Kia Syrosನ ಮತ್ತೊಂದು ಟೀಸರ್ ಔಟ್, ಪನೋರಮಿಕ್ ಸನ ್ರೂಫ್ ಇರುವುದು ಕನ್ಫರ್ಮ್..!
ಕಿಯಾ syros ಗಾಗಿ shreyash ಮೂಲಕ ನವೆಂಬರ್ 25, 2024 08:58 pm ರಂದು ಪ್ರಕಟಿಸಲಾಗಿದೆ
- 1 View
- ಕಾಮೆಂಟ್ ಅನ್ನು ಬರೆಯಿರಿ
ಹಿಂದಿನ ಟೀಸರ್‌ಗಳು ಕಿಯಾ ಸಿರೋಸ್‌ನಲ್ಲಿ ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು, ವಿಶಾಲವಾದ ವೀಲ್ ಆರ್ಚ್‌ಗಳು, ಉದ್ದವಾದ ರೂಫ್ ರೇಲ್‌ಗಳು ಮತ್ತು ಎಲ್-ಆಕಾರದ ಟೈಲ್ ಲೈಟ್‌ಗಳು ಇರುವುದನ್ನು ಖಚಿತಪಡಿಸಿವೆ
ಕಿಯಾ ಸಿರೋಸ್ ಭಾರತದಲ್ಲಿ ಕೊರಿಯನ್ ವಾಹನ ತಯಾರಕರಿಂದ ಮುಂದಿನ ದೊಡ್ಡ ಬಿಡುಗಡೆಯಾಗಿದೆ. ಕಿಯಾ ಈಗಾಗಲೇ ಸಿರೋಸ್ ಎಸ್‌ಯುವಿಯ ಹಲವು ಟೀಸರ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ, ಅವುಗಳಲ್ಲಿ ಇದರ ಹೆಸರನ್ನು ದೃಢೀಕರಿಸುತ್ತದೆ ಮತ್ತು ವಿನ್ಯಾಸದ ಮುಖ್ಯಾಂಶಗಳನ್ನು ಪ್ರದರ್ಶಿಸಿದೆ. ಈಗ, ಸಿರೋಸ್‌ನ ಮತ್ತೊಂದು ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ, ಈ ಬಾರಿ ಭಾರತೀಯ ಖರೀದಿದಾರರು ಬಯಸಿದ ಅತ್ಯಂತ ಅಪೇಕ್ಷಣೀಯ ಫೀಚರ್‌ಗಳಲ್ಲೊಂದು ಇರುವುದು ಕನ್ಫರ್ಮ್ ಮಾಡಿದೆ.
ಟೀಸರ್‌ನಲ್ಲಿ ಏನಿದೆ?
ಇತ್ತೀಚಿನ ವೀಡಿಯೊ ಟೀಸರ್‌ನಲ್ಲಿ ಸುಳಿವು ನೀಡಿದಂತೆ, ಕಿಯಾ ಸಿರೋಸ್ ಪನರೋಮಿಕ್ ಸನ್‌ರೂಫ್ ಅನ್ನು ಹೊಂದಿರುತ್ತದೆ. ಪ್ರಸ್ತುತ, ಸೋನೆಟ್ ಸಿಂಗಲ್-ಪೇನ್ ಸನ್‌ರೂಫ್ ಅನ್ನು ಮಾತ್ರ ನೀಡುತ್ತದೆ ಮತ್ತು ಸಿರೋಸ್ ಸೊನೆಟ್‌ಕ್ಕಿಂತ ಹೆಚ್ಚು ಪ್ರೀಮಿಯಂ ಕಾರು ಆಗಿರುವುದರಿಂದ, ಈ ಫೀಚರ್ ಅನ್ನು ನಿರೀಕ್ಷಿಸಲಾಗಿದೆ.
ಹಿಂದಿನ ಟೀಸರ್‌ಗಳು ಈಗಾಗಲೇ ನಮಗೆ ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಲಾಂಗ್ ಎಲ್‌ಇಡಿ ಡಿಆರ್‌ಎಲ್‌ಗಳಿಂದ ಬೆಂಬಲಿಸುವ ಒಂದು ನೋಟವನ್ನು ನೀಡಿದೆ. ಇತರ ಹೊರಭಾಗದಲ್ಲಿನ ಹೈಲೈಟ್‌ಗಳಲ್ಲಿ ದೊಡ್ಡ ವಿಂಡೋ ಪ್ಯಾನಲ್‌ಗಳು, ಫ್ಲಾಟ್ ರೂಫ್ ಮತ್ತು ಸಿ-ಪಿಲ್ಲರ್ ಕಡೆಗೆ ಬಾಗಿದ ವಿಂಡೋ ಬೆಲ್ಟ್‌ಲೈನ್ ಸೇರಿವೆ. ಟೀಸರ್ ಸ್ಕೆಚ್‌ಗಳು ವಿಶಾಲವಾದ ವೀಲ್ ಆರ್ಚ್‌ಗಳು, ಬಲವಾದ ಶೋಲ್ಡರ್ ಲೈನ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಸಹ ತೋರಿಸಿದೆ. ಉದ್ದನೆಯ ರೂಫ್ ರೇಲ್‌ಗಳು, ಎಲ್-ಆಕಾರದ ಟೈಲ್ ಲೈಟ್‌ಗಳು ಮತ್ತು ನೇರವಾದ ಟೈಲ್‌ಗೇಟ್ ಸಿರೋಸ್‌ನ ಹೊರಭಾಗದ ವಿನ್ಯಾಸದ ಗುಣಲಕ್ಷಣಗಳನ್ನು ಒಳಗೊಂಡಿದೆ.
ಕ್ಯಾಬಿನ್ ಮತ್ತು ನಿರೀಕ್ಷಿತ ಫೀಚರ್‌ಗಳು
ಕಿಯಾ ಇನ್ನೂ ನಮಗೆ ಸಿರೋಸ್‌ನ ಕ್ಯಾಬಿನ್‌ನ ಕುರಿತ ಯಾವುದೇ ನೋಟವನ್ನು ನೀಡಿಲ್ಲವಾದರೂ, ಇದು ಸೋನೆಟ್ ಮತ್ತು ಸೆಲ್ಟೋಸ್ ಎಸ್‌ಯುವಿಗಳೊಂದಿಗೆ ಹೋಲಿಕೆಯನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಸಿರೋಸ್ ಡ್ಯುಯಲ್-ಟೋನ್ ಇಂಟೀರಿಯರ್ ಥೀಮ್‌ನೊಂದಿಗೆ ಬರಬಹುದು, ಆನ್‌ಲೈನ್‌ನಲ್ಲಿ ಕಂಡುಬರುವ ಕೆಲವು ಸ್ಪೈ ಶಾಟ್‌ಗಳು 2-ಸ್ಪೋಕ್ ಸ್ಟೀರಿಂಗ್ ವೀಲ್ ಇರುವಿಕೆಯನ್ನು ಬಹಿರಂಗಪಡಿಸುತ್ತವೆ.
ಫೀಚರ್‌ಗಳ ವಿಷಯದಲ್ಲಿ, ಇದು ಸೋನೆಟ್ ಮತ್ತು ಸೆಲ್ಟೋಸ್‌ನಲ್ಲಿ ಕಂಡುಬರುವ ರೀತಿಯ ಡ್ಯುಯಲ್-ಡಿಸ್‌ಪ್ಲೇ ಸೆಟಪ್, ಆಟೋ ಎಸಿ, ಪನರೋಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ಅನ್ನು ಪಡೆಯಬಹುದು. ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಸೇರಿವೆ.
ಸೋನೆಟ್‌ನಂತೆಯೇ ಅದೇ ಪವರ್‌ಟ್ರೇನ್ ಆಯ್ಕೆಗಳು
ಸಿರೋಸ್ ಸೋನೆಟ್‌ನಂತೆಯೇ ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ N/A ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 ಪಿಎಸ್ |
120 ಪಿಎಸ್ |
116 ಪಿಎಸ್ |
ಟಾರ್ಕ್ |
115 ಎನ್‌ಎಮ್ |
172 ಎನ್‌ಎಮ್ |
250 ಎನ್‌ಎಮ್ |
ಗೇರ್‌ಬಾಕ್ಸ್ |
5-ಸ್ಪೀಡ್ ಮ್ಯಾನ್ಯುವಲ್ |
6-ಸ್ಪೀಡ್ iMT*, 7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ iMT*, 6-ಸ್ಪೀಡ್ ಆಟೋಮ್ಯಾಟಿಕ್ |
*iMT - ಇಂಟಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (ಕ್ಲಚ್‌ಲೆಸ್ ಮ್ಯಾನ್ಯುಯಲ್)
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸ್ಆಪ್ ಚಾನೆಲ್ ಅನ್ನು ಫಾಲೋ ಮಾಡಿ
0 out of 0 found this helpful