿಲ್ನಲ್ಲಿ ಬಾಕ್ಸರ್ ಡಿಸೈನ್ ಅನ್ನು ಹೊಂದಿದೆ ಮತ್ತು ಬಾನೆಟ್ ನಷ್ಟು ಅಗಲವಾಗಿರುವ ಹೊಸ LED DRLಗಳನ್ನು ತಲೆಕೆಳಗಾದ ಎಲ್-ಆಕಾರದ ಲೈಟಿಂಗ್ ಎಲಿಮೆಂಟ್ ನೊಂದಿಗೆ ನೀಡಲಾಗಿದೆ.
ಎರಡೂ ವರ್ಷನ್ ಗಳು ಒಂದೇ ರೀತಿಯ ಲಂಬವಾಗಿ ನೀಡಲಾಗಿರುವ LED ಹೆಡ್ಲೈಟ್ಗಳನ್ನು ಪಡೆಯುತ್ತವೆ, ಆದರೆ ಇಂಡಿಯಾ-ಸ್ಪೆಕ್ ಕ್ರೆಟಾವು ಹೌಸಿಂಗ್ ಮತ್ತು ಮುಂಭಾಗದ ಬಂಪರ್ಗಾಗಿ ಬುಚ್ ಸ್ಟೈಲಿಂಗ್ ಅನ್ನು ಹೊಂದಿದೆ.
ಹಿಂಭಾಗದ ಪ್ರೊಫೈಲ್
ಹ್ಯುಂಡೈ ತನ್ನ ಮುಂಭಾಗದ ಡಿಸೈನ್ ಗೆ ಸರಿಸಾಟಿಯಾಗಿಸಲು ಭಾರತಕ್ಕಾಗಿ ಕ್ರೆಟಾ ಫೇಸ್ಲಿಫ್ಟ್ನ ಹಿಂಭಾಗದ ಶೈಲಿಯನ್ನು ಕೂಡ ಅಪ್ಡೇಟ್ ಮಾಡಿದೆ. ಇದು ಈಗ ಹೊಸ LED DRL ಗಳ ಲೈಟ್ ಸಿಗ್ನೇಚರ್ಗೆ ಮ್ಯಾಚ್ ಆಗುವ ಕನೆಕ್ಟೆಡ್ LED ಟೈಲ್ ಲ್ಯಾಂಪ್ ಸೆಟಪ್ ಅನ್ನು ಪಡೆಯುತ್ತದೆ, ಜೊತೆಗೆ ಹೊಸ ಬಂಪರ್ನಲ್ಲಿ ಪ್ರಮುಖವಾಗಿರುವ ದೊಡ್ಡ ಗಾತ್ರದ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಕೂಡ ಪಡೆಯುತ್ತದೆ. ಹಾಗೆ ನೋಡಿದರೆ, ಇತರ ಮಾರುಕಟ್ಟೆಗಳಲ್ಲಿ ಅಪ್ಡೇಟ್ ಆಗಿರುವ ಕ್ರೆಟಾವನ್ನು ಪ್ರೀ-ಫೇಸ್ಲಿಫ್ಟ್ ಮಾಡೆಲ್ ಗೆ ಹೋಲಿಸಿದರೆ ಹಿಂಭಾಗಕ್ಕೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.
ಸೈಡ್ ಪ್ರೊಫೈಲ್
ಹುಂಡೈ ಕ್ರೆಟಾದ ಸೈಡ್ ಪ್ರೊಫೈಲ್ ಯಾವುದೇ ಮಾರುಕಟ್ಟೆಯಲ್ಲಿ ಕೂಡ ಫೇಸ್ಲಿಫ್ಟ್ನೊಂದಿಗೆ ಬದಲಾವಣೆಯನ್ನು ಪಡೆದಿಲ್ಲ. ಆದರೆ, ಪ್ರತಿ ಪ್ರದೇಶಗಳಲ್ಲಿ ಅಲಾಯ್ ವೀಲ್ ಗಳಿಗೆ ತನ್ನದೇ ಆದ ಡಿಸೈನ್ ಅನ್ನು ಪಡೆಯುತ್ತದೆ.
ಇಂಟೀರಿಯರ್
ರೀಡಿಸೈನ್ ನ ಬಗ್ಗೆ ಸುಳಿವನ್ನು ನೀಡಲಾಗಿತ್ತು, ಹಾಗಾಗಿ ಭಾರತಕ್ಕೆ ಬಂದಿರುವ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಹೆಚ್ಚು ಸಮಗ್ರವಾಗಿದೆ, ಆದ್ದರಿಂದ ತಡವಾಗಿ ಮಾರುಕಟ್ಟೆಗೆ ಬಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ, ಕಾಂಪ್ಯಾಕ್ಟ್ SUV ಇನ್ನೂ ಹಳೆ ಮಾಡೆಲ್ ನ ಡ್ಯಾಶ್ಬೋರ್ಡ್ ಡಿಸೈನ್ ನೊಂದಿಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ನಲ್ಲಿ 7-ಇಂಚಿನ TFT ಜೊತೆಗೆ ಮುಂದುವರಿಸಲಾಗಿದೆ. ಆದರೆ, ಇಂಡಿಯಾ-ಸ್ಪೆಕ್ ಕ್ರೆಟಾ ಇನ್ಫೋಟೈನ್ಮೆಂಟ್ ಮತ್ತು ಡ್ರೈವರ್ ಡಿಸ್ಪ್ಲೇಗಾಗಿ ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಸ್ಕ್ರೀನ್ಗಳನ್ನು ಪಡೆಯುತ್ತದೆ, ಜೊತೆಗೆ ಅಪ್ಡೇಟ್ ಆಗಿರುವ ಡ್ಯಾಶ್ಬೋರ್ಡ್ನಲ್ಲಿ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ.
ಆದರೆ, ಸೀಟ್ ಗಳ ನಡುವಿನ ಕೆಳಮಟ್ಟದ ಸೆಂಟ್ರಲ್ ಕನ್ಸೋಲ್ ಡಿಸೈನ್ ಎರಡೂ ವರ್ಷನ್ ಗಳಲ್ಲಿ ಯಾವುದೇ ಬದಲಾವಣೆಯನ್ನು ಪಡೆದಿಲ್ಲ. ಬೇರೆ ಬೇರೆ ಮಾರುಕಟ್ಟೆಗಳು ವಿಭಿನ್ನ ಕ್ಯಾಬಿನ್ ಥೀಮ್ಗಳನ್ನು ಪಡೆಯುತ್ತವೆ, ಇದು ಬಿಳಿ ಅಪ್ಹೋಲಿಸ್ಟ್ರೀಯೊಂದಿಗೆ ಆಲ್ ಬ್ಲಾಕ್ ಅಥವಾ ಡ್ಯುಯಲ್-ಟೋನ್ ಇರಲಿದೆ.
ಪವರ್‌ಟ್ರೇನ್ ಗಳು
ಬಹುಶಃ, ಬೇರೆ ಕಾರಿಗೆ ಹೋಲಿಸಿದರೆ ಹ್ಯುಂಡೈ ಕ್ರೆಟಾಗೆ ಇರುವ ಹೆಚ್ಚು ಮಾರುಕಟ್ಟೆ- ನೋಡುವ ವ್ಯತ್ಯಾಸವೆಂದರೆ ಎಂಜಿನ್ಗಳ ಆಯ್ಕೆಯಾಗಿದೆ. ಕೆಲವು ಮಾರುಕಟ್ಟೆಗಳಲ್ಲಿ ಇದು ಕೇವಲ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತವೆ, ಬೇರೆ ಕಡೆ 1-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ನ ಆಯ್ಕೆಯೊಂದಿಗೆ ಲಭ್ಯವಿದೆ. ಆದರೆ, ಭಾರತವು ಮೂರು 1.5-ಲೀಟರ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ: ನ್ಯಾಚುರಲಿ ಆಸ್ಪಿರೇಟೆಡ್, ಟರ್ಬೋಚಾರ್ಜ್ಡ್ ಮತ್ತು ಡೀಸೆಲ್.
ಸಂಬಂಧಿಸಿದ ಲೇಖನ: ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ವೇರಿಯಂಟ್ ಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಬಹಿರಂಗಪಡಿಸಲಾಗಿದೆ
ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಜನವರಿ 16 ರಂದು 11 ಲಕ್ಷ ರೂಪಾಯಿಗಳ ನಿರೀಕ್ಷಿತ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಟೊಯೊಟಾ ಹೈರ್ಡರ್, ಫೋಕ್ಸ್ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್ ಮತ್ತು ಸಿಟ್ರೋನ್ C3 ಏರ್ಕ್ರಾಸ್ಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಕ್ರೆಟಾ ಆಟೋಮ್ಯಾಟಿಕ್
0 out of 0 found this helpful