• English
  • Login / Register

ನಿಮಗಾಗಿ 8 ಫೋಟೋಗಳಲ್ಲಿ ತಂದಿದ್ದೇವೆ Kia Sonet Gravity Edition ನ ಸಂಪೂರ್ಣ ಚಿತ್ರಣ

ಕಿಯಾ ಸೊನೆಟ್ ಗಾಗಿ anonymous ಮೂಲಕ ಸೆಪ್ಟೆಂಬರ್ 20, 2024 09:00 pm ರಂದು ಪ್ರಕಟಿಸಲಾಗಿದೆ

  • 44 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಿಡ್-ಸ್ಪೆಕ್ HTK+ ವೇರಿಯಂಟ್ ಅನ್ನು ಆಧರಿಸಿದ ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ 16-ಇಂಚಿನ ಅಲೊಯ್ ವೀಲ್ ಗಳು, ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್, ಹಿಂಭಾಗದ ಸ್ಪಾಯ್ಲರ್, ಲೆಥೆರೆಟ್ ಕವರ್‌ ಮತ್ತು ಇನ್ನೂ ಹಲವಾರು ಹೆಚ್ಚುವರಿ ಫೀಚರ್ ಗಳನ್ನು ಪಡೆಯುತ್ತದೆ

Kia Sonet Gravity Edition

ಕಿಯಾ ಸೋನೆಟ್ ಇದೀಗ ತನ್ನ ಲೈನ್‌ಅಪ್‌ನಲ್ಲಿ ಹೊಸ ಎಡಿಷನ್ ಅನ್ನು ಲಾಂಚ್ ಮಾಡಿದೆ ಮತ್ತು ಇದು ಮಿಡ್-ಸ್ಪೆಕ್ HTK+ ವೇರಿಯಂಟ್ ಅನ್ನು ಆಧರಿಸಿದೆ. ಇದು ಒರಿಜಿನಲ್ ವರ್ಷನ್ ಗಿಂತ ಹೆಚ್ಚಿನ ಫೀಚರ್ ಗಳನ್ನು ನೀಡುತ್ತಿದೆ, ಹಾಗಾಗಿ ಇದು ಖರೀದಿಸುವವರಿಗೆ ಒಂದು ಒಳ್ಳೆಯ ಆಯ್ಕೆಯಾಗಿದೆ. ಸೋನೆಟ್ ಗ್ರಾವಿಟಿ ಎಡಿಷನ್ ನ ಫೋಟೋಗಳನ್ನು ನಾವು ಪಡೆದುಕೊಂಡಿದ್ದೇವೆ. ಶೋರೂಮ್ ನಲ್ಲಿ ಇದು ಹೇಗೆ ಕಾಣುತ್ತಿದೆ ಎಂದು ಇದರ 8 ಫೋಟೋಗಳಲ್ಲಿ ನೋಡೋಣ:

ಎಕ್ಸ್‌ಟಿರಿಯರ್‌

 ಮುಂಭಾಗದಲ್ಲಿ, ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ ಅದರ ರೆಗ್ಯುಲರ್ ವರ್ಷನ್ ನಂತೆಯೇ ಕಾಣುತ್ತದೆ. ಇದು ಒರಿಜಿನಲ್ ವರ್ಷನ್ ನಲ್ಲಿರುವ LED DRL ಗಳು ಮತ್ತು ಫಾಗ್ ಲ್ಯಾಂಪ್ ಗಳೊಂದಿಗೆ LED ಹೆಡ್ ಲೈಟ್ ಗಳನ್ನು ಉಳಿಸಿಕೊಂಡಿದೆ.

Kia Sonet Gravity Edition

 ಸೈಡ್ ಗಳಲ್ಲಿ, ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ ಮುಂಭಾಗದ ಬಾಗಿಲುಗಳಲ್ಲಿ 'ಗ್ರಾವಿಟಿ' ಬ್ಯಾಡ್ಜ್ ಅನ್ನು ಹೊಂದಿದೆ. ಇದು ಈ ಮಾಡೆಲ್ ಅನ್ನು ರೆಗ್ಯುಲರ್ ಮಾಡೆಲ್ ಗೆ ಹೋಲಿಸಿದರೆ ಎದ್ದು ಕಾಣುವಂತೆ ಮಾಡುತ್ತದೆ.

Kia Sonet Gravity Edition

ಹಿಂಭಾಗದಲ್ಲಿ, ಸೋನೆಟ್ ಗ್ರಾವಿಟಿ ಎಡಿಷನ್ ಸ್ಪಾಯ್ಲರ್ ಅನ್ನು ಪಡೆಯುತ್ತದೆ, ಮತ್ತು ಇದು ಈ ಮಾಡೆಲ್ ಗೆ ಸ್ಪೋರ್ಟಿಯರ್ ಲುಕ್ ಅನ್ನು ನೀಡುತ್ತದೆ. SUV ಯ ಹಿಂಭಾಗದಲ್ಲಿ ಬೇರೆ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

Kia Sonet Gravity Edition

ಇಂಟಿರಿಯರ್‌

 ಒಳಭಾಗದಲ್ಲಿ, ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ ಬ್ಲೂ ಮತ್ತು ಬ್ಲಾಕ್ ಥೀಮ್ ಅನ್ನು ಪಡೆಯುತ್ತದೆ. ಸೀಟ್ ಗಳು ಮತ್ತು ಡೋರ್ ಪ್ಯಾಡ್‌ಗಳು ಬ್ಲೂ ಅಪ್ಹೋಲಿಸ್ಟ್ರೀ ಅನ್ನು ಹೊಂದಿದ್ದು, ಇದು ಟಾಪ್ ಕ್ವಾಲಿಟಿಯ ಲುಕ್ ಅನ್ನು ನೀಡುತ್ತದೆ.

Kia Sonet Gravity Edition

 ಕ್ಯಾಬಿನ್ ಒಳಗೆ ನೀಡಿರುವ ಮತ್ತೊಂದು ಪ್ರಮುಖ ಫೀಚರ್ ಎಂದರೆ ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್. ಇದು ಕಾರನ್ನು ಡ್ರೈವ್ ಮಾಡುವಾಗ ಮತ್ತು ಪಾರ್ಕಿಂಗ್ ಮಾಡುವಾಗ ತುಂಬಾ ಉಪಯುಕ್ತವಾಗಿದೆ. ಇದಲ್ಲದೆ, ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಕೂಡ ಪಡೆಯುತ್ತದೆ.

Kia Sonet Gravity Edition

 ಹಿಂಭಾಗದಲ್ಲಿ, ಸೀಟುಗಳು 60:40 ಸ್ಪ್ಲಿಟ್ ಅನ್ನು ಹೊಂದಿವೆ ಮತ್ತು ಹೆಚ್ಚುವರಿ ಆರ್ಮ್‌ರೆಸ್ಟ್ ನೀಡಲಾಗಿದೆ. ಹೆಡ್‌ರೆಸ್ಟ್‌ಗಳನ್ನು ಕೂಡ ಅಡ್ಜಸ್ಟ್ ಮಾಡಬಹುದಾಗಿದೆ. ಮಾನ್ಯುಯಲ್ ಪೆಟ್ರೋಲ್ ಮತ್ತು ಡೀಸೆಲ್ ಮಾಡೆಲ್ ಗಳಲ್ಲಿ ಸನ್‌ರೂಫ್‌ ಅನ್ನು ನೀಡಲಾಗಿಲ್ಲ, ಆದರೆ ನೀವು ಅದನ್ನು iMT ವೇರಿಯಂಟ್ ನಲ್ಲಿ ಪಡೆಯಬಹುದು.

Kia Sonet Gravity Edition

 ಫೀಚರ್‌ಗಳು

 ಮೇಲೆ ತಿಳಿಸಲಾದ ಹೊಸ ಫೀಚರ್ ಗಳ ಜೊತೆಗೆ, ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ ಅದರ ಒರಿಜಿನಲ್ ವರ್ಷನ್ ನಲ್ಲಿರುವ ಫೀಚರ್ ಗಳನ್ನು ಉಳಿಸಿಕೊಂಡಿದೆ. ಇದರಲ್ಲಿ 8-ಇಂಚಿನ ಟಚ್‌ಸ್ಕ್ರೀನ್, ಆಟೋ AC, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕೀಲೆಸ್ ಎಂಟ್ರಿ ಒಳಗೊಂಡಿದೆ. ಸುರಕ್ಷತಾ ಫೀಚರ್ ಗಳಲ್ಲಿ 6 ಏರ್‌ಬ್ಯಾಗ್‌ಗಳು, ರಿಯರ್‌ವ್ಯೂ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, TPMS ಮತ್ತು ಹಿಂಭಾಗದ ಡಿಫಾಗರ್ ಸೇರಿವೆ.

Kia Sonet Gravity Edition

 ಪವರ್‌ಟ್ರೇನ್

 ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ ಪವರ್‌ಟ್ರೇನ್ ಆಯ್ಕೆಗಳು ಹೀಗಿವೆ: 1.2-ಲೀಟರ್ ಪೆಟ್ರೋಲ್ ಎಂಜಿನ್ (83 PS/115 Nm) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 1.5-ಲೀಟರ್ ಡೀಸೆಲ್ ಎಂಜಿನ್ (116 PS/250 Nm) ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್‌ ಗೇರ್‌ಬಾಕ್ಸ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (120 PS/172 Nm) ನೊಂದಿಗೆ 6-ಸ್ಪೀಡ್ iMT.

Kia Sonet Gravity Edition

 ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ ಬೆಲೆಯು ರೂ. 10.49 ಲಕ್ಷದಿಂದ 11.99 ಲಕ್ಷದವರೆಗೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇದೆ. ಕಿಯಾದ ಈ ಸಬ್‌ಕಾಂಪ್ಯಾಕ್ಟ್ SUVಯು ಹ್ಯುಂಡೈ ವೆನ್ಯೂ, ಮಾರುತಿ ಬ್ರೆಜ್ಜಾ, ಟಾಟಾ ನೆಕ್ಸಾನ್, ಮಹೀಂದ್ರಾ XUV3XO ಮತ್ತು ರೆನಾಲ್ಟ್ ಕಿಗರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

 ಇನ್ನಷ್ಟು ಓದಿ : ಕಿಯಾ ಸೋನೆಟ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
Anonymous
was this article helpful ?

0 out of 0 found this helpful

Write your Comment on Kia ಸೊನೆಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience