Kia Syros ಬುಕಿಂಗ್ ಮತ್ತು ಡೆಲಿವರಿ ವಿವರಗಳು ಬಹಿರಂಗ
ಕಿಯಾ syros ಗಾಗಿ kartik ಮೂಲಕ ಡಿಸೆಂಬರ್ 19, 2024 07:02 pm ರಂದು ಪ್ರಕಟಿಸಲಾಗಿದೆ
- 45 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾವು 2025ರ ಜನವರಿ 3ರಂದು ಸಿರೋಸ್‌ಗಾಗಿ ಆರ್ಡರ್ ಸ್ವೀಕರಿಸಲು ಪ್ರಾರಂಭಿಸಲಿದೆ, ಅದೇ ತಿಂಗಳಲ್ಲಿ ಅದರ ಬೆಲೆಗಳನ್ನು ಸಹ ಘೋಷಿಸುವ ನಿರೀಕ್ಷೆಯಿದೆ
-
ಕಿಯಾ ಸಿರೋಸ್ HTK, HTK (O), HTK Plus, HTX, HTX ಪ್ಲಸ್, ಮತ್ತು HTX ಪ್ಲಸ್ (O) ಎಂಬ ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
-
ಈ ಎಸ್‌ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ, ಅವುಗಳೆಂದರೆ, 1-ಲೀಟರ್ ಪೆಟ್ರೋಲ್ ಎಂಜಿನ್ (120ಪಿಎಸ್/172ಎನ್‌ಎಮ್) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (116ಪಿಎಸ್/250ಎನ್‌ಎಮ್).
-
ಗೇರ್‌ಬಾಕ್ಸ್ ಆಯ್ಕೆಗಳು ಅದರ ವೇರಿಯೆಂಟ್‌ಗಳಾದ್ಯಂತ ಮ್ಯಾನ್ಯುವಲ್, ಡಿಸಿಟಿ ಮತ್ತು AT ಅನ್ನು ಒಳಗೊಂಡಿವೆ.
-
12.3-ಇಂಚಿನ ಡ್ಯುಯಲ್ ಪರದೆಗಳು, ಪನರೋಮಿಕ್ ಸನ್‌ರೂಫ್ ಮತ್ತು ಮುಂಭಾಗ ಮತ್ತು ಹಿಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ಗಳಂತಹ ಸೌಕರ್ಯಗಳನ್ನು ಹೊಂದಿದೆ.
-
ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಎಡಿಎಎಸ್ ಅನ್ನು ಒಳಗೊಂಡಿದೆ.
-
9 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಬೆಲೆ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಕಿಯಾ ಸಿರೋಸ್ ಅನ್ನು ಇತ್ತೀಚೆಗೆ ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಈ ಎಸ್‌ಯುವಿಯನ್ನು HTK, HTK (ಒಪ್ಶನಲ್), HTK ಪ್ಲಸ್, HTX, HTX ಪ್ಲಸ್, ಮತ್ತು HTX ಪ್ಲಸ್ (ಒಪ್ಶನಲ್) ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. ಇದರ ಅನಾವರಣದ ಸಮಯದಲ್ಲಿ, ಸಿರೊಸ್‌ನ ಬುಕಿಂಗ್‌ಗಳು ಜನವರಿ 3, 2025 ರಂದು ಪ್ರಾರಂಭವಾಗುತ್ತದೆ, ಆದರೆ ವಿತರಣೆಗಳು ಫೆಬ್ರವರಿ ಆರಂಭದಲ್ಲಿ ಪ್ರಾರಂಭವಾಗುತ್ತದೆ ಎಂದು ಕಿಯಾವು ತಿಳಿಸಿದೆ. ಸಿರೋಸ್‌ನ ಬೆಲೆಗಳನ್ನು ಮುಂದಿನ ತಿಂಗಳು ಘೋಷಿಸುವ ನಿರೀಕ್ಷೆಯಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ನಿಮ್ಮ ಮುಂದಿನ ಕಾರನ್ನು ಕಿಯಾ ಸಿರೋಸ್ ಎಂದು ನೀವು ಪರಿಗಣಿಸುತ್ತಿದ್ದರೆ, ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:
ಕಿಯಾ ಸಿರೋಸ್ ಪವರ್‌ಟ್ರೇನ್
ಎಸ್‌ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ ಮತ್ತು ಟ್ರಾನ್ಸ್‌ಮಿಷನ್‌ನ್‌ನಲ್ಲಿ ಸಿರೋಸ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ (MT), ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ (DCT) ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (AT) ನೊಂದಿಗೆ ಬರುತ್ತದೆ. ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳನ್ನು ಕೆಳಗೆ ವಿವರಿಸಲಾಗಿದೆ.
ಎಂಜಿನ್ |
1-ಲೀಟರ್ ಟರ್ಬೋ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
120 ಪಿಎಸ್ |
116 ಪಿಎಸ್ |
ಟಾರ್ಕ್ |
172 ಎನ್‌ಎಮ್ |
250 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನ್ಯುವಲ್, 7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ AT |
ಕಿಯಾ ಸಿರೋಸ್ ಇಂಟೀರಿಯರ್ ಮತ್ತು ಫೀಚರ್‌ಗಳು
ಒಳಭಾಗದಲ್ಲಿ, ಲೆಥೆರೆಟ್ ಸೀಟ್ ಕವರ್ ಜೊತೆಗೆ ಡ್ಯುಯಲ್-ಟೋನ್ ಕಪ್ಪು ಮತ್ತು ಬೂದು ಕ್ಯಾಬಿನ್ ಥೀಮ್‌ನೊಂದಿಗೆ ಸಿರೋಸ್ ಅನ್ನು ನೀಡಲಾಗುತ್ತಿದೆ. ಕ್ಯಾಬಿನ್ 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಥೀಮ್ ಮತ್ತು ಡ್ಯುಯಲ್-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಹ ಪಡೆಯುತ್ತದೆ.
ಫೀಚರ್‌ಗಳ ವಿಷಯದಲ್ಲಿ, ಕಿಯಾ ಸಿರೋಸ್ ಡ್ಯುಯಲ್ 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು ಡ್ರೈವರ್ ಡಿಸ್ಪ್ಲೇ ಜೊತೆಗೆ 5-ಇಂಚಿನ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸ್ಕ್ರೀನ್ ಮತ್ತು 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಎಸ್‌ಯುವಿಯು 4-ವೇ ಚಾಲಿತ ಡ್ರೈವರ್ ಸೀಟ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು ಮತ್ತು ಪನರೋಮಿಕ್ ಸನ್‌ರೂಫ್ ಅನ್ನು ಸಹ ಹೊಂದಿದೆ.
ಕಿಯಾ ಸಿರೋಸ್ ಸುರಕ್ಷತೆ
ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ. ಕಿಯಾ ಸಿರೋಸ್ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಫ್ರಂಟ್ ಡಿಕ್ಕಿಯ ಎಚ್ಚರಿಕೆ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳೊಂದಿಗೆ (ADAS) ಬರುತ್ತದೆ. ಇದು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಡ್ಯುಯಲ್ ಡ್ಯಾಶ್‌ಬೋರ್ಡ್ ಕ್ಯಾಮೆರಾವನ್ನು ಸಹ ಪಡೆಯುತ್ತದೆ.
ಇದನ್ನೂ ಓದಿ: ಎಸ್‌ಯುವಿ ಪ್ರೀಯರಿಗೆ ಗುಡ್‌ನ್ಯೂಸ್.. Hyundai Creta EV ಬಿಡುಗಡೆಗೆ ದಿನಾಂಕ ಫಿಕ್ಸ್
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ, ಆದರೆ ಇದು ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3XO, ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದ ಸಬ್‌ಕಾಂಪ್ಯಾಕ್ಟ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪರ್ಯಾಯವಾಗಿದೆ.
ಇದಕ್ಕೆ ಸಂಬಂಧಿತ: ಬಹುನಿರೀಕ್ಷಿತ Kia Syrosನ ಅನಾವರಣ, 2025ರ ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ
0 out of 0 found this helpful