Login or Register ಅತ್ಯುತ್ತಮ CarDekho experience ಗೆ
Login

ಇವಿ ಪ್ರೀಯರಿಗೆ ಸಿಹಿಸುದ್ದಿ: ಭಾರತದಲ್ಲಿ Kia Syros EV ಬಿಡುಗಡೆಗೆ ಸಿದ್ಧತೆ

ಕಿಯಾ ಸಿರೋಸ್‌ ಗಾಗಿ shreyash ಮೂಲಕ ಡಿಸೆಂಬರ್ 23, 2024 04:29 pm ರಂದು ಪ್ರಕಟಿಸಲಾಗಿದೆ

ಸಿರೋಸ್‌ ಇವಿಯು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 EV ಗಳಂತಹವುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ ಮತ್ತು ಸುಮಾರು 400 ಕಿ.ಮೀ. ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ಒದಗಿಸುವ ನಿರೀಕ್ಷೆಯಿದೆ

  • ಸಿರೋಸ್ ಇವಿ ಬಲವರ್ಧಿತ ಕೆ1 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ, ಇದು ಸಾಮಾನ್ಯ ಸಿರೋಸ್‌ಗೂ ಆಧಾರವಾಗಿದೆ.

  • ಪರಿಷ್ಕೃತ ಬಂಪರ್ ಮತ್ತು ನಿರ್ದಿಷ್ಟ ಬ್ಯಾಡ್ಜ್‌ಗಳಂತಹ ಕೆಲವು EV-ನಿರ್ದಿಷ್ಟ ಡಿಸೈನ್‌ ಅನ್ನು ಪಡೆಯಬಹುದು.

  • ಒಳಭಾಗದಲ್ಲಿ, ಡ್ಯಾಶ್‌ಬೋರ್ಡ್ ವಿನ್ಯಾಸವು ಬದಲಾಗದೆ ಉಳಿಯುತ್ತದೆ, ಆದರೆ EV ನಿರ್ದಿಷ್ಟ ಆಕ್ಸೆಂಟ್‌ಗಳನ್ನು ಪಡೆಯಬಹುದು.

  • 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಲೆವೆಲ್ 2 ADAS ನಂತಹ ಅದೇ ಫೀಚರ್‌ಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

  • 15 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಬೆಲೆ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಕಿಯಾ ಸಿರೋಸ್ ಅನ್ನು ಇತ್ತೀಚೆಗೆ ಇಂಧನ ಚಾಲಿತ ಎಂಜಿನ್ (ICE) ಅವತಾರದಲ್ಲಿ ಅನಾವರಣಗೊಳಿಸಲಾಯಿತು. ಸಿರೋಸ್ ಬಲವರ್ಧಿತ K1 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಕಿಯಾ ಸೋನೆಟ್ ಮತ್ತು ಕಿಯಾ ಸೆಲ್ಟೋಸ್ ಎಸ್‌ಯುವಿಗಳ ನಡುವೆ ಸ್ಥಾನ ಪಡೆದಿದೆ. ಕಿಯಾ ಸಿರೋಸ್ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪಡೆಯಬಹುದು, ಇದು ಸಿದ್ಧತೆಯ ಹಂತದಲ್ಲಿದೆ ಮತ್ತು 2026ರಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು.

ಸಿರೋಸ್ ಇವಿ ಡಿಸೈನ್‌

ಸಿರೋಸ್‌ ಇವಿಯು ಅದರ ICE ಆವೃತ್ತಿಯನ್ನು ಆಧಾರವಾಗಿರುವ ಅದೇ ಬಲವರ್ಧಿತ K1 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ. ವಿನ್ಯಾಸದ ವಿಷಯದಲ್ಲಿ, ಇವೆರಡು ತುಂಬಾ ಹೋಲುತ್ತದೆ ಎಂದು ನಿರೀಕ್ಷಿಸಲಾಗಿದೆ, ಆದರೆ ಪರಿಷ್ಕೃತ ಬಂಪರ್‌ಗಳಂತಹ ಕೆಲವು EV-ನಿರ್ದಿಷ್ಟ ಹೈಲೈಟ್‌ಗಳನ್ನು ಒಳಗೊಂಡಿರುತ್ತದೆ. ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ನಯವಾದ L-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳಂತಹ ವಿನ್ಯಾಸ ಅಂಶಗಳನ್ನು ಉಳಿಸಿಕೊಳ್ಳಬಹುದು.

ಒಳಭಾಗದಲ್ಲಿ, ಸಿರೋಸ್‌ ಇವಿ ಒಂದೇ ಕ್ಯಾಬಿನ್ ಮತ್ತು ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿರಬಹುದು. ಆದರೆ, ಇದು ICE ಆವೃತ್ತಿಯಿಂದ ಪ್ರತ್ಯೇಕಿಸಲು ವಿಭಿನ್ನ-ಬಣ್ಣದ ಕವರ್‌ಗಳನ್ನು ಪಡೆಯಬಹುದು.

ಇದನ್ನು ಸಹ ಓದಿ: ಹೊಸ Kia Syrosನ ವೇರಿಯಂಟ್-ವಾರು ಫೀಚರ್‌ಗಳ ವಿವರಗಳು

ಸಿರೋಸ್ ಇವಿ ಫೀಚರ್‌ಗಳು ಮತ್ತು ಸುರಕ್ಷತೆ

ಸಿರೋಸ್‌ನ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯು ಅದರ ICE ಆವೃತ್ತಿಯಂತೆಯೇ ಅದೇ ಫೀಚರ್‌ಗಳನ್ನು ಹೊಂದಿರಬಹುದು. ಫೀಚರ್‌ಗಳ ಪಟ್ಟಿಯು 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳನ್ನು (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಹವಾಮಾನ ನಿಯಂತ್ರಣಕ್ಕಾಗಿ ಡ್ಯುಯಲ್ ಡಿಸ್‌ಪ್ಲೇಗಳ ನಡುವೆ ಸಂಯೋಜಿಸಲಾಗಿರುವ 5-ಇಂಚಿನ ಸ್ಕ್ರೀನ್‌ ಮತ್ತು 4-ವೇ ಚಾಲಿತ ಡ್ರೈವರ್ ಸೀಟ್ ಅನ್ನು ಒಳಗೊಂಡಿರಬಹುದು.

ಇದು 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಮತ್ತು ರಿಯರ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನೊಂದಿಗೆ ಬರಲಿದೆ. EV ಆಗಿರುವುದರಿಂದ, ಸಿರೋಸ್‌ V2L (ವಾಹನದಿಂದ ಲೋಡ್) ಫಂಕ್ಷನ್‌ ಅನ್ನು ಸಹ ಪಡೆಯಬಹುದು. ಇದು ಕಾರಿನ ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಂಡು ನಿಮ್ಮ ಬೇರೆ ಬಾಹ್ಯ ಸಾಧನಗಳನ್ನು ಚಾರ್ಜ್‌ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ.

6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.

ಸಿರೋಸ್ ಇವಿ ಬ್ಯಾಟರಿ ಪ್ಯಾಕ್ ಮತ್ತು ರೇಂಜ್

ಸಿರೋಸ್‌ ಇವಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ಕಿಯಾವು ಇನ್ನೂ ಬಹಿರಂಗಪಡಿಸದಿದ್ದರೂ, ಇದು ಸುಮಾರು 400 ಕಿಮೀಗಳಷ್ಟು ಕ್ಲೈಮ್ ಮಾಡಿದ ಡ್ರೈವಿಂಗ್ ರೇಂಜ್‌ ಅನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಹುಂಡೈ ಇನ್‌ಸ್ಟರ್ ಇವಿ ಕೂಡ ಅದೇ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ ಎಂಬುದನ್ನು ಗಮನಿಸಬೇಕು. ಹ್ಯುಂಡೈ ಇವಿಯು 42 ಕಿ.ವ್ಯಾಟ್‌ ಮತ್ತು 49 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ಗಳನ್ನು WLTP-ಕ್ಲೇಮ್ ಮಾಡಲಾದ 355 ಕಿಮೀ ರೇಂಜ್‌ನೊಂದಿಗೆ ಪಡೆಯುತ್ತದೆ.

ಸಿರೋಸ್‌ ಇವಿಯ ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಸಿರೋಸ್ ಇವಿ ಬೆಲೆಯು 15 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 EV ಗಳಂತಹವುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Kia syros

explore ಇನ್ನಷ್ಟು on ಕಿಯಾ ಸಿರೋಸ್‌

ಕಿಯಾ ಸಿರೋಸ್‌

ಡೀಸಲ್20.75 ಕೆಎಂಪಿಎಲ್
ಪೆಟ್ರೋಲ್18.2 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ