• English
    • Login / Register

    ಡೀಲರ್‌ಶಿಪ್‌ಗಳಿಗೆ ಬಂದಿಳಿದ Mahindra BE 6 ಮತ್ತು XEV 9e, ಆಯ್ದ ನಗರಗಳಲ್ಲಿ ಟೆಸ್ಟ್‌ ಡ್ರೈವ್‌ಗಳು ಪ್ರಾರಂಭ

    ಮಹೀಂದ್ರ ಬಿಇ 6 ಗಾಗಿ kartik ಮೂಲಕ ಜನವರಿ 28, 2025 09:05 pm ರಂದು ಪ್ರಕಟಿಸಲಾಗಿದೆ

    • 32 Views
    • ಕಾಮೆಂಟ್‌ ಅನ್ನು ಬರೆಯಿರಿ

    ಎರಡೂ ಇವಿಗಳು ಆಯ್ದ ನಗರಗಳಲ್ಲಿ ಟೆಸ್ಟ್‌ ಡ್ರೈವ್‌ಗೆ ಲಭ್ಯವಿದೆ ಮತ್ತು ಫೆಬ್ರವರಿಯಲ್ಲಿ ಭಾರತಾದ್ಯಂತ ಚಾಲನೆಗೊಳ್ಳಲಿವೆ

    Mahindra BE 6 And Mahindra XEV 9e Arrive At Dealerships, Test Drives Underway In Select Cities

    ಮಹೀಂದ್ರಾದ ಇತ್ತೀಚಿನ ಎಲೆಕ್ಟ್ರಿಕ್ ಕಾರುಗಳಾದ BE 6 ಮತ್ತು XEV 9e ಡೀಲರ್‌ಶಿಪ್‌ಗಳಿಗೆ ಬಂದಿವೆ. ಈ ಭಾರತೀಯ ಕಾರು ತಯಾರಕ ಕಂಪನಿಯು ಹಂತ ಹಂತವಾಗಿ ಟೆಸ್ಟ್ ಡ್ರೈವ್‌ಗಳು ಮತ್ತು ಬುಕಿಂಗ್‌ಗಳನ್ನು ಸ್ವೀಕರಿಸುತ್ತಿದೆ, ಎರಡನೇ ಹಂತದ ನಗರಗಳಲ್ಲಿ ಈಗಾಗಲೇ ಟೆಸ್ಟ್ ಡ್ರೈವ್‌ಗಳು ಲಭ್ಯವಿದ್ದು, ಫೆಬ್ರವರಿ 14 ರಿಂದ ಬುಕಿಂಗ್‌ಗಳು ಪ್ರಾರಂಭವಾಗಲಿವೆ. ದೊಡ್ಡ 79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಹೊಂದಿರುವ ಟಾಪ್ ಮೊಡೆಲ್‌ ತ್ರೀ ವೇರಿಯೆಂಟ್‌ಗಳು ಮಾತ್ರ ಬುಕಿಂಗ್‌ಗೆ ಲಭ್ಯವಿರುತ್ತವೆ ಮತ್ತು ಉಳಿದ ವೇರಿಯೆಂಟ್‌ಗಳು ಮಾರ್ಚ್ ಅಂತ್ಯದಲ್ಲಿ ಲಭ್ಯವಿರುತ್ತವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಮಹೀಂದ್ರಾ BE 6 ಮತ್ತು XEV 9e ಕುರಿತ ಸಂಕ್ಷಿಪ್ತ ವಿವರಗಳು ಇಲ್ಲಿದೆ.

    ಮಹೀಂದ್ರಾ BE 6 ಮತ್ತು XEV 9e ಎಕ್ಸ್‌ಟೀರಿಯರ್‌ 

    BE 6 fascia

    ಮಹೀಂದ್ರಾ BE 6 ಮತ್ತು XEV 9e ಎರಡರ ಬಾಡಿ ಆಕೃತಿಗಳು ತಮ್ಮ ವಿಶಿಷ್ಟ, ದೂರದೃಷ್ಟಿಯುಳ್ಳ ನೋಟದಿಂದಾಗಿ ತಕ್ಷಣ ಗಮನ ಸೆಳೆಯುತ್ತವೆ. ಎರಡೂ ಇವಿಗಳು ತೀಕ್ಷ್ಣವಾದ ಶೈಲಿಯ ಎಲ್‌ಇಡಿ ಹೆಡ್‌ಲೈಟ್‌ಗಳು, ಇಳಿಜಾರಾದ ಎಸ್‌ಯುವಿ-ಕೂಪ್ ತರಹದ ರೂಫ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆಯುತ್ತವೆ.

    xev 9e

    BE 6 ಸ್ಪ್ಲಿಟ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ, ಆದರೆ XEV 9e ನಲ್ಲಿರುವವುಗಳು ಕನೆಕ್ಟ್‌ ಆಗಿವೆ. 

    ಮಹೀಂದ್ರಾ BE 6 ಮತ್ತು XEV 9e ನ ಇಂಟೀರಿಯರ್‌ಗಳು ಮತ್ತು ಫೀಚರ್‌ಗಳು

    BE 6 interior

    ಮಹೀಂದ್ರಾ BE 6 ಮತ್ತು XEV 9e ಎರಡೂ ಕಾರುಗಳು ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್‌ಗಳನ್ನು ಹೊಂದಿದ್ದು, ಮಧ್ಯದಲ್ಲಿ ಹೊಳೆಯುವ 'ಇನ್ಫಿನಿಟಿ' ಲೋಗೋ ಹೊಂದಿರುವ ಎರಡು-ಸ್ಪೋಕ್ ಸ್ಟೀರಿಂಗ್ ಚಕ್ರಗಳನ್ನು ಹೊಂದಿವೆ. XEV 9e ನ ಡ್ಯಾಶ್‌ಬೋರ್ಡ್ ಹೆಚ್ಚು ಕನಿಷ್ಠವಾಗಿದ್ದರೂ, BE 6 ನಲ್ಲಿರುವದು ನೇರವಾಗಿ ಫೈಟರ್ ಜೆಟ್‌ನಂತೆ ಕಾಣುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿ BE6 ಗಾಗಿ 12.3-ಇಂಚಿನ ಡ್ಯುಯಲ್ ಡಿಜಿಟಲ್ ಸ್ಕ್ರೀನ್ ಸೆಟಪ್ ಮತ್ತು XEV 9e ಗಾಗಿ ಟ್ರಿಪಲ್-ಸ್ಕ್ರೀನ್ ಸೆಟಪ್ ಮತ್ತು ವರ್ಧಿತ ರಿಯಾಲಿಟಿ ಹೆಡ್ಸ್-ಅಪ್ ಡಿಸ್‌ಪ್ಲೇ ಇದೆ.

    XEV 9e Interior

    BE 6 ಮತ್ತು XEV 9e ನಲ್ಲಿರುವ ಫೀಚರ್‌ಗಳಲ್ಲಿ ಚಾಲಿತ ಮತ್ತು ವೆಂಟಿಲೇಟೆಡ್‌ ಮುಂಭಾಗದ ಸೀಟುಗಳು, ಮಲ್ಟಿ-ಝೋನ್‌ ಆಟೋ AC ಮತ್ತು 16-ಸ್ಪೀಕರ್ ಹಾರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಸೇರಿವೆ.

    ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಎರಡೂ ಇವಿಗಳು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನೊಂದಿಗೆ ಬರುತ್ತವೆ.

    ಇದನ್ನೂ ಓದಿ: Kia Carens ಪ್ರೀಯರಿಗೆ ಸಿಹಿಸುದ್ದಿ, ಮುಂಬರುವ ಫೇಸ್‌ಲಿಫ್ಟ್ ಜೊತೆಗೆ ಅಸ್ತಿತ್ವದಲ್ಲಿರುವ ಮೊಡೆಲ್‌ಗಳು ಸಹ ಲಭ್ಯ

    ಮಹೀಂದ್ರಾ BE 6 ಮತ್ತು XEV 9e ಪವರ್‌ಟ್ರೇನ್

    BE 6 ಮತ್ತು XEV 9e ಎರಡೂ ಕಾರುಗಳು 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದು, ಹಿಂದಿನ ಚಕ್ರಗಳಿಗೆ ಶಕ್ತಿ ನೀಡುವ ಒಂದೇ ರೀತಿಯ ಮೋಟಾರ್ ಸೆಟಪ್ ಅನ್ನು ಹೊಂದಿವೆ, ಇವುಗಳ ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:

    ವಿಶೇಷಣಗಳು

    ಬಿಇ6

    ಎಕ್ಸ್‌ಇವಿ 9e

    ಬ್ಯಾಟರಿ ಪ್ಯಾಕ್‌

    59 ಕಿ.ವ್ಯಾ ಮತ್ತು 79 ಕಿ.ವ್ಯಾ

    59 ಕಿ.ವ್ಯಾ ಮತ್ತು 79 ಕಿ.ವ್ಯಾ

    ಪವರ್‌

    231 ಪಿಎಸ್ ಮತ್ತು 286 ಪಿಎಸ್

    231 ಪಿಎಸ್ ಮತ್ತು 286 ಪಿಎಸ್

    ಟಾರ್ಕ್‌

    380 ಎನ್ಎಂ

    380 ಎನ್ಎಂ

    ಕ್ಲೈಮ್‌ ಮಾಡಲಾದ ರೇಂಜ್‌ (MIDC PI+P II) 

    535 ಕಿ.ಮೀ ಮತ್ತು 682 ಕಿ.ಮೀ

    542 ಕಿ.ಮೀ ಮತ್ತು 656 ಕಿ.ಮೀ

    ಎರಡೂ ಬ್ಯಾಟರಿಗಳು 175 ಕಿ.ವ್ಯಾಟ್‌ವರೆಗಿನ DC ಫಾಸ್ಟ್‌ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ ಬರುತ್ತವೆ, ಬ್ಯಾಟರಿಗಳನ್ನು 20 ನಿಮಿಷಗಳಲ್ಲಿ 20 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡುತ್ತವೆ.

    ಮಹೀಂದ್ರಾ BE 6 ಮತ್ತು XEV 9e ಬೆಲೆ ಮತ್ತು ಪ್ರತಿಸ್ಪರ್ಧಿಗಳು

    BE 6 rear

    ಮಹೀಂದ್ರಾ BE6 ಬೆಲೆ 18.9 ಲಕ್ಷ ರೂ.ನಿಂದ 26.9 ಲಕ್ಷ ರೂ.ಗಳವರೆಗೆ ಇದ್ದರೆ, ಫ್ಲ್ಯಾಗ್‌ಶಿಪ್ ಇವಿಯ ಬೆಲೆ 21.9 ಲಕ್ಷ ರೂ.ನಿಂದ 30.5 ಲಕ್ಷ ರೂ.ಗಳವರೆಗೆ ಇದೆ. ಬಿಇ 6 ಕಾರು ಟಾಟಾ ಕರ್ವ್ ಇವಿ, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮಾರುತಿ ಸುಜುಕಿ ಇ ವಿಟಾರಾ ಮತ್ತು ಎಮ್‌ಜಿ ZS ಇವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದ್ದರೆ, XEV 9e ಕಾರು BYD ಅಟ್ಟೊ 3 ಮತ್ತು ಮುಂಬರುವ ಟಾಟಾ ಹ್ಯಾರಿಯರ್ ಇವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

    (ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಆಗಿದೆ)

    ಇದನ್ನೂ ಸಹ ಓದಿ: ಕಿಯಾ Sonet, Seltos ಮತ್ತು Carens ಗೆ ಹೊಸ ವೇರಿಯೆಂಟ್‌ಗಳ ಸೇರ್ಪಡೆ ಹಾಗೂ ಬೆಲೆಗಳಲ್ಲಿ ಹೆಚ್ಚಳ

    ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

    was this article helpful ?

    Write your Comment on Mahindra ಬಿಇ 6

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience