Login or Register ಅತ್ಯುತ್ತಮ CarDekho experience ಗೆ
Login

2 ತಿಂಗಳುಗಳಲ್ಲಿ 50,000 ಬುಕ್ಕಿಂಗ್‌ನ ಮೂಲಕ ದಾಖಲೆ ಬರೆದ Kia Seltos Facelift

published on ಸೆಪ್ಟೆಂಬರ್ 21, 2023 06:12 pm by shreyash for ಕಿಯಾ ಸೆಲ್ಟೋಸ್

ಈ ಹೊಸ ವೇರಿಯೆಂಟ್‌ಗಳೊಂದಿಗೆ ಟಾಪ್-ಸ್ಪೆಕ್ ಟ್ರಿಮ್‌ಗಳಿಗೆ ಹೋಲಿಸಿದರೆ ನೀವು ರೂ.40,000 ವರೆಗೆ ಉಳಿಸಬಹುದು. ಆದಾಗ್ಯೂ ಫೀಚರ್‌ಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಂಶಗಳನ್ನು ಪರಿಗಣಿಸಬೇಕು.

  • 2023 ಸೆಲ್ಟೋಸ್ (HTX ಮೇಲ್ಪಟ್ಟ) ಹೆಚ್ಚಿನ ವೇರಿಯೆಂಟ್‌ಗಳು ಒಟ್ಟು ಬುಕ್ಕಿಂಗ್‌ಗಳಲ್ಲಿ 77 ಪ್ರತಿಶತ ಕೊಡುಗೆ ನೀಡುತ್ತದೆ.
  • 47 ಪ್ರತಿಶತ ಬುಕ್ಕಿಂಗ್‌ಗಳು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS)ಯನ್ನು ಹೊಂದಿರುವ ವೇರಿಯೆಂಟ್‌ಗಳು ಪಡೆದಿವೆ.
  • ಕಿಯಾ ಈ ಹಬ್ಬದ ಸೀಸನ್‌ನಲ್ಲಿ ಸೆಲ್ಟೋಸ್‌ನ ಹೆಚ್ಚು ಕೈಗೆಟಕುವ ADAS GTX+ (S) ಮತ್ತು X-Line (S) ವೇರಿಯೆಂಟ್‌ಗಳನ್ನು ಪರಿಚಯಿಸಿದೆ.
  • ಈ ಹೊಸ ವೇರಿಯೆಂಟ್‌ಗಳು ಪೆಟ್ರೋಲ್‌ನಲ್ಲಿ 7-ಸ್ಪೀಡ್ DCT ಮತ್ತು ಡಿಸೇಲ್‌ನಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ

ಈ ವರ್ಷ ಜುಲೈನಲ್ಲಿ ಬಿಡುಗಡೆಯಾದ ನವೀಕೃತ ಕಿಯಾ ಸೆಲ್ಟೋಸ್, ಕೇವಲ ಎರಡು ತಿಂಗಳುಗಳಲ್ಲಿ 50000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಂಡು ಮಾರುಕಟ್ಟೆಯ ಗಮನವನ್ನು ಮತ್ತೆ ತನ್ನತ್ತ ಸೆಳೆದಿದೆ. ಕಾರು ತಯಾರಕರ ಪ್ರಕಾರ, 2023 ಸೆಲ್ಟೋಸ್‌ಗಾಗಿ ಪ್ರತಿದಿನ 806 ಕಾಯ್ದಿರಿಸುವಿಕೆಯನ್ನು ಮಾಡಲಾಗುತ್ತಿದೆ.

77 ಪ್ರತಿಶತದಷ್ಟು ಬುಕ್ಕಿಂಗ್‌ಗಳು ಸೆಲ್ಟೋಸ್‌ನ ಹೈಯರ್ ವೇರಿಯೆಂಟ್‌ಗಳಿಗೆ (HTX ವೇರಿಯೆಂಟ್ ಮೇಲ್ಪಟ್ಟು) ಆಗಿರುವುದರಿಂದ ಮತ್ತು 47 ಪ್ರತಿಶತದಷ್ಟು ಬುಕ್ಕಿಂಗ್‌ಗಳು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಹೊಂದಿರುವ ಸುಸಜ್ಜಿತ ವೇರಿಯೆಂಟ್‌ಗಳಿಗೆ ಮಾಡಲಾಗಿರುವುದರಿಂದ ಕಿಯಾ ಎರಡು ಹೊಸ ಸುಸಜ್ಜಿತ ವೇರಿಯೆಂಟ್‌ಗಳನ್ನು ಪರಿಚಯಿಸಿದೆ: GTX+ (S) ಮತ್ತು X-Line (S). ಅವುಗಳ ಬೆಲೆಗಳನ್ನು ಕೆಳಗೆ ನೀಡಲಾಗಿದೆ.

ಹೊಸ ವೇರಿಯೆಂಟ್‌ಗಳು

ಅಸ್ತಿತ್ವದಲ್ಲಿರುವ GTX+ ಮತ್ತು X-Line ವೇರಿಯೆಂಟ್‌ಗಳು

ವ್ಯತ್ಯಾಸ

GTX+ (S) 1.5 ಟರ್ಬೋ-ಪೆಟ್ರೋಲ್ 7-ಸ್ಪೀಡ್ DCT - ರೂ 19.40 ಲಕ್ಷ

GTX+ 1.5 ಟರ್ಬೋ-ಪೆಟ್ರೋಲ್ 7-ಸ್ಪೀಡ್ DCT - ರೂ 19.80 ಲಕ್ಷ

- ರೂ 40,000

X-Line (S) 1.5 ಟರ್ಬೋ-ಪೆಟ್ರೋಲ್ 7-ಸ್ಪೀಡ್ DCT - ರೂ 19.60 ಲಕ್ಷ

X-Line 1.5 ಟರ್ಬೋ-ಪೆಟ್ರೋಲ್ 7-ಸ್ಪೀಡ್ DCT - ರೂ 20 ಲಕ್ಷ

- ರೂ 40,000

GTX+ (S) 1.5 ಡಿಸೇಲ್ 6-ಸ್ಪೀಡ್ AT - ರೂ 19.40 lakh

GTX+ 1.5 ಡಿಸೇಲ್ 6- ಸ್ಪೀಡ್ AT - ರೂ 19.80 lakh

- ರೂ 40,000

X-Line (S) 1.5 ಡಿಸೇಲ್ 6- ಸ್ಪೀಡ್ AT - ರೂ 19.60 ಲಕ್ಷ

X-Line 1.5 ಡಿಸೇಲ್ 6- ಸ್ಪೀಡ್ AT- ರೂ 20 ಲಕ್ಷ

- ರೂ 40,000

GTX+ (S) ಸ್ಲಾಟ್‌ಗಳು GTX+ ಗಿಂತ ಕೆಳಗಿನ ಹಂತದಲ್ಲಿದ್ದರೆ, X-Line (S) ಟಾಪ್ ಸ್ಪೆಕ್ X-Line ನಂತರ ಇರುತ್ತದೆ. ನೀವು ಕೇವಲ ರಿವರ್ಸಿಂಗ್ ಕ್ಯಾಮರಾಕ್ಕಾಗಿ 360 ಡಿಗ್ರಿ ಕ್ಯಾಮರಾವನ್ನು ವ್ಯಾಪಾರ ಮಾಡಲು ಸಿದ್ಧರಿದ್ದರೆ ಮತ್ತು 8-ಸ್ಪೀಪರ್ ಬೋಸ್ ಆಡಿಯೋ ಸಿಸ್ಟಮ್ ಅನ್‌ಬ್ರಾಂಡೆಡ್ 6-ಸ್ಪೀಕರ್ ಸೆಟಪ್‌ಗಾಗಿ, ಈ ವೇರಿಯೆಂಟ್‌ಗಳನ್ನು ಆಯ್ದುಕೊಳ್ಳುವುದರಿಂದ ನೀವು ರೂ 40,000 ಗಳನ್ನು ಉಳಿಸಬಹುದು.

GTX+ ಮತ್ತು X-Lineನ ಹೊಸ (S) ವೇರಿಯೆಂಟ್‌ಗಳು ಒಳಗೊಂಡಿರುವ ಇತರ ಫೀಚರ್‌ಗಳೆಂದರೆ, 10.25 ಇಂಚಿನ ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್, ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಎಸಿ, ಏರ್ ಪ್ಯೂರಿಫೈಯರ್, 8 ವಿಧದಲ್ಲಿ ಹೊಂದಿಸಬಹುದಾದ ಡ್ರೈವರ್ ಸೀಟ್, ಆ್ಯಬಿಯೆಂಟ್ ಲೈಟಿಂಗ್ ಮತ್ತು ವಿಹಂಗಮ ಸನ್‌ರೂಫ್‌ಗಳಾಗಿವೆ. ಹೊಸ ವೇರಿಯೆಂಟ್‌ಗಳು ಸುರಕ್ಷತಾ ತಂತ್ರಜ್ಞಾನದ ವಿಷಯದಲ್ಲಿ ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗೆ ಹೋಲುತ್ತವೆ. ಲೇನ್-ಕೀಪ್ ಅಸಿಸ್ಟ್, ಮುಂಭಾಗದ ಘರ್ಷಣೆ ವಾರ್ನಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ADAS ಫೀಚರ್‌ಗಳ ಜೊತೆಗೆ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್ ಕಂಟ್ರೋಲ್ (HAC) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ.

ಇದನ್ನೂ ಓದಿ: ಸನ್‌ರೂಫ್ ಹೊಂದಿರುವ ಕಿಯಾ ಸೊನೆಟ್ ಈಗ ಕೈಗೆಟಕುವ ಬೆಲೆಯಲ್ಲಿ

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಕಿಯಾ ಸೆಲ್ಟೋಸ್‌ನ ಈ ಹೊಸ ವೇರಿಯೆಂಟ್‌ಗಳನ್ನು 1.5-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್‌ಗಳೊಂದಿಗೆ ನೀಡುತ್ತಿದ್ದು ಅನುಕ್ರಮವಾಗಿ ಅವುಗಳು 7-ಸ್ಪೀಡ್ DCT ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯುತ್ತವೆ. ಈ ಎರಡೂ ಎಂಜಿನ್‌ಗಳು ಐಚ್ಛಿಕ 6-ಸ್ಪೀಡ್ iMT(ಕ್ಲಚ್‌ರಹಿತ ಮ್ಯಾನ್ಯುವಲ್) ಟ್ರಾನ್ಸ್‌ಮಿಷನ್‌ನೊಂದಿಗೆ ಸೆಲ್ಟೋಸ್‌ನ ಲೋವರ್ ಮತ್ತು ಮಿಡ್-ಸ್ಪೆಕ್ ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ.

ಕಾಯುವಿಕೆಯ ಅವಧಿಯು ಕಡಿಮೆಯಾಗುವ ನಿರೀಕ್ಷೆ

ಈ ಹೊಸ ವೇರಿಯೆಂಟ್‌ಗಳ ಪರಿಚಯದೊಂದಿಗೆ, ಸೆಲ್ಟೋಸ್‌ಗಾಗಿ ಕಾಯುವಿಕೆಯ ಅವಧಿಯು 15 ರಿಂದ 16 ವಾರಗಳಿಂದ 7 ರಿಂದ 9 ವಾರಗಳವರೆಗೆ ಇಳಿಯಬಹುದು ಎಂದು ಕಿಯಾ ನಿರೀಕ್ಷಿಸುತ್ತಿದೆ. ಇಲ್ಲಿಯವರೆಗೆ ಸೆಲ್ಟೋಸ್ ಅನ್ನು 2019 ರಲ್ಲಿ ಪರಿಚಯಿಸಿದಾಗಿನಿಂದ ಭಾರತದಲ್ಲಿ 4 ಲಕ್ಷಕ್ಕೂ ಹೆಚ್ಚಿನ ಗ್ರಾಹಕರನ್ನು ತಲುಪಿದೆ.

ಬೆಲೆಯ ರೇಂಜ್ ಮತ್ತು ಪ್ರತಿಸ್ಪರ್ಧಿಗಳು

ಈ ಕಿಯಾ ಸೆಲ್ಟೋಸ್‌ನ ಬೆಲೆಯು ರೂ. 10.90 ಲಕ್ಷದಿಂದ ರೂ 20 ಲಕ್ಷದವರೆಗೆ ನಿಗದಿಪಡಿಸಲಾಗಿದೆ (ಎಕ್ಸ್-ಶೋರೂಮ್ ದೆಹಲಿ). ಇದು ಮಾರುತಿ ಸುಝುಕಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಹ್ಯುಂಡೈ ಕ್ರೆಟಾ, ಮತ್ತು ಎಂಜಿ ಆಸ್ಟರ್‌ಗೆ ಪ್ರಬಲ ಸ್ಪರ್ಧೆಯನ್ನು ಒಡ್ಡುತ್ತದೆ.

ಇನ್ನಷ್ಟು ಇಲ್ಲಿ ಓದಿ : ಕಿಯಾ ಸೆಲ್ಟೋಸ್ ಡಿಸೇಲ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 16 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೆಲ್ಟೋಸ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ