32,000ದಷ್ಟು ಬುಕಿಂಗ್ ಪಡೆದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್, ಡೆಲಿವರಿಗೆ ಬೇಕು ಗರಿಷ್ಠ 3 ತಿಂಗಳು..!
ಕಿಯಾ ಸೆಲ್ಟೋಸ್ ಗಾಗಿ rohit ಮೂಲಕ ಆಗಸ್ಟ್ 17, 2023 07:21 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಒಟ್ಟು ಬುಂಕಿಂಗ್‌ನ ಶೇಕಡಾ 55 ರಷ್ಟು ಗ್ರಾಹಕರು ಕಿಯಾ ಸೆಲ್ಟೋಸ್‌ನ ಹೈಯರ್-ಸ್ಪೆಕ್ ವೇರಿಯೆಂಟ್ ಗಳನ್ನು (HTX ಮೇಲ್ಪಟ್ಟು) ಬುಕ್ ಮಾಡಿದ್ದಾರೆ.
- ಜುಲೈ 2023ರಲ್ಲಿ ಕಿಯಾ, ಅಪ್‌ಡೇಟ್ ಮಾಡಲಾದ ಸೆಲ್ಟೋಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
-
ಈ SUV ತನ್ನ ಬುಕಿಂಗ್ ಪ್ರಾರಂಭವಾದ ಮೊದಲ ದಿನವೇ ಸುಮಾರು 13,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದಿದೆ.
-
ಪೆವ್‌ಟರ್ ಆಲಿವ್ ಕಲರ್‌ಗೆ ಒಟ್ಟು ಆರ್ಡರ್‌ಗಳ 19 ಪ್ರತಿಶತದಷ್ಟು ಬುಕಿಂಗ್‌ಗಳನ್ನು ಮಾಡಲಾಗಿದೆ.
-
ನವದೆಹಲಿ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಲ್ಲಿ ಇದರ ಕಾಯುವಿಕೆ ಅವಧಿಯು ಮೂರು ತಿಂಗಳ ತನಕ ಇದೆ.
-
ಈ ಸೆಲ್ಟೋಸ್ ಬೆಲೆ ರೂ 10.90 ಲಕ್ಷದಿಂದ ರೂ 20 ಲಕ್ಷದ (ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ತನಕ ನಿಗದಿಪಡಿಸಲಾಗಿದೆ.
ಕಿಯಾ ಸೆಲ್ಟೋಸ್ Seltos ಫೇಸ್‌ಲಿಫ್ಟ್ ಒಂದು ತಿಂಗಳಲ್ಲಿ ಸುಮಾರು 32,000 ಬುಕಿಂಗ್‌ಗಳನ್ನು (ನಿಖರವಾಗಿ ಹೇಳುವುದಾದರೆ 31,716) ಮಾಡಿದೆ. ಈ ಹಿಂದೆ ನವೀಕೃತ SUV ಮೊದಲ ದಿನವೇ 13,424 ಬುಕಿಂಗ್‌ಗಳನ್ನು ಪಡೆದಿದೆ ಎಂದು ವರದಿಯಾಗಿತ್ತು. ಉಲ್ಲೇಖಕ್ಕಾಗಿ, ಪೂರ್ವ ನವೀಕೃತ ಮಾಡೆಲ್ ಮೊದಲ ದಿನ 6,000ಕ್ಕಿಂತ ಹೆಚ್ಚು ಆರ್ಡರ್‌ಗಳನ್ನು ಪಡೆದಿತ್ತು ಮತ್ತು 2019ರ ಅಕ್ಟೋಬರ್ ವೇಳೆಗೆ 50,000 ಬುಕಿಂಗ್ ಗಡಿಯನ್ನು ದಾಟಿತ್ತು.
ತಾಳಿ, ಇನ್ನೂ ಇದೆ
ಈ ಒಟ್ಟು ಬುಕಿಂಗ್‌ಗಳಲ್ಲಿ ಸುಮಾರು 55 ಪ್ರತಿಶತದಷ್ಟು ಹೈಯರ್-ಸ್ಪೆಕ್ HTX ವೇರಿಯೆಂಟ್‌ಗಳಿಗೆ ನೋಂದಾಯಿಸಲಾಗಿದೆ ಎಂದು ಕಿಯಾ ಬಹಿರಂಗಪಡಿಸಿದೆ. SUV’ಯ ಹೊಸ ಭಾರತ-ವಿಶೇಷ ಪೆವ್ಟರ್ ಆಲಿವ್ ಶೇಡ್ ಸಂಚಿತ ಬುಕಿಂಗ್‌ನ ಸುಮಾರು 19 ಪ್ರತಿಶತದಷ್ಟು ಇದೆ ಎಂದು ಈ ಕೊರಿಯಾದ ಕಾರು ತಯಾರಕ ಸಂಸ್ಥೆಯು ಹಂಚಿಕೊಂಡಿದೆ.
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ ಕಿಯಾ ಸೋನೆಟ್ ಫೇಸ್‌ಲಿಫ್ಟ್
ಕೆಲವು ಒಳ್ಳೆಯ ಸುದ್ದಿಗಳು
ನೀವು ನವದೆಹಲಿ, ಬೆಂಗಳೂರು ಮತ್ತು ಚೆನ್ನೈನಂತಹ ಮೆಟ್ರೋ ನಗರವಾಸಿಗಳಾದರೆ, ಎರಡು ತಿಂಗಳ ತನಕ ಕಾಯಬೇಕು. ಮುಂಬೈಯಲ್ಲಿರುವವರು ಈ SUVಯನ್ನು ಕೂಡಲೇ ಮನೆಗೆ ಕೊಂಡೊಯ್ಯಬಹುದು, ಹಾಗೆಯೇ ಲಖನೌನ ನಿವಾಸಿಗಳು ಮೂರು ತಿಂಗಳ ಗರಿಷ್ಠ ಕಾಯುವಿಕೆ ಅವಧಿಯ ನಂತರ ಪಡೆಯಬಹುದು.
ಹೊಸ ಸೆಲ್ಟೋಸ್‌ನ ತ್ವರಿತ ರಿಕ್ಯಾಪ್
ಮಧ್ಯಂತರ ಪರಿಷ್ಕರಣೆಯೊಂದಿಗೆ ಕಿಯಾ ಸೆಲ್ಟೋಸ್ ಅನೇಕ ದೃಶ್ಯ ವರ್ಧನೆಗಳನ್ನು ಪಡೆದಿದ್ದು, ರೆಡನ್ ಫ್ರಂಟ್ ಫೇಸಿಯಾ ಮತ್ತು ಸಂಪರ್ಕಿತ LED ಟೇಲ್‌ಲೈಟ್‌ಗಳನ್ನು ಒಳಗೊಂಡಿದೆ. ಒಳಗಡೆಯಲ್ಲಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಲೇಔಟ್ ಹೊಂದಿದ್ದು, ಎರಡು 10.25-ಇಂಚು ಸ್ಕ್ರೀನ್‌ಗಳು (ಒಂದು ಇನ್ಫೊಟೇನ್‌ಮೆಂಟ್ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ) ಪ್ರಮುಖ ಆಕರ್ಷಣೆಯಾಗಿದೆ.
ಇದರ ಫೀಚರ್‌ಗಳ ಪಟ್ಟಿಯು ದೊಡ್ಡದಾಗಿಯೇ ಇದ್ದು, ವಿಹಂಗಮ ಸನ್‌ರೂಪ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟಡ್ ಮುಂಭಾಗದ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಸುರಕ್ಷತಾ ಫೀಚರ್‌ಗಳು ಆರು ಏರ್ ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು, 360-ಡಿಗ್ರಿ ಕ್ಯಾಮರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಹೊಂದಿದೆ.
ಈ ಸಲ್ಟೋಸ್ ವಿವಿಧ ಶ್ರೇಣಿಯ ಇಂಜಿನ್-ಗೇರ್‌ಬಾಕ್ಸ್ ಸಂಯೋಜನೆಯೊಂದಿಗೂ ಲಭ್ಯವಿದ್ದು, ಅವುಗಳ ವಿವರಗಳು ಈ ಕೆಳಗಿನಂತಿವೆ:
ನಿರ್ದಿಷ್ಠತೆ |
1.5-ಲೀಟರ್ N.A. ಪೆಟ್ರೋಲ್ |
1.5-ಲೀಟರ್ ಟರ್ಬೋ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
115PS |
160PS |
116PS |
ಟಾರ್ಕ್ |
144Nm |
253Nm |
250Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, CVT |
6- ಸ್ಪೀಡ್ iMT, 7- ಸ್ಪೀಡ್ DCT |
6- ಸ್ಪೀಡ್ iMT, 6- ಸ್ಪೀಡ್ AT |
ಕಿಯಾ ಇದರ ಬೆಲೆಯನ್ನು 10.90 ಲಕ್ಷದಿಂದ ರೂ 20 ಲಕ್ಷದ (ಎಕ್ಸ್-ಶೋರೂಂ) ತನಕ ನಿಗದಿಪಡಿಸಿದೆ. ಇದು ಹ್ಯುಂಡೈ ಕ್ರೆಟಾ, ಟೊಯೋಟಾ ಹೈರೈಡರ್, MG ಎಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಕ್, VW ಟೈಗನ್, ಮತ್ತು ಮುಂಬರುವ ಹೋಂಡಾ ಎಲಿವೇಟ್ ಮತ್ತು ಸಿಟ್ರಾನ್ C3 ಏರ್‌ಕ್ರಾಸ್‌ಗೆ ಪೈಪೋಟಿ ನೀಡುತ್ತದೆ.
ಸಂಬಂಧಿತ: ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಡ್ರೈವ್ ಮಾಡಿ ತಿಳಿದುಕೊಳ್ಳಿ 5 ಸಂಗತಿಗಳು
ಇನ್ನಷ್ಟು ಓದಿ : ಕಿಯಾ ಸೆಲ್ಟೋಸ್ ಆನ್‌ರೋಡ್ ಬೆಲೆ
0 out of 0 found this helpful