• English
  • Login / Register

ಹೊಸ Kia Syrosನ ವೇರಿಯಂಟ್-ವಾರು ಫೀಚರ್‌ಗಳ ವಿವರಗಳು

ಕಿಯಾ syros ಗಾಗಿ dipan ಮೂಲಕ ಡಿಸೆಂಬರ್ 20, 2024 09:10 pm ರಂದು ಪ್ರಕಟಿಸಲಾಗಿದೆ

  • 6 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಕಿಯಾ ಸಿರೋಸ್ HTK, HTK (O), HTK Plus, HTX, HTX ಪ್ಲಸ್, ಮತ್ತು HTX ಪ್ಲಸ್ (O) ಎಂಬ ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ

Kia Syros variant-wise features explained

ಕಿಯಾ ಸಿರೋಸ್ ಇತ್ತೀಚೆಗೆ ಹೊಸ ಸಬ್‌-4ಎಮ್‌ ಎಸ್‌ಯುವಿಯಾಗಿ ಪಾದಾರ್ಪಣೆ ಮಾಡಿದ್ದು, ಇದು ಕಿಯಾ ಸೋನೆಟ್ ಮತ್ತು ಕಿಯಾ ಸೆಲ್ಟೋಸ್ ನಡುವೆ ಸ್ಲಾಟ್‌ಗಳನ್ನು ಪಡೆದಿದೆ. ಇದು ಬಹಳಷ್ಟು ಪ್ರೀಮಿಯಂ ಫೀಚರ್‌ಗಳೊಂದಿಗೆ ಲಭ್ಯವಿದೆ, ಅವುಗಳಲ್ಲಿ ಕೆಲವು ಸೋನೆಟ್ ಅಥವಾ ಸೆಲ್ಟೋಸ್‌ನೊಂದಿಗೆ ಲಭ್ಯವಿಲ್ಲ. ನಿಖರವಾದ ವೇರಿಯೆಂಟ್‌-ವಾರು ಫೀಚರ್‌ ವಿತರಣೆಯನ್ನು ತಿಳಿಯಲು ನೀವು ಉತ್ಸುಕರಾಗಿದ್ದರೆ, ಅದರ ವಿವರವಾದ ವಿವರಣೆ ಇಲ್ಲಿದೆ.

ಕಿಯಾ ಸಿರೋಸ್‌ ಹೆಚ್‌ಟಿಕೆ

Kia Syros 12.3-inch touchscreen (image of top-spec variant used for representational purposes only)

ಎಕ್ಸ್‌ಟೀರಿಯರ್‌

ಇಂಟೀರಿಯರ್‌

ಸೌಕರ್ಯ ಮತ್ತು ಸೌಲಭ್ಯ

ಇನ್ಫೋಟೈನ್‌ಮೆಂಟ್‌

ಸುರಕ್ಷತೆ

ಆಟೋ ಹ್ಯಾಲೊಜೆನ್ ಹೆಡ್‌ಲೈಟ್‌ಗಳು

ಕವರ್‌ಗಳೊಂದಿಗೆ 15-ಇಂಚಿನ ಸ್ಟೀಲ್‌ ವೀಲ್‌ಗಳು

ಫ್ಲಶ್ ಡೋರ್ ಹ್ಯಾಂಡಲ್‌ಗಳು

ಮುಂಭಾಗ ಮತ್ತು ಹಿಂಭಾಗದ ಸಿಲ್ವರ್ ಫಾಕ್ಸ್ ಸ್ಕಿಡ್ ಪ್ಲೇಟ್‌ಗಳು

ಶಾರ್ಕ್ ಫಿನ್ ಆಂಟೆನಾ

ರೂಫ್-ಮೌಂಟೆಡ್ ಸ್ಪಾಯ್ಲರ್

ಆರೆಂಜ್‌ ಆಕ್ಸೆಂಟ್‌ಗಳೊಂದಿಗೆ ಕಪ್ಪು ಮತ್ತು ಬೂದು ಡ್ಯುಯಲ್-ಟೋನ್ ಇಂಟೀರಿಯರ್‌ ಥೀಮ್

ಕಪ್ಪು ಮತ್ತು ಬೂದು ಬಣ್ಣದ ಸೆಮಿ-ಲೆಥೆರೆಟ್ ಸೀಟ್ ಕವರ್‌

2-ಸ್ಪೋಕ್ ಸ್ಟೀರಿಂಗ್ ವೀಲ್

ಫ್ರಂಟ್ ಸೆಂಟರ್ ಆರ್ಮ್ ರೆಸ್ಟ್

ಆಡ್ಜಸ್ಟ್‌ ಮಾಡಬಹುದಾದ ಮುಂಭಾಗದ ಹೆಡ್‌ರೆಸ್ಟ್‌ಗಳು

ಸನ್‌ಗ್ಲಾಸ್‌ ಹೋಲ್ಡರ್

ಹಿಂಭಾಗದ ಬಾಗಿಲುಗಳಿಗೆ ಸನ್‌ಶೇಡ್‌

4.2-ಇಂಚಿನ ಮಲ್ಟಿ-ಇಂಫಾರ್ಮೆಶನ್‌ ಡಿಸ್‌ಪ್ಲೇ (MID) ಜೊತೆಗೆ ಅನಲಾಗ್ ಇನ್ಸ್‌ಟ್ರುಮೆಂಟ್‌ ಕನ್ಸೋಲ್

ಟಿಲ್ಟ್-ಆಡ್ಜಸ್ಟೇಬಲ್‌ ಸ್ಟೀರಿಂಗ್ ವೀಲ್

ಪ್ರಕಾಶಿತ ಬಟನ್‌ನೊಂದಿಗೆ ಎಲ್ಲಾ ನಾಲ್ಕು ಪವರ್ ವಿಂಡೋಗಳು

ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು

ಡೇ/ನೈಟ್‌ ಇನ್‌ಸೈಡ್‌ ರಿಯರ್‌ವ್ಯೂ ಮಿರರ್‌(IRVM)

ವಿದ್ಯುನ್ಮಾನವಾಗಿ ಎಡ್ಜಸ್ಟ್‌ ಮಾಡಬಹುದಾದ ಔಟ್‌ಸೈಡ್‌ ರಿಯರ್‌ವ್ಯೂ ಮಿರರ್‌(ORVM)

ಹಿಂಭಾಗದ ವೆಂಟ್‌ಗಳಲ್ಲಿ ಮ್ಯಾನುಯಲ್ ಎಸಿ

ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಟೈಪ್-ಸಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು

ಮುಂಭಾಗದ ಪ್ರಯಾಣಿಕರಿಗೆ 12V ಪವರ್ ಔಟ್‌ಲೆಟ್‌

12.3-ಇಂಚಿನ ಟಚ್‌ಸ್ಕ್ರೀನ್

4 ಸ್ಪೀಕರ್‌ಗಳು

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ)

ಡೈನಾಮಿಕ್ ಮಾರ್ಗಸೂಚಿಗಳೊಂದಿಗೆ ಹಿಂಬದಿಯ ಕ್ಯಾಮರಾ

ಕಳ್ಳತನವನ್ನು ಎಚ್ಚರಿಸುವ ಅಲಾರಮ್‌

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

ಬ್ರೇಕ್ ಅಸಿಸ್ಟ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

ಹಿಲ್ ಸ್ಟಾರ್ಟ್ ಅಸಿಸ್ಟ್

ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು

ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್

ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು

ಸಿರೋಸ್‌ನ ಎಂಟ್ರಿ-ಲೆವೆಲ್‌ ಹೆಚ್‌ಟಿಕೆ ವೇರಿಯೆಂಟ್‌ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಕವರ್‌ಗಳೊಂದಿಗೆ ಸ್ಟೀಲ್‌ ವೀಲ್‌ಗಳು, ಮ್ಯಾನುವಲ್ AC ಮತ್ತು MID ಯೊಂದಿಗೆ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಬೇಸಿಕ್‌ ಆದರೆ ಉಪಯುಕ್ತ ಫೀಚರ್‌ಗಳನ್ನು ಪಡೆಯುತ್ತದೆ. ಇದರೊಂದಿಗೆ, ಫ್ಲಶ್ ಡೋರ್ ಹ್ಯಾಂಡಲ್‌ಗಳು, 12.3-ಇಂಚಿನ ಟಚ್‌ಸ್ಕ್ರೀನ್, 4 ಸ್ಪೀಕರ್‌ಗಳು, ಸೆಮಿ-ಲೆಥೆರೆಟ್ ಸೀಟ್‌ಗಳು ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ORVM ಗಳಂತಹ ಪ್ರೀಮಿಯಂ ಫೀಚರ್‌ಗಳು ಸಹ ಕೊಡುಗೆಯಲ್ಲಿವೆ. ಇದು 6 ಏರ್‌ಬ್ಯಾಗ್‌ಗಳು, TPMS, ರಿಯರ್‌ವ್ಯೂ ಕ್ಯಾಮೆರಾ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಸಾಕಷ್ಟು ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ.

ಕಿಯಾ ಸಿರೋಸ್‌ ಹೆಚ್‌ಟಿಕೆ (ಒಪ್ಶನಲ್‌)

Kia Syros side

ಬೇಸ್‌ಗಿಂತ ಒಂದು ಮೇಲಿರುವ ಹೆಚ್‌ಟಿಕೆ (ಒಪ್ಶನಲ್‌) ವೇರಿಯೆಂಟ್‌ ಬೇಸ್ ವೇರಿಯೆಂಟ್‌ಗಿಂತ ಹೆಚ್ಚುವರಿಯಾಗಿ ಪಡೆಯುವ ಎಲ್ಲವೂ ಇಲ್ಲಿದೆ:

ಎಕ್ಸ್‌ಟೀರಿಯರ್‌

ಇಂಟೀರಿಯರ್‌

ಸೌಕರ್ಯ ಮತ್ತು ಸೌಲಭ್ಯ

ಇನ್ಫೋಟೈನ್‌ಮೆಂಟ್‌

ಸುರಕ್ಷತೆ

16-ಇಂಚಿನ ಅಲಾಯ್‌ ವೀಲ್‌ಗಳು (ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ)

ORVM ಗಳಲ್ಲಿ ಟರ್ನ್‌ ಇಂಡಿಕೇಟರ್‌ಗಳು 

ರೂಫ್ ರೇಲ್ಸ್‌

 

ಪ್ರಯಾಣಿಕರ ಬದಿಯ ಸನ್‌ಶೇಡ್‌ನಲ್ಲಿ ವ್ಯಾನಿಟಿ ಮಿರರ್

ಪ್ರಯಾಣಿಕರ ಬದಿಯ ಸೀಟಿನ ಹಿಂಭಾಗದಲ್ಲಿ ಪಾಕೆಟ್

ಸಿಂಗಲ್ ಪೇನ್ ಸನ್‌ರೂಫ್

ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು

ಆಟೋ-ಫೋಲ್ಡಿಂಗ್ ORVM ಗಳು

2 ಟ್ವೀಟರ್‌ಗಳು

ಯಾವುದು ಹೊಸದಾಗಿ ಇಲ್ಲ

ಹೊರಗೆ, ಸಿರೋಸ್‌ ಹೆಚ್‌ಟಿಕೆ (ಒಪ್ಶನಲ್‌) ರೂಫ್‌ ರೇಲ್ಸ್‌ ಮತ್ತು ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ, ಆದರೆ ಇದು ಡೀಸೆಲ್ ಪವರ್‌ಟ್ರೇನ್ ಆಯ್ಕೆಯೊಂದಿಗೆ ಮಾತ್ರ. ಇದಲ್ಲದೆ, ಇದು ಸಿಂಗಲ್-ಪೇನ್ ಸನ್‌ರೂಫ್, ಆಟೋ-ಫೋಲ್ಡ್ ORVM ಗಳು ಮತ್ತು 2 ಟ್ವೀಟರ್‌ಗಳೊಂದಿಗೆ ಬರುತ್ತದೆ. ಈಗಾಗಲೇ HTK ಟ್ರಿಮ್‌ನಲ್ಲಿರುವ ಬಲವಾದ ಸುರಕ್ಷತಾ ಸೂಟ್ ಅನ್ನು ಇದರಲ್ಲಿಯೂ ನೀಡಲಾಗಿದೆ. 

ಕಿಯಾ ಸಿರೋಸ್ ಹೆಚ್‌ಟಿಕೆ ಪ್ಲಸ್

Kia Syros has a panoramic sunroof

ಮಿಡ್-ಸ್ಪೆಕ್ ಹೆಚ್‌ಟಿಕೆ ಪ್ಲಸ್ ವೇರಿಯೆಂಟ್‌, ಹೆಚ್‌ಟಿಕೆ (ಒಪ್ಶನಲ್‌) ವೇರಿಯೆಂಟ್‌ಗಿಂತ ಹೆಚ್ಚುವರಿಯಾಗಿ ಪಡೆಯುವ ಫೀಚರ್‌ಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ.  

ಎಕ್ಸ್‌ಟೀರಿಯರ್‌

ಇಂಟೀರಿಯರ್‌

ಸೌಕರ್ಯ ಮತ್ತು ಸೌಲಭ್ಯ

ಇನ್ಫೋಟೈನ್‌ಮೆಂಟ್‌

ಸುರಕ್ಷತೆ

ಫಾಲೋ-ಮಿ-ಹೋಮ್ ಹೆಡ್‌ಲೈಟ್‌ಗಳು (ಟರ್ಬೊ-ಪೆಟ್ರೋಲ್ ಡಿಸಿಟಿ ವೇರಿಯೆಂಟ್‌ನೊಂದಿಗೆ ಮಾತ್ರ)

16-ಇಂಚಿನ ಅಲಾಯ್‌ ವೀಲ್‌ಗಳು

ಬಾನೆಟ್ ಅಡಿಯಲ್ಲಿ ಹೊಳಪು ಕಪ್ಪು ಪಟ್ಟಿ

ಗ್ರೀನ್‌ ಆಕ್ಸೆಂಟ್‌ನೊಂದಿಗೆ ನೀಲಿ ಮತ್ತು ಬೂದು ಡ್ಯುಯಲ್-ಟೋನ್ ಇಂಟೀರಿಯರ್‌ ಥೀಮ್

ನೀಲಿ ಮತ್ತು ಬೂದು ಬಣ್ಣದ ಸೆಮಿ-ಲೆಥೆರೆಟ್ ಸೀಟ್‌ಗಳು

ಒರಗಿಕೊಳ್ಳುವ ಮತ್ತು ಸ್ಲೈಡಿಂಗ್ ಕಾರ್ಯದೊಂದಿಗೆ 60:40 ಮಡಿಸಬಹುದಾದ ಹಿಂಬದಿಯ ಸೀಟ್‌ಗಳು

ಕಪ್‌ಹೋಲ್ಡರ್‌ಗಳೊಂದಿಗೆ ಹಿಂಭಾಗದ ಸೆಂಟರ್‌ ಆರ್ಮ್‌ರೆಸ್ಟ್

ಹಿಂಭಾಗದಲ್ಲಿ ಪಾರ್ಸೆಲ್ ಟ್ರೇ

ಮುಂಭಾಗ ಮತ್ತು ಹಿಂಭಾಗದಲ್ಲಿ ಆಡ್ಜಸ್ಟೇಬಲ್‌ ಹೆಡ್‌ರೆಸ್ಟ್‌ಗಳು

ಮುಂಭಾಗದ ಪ್ರಯಾಣಿಕರಿಗೆ ಹಿಂತೆಗೆದುಕೊಳ್ಳುವ ಕಪ್‌ಹೋಲ್ಡರ್‌ಗಳು (ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ)

ಪನೋರಮಿಕ್ ಸನ್‌ರೂಫ್

ಕ್ರೂಸ್ ಕಂಟ್ರೋಲ್

ಡ್ರೈವ್ ಮತ್ತು ಟ್ರಾಕ್ಷನ್‌ ಕಂಟ್ರೋಲ್‌ ಮೋಡ್‌ಗಳು(ಟರ್ಬೊ-ಪೆಟ್ರೋಲ್ DCT ವೇರಿಯೆಂಟ್‌ಗಳಲ್ಲಿ ಮಾತ್ರ)

ಡ್ರೈವರ್-ಸೈಡ್ ವಿಂಡೋ ಒನ್-ಟಚ್ ಅಪ್/ಡೌನ್(ಟರ್ಬೊ-ಪೆಟ್ರೋಲ್ DCT  ವೇರಿಯೆಂಟ್‌ಗಳಲ್ಲಿ ಮಾತ್ರ)

ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ (ಟರ್ಬೊ-ಪೆಟ್ರೋಲ್ ಡಿಸಿಟಿ  ವೇರಿಯೆಂಟ್‌ಗಳಲ್ಲಿ ಮಾತ್ರ)

ಪ್ಯಾಡಲ್ ಶಿಫ್ಟರ್‌ಗಳು (ಟರ್ಬೊ-ಪೆಟ್ರೋಲ್ ಡಿಸಿಟಿ  ವೇರಿಯೆಂಟ್‌ಗಳಲ್ಲಿ ಮಾತ್ರ)

ಯಾವುದು ಹೊಸದಾಗಿ ಇಲ್ಲ

ಎಲ್ಲಾ 4 ಡಿಸ್ಕ್ ಬ್ರೇಕ್‌ಗಳು

ಆಟೋ ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (ಟರ್ಬೊ-ಪೆಟ್ರೋಲ್ DCT ವೇರಿಯೆಂಟ್‌ಗಳಲ್ಲಿ ಮಾತ್ರ)

16-ಇಂಚಿನ ಅಲಾಯ್‌ ವೀಲ್‌ಗಳನ್ನು HTK ಪ್ಲಸ್ ಟ್ರಿಮ್‌ನಲ್ಲಿ ಎಲ್ಲಾ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ ಮತ್ತು ಇದು ಸಿರೋಸ್ ಅನ್ನು ಪನೋರಮಿಕ್ ಸನ್‌ರೂಫ್ ಮತ್ತು ವಿಭಿನ್ನ-ಬಣ್ಣದ ಕ್ಯಾಬಿನ್ ಥೀಮ್‌ನೊಂದಿಗೆ ಹೊಂದಲು ಎಂಟ್ರಿ-ಲೆವೆಲ್‌ನ ವೇರಿಯೆಂಟ್‌ ಆಗಿದೆ. ಕಿಯಾ ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಒದಗಿಸಿದೆ. ಟರ್ಬೊ-ಪೆಟ್ರೋಲ್‌ ಡಿಸಿಟಿ ವೇರಿಯೆಂಟ್‌ಗಳು ಪ್ಯಾಡಲ್ ಶಿಫ್ಟರ್‌ಗಳು, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತವೆ.

ಇದನ್ನೂ ಓದಿ: ಭಾರತದಲ್ಲಿ 25 ವರ್ಷಗಳನ್ನು ಪೂರೈಸಿದ Maruti Wagon R, ಇಲ್ಲಿಯವರೆಗೆ 32 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟ..!

ಕಿಯಾ ಸಿರೋಸ್ ಎಚ್‌ಟಿಎಕ್ಸ್

Kia Syros 3-pod headlight design with LED DRL
Kia Syros ventilated seat button

HTK ಪ್ಲಸ್ ವೇರಿಯೆಂಟ್‌ನ ಮೇಲೆ HTX ಟ್ರಿಮ್ ಕೆಳಗಿನ ಫೀಚರ್‌ಗಳ ಸೇರ್ಪಡೆಗಳನ್ನು ಪಡೆಯುತ್ತದೆ:

ಎಕ್ಸ್‌ಟೀರಿಯರ್‌

ಇಂಟೀರಿಯರ್‌

ಸೌಕರ್ಯ ಮತ್ತು ಸೌಲಭ್ಯ

ಇನ್ಫೋಟೈನ್‌ಮೆಂಟ್‌

ಸುರಕ್ಷತೆ

ಫಾಲೋ-ಮಿ-ಹೋಮ್ ಫಂಕ್ಷನ್‌ನೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು

ಸಂಯೋಜಿತ ಟರ್ನ್‌ ಇಂಡಿಕೇಟರ್‌ಗಳೊಂದಿಗೆ ಎಲ್‌ಇಡಿ ಡಿಆರ್‌ಎಲ್‌ಗಳು

ಎಲ್ಇಡಿ ಟೇಲ್‌ ಲೈಟ್‌ಗಳು

ನೀಲಿ ಮತ್ತು ಬೂದು ಬಣ್ಣದ ಲೆಥೆರೆಟ್ ಸೀಟ್ ಕವರ್‌

ಲೆಥೆರೆಟ್ ಸುತ್ತಿದ ಸ್ಟೀರಿಂಗ್ ವೀಲ್‌ ಮತ್ತು ಗೇರ್ ನಾಬ್

ಡೋರ್ ಪ್ಯಾಡ್‌ಗಳು ಮತ್ತು ಡೋರ್ ಆರ್ಮ್‌ರೆಸ್ಟ್‌ಗಳ ಮೇಲೆ ಲೆಥೆರೆಟ್ ಮೆಟಿರಿಯಲ್‌ಗಳು

ಬೂಟ್ ಲ್ಯಾಂಪ್‌ಗಳು

ಚಾಲಕ ಮತ್ತು ಪ್ರಯಾಣಿಕರ ಬದಿಯ ಸೀಟ್‌ನ ಹಿಂಭಾಗದ ಪಾಕೆಟ್

ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು

ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

ಕೀ ಫೋಬ್ ಅನ್ನು ಬಳಸಿಕೊಂಡು ಎಲ್ಲಾ ಬಾಗಿಲಿನ ಕಿಟಕಿಗಳು ಆಟೋಮ್ಯಾಟಿಕ್‌ ಆಪ್‌/ಡೌನ್‌

ಯಾವುದು ಹೊಸದಾಗಿ ಇಲ್ಲ

ಹಿಂದಿನ ವೈಪರ್ ಮತ್ತು ವಾಷರ್

ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳನ್ನು ಈ ವೇರಿಯೆಂಟ್‌ನಲ್ಲಿ ಪರಿಚಯಿಸಲಾಗಿದೆ ಮತ್ತು ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್ ಅನ್ನು ಲೆಥೆರೆಟ್‌ನಲ್ಲಿ ಸುತ್ತಿಡಲಾಗಿದೆ. HTX ಟ್ರಿಮ್ ಮುಂಭಾಗದಲ್ಲಿ ವೇಂಟಿಲೇಟೆಡ್‌ ಸೀಟ್‌ಗಳು, ಎಲ್ಲಾ ಕಿಟಕಿಗಳಲ್ಲಿ ಆಟೋ ಆಪ್‌/ಡೌನ್‌(ರಿಮೋಟ್), ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಹಿಂಭಾಗದ ವೈಪರ್ ಮತ್ತು ವಾಷರ್ ಅನ್ನು ಎಲ್ಲಾ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಒಳಗೊಂಡಿದೆ.

ಕಿಯಾ ಸಿರೋಸ್ ಎಚ್‌ಟಿಎಕ್ಸ್ ಪ್ಲಸ್

Kia Syros interior

ಎಚ್‌ಟಿಎಕ್ಸ್ ಪ್ಲಸ್ ವೇರಿಯೆಂಟ್‌ HTX ವೇರಿಯೆಂಟ್‌ಗಿಂತ ಹೆಚ್ಚುವರಿಯಾಗಿ ನೀಡುವ ಎಲ್ಲಾ ಫೀಚರ್‌ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಎಕ್ಸ್‌ಟೀರಿಯರ್‌

ಇಂಟೀರಿಯರ್‌

ಸೌಕರ್ಯ ಮತ್ತು ಸೌಲಭ್ಯ

ಇನ್ಫೋಟೈನ್‌ಮೆಂಟ್‌

ಸುರಕ್ಷತೆ

17 ಇಂಚಿನ ಅಲಾಯ್ ಚಕ್ರಗಳು

ಪಡಲ್‌ ಲ್ಯಾಂಪ್‌ಗಳು

ಆರೆಂಜ್‌ ಆಕ್ಸೆಂಟ್‌ಗಳೊಂದಿಗೆ ಡ್ಯುಯಲ್-ಟೋನ್ ಇಂಟೀರಿಯರ್‌

ಡ್ಯುಯಲ್-ಟೋನ್ ಬೂದು ಬಣ್ಣದ ಲೆಥೆರೆಟ್ ಸೀಟುಗಳು

ಪೆಡಲ್‌ಗಳಿಗೆ ಮೆಟಲ್‌ ಫಿನಿಶ್‌

ಎಲ್ಲಾ ಪ್ರಯಾಣಿಕರಿಗೆ ಹಿಂತೆಗೆದುಕೊಳ್ಳುವ ಕಪ್‌ಹೋಲ್ಡರ್‌ಗಳು

12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

ಆಟೋ AC ಕಂಟ್ರೋಲ್‌ಗಳಿಗಾಗಿ 5-ಇಂಚಿನ ಟಚ್‌ ಪ್ಯಾನಲ್‌

ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಶನ್‌ ಸೀಟ್‌ಗಳು

ಸ್ವಯಂ-ಡಿಮ್ಮಿಂಗ್ IRVM

ವೈರ್‌ಲೆಸ್ ಫೋನ್ ಚಾರ್ಜರ್

4-ವೇ ಚಾಲಿತ ಡ್ರೈವರ್ ಸೀಟ್

64-ಬಣ್ಣದ ಆಂಬಿಯೆಂಟ್ ಲೈಟಿಂಗ್

ಏರ್ ಪ್ಯೂರಿಫೈಯರ್

ಪ್ಯಾಡಲ್ ಶಿಫ್ಟರ್‌ಗಳು

8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್

ಆಪ್‌ಡೇಟೆಡ್‌ ಕಾರ್ ಟೆಕ್ ಸೂಟ್  

ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್

ಹಿಂಭಾಗದ ಡಿಸ್ಕ್ ಬ್ರೇಕ್‌ಗಳು

ಆಟೋ ಹೋಲ್ಡ್ ಕಾರ್ಯದೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ಹೆಚ್‌ಟಿಎಕ್ಸ್‌ ಪ್ಲಸ್ ವೇರಿಯೆಂಟ್‌ 17-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು, ದೊಡ್ಡ 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಟಚ್-ಸಕ್ರಿಯಗೊಳಿಸಿದ ಎಸಿ ಪ್ಯಾನೆಲ್, ಹಿಂಬದಿಯಲ್ಲಿ ವೆಂಟಿಲೇಟೆಡ್‌ ಸೀಟುಗಳು ಮತ್ತು ಚಾಲಿತ ಡ್ರೈವರ್ ಸೀಟ್ ಅನ್ನು ಪರಿಚಯಿಸುತ್ತದೆ. ಇದು ಪಡಲ್‌ ಲ್ಯಾಂಪ್‌ಗಳು, ವಿಭಿನ್ನ ಬಣ್ಣದ ಇಂಟೀರಿಯರ್‌, ಲೆಥೆರೆಟ್ ಸೀಟುಗಳು ಮತ್ತು 8-ಸ್ಪೀಕರ್ ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಸುರಕ್ಷತೆಯ ಮುಂಭಾಗದಲ್ಲಿ, ಈ ವೇರಿಯೆಂಟ್‌ ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್, ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು ಎಲ್ಲಾ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ನೀಡುತ್ತದೆ.

ಕಿಯಾ ಸಿರೋಸ್ ಎಚ್‌ಟಿಎಕ್ಸ್ ಪ್ಲಸ್ (ಒಪ್ಶನಲ್‌)

Kia Syros 360-degree camera

ಟಾಪ್-ಸ್ಪೆಕ್ ಹೆಚ್‌ಟಿಎಕ್ಸ್‌ ಪ್ಲಸ್ (ಒಪ್ಶನಲ್‌) ಟ್ರಿಮ್ ಹಿಂದಿನ ವೇರಿಯೆಂಟ್‌ಗಳಿಗಿಂತ ಕೆಳಗಿನ ಫೀಚರ್‌ಗಳನ್ನು ಹೆಚ್ಚುವರಿಯಾಗಿ ಪಡೆಯುತ್ತದೆ:

ಎಕ್ಸ್‌ಟೀರಿಯರ್‌

ಇಂಟೀರಿಯರ್‌

ಸೌಕರ್ಯ ಮತ್ತು ಸೌಲಭ್ಯ

ಇನ್ಫೋಟೈನ್‌ಮೆಂಟ್‌

ಸುರಕ್ಷತೆ

  • ಯಾವುದು ಹೊಸದಾಗಿ ಇಲ್ಲ

ಯಾವುದು ಹೊಸದಾಗಿ ಇಲ್ಲ

ಯಾವುದು ಹೊಸದಾಗಿ ಇಲ್ಲ

ಯಾವುದು ಹೊಸದಾಗಿ ಇಲ್ಲ

ಸೈಡ್ ಪಾರ್ಕಿಂಗ್ ಸೆನ್ಸಾರ್‌ಗಳು

ಲೆವೆಲ್‌ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS)

ಬ್ಲೈಂಡ್ ಸ್ಪಾಟ್ ಮಾನಿಟರ್ ಜೊತೆಗೆ 360-ಡಿಗ್ರಿ ಕ್ಯಾಮೆರಾ

 

ವೇರಿಯೆಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ HTX (O) ಟ್ರಿಮ್ ಅನ್ನು ಪರಿಗಣಿಸಿದಾಗ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು ಅನುಕೂಲಕರ ಫೀಚರ್‌ಗಳಿಗೆ ಯಾವುದೇ ಸೇರ್ಪಡೆಗಳಿಲ್ಲ. ಆದರೆ, ಇದು ಸೈಡ್ ಪಾರ್ಕಿಂಗ್ ಸೆನ್ಸಾರ್‌ಗಳು, ಲೆವೆಲ್‌ 2 ADAS ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಪವರ್‌ಟ್ರೈನ್‌ ಆಯ್ಕೆಗಳು

Kia Syros 1-litre turbo-petrol engine

ಕಿಯಾ ಸಿರೋಸ್ ಅನ್ನು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡುತ್ತಿದೆ. ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1-ಲೀಟರ್‌ 3-ಸಿಲಿಂಡರ್‌ ಟರ್ಬೋ ಪೆಟ್ರೋಲ್‌ ಎಂಜಿನ್‌

1.5-ಲೀಟರ್‌ 4 ಸಿಲಿಂಡರ್‌ ಡೀಸೆಲ್‌ ಎಂಜಿನ್‌

ಪವರ್‌

120 ಪಿಎಸ್‌

116 ಪಿಎಸ್‌

ಟಾರ್ಕ್‌

172 ಎನ್‌ಎಮ್‌

250 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನ್ಯುವಲ್‌, 7-ಸ್ಪೀಡ್ ಡಿಸಿಟಿ

6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ AT

ಡಿಸಿಟಿ - ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

AT - ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

Kia Syros rear

ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ, ಆದರೆ ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಹ್ಯುಂಡೈ ವೆನ್ಯೂ ಮುಂತಾದ ಸಬ್‌ಕಾಂಪ್ಯಾಕ್ಟ್  ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia syros

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience