RWD ಥಾರ್ ನ ಆರಂಭಿಕ ಬೆಳೆಯನ್ನು ನಿಗದಿಪಡಿಸಿದ ಮಹೀಂದ್ರಾ: SUV ಬೆಲೆಗಳು ಈಗ ರೂ 55,500ಗಳಷ್ಟು ತುಟ್ಟಿ
ಈ ಆಫ್‌ರೋಡರ್‌ನ 4WD ವೇರಿಯೆಂಟ್‌ಗಳು ಈಗ ಏಕರೂಪವಾಗಿ ರೂ 28,200 ರಷ್ಟು ಬೆಲೆ ಹೆಚ್ಚಳವನ್ನು ಕಂಡಿದೆ.
- ಈ SUV ಯ ಎಲ್ಲಾ ವೇರಿಯೆಂಟ್‌ಗಳು ಬೆಲೆ ಹೆಚ್ಚಳವನ್ನು ಕಂಡಿದ್ದು, ಪೆಟ್ರೋಲ್ ಆಟೋಮ್ಯಾಟಿಕ್ LX RWD ವೇರಿಯೆಂಟ್ ಮಾತ್ರ ಇದಕ್ಕೆ ಹೊರತಾಗಿದೆ.
- RWD ಥಾರ್‌ನ ಡೀಸೆಲ್ ವೇರಿಯೆಂಟ್‌ಗಳು ಅತ್ಯಧಿಕ ಅಂದರೆ ರೂ 55,500 ನಷ್ಟು ಬೆಲೆ ಹೆಚ್ಚಳವನ್ನು ಹೊಂದಿದೆ.
- ಥಾರ್ ಈ ಮೂರು ಇಂಜಿನ್ ಆಯ್ಕೆಗಳನ್ನು ಹೊಂದಿದೆ: 2-ಲೀಟರ್ ಟರ್ಬೋ-ಪೆಟ್ರೋಲ್, 2.2-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಡೀಸೆಲ್(RWD ಮಾತ್ರ).
- ಇದರ ಬೆಲೆಯನ್ನು ರೂ 10.55 ಲಕ್ಷದಿಂದ ರೂ 16.77 ಲಕ್ಷದ ತನಕ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ.
BS6 ಹಂತ ಎರಡು ಮಾನದಂಡಗಳ ಹಿನ್ನಲೆಯಲ್ಲಿ ಬೆಲೆ ಹೆಚ್ಚಳವು ಗ್ರಾಹಕರನ್ನು ಎಲ್ಲಾ ರೀತಿಯಿಂದಲೂ ಕಂಗೆಡಿಸಿದ್ದು, ಈ ಸಂಕಷ್ಟದೊಂದಿಗೆ ಮಹೀಂದ್ರಾ ಥಾರ್ ಇನ್ನಷ್ಟು ತುಟ್ಟಿಯಾಗಿದೆ! ತನ್ನ ಬೊಲೆರೋ ಶ್ರೇಣಿಯ ಬೆಲೆ ಹೆಚ್ಚಳವನ್ನು ಮಾರ್ಚ್‌ನಲ್ಲಿ ಮಾಡಿದ ನಂತರ ಈ ಕಾರುತಯಾರಕರ ಸಂಸ್ಥೆ ತನ್ನ ಲೈಫ್‌ಸ್ಟೈಲ್ SUVಯ ಬೆಲೆಗಳನ್ನು ನವೀಕರಿಸಿದ್ದು, ಈ ಹಿನ್ನಲೆಯಲ್ಲಿ ತನ್ನ ಇತ್ತೀಚೆಗೆ ಪರಿಚಯಿಸಲಾದ ರಿಯರ್-ವ್ಹೀಲ್ ಡ್ರೈವ್ (RWD) ವೇರಿಯೆಂಟ್‌ಗಳ ಆರಂಭಿಕ ಬೆಲೆಗಳಿಗೆ ಅಂತ್ಯಹೇಳಿದೆ.
ಇದನ್ನೂ ಓದಿ: ನೀವು ಇನ್ನು ಮುಂದೆ ಖರೀದಿಸಲಾಗುವುದಿಲ್ಲ ಮಹೀಂದ್ರಾ KUV100 NXT
ಹೊಸ ವೇರಿಯೆಂಟ್‌ವಾರು ಬೆಲೆಗಳನ್ನು ನೋಡೋಣ :
RWD ವೇರಿಯೆಂಟ್‌ಗಳು |
|||
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
AX(O) ಡೀಸೆಲ್ MT |
ರೂ 10 ಲಕ್ಷ |
ರೂ 10.55 lakh |
ರೂ 55,500 |
LX ಡೀಸೆಲ್ MT |
ರೂ 11.50 lakh |
ರೂ 12.05 lakh |
ರೂ 55,500 |
LX ಪೆಟ್ರೋಲ್ AT |
ರೂ 13.50 lakh |
ರೂ 13.50 lakh |
0 |
4WD ವೇರಿಯೆಂಟ್‌ಗಳು |
|||
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
AX (O) CT ಪೆಟ್ರೋಲ್ MT |
ರೂ 13.59 lakh |
ರೂ 13.87 lakh |
ರೂ 28,200 |
LX HT ಪೆಟ್ರೋಲ್ MT |
ರೂ 14.28 lakh |
ರೂ 14.56 lakh |
ರೂ 28,200 |
LX CT ಪೆಟ್ರೋಲ್ AT |
ರೂ 15.73 lakh |
ರೂ 16.01 lakh |
ರೂ 28,200 |
LX HT ಪೆಟ್ರೋಲ್ AT |
ರೂ 15.82 lakh |
ರೂ 16.10 lakh |
ರೂ 28,200 |
AX (O) CT ಡೀಸೆಲ್ MT |
ರೂ 14.16 lakh |
ರೂ 14.44 lakh |
ರೂ 28,200 |
AX (O) HT ಡೀಸೆಲ್ MT |
ರೂ 14.21 lakh |
ರೂ 14.49 lakh |
ರೂ 28,200 |
LX CT ಡೀಸೆಲ್ MT |
ರೂ 14.97 lakh |
ರೂ 15.25 lakh |
ರೂ 28,200 |
LX HT ಡೀಸೆಲ್ MT |
ರೂ 15.06 lakh |
ರೂ 15.35 lakh |
ರೂ 28,200 |
LX CT ಡೀಸೆಲ್ AT |
ರೂ 16.40 lakh |
ರೂ 16.68 lakh |
ರೂ 28,200 |
LX HT ಡೀಸೆಲ್ AT |
ರೂ 16.49 lakh |
ರೂ 16.77 lakh |
ರೂ 28,200 |
* ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರ
ಈ SUV ಯ RWD ವೇರಿಯೆಂಟ್‌ಗಳ ಬೆಲೆಯನ್ನು ರೂ 55,500ದಷ್ಟು ಹೆಚ್ಚಿಸಲಾಗಿದ್ದು, ಇದಕ್ಕೆ ಹೊರತಾಗಿ LX ಪೆಟ್ರೋಲ್ ಆಟೋಮ್ಯಾಟಿಕ್ ವೇರಿಯೆಂಟ್‌ನ ಬೆಲೆ ಯಾವುದೇ ಬದಲಾವಣೆಯನ್ನು ಕಂಡಿಲ್ಲ. ಇದು ಜನವರಿಯಲ್ಲಿ ಬಿಡುಗಡೆಯಾದ ಈ ವೇರಿಯೆಂಟ್‌ಗಳ ಆರಂಭಿಕ ಬೆಲೆಗಳಿಗೆ ಅಂತ್ಯಹೇಳಿದೆ. 4-ವ್ಹೀಲ್ ಡ್ರೈವ್ (4WD) ವೇರಿಯಂಟ್‌ಗಳೂ ಎಲ್ಲಾ ವೇರಿಯೆಂಟ್‌ಗಳಾದ್ಯಂತ ರೂ 28,200ಗಳ ಏಕರೂಪ ಬೆಲೆ ಹೆಚ್ಚಳವನ್ನು ಕಂಡಿದೆ.
ಥಾರ್‌ನ LX ಡೀಸೆಲ್ ಮ್ಯಾನುವಲ್ RWD ವೇರಿಯೆಂಟ್ ಕೇವಲ ಒಂದು ತಿಂಗಳ ಹಿಂದೆ ತನ್ನ ಮೊದಲ ಬೆಲೆ ಹೆಚ್ಚಳವನ್ನು ಕಂಡಿದ್ದು ರೂ 50,000ದಷ್ಟು ತುಟ್ಟಿಯಾಗಿದೆ. ಇದನ್ನು ನಾವು ಪ್ರಸ್ತುತ ಬೆಲೆ ಹೆಚ್ಚಳಕ್ಕೆ ಸೇರಿಸಿದಾಗ ಬಿಡುಗಡೆಯಾದಲ್ಲಿಂದ ಇದು ರೂ 1.05 ಲಕ್ಷದಷ್ಟು ಹೆಚ್ಚು ಏರಿಕೆಯಾಗಿದೆ.
ಥಾರ್‌ನ ಪವರ್‌ಟ್ರೇನ್‌ಗಳು
ಮಹೀಂದ್ರಾ ಥಾರ್ ಮೂರು ಇಂಜಿನ್ ಆಯ್ಕೆಗಳನ್ನು ಹೊಂದಿದೆ: 4WD ವೇರಿಯೆಂಟ್‌ಗಳು 2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (150PS ಮತ್ತು 320Nm) ಹಾಗೂ 2.2-ಲೀಟರ್ ಡೀಸೆಲ್ ಇಂಜಿನ್‌ನೊಂದಿಗೆ (130PS ಮತ್ತು 300Nm) ಬರುತ್ತದೆ. ಎರಡೂ ಇಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಅನ್ನು ಪಡೆದಿದೆ.
ಇದನ್ನೂ ಓದಿ: CD ನುಡಿ: ಮಹೀಂದ್ರಾ ಥಾರ್ ಇನ್ನೂ ಯಾಕೆ ಯಾವುದೇ ಹೊಸ ಎಡಿಷನ್‌ಗಳನ್ನು ಪಡೆದಿಲ್ಲ?
ಈ RWD ವೇರಿಯೆಂಟ್‌ಗಳು ಇನ್ನೊಂದೆಡೆಯಲ್ಲಿ, 4WD ವೇರಿಯೆಂಟ್‌ಗಳಂತೆಯೇ 2-ಲೀಟರ್ ಪೆಟ್ರೋಲ್ ಇಂಜಿನ್‌ಗಳನ್ನು ಹೊಂದಿವೆ ಆದರೆ, ಇದರಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಮಾತ್ರ ಇರುತ್ತದೆ, ಹಾಗೂ ಇದು ಇನ್ನೂ ಸಣ್ಣದಾದ 1.5-ಲೀಟರ್ ಡೀಸೆಲ್ ಇಂಜಿನ್ ಅನ್ನೂ ಹೊಂದಿದ್ದು (118PS ಮತ್ತು 300Nm) ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ಜೋಡಿಸಲಾಗಿದೆ.
ಫೀಚರ್‌ಗಳು
ಈ ಥಾರ್ ಏಳು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಅನ್ನು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ ಪಡೆದಿದ್ದು, ವಿದ್ಯುತ್ ನಿಯಂತ್ರಣದ AC, LED DRLಗಳೊಂದಿಗಿನ ಹ್ಯಾಲೋಜನ್ ಹೆಡ್‌ಲೈಟ್‌ಗಳು, ತೊಳೆಯಬಹುದಾದ ಇಂಟೀರಿಯರ್ ಹಾಸು ಮತ್ತು ಪ್ರತ್ಯೇಕಿಸಬಹುದಾದ ರೂಫ್ ಪ್ಯಾನಲ್‌ನೊಂದಿಗೆ ಸಜ್ಜುಗೊಂಡಿದೆ.
ಇದನ್ನೂ ಓದಿ: 4 IPL T20 ತಂಡಗಳೊಂದಿಗೆ ಅಧಿಕೃತ SUV ಪಾಲುದಾರರಾಗಿ ಮಹೀಂದ್ರಾ ಸಹಯೋಗ
ಸುರಕ್ಷತೆಯ ವಿಚಾರದಲ್ಲಿ, ಈ ಆಫ್-ರೋಡರ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜತೆಗಿನ ABS, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್(ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಮತ್ತು ಡಿಸೆಂಡ್ ಕಂಟ್ರೋಲ್ ಹಾಗೂ ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟು ಬೆಲ್ಟ್‌ಗಳನ್ನು ಹೊಂದಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಪರಿಷ್ಕೃತ ಬೆಲೆ ಹೆಚ್ಚಳದೊಂದಿಗೆ, ಈ ಹೊಸ ಥಾರ್‌ನ ಬೆಲೆಯನ್ನು ಈಗ ರೂ 10.55 ಲಕ್ಷ ಮತ್ತು ರೂ 16.77 ಲಕ್ಷದ (ಎಕ್ಸ್-ಶೋರೂಂ) ನಡುವೆ ನಿಗದಿಪಡಿಸಲಾಗಿದೆ. ಈ 3-ಡೋರ್, 4-ಸೀಟರ್ ಲೈಫ್‌ಸ್ಟೈಲ್ SUV ಫೋರ್ಸ್ ಗುರ್ಖಾ ಮತ್ತು ಮುಂಬರುವ ಮಾರುತಿ ಜಿಮ್ನಿಗೆ ಪ್ರತಿಸ್ಪರ್ಧಿಯಾಗಿದೆ. ಆದರೆ ಇದನ್ನು ಕಾಂಪ್ಯಾಕ್ಟ್ SUVಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಕ್, ಫೋಕ್ಸ್‌ವಾಗನ್ ಟೈಗನ್, ಟೊಯೋಟಾ ಹೈರೈಡರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾಗೆ ಸಾಹಸಿ ಪರ್ಯಾಯವೆಂದು ಪರಿಗಣಿಸಲಾಗಿದೆ.
ಇನ್ನಷ್ಟು ಓದಿ : ಮಹೀಂದ್ರಾ ಥಾರ್ ಡೀಸೆಲ್