ಸೆಲ್ಟೋಸ್ ಮತ್ತು ಸೋನೆಟ್‌ಗಾಗಿ ಡಿಸೇಲ್-iMT ಪವರ್‌ಟ್ರೇನ್ ಪರಿಚಯಿಸುತ್ತಿರುವ ಕಿಯಾ
ಕಿಯಾ ಸೆಲ್ಟೋಸ್ 2019-2023 ಗಾಗಿ ansh ಮೂಲಕ ಮಾರ್ಚ್ 15, 2023 04:16 pm ರಂದು ಪ್ ರಕಟಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
ಇತ್ತೀಚಿನ ಎಮಿಶನ್ ಮತ್ತು ಇಂಧನ ಅನುಸರಣೆ ನಿಯಮಗಳ ಪ್ರಕಾರ ಎಂಜಿನ್‌ಗಳನ್ನು ನವೀಕರಿಸಬೇಕಾಗಿರುವುದರಿಂದ ಎರಡೂ ಎಸ್‌ಯುವಿಗಳು 2023 ಕ್ಕೆ ಹೆಚ್ಚಿನ ಬೆಲೆಯನ್ನು ಪಡೆಯುತ್ತಿವೆ.
-
ಸೆಲ್ಟೋಸ್ ಈಗ ರೂ. 10.89 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯನ್ನು ಹೊಂದಿದೆ.
-
ಸೋನೆಟ್ ಈಗ ರೂ. 7.79 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯನ್ನು ಹೊಂದಿದೆ).
-
ಎರಡೂ ಎಸ್‌ಯುವಿಗಳ ಡಿಸೇಲ್ ವೇರಿಯೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಬದಲಿಗೆ iMT ಅನ್ನು ಪಡೆಯುತ್ತಿವೆ.
-
ಸೆಲ್ಟೋಸ್‌ನಲ್ಲಿ ಟರ್ಬೋ-ಪೆಟ್ರೋಲ್ ಆಯ್ಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಕಾರೆನ್ಸ್ ಅನ್ನು ನವೀಕರಿಸಿದ ನಂತರ ಕಿಯಾ ಅದೇ ಡಿಸೇಲ್-iMT ಪವರ್‌ಟ್ರೇನ್ ಅನ್ನು ಸೆಲ್ಟೋಸ್ ಮತ್ತು ಸೋನೆಟ್ ಅನ್ನು ಒಳಗೊಂಡಂತೆ ತನ್ನ ಎಸ್‌ಯುವಿಗೆ ನೀಡಲು ತಯಾರಾಗಿದೆ. ಎರಡೂ ನವೀಕೃತ ಪವರ್‌ಟ್ರೇನ್‌ಗಳು ಬೆಲೆ ಎರಿಕೆಯನ್ನು ಕಾಣುತ್ತವೆ. ಹೊಸ ಬೆಲೆಗಳು ಮತ್ತು ಬದಲಾವಣೆಗಳನ್ನು ಈ ಕೆಳಗೆ ಪರಿಶೀಲಿಸಿ:
ಸೆಲ್ಟೋಸ್
ಸೆಲ್ಟೋಸ್ ಪೆಟ್ರೋಲ್ |
|||
ವೇರಿಯೆಂಟ್ |
ಹಳೆ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
HTE 1.5 MT |
ರೂ. 10.69 ಲಕ್ಷ |
ರೂ. 10.89 ಲಕ್ಷ |
+ ರೂ. 20,000 |
HTK 1.5 MT |
ರೂ. 11,75 ಲಕ್ಷ |
ರೂ 12.00 ಲಕ್ಷ |
+ ರೂ 25,000 |
HTK+ 1.5 MT |
ರೂ 12.85 ಲಕ್ಷ |
ರೂ. 13.10 ಲಕ್ಷ |
+ ರೂ 25,000 |
HTK+ 1.5 iMT |
ರೂ 13.25 ಲಕ್ಷ |
ಸ್ಥಗಿತಗೊಳಿಸಲಾಗಿದೆ |
- |
HTX 1.5 MT |
ರೂ 14.65 ಲಕ್ಷ |
ರೂ 14.90 ಲಕ್ಷ |
+ ರೂ 25,000 |
HTX 1.5 IVT |
ರೂ 15.65 ಲಕ್ಷ |
ರೂ 15.90 ಲಕ್ಷ |
+ ರೂ 25,000 |
GTX (O) 1.4 MT |
ರೂ 16.45 ಲಕ್ಷ |
ಸ್ಥಗಿತಗೊಳಿಸಲಾಗಿದೆ |
- |
GTX+ 1.4 MT |
ರೂ 17.39 ಲಕ್ಷ |
ಸ್ಥಗಿತಗೊಳಿಸಲಾಗಿದೆ |
- |
GTX+ 1.4 DCT |
ರೂ 18.39 ಲಕ್ಷ |
ಸ್ಥಗಿತಗೊಳಿಸಲಾಗಿದೆ |
- |
X Line 1.4 DCT |
ರೂ 18.69 ಲಕ್ಷ |
ಸ್ಥಗಿತಗೊಳಿಸಲಾಗಿದೆ |
- |
ಸೆಲ್ಟೋಸ್ 1.5-ಲೀಟರ್ ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳು ರೂ. 25,000 ಗಳಷ್ಟು ಏರಿಕೆಯಾಗಿದ್ದು, ಬೇಸ್-ಸ್ಪೆಕ್ HTE ಮ್ಯಾನ್ಯುವಲ್ ವೇರಿಯೆಂಟ್ ಅತಿ ಕಡಿಮೆ, ಅಂದರೆ ರೂ. 20,000 ಗಳಷ್ಟು ಏರಿಕೆಯನ್ನು ಕಂಡಿದೆ. ಈ ಎಸ್‌ಯುವಿ ಈಗ ರೂ. 10.89 ಲಕ್ಷ (ಎಕ್ಸ್-ಶೋರೂಮ್) ದಿಂದ ಆರಂಭವಾಗುತ್ತದೆ.
ಪವರ್‌ಟ್ರೇನ್‌ನಲ್ಲಿ ಬದಲಾವಣೆ
1.4-ಲೀಟರ್ ಟರ್ಬೋ-ಪೆಟ್ರೋಲ್ GT Line ವೇರಿಯೆಂಟ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಪವರ್‌ಟ್ರೇನ್ ಅನ್ನು ಅದೇ 1.5-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್‌ನಿಂದ ಕಾರೆನ್ಸ್‌ಗೆ ಸೇರಿಸುವ ನೀರೀಕ್ಷೆಯಿದೆ.
ಇದನ್ನೂ ಓದಿ: ಹೆಚ್ಚು ಶಕ್ತಿಶಾಲಿ ಮತ್ತು ಫೀಚರ್-ಭರಿತ ಕಿಯಾ ಕಾರೆನ್ಸ್ ಬಿಡುಗಡೆ!
ಕಿಯಾe 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ iMT (ಕ್ಲಚ್ ಪೆಡಲ್ ರಹಿತ ಮ್ಯಾನ್ಯುವಲ್) ಅನ್ನು ತೆಗೆದುಹಾಕಿದೆ ಮತ್ತು ಈಗ ಅದನ್ನು 1.5-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ನೀಡುತ್ತಿದ್ದು ಅಲ್ಲಿ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಬದಲಾಯಿಸಿದೆ. ನವೀಕೃತ RDE-ಅನುಸರಣಾ ಡಿಸೇಲ್ ಎಂಜಿನ್ ಇನ್ನೂ ಆರು-ಸ್ಪೀಡ್ ಟಾರ್ಕ್ ಪರಿವರ್ತಕ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುತ್ತದೆ.
ಸೆಲ್ಟೋಸ್ ಡಿಸೇಲ್ |
|||
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
HTE 1.5 |
ರೂ. 11.89 ಲಕ್ಷ |
ರೂ 12.39 ಲಕ್ಷ |
+ ರೂ 50,000 |
HTK 1.5 |
ರೂ 13.19 ಲಕ್ಷ |
ರೂ 13.69 ಲಕ್ಷ |
+ ರೂ 50,000 |
HTK+ 1.5 |
ರೂ 14.79 ಲಕ್ಷ |
ರೂ 15.29 ಲಕ್ಷ |
+ ರೂ 50,000 |
HTX 1.5 |
ರೂ 16.09 ಲಕ್ಷ |
ರೂ 16.59 ಲಕ್ಷ |
+ ರೂ 50,000 |
HTX+ 1.5 |
ರೂ 17.09 ಲಕ್ಷ |
ರೂ 17.59 ಲಕ್ಷ |
+ ರೂ 50,000 |
HTX 1.5 AT |
ರೂ 17.09 ಲಕ್ಷ |
ರೂ 17.59 ಲಕ್ಷ |
+ ರೂ 50,000 |
GTX+ 1.5 AT |
ರೂ 18.85 ಲಕ್ಷ |
ರೂ 19.35 ಲಕ್ಷ |
+ ರೂ 50,000 |
X Line 1.5 AT |
ರೂ 19.15 ಲಕ್ಷ |
ರೂ 19.65 ಲಕ್ಷ |
+ ರೂ 50,000 |
ಸೆಲ್ಟೋಸ್‌ನ ಎಲ್ಲಾ ಡಿಸೇಲ್ ವೇರಿಯೆಂಟ್‌ಗಳು ರೂ.50,000 ಗಳ ಏಕರೂಪದ ಬೆಲೆ ಏರಿಕೆಯನ್ನು ಕಂಡಿವೆ. ಟಾಪ್-ಸ್ಪೆಕ್ X Line ವೇರಿಯೆಂಟ್ ಈಗ ಡಿಸೇಲ್-ಸ್ವಯಂಚಾಲಿತ ಆಯ್ಕೆಯೊಂದಿಗೆ ಬರುತ್ತಿದ್ದು ಇದರ ಬೆಲೆಯನ್ನು ರೂ.19.65 ಲಕ್ಷಗಳಷ್ಟು (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ.
ಸೋನೆಟ್
ಸೋನೆಟ್ 1.2-ಲೀಟರ್ ಪೆಟ್ರೋಲ್ |
|||
ವೇರಿಯೆಂಟ್ |
ಹಳೆ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
HTE MT |
ರೂ 7.69 ಲಕ್ಷ |
ರೂ 7.79 ಲಕ್ಷ |
+ರೂ. 10,000 |
HTK MT |
ರೂ 8.45 ಲಕ್ಷ |
ರೂ 8.70 ಲಕ್ಷ |
+ ರೂ 25,000 |
HTK+ MT |
ರೂ 9.39 ಲಕ್ಷ |
ರೂ 9.64 ಲಕ್ಷ |
+ ರೂ 25,000 |
ಸೋನೆಟ್‌ನ 1.2-ಲೀಟರ್ ಪೆಟ್ರೋಲ್ ವೇರಿಯೆಂಟ್‌ಗಳು ರೂ. 25,000 ಗಳಷ್ಟು ಬೆಲೆ ಏರಿಕೆಯನ್ನು ಕಂಡಿವೆ. ಪವರ್‌ಟ್ರೇನ್ ಅಲ್ಲಿ ಯಾವುದೇ ವ್ಯತ್ಯಾಸವಿಲ್ಲ ಮತ್ತು 1.2-ಲೀಟರ್ ಯೂನಿಟ್ (83PS/115Nm) ಎಂದಿನಂತೆ ಐದು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತಿದೆ.
ಸೋನೆಟ್ 1.0-ಲೀಟರ್ ಟರ್ಬೋ-ಪೆಟ್ರೋಲ್ |
|||
ವೇರಿಯೆಂಟ್ |
ಹಳೆ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
HTK+ iMT |
ರೂ. 10.24 ಲಕ್ಷ |
ರೂ 10.49 ಲಕ್ಷ |
+ ರೂ 25,000 |
HTX iMT |
ರೂ 11.20 ಲಕ್ಷ |
ರೂ 11.45 ಲಕ್ಷ |
+ ರೂ 25,000 |
HTX+ iMT |
ರೂ 12.50 ಲಕ್ಷ |
ರೂ 12.75 ಲಕ್ಷ |
+ ರೂ 25,000 |
HTX DCT |
ರೂ 11.80 ಲಕ್ಷ |
ರೂ 11.99 ಲಕ್ಷ |
+ ರೂ 19,000 |
GTX+ iMT |
ರೂ 12.84 ಲಕ್ಷ |
ರೂ 13.09 ಲಕ್ಷ |
+ ರೂ 25,000 |
GTX+ DCT |
ರೂ 13.44 ಲಕ್ಷ |
ರೂ 13.69 ಲಕ್ಷ |
+ ರೂ 25,000 |
X-Line DCT |
ರೂ 13.64 ಲಕ್ಷ |
ರೂ 13.89 ಲಕ್ಷ |
+ ರೂ 25,000 |
1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ವೇರಿಯೆಂಟ್‌ಗಳು ರೂ. 25,000 ಬೆಲೆ ಏರಿಕೆಯನ್ನು ಪಡೆದಿದ್ದರೆ, ರೂ.19,000 ಗಳ ಅತಿ ಕಡಿಮೆ ಏರಿಕೆಯನ್ನು HTX DCT ವೇರಿಯೆಂಟ್ ಪಡೆದಿದೆ. ಈ ಪವರ್‌ಟ್ರೇನ್‌ಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಆರು-ಸ್ಪೀಡ್ iMT ಅಥವಾ ಏಳು-ಸ್ಪೀಡ್ DCT ಯೊಂದಿಗೆ ಜೊತೆಯಾಗಿಸಲಾಗಿದ್ದು ಇದು 120PS ಮತ್ತು 172Nm ಅನ್ನು ಬಿಡುಗಡೆಗೊಳಿಸುತ್ತದೆ.
ಇದನ್ನೂ ಓದಿ: ಮಿಲಿಟರಿ, ನೌಕಾಪಡೆ, ಮತ್ತು ವಾಯುಪಡೆಯ ಕ್ಯಾಂಟೀನ್‌ಗಳ ಮೂಲಕ ರಕ್ಷಣಾ ಸಿಬ್ಬಂದಿ ಈಗ ಕಿಯಾ ಕಾರುಗಳನ್ನು ಖರೀದಿಸಬಹುದು
ಸೋನೆಟ್ 1.5-ಲೀಟರ್ ಡಿಸೇಲ್ |
|||
ವೇರಿಯೆಂಟ್ |
ಹಳೆ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
HTE iMT |
ರೂ 9.49 ಲಕ್ಷ |
ರೂ 9.95 ಲಕ್ಷ |
+ರೂ 50,000 |
HTK iMT |
ರೂ 10.19 ಲಕ್ಷ |
ರೂ 10.69 ಲಕ್ಷ |
+ ರೂ 50,000 |
HTK+ iMT |
ರೂ 10.89 ಲಕ್ಷ |
ರೂ 11.39 ಲಕ್ಷ |
+ ರೂ 50,000 |
HTX iMT |
ರೂ 11.75 ಲಕ್ಷ |
ರೂ 12.25 ಲಕ್ಷ |
+ ರೂ 50,000 |
HTX+ iMT |
ರೂ 13.05 ಲಕ್ಷ |
ರೂ 13.55 lakh |
+ ರೂ 50,000 |
GTX+ iMT |
ರೂ 13.39 ಲಕ್ಷ |
ರೂ 13.89 ಲಕ್ಷ |
+ ರೂ 50,000 |
HTK AT |
ರೂ 12.55 ಲಕ್ಷ |
ರೂ 13.05 ಲಕ್ಷ |
+ ರೂ 50,000 |
GTX+ AT |
ರೂ 14.19 ಲಕ್ಷ |
ರೂ 14.69 ಲಕ್ಷ |
+ ರೂ 50,000 |
X-Line AT |
ರೂ 14.39 ಲಕ್ಷ |
ರೂ 14.89 ಲಕ್ಷ |
+ ರೂ 50,000 |
ಸೆಲ್ಟೋಸ್‌ನಂತೆಯೇ, ಸೋನೆಟ್‌ನ ಡಿಸೇಲ್ ವೇರಿಯೆಂಟ್‌ಗಳು ಸಹ ರೂ. 50,000ಗಳ ಏಕರೂಪದ ಬೆಲೆ ಏರಿಕೆಯನ್ನು ಕಂಡಿವೆ. ಟಾಪ್-ಸ್ಪೆಕ್ X Line ವೇರಿಯೆಂಟ್ ಈಗ ರೂ.14.89 ಲಕ್ಷ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿದೆ.
ಇದನ್ನೂ ಓದಿ: 5 ಸೀಟುಗಳ ಆಯ್ಕೆಯನ್ನೂ ಪಡೆಯುತ್ತಿರುವ ಕಿಯಾ ಕಾರೆನ್ಸ್
ಸೆಲ್ಟೋಸ್‌ನಂತೆಯೇ, ಈ ಸೋನೆಟ್‌ನ ಡಿಸೇಲ್ ಮ್ಯಾನ್ಯುವಲ್ ವೇರಿಯೆಂಟ್‌ಗಳನ್ನು ಈಗ ಡಿಸೇಲ್-iMT ಪವರ್‌ಟ್ರೇನ್‌ಗೆ ಬದಲಾಯಿಸಲಾಗಿದೆ. ಈ ಡಿಸೇಲ್ ಯೂನಿಟ್ 116PS ಅನ್ನು ಬಿಡುಗಡೆಗೊಳಿಸುತ್ತದೆ ಮತ್ತು ಇನ್ನೂ ಸಹ ಅದರ ವಿಭಾಗದಲ್ಲಿ ಆರು-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುವ ಏಕೈಕ ವಾಹನವಾಗಿದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಈ ಕಿಯಾ ಸೆಲ್ಟೋಸ್ ಈಗ ರೂ.10.89 ಲಕ್ಷದಿಂದ ರೂ. 19.65 ಲಕ್ಷಗಳವೆರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿದ್ದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಗೆ ಪ್ರತಿಸ್ಪರ್ಧಿಯಾಗಿದೆ. ಕಿಯಾ ಸೋನೆಟ್‌ನ ಹೊಸ ಬೆಲೆಗಳು ರೂ. 7.79 ಲಕ್ಷದಿಂದ ರೂ. 14.89 ಲಕ್ಷಗಳವರೆಗಿದ್ದು (ಎಕ್ಸ್-ಶೋರೂಮ್) ಇದು ಹ್ಯುಂಡೈ ವೆನ್ಯು, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ XUV300 ಜೊತೆಗೆ ಸ್ಪರ್ಧೆಯನ್ನು ಹೊಂದಿದೆ.
ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಕಿಯಾ ಸೆಲ್ಟೋಸ್ ಡಿಸೇಲ್