ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ಯಾಮರಾಕ್ಕೆ ಸಿಕ್ಕ ಕಿಯಾ ಸೋನೆಟ್ ಫೇಸ್‌ಲಿಫ್ಟ್
ಕಿಯಾ ಸೊನೆಟ್ ಗಾಗಿ rohit ಮೂಲಕ ಆಗಸ್ಟ್ 08, 2023 12:52 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಹೊಸ ಸೆಲ್ಟೋಸ್‌ನಿಂದ ಡಿಸೈನ್ ಸ್ಪೂರ್ತಿಯನ್ನು ಪಡೆದುಕೊಂಡಿದೆ ಮತ್ತು ಇದು ಮುಂದಿನ ವರ್ಷಾರಂಭದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ.
-
ಇದು ಕಿಯಾದ ಸಬ್-4m SUVಗೆ ಮೊದಲ ಪ್ರಮುಖ ಅಪ್‌ಡೇಟ್ ಆಗಿರುತ್ತದೆ.
-
ಸ್ಪೈಶಾಟ್‌ಗಳಲ್ಲಿ ಹೊಸ ಅಲಾಯ್ ವ್ಹೀಲ್‌ಗಳು, ಅಪ್‌ಡೇಟ್ ಮಾಡಲಾದ ಮುಂಭಾಗದ ಮತ್ತು ಹಿಂಭಾಗದ ಪ್ರೊಫೈಲ್‌ಗಳು ಮತ್ತು 360-ಡಿಗ್ರಿ ಕ್ಯಾಮರಾ ಹೊಂದಿರುವುದನ್ನು ತೋರಿಸಿದೆ.
-
ಕ್ಯಾಬಿನ್, ಪರಿಷ್ಕೃತ ಅಪ್‌ಹೋಲ್ಸ್‌ಟೆರಿ ಮತ್ತು ಅಪ್‌ಡೇಟ್ ಮಾಡಲಾದ ಸೆಂಟರ್ ಕನ್ಸೋಲ್ ಅನ್ನು ಹೊಂದಿರಬಹುದು.
-
ಹೆಚ್ಚುವರಿ ಫೀಚರ್‌ಗಳು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ADAS ಅನ್ನು ಒಳಗೊಂಡಿರಬಹುದು.
-
ಪವರ್‌ಟ್ರೇನ್‌ಗಳಲ್ಲಿ ಬದಲಾವಣೆ ಇರಲಾರದು; ಈಗಾಗಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ಯೂನಿಟ್‌ಗಳನ್ನೇ ಹೊಂದಿರಬೇಕು.
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಈ ವರ್ಷಾರಂಭದಲ್ಲಿ ತನ್ನ ತವರೂರು ಕೊರಿಯಾದಲ್ಲಿ ಮೊತ್ತ ಮೊದಲ ಬಾರಿಗೆ ಕಾಣಿಸಿಕೊಂಡಿತು. ನಂತರ ಆಗಸ್ಟ್ 2023ರಲ್ಲಿ, ಅಪ್‌ಡೇಟ್ ಮಾಡಲಾದ ಸಬ್-4m SUV ಅನ್ನು ಈಗ ಭಾರತದ ರಸ್ತೆಯಲ್ಲಿ ಗುರುತಿಸಲಾಗಿದೆ. ಕಿಯಾ ಸೋನೆಟ್‌ಗೆ ಇದು ಮೊದಲ ಕೂಲಂಕಷ ಪರೀಕ್ಷೆ ಎಂಬುದು ಇಲ್ಲಿ ಗಮನಾರ್ಹ.
ಫೀಚರ್‌ಗಳ ವಿವರ
ಸ್ಪೈ ಇಮೇಜ್‌ಗಳಲ್ಲಿ, ನಾವು ಸಿಲ್ವರ್ ಸೋನೆಟ್ ಅನ್ನು ಬ್ಲ್ಯಾಕ್ ಮುಚ್ಚಿಕೆಯಲ್ಲಿ ಕಾಣಬಹುದು. ಈ ಮುಚ್ಚಿಕೆಯ ಹೊರತಾಗಿಯೂ, ಕೆಲವು ಹೊಸ ವಿವರಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಇದರಲ್ಲಿ ಹೊಸ LED ಹೆಡ್‌ಲೈಟ್‌ಗಳ ಸೆಟ್‌ಗಳು ಮತ್ತು ಅಪ್‌ಡೇಟ್ ಮಾಡಲಾದ ಅಲಾಯ್ ವ್ಹೀಲ್ ಡಿಸೈನ್ ಒಳಗೊಂಡಿದೆ. ಈ ಪರೀಕ್ಷಾರ್ಥ ಕಾರು ರೆಡ್ ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿದ್ದು, ಇದು ಬಹುಶಃ GT ಲೈನ್ ವೇರಿಯೆಂಟ್ ಇರಬಹುದು ಎಂಬುದನ್ನು ಸೂಚಿಸಿದೆ.
ಹೊಸ ಅಲಾಯ್ ವ್ಹೀಲ್‌ಗಳ ಹೊರತಾಗಿ, ಈ ನವೀಕೃತ ಸೋನೆಟ್ ORVM-ಮೌಂಟ್ ಮಾಡಲಾದ ಸೆಟಪ್ ಜೊತೆಗಿನ 360-ಡಿಗ್ರಿ ಕ್ಯಾಮರಾ ಹೊಂದಿರಬಹುದಾದ ನಿರೀಕ್ಷೆ ಇದೆ. ಇದರ ಪ್ರೊಫೈಲ್‌ನಲ್ಲಿ ಯಾವುದೇ ಇತರ ಬದಲಾವಣೆಗಳು ಇದ್ದಂತೆ ಕಾಣುವುದಿಲ್ಲ. ಹಿಂಭಾಗದಲ್ಲಿ, ಈ SUVಯು ಹೊಸ ಸಲ್ಟೋಸ್‌ನಂತಹ ಸಂಪರ್ಕಿತ ಟೇಲ್‌ಲೈಟ್‌ಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚಿದೆ. ಇದು ದೊಡ್ಡದಾದ ಗ್ರಿಲ್‌ನೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಟ್ವೀಕ್ ಆಗಿದೆ,
ಇದನ್ನೂ ಓದಿ: ಸಬ್-ಕಾಂಪ್ಯಾಕ್ಟ್ SUVನಲ್ಲಿ ವಿಹಂಗಮ ಸನ್‌ರೂಫ್ ಅನ್ನು ಕಾಣಬಹುದೇ?
ಒಳಭಾಗದಲ್ಲೂ ಇರಬಹುದು ಟ್ವೀಕ್‌ಗಳು
ಮಾಹಿತಿಗಾಗಿ ಪ್ರಸ್ತುತ ಸೋನೆಟ್‌ನ ಕ್ಯಾಬಿನ್ ಇಮೇಜ್ ಅನ್ನು ಬಳಸಲಾಗಿದೆ
ಇತ್ತೀಚಿನ ಸ್ಪೈ ಇಮೇಜ್‌ಗಳು ಹೊಸ ಸೋನೆಟ್‌ನ ಅಪ್‌ಡೇಟ್ ಮಾಡಲಾದ ಇಂಟೀರಿಯರ್ ಅನ್ನು ತೋರಿಸದಿದ್ದರೂ, ಕಿಯಾ ಇದಕ್ಕೆ ಹೊಸತನ ನೀಡಿದೆ ಎಂಬುದು ನಮ್ಮ ಭಾವನೆ. ಒಳಭಾಗದಲ್ಲಿನ ಬದಲಾವಣೆಗಳು, ಸೀಟ್ ಅಪ್‌ಹೋಲ್ಸ್‌ಟ್ರಿ ಮತ್ತು ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಅನ್ನು ಒಳಗೊಂಡಿರಬಹುದು. ಇದು 10.25-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಯೂನಿಟ್ ಮತ್ತು ಡಿಜಿಟೈಸ್ ಮಾಡಲಾದ ಡ್ರೈವರ್ ಡಿಸ್‌ಪ್ಲೇಗೆ ಇಂಟಗ್ರೇಟಡ್ ಹೌಂಸಿಗ್ ಅನ್ನು ಈಗಾಗಲೇ ಪಡೆದಿದೆ.
ಉದ್ದವಾಗಿದೆ ಫೀಚರ್‌ಗಳ ಪಟ್ಟಿ
ಹೊಸ ಸ್ಪೈಶಾಟ್‌ಗಳಲ್ಲಿ ಕಂಡಂತಹ 360-ಡಿಗ್ರಿ ಕ್ಯಾಮರಾದ ಹೊರತಾಗಿ ಈ ಅಪ್‌ಡೇಟ್ ಮಾಡಲಾದ ಸೋನೆಟ್ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನೂ (ADAS) ಪಡೆದಿರಬಹುದು. ಪಸ್ತುತ ಇದು ವಾತಾಯನದ ಮುಂಭಾಗದ ಸೀಟುಗಳು, ಪ್ಯಾಡಲ್ ಶಿಫ್ಟರ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್ ಮುಂತಾದ ಫೀಚರ್‌ಗಳನ್ನು ಗಿಲ್ಸ್ ಹೊಂದಿದೆ. ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್(TPMS), ಮತ್ತು ರಿವರ್ಸಿಂಗ್ ಕ್ಯಾಮರಾ ಸುರಕ್ಷತಾ ಕಿಟ್‌ನಲ್ಲಿ ಒಳಗೊಂಡಿದೆ.
ಇಂಜಿನ್ ಅಪ್‌ಡೇಟ್‌ಗಳ ಮಾಹಿತಿ
ಕಿಯಾ ತನ್ನ ಸಬ್-4m SUV ಪವರ್‌ಟ್ರೇನ್ ಆಯ್ಕೆಗಳಿಗೆ ಯಾವುದೇ ಬದಲವಾಣೆಗಳನ್ನು ನೀಡಿದಂತಿಲ್ಲ. ಸದ್ಯಕ್ಕೆ, ಈ ಸೋನೆಟ್ ಕೆಳಗೆ ನೀಡಿರುವ ಇಂಜಿನ್-ಗೇರ್‌ಬಾಕ್ಸ್ ಫೀಚರ್‌ಗಳನ್ನು ಹೊಂದಿರುತ್ತದೆ.
ನಿರ್ದಿಷ್ಟತೆ |
1.2-ಲೀಟರ್ N.A. ಪೆಟ್ರೋಲ್ |
1-ಲೀಟರ್ ಟರ್ಬೋ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83PS |
120PS |
116PS |
ಟಾರ್ಕ್ |
115Nm |
172Nm |
250Nm |
ಟ್ರಾನ್ಸ್‌ಮಿಶನ್ |
5-ಸ್ಪೀಡ್ MT |
6- ಸ್ಪೀಡ್ iMT, 7- ಸ್ಪೀಡ್ DCT |
6- ಸ್ಪೀಡ್ iMT, 6- ಸ್ಪೀಡ್ AT |
ಬಿಡುಗಡೆ ಮತ್ತು ಬೆಲೆ
ಈ ಕಾರುತಯಾರಕ ಸಂಸ್ಥೆಯು ನವೀಕೃತ ಸೋನೆಟ್ ಅನ್ನು ಭಾರತದಲ್ಲಿ ಬಹುಶಃ ಮುಂದಿನ ವರ್ಷದ ಪ್ರಾರಂಭದಲ್ಲಿ ಆರಂಭಿಕ ಬೆಲೆ ರೂ 8 ಲಕ್ಷಕ್ಕೆ (ಎಕ್ಸ್-ಶೋರೂಂ)ಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ SUV ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ರೆನಾಲ್ಟ್ ಕೈಗರ್, ಟಾಟಾ ನೆಕ್ಸಾನ್, ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ.
ಇನ್ನಷ್ಟು ಓದಿ : ಕಿಯಾ ಸೋನೆಟ್ ಆಟೋಮ್ಯಾಟಿಕ್