• English
    • Login / Register

    Mahindra BE 6 ಮತ್ತು XEV 9e ಗ್ರಾಹಕರು ಚಾರ್ಜರ್‌ಅನ್ನು ಖರೀದಿಸುವುದು ಈಗ ಕಡ್ಡಾಯವಲ್ಲ

    ಮಹೀಂದ್ರ ಬಿಇ 6 ಗಾಗಿ dipan ಮೂಲಕ ಮಾರ್ಚ್‌ 10, 2025 09:49 pm ರಂದು ಪ್ರಕಟಿಸಲಾಗಿದೆ

    • 6 Views
    • ಕಾಮೆಂಟ್‌ ಅನ್ನು ಬರೆಯಿರಿ

    ಗ್ರಾಹಕರು ಕೆಲವು ಷರತ್ತುಗಳನ್ನು ಪೂರೈಸಿದರೆ, EVಗಳೊಂದಿಗೆ ಚಾರ್ಜರ್‌ಗಳನ್ನು ಖರೀದಿಸುವುದರಿಂದ ಹೊರಗುಳಿಯಬಹುದು ಎಂದು ಮಹೀಂದ್ರಾ ಹೇಳಿಕೊಂಡಿದೆ, ಇದು ಮೊದಲು ಕಡ್ಡಾಯವಾಗಿತ್ತು

    Mahindra BE 6 And XEV 9e Customers Can Now Opt Out From Compulsorily Buying A Charger With The EVs

    ಮಹೀಂದ್ರಾ XEV 9e ಮತ್ತು ಮಹೀಂದ್ರಾ BE 6 ಬಿಡುಗಡೆಯ ಸಮಯದಲ್ಲಿ, ಮಹೀಂದ್ರಾವು ಈ EVಗಳೊಂದಿಗೆ ಕಡ್ಡಾಯವಾಗಿ ಚಾರ್ಜರ್ ಖರೀದಿಸಬೇಕು ಎಂದು ಹೇಳಿತ್ತು. ಆದರೆ ಈಗ, ಕೆಲವು ಸಂದರ್ಭಗಳಲ್ಲಿ ಗ್ರಾಹಕರು ಈ ಯೋಜನೆಯಿಂದ ಹೊರಗುಳಿಯಬಹುದು ಎಂದು ಕಾರು ತಯಾರಕರು ಹೇಳಿದ್ದಾರೆ.

    ಗ್ರಾಹಕರು OEM ಚಾರ್ಜರ್ ಖರೀದಿಸುವುದರಿಂದ ಹೊರಗುಳಿಯಬಹುದಾದ ಸಂದರ್ಭಗಳು ಈ ಕೆಳಗಿನಂತಿವೆ:

    ಷರತ್ತುಗಳು

    • ಗ್ರಾಹಕರ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಖಾಸಗಿ EV ಚಾರ್ಜರ್‌ಗೆ ಅವಕಾಶವಿಲ್ಲದಿದ್ದರೆ.

    • ಮಹೀಂದ್ರಾ-ಅನುಮೋದಿತ ಚಾರ್ಜರ್ ಈಗಾಗಲೇ ಗ್ರಾಹಕರಲ್ಲಿ ಲಭ್ಯವಿದ್ದರೆ.

    • ಗ್ರಾಹಕರು ಹಲವು ಮಹೀಂದ್ರಾ ಇವಿಗಳನ್ನು ಖರೀದಿಸಿದರೆ ಮತ್ತು ಕನಿಷ್ಠ ಒಂದು ಮೊಡೆಲ್‌ಗೆ ಮಾತ್ರ ಚಾರ್ಜರ್ ಪಡೆಯಬಹುದು.

    ಮೇಲಿನ ಯಾವುದೇ ಷರತ್ತುಗಳನ್ನು ಪೂರೈಸಿದರೆ, ಗ್ರಾಹಕರು ಇವಿ ಜೊತೆಗೆ OEM ಚಾರ್ಜರ್ ಖರೀದಿಸದೇ ಇರಬಹುದು. ಆದರೂ, ಖಚಿತವಾದ ಸುರಕ್ಷತೆ ಮತ್ತು ಚಾರ್ಜಿಂಗ್ ವೇಗಕ್ಕಾಗಿ ಮಹೀಂದ್ರಾ-ಪ್ರಮಾಣೀಕೃತ ಚಾರ್ಜರ್‌ಗಳ ಬಳಕೆಯನ್ನು ಕಾರು ತಯಾರಕರು ಬಲವಾಗಿ ಶಿಫಾರಸು ಮಾಡುತ್ತಾರೆ.

    ಈಗ, ಮಹೀಂದ್ರಾ BE 6 ಮತ್ತು XEV 9e ಗಳಲ್ಲಿ ಲಭ್ಯವಿರುವ ಚಾರ್ಜಿಂಗ್ ಆಯ್ಕೆಗಳನ್ನು ನೋಡೋಣ.

    ಚಾರ್ಜಿಂಗ್ ಆಯ್ಕೆಗಳು

    Mahindra XEV 9e Front

    ಎರಡು ಇವಿಗಳನ್ನು ಬಿಡುಗಡೆ ಮಾಡಿದಾಗಿನಿಂದ, ಮಹೀಂದ್ರಾ ಈಗಾಗಲೇ 7.3 ಕಿಲೋವ್ಯಾಟ್ ಎಸಿ ಮತ್ತು 11.2 ಕಿಲೋವ್ಯಾಟ್ ಎಸಿ ಫಾಸ್ಟ್ ಚಾರ್ಜರ್ ಸೇರಿದಂತೆ ಎರಡು ಆಯ್ಕೆಗಳನ್ನು ಕ್ರಮವಾಗಿ 50,000 ಮತ್ತು 75,000 ರೂಗಳಿಗೆ ನೀಡುತ್ತಿದೆ.

     ಇದನ್ನೂ ಓದಿ: ಬ್ರೆಜಿಲ್‌ನಲ್ಲಿ Volkswagen Tera ಅನಾವರಣ: ವೋಕ್ಸ್‌ವ್ಯಾಗನ್‌ನ ಹೊಸ ಎಂಟ್ರಿ-ಲೆವೆಲ್ SUV ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು

    ಮಹೀಂದ್ರಾ BE 6 ಮತ್ತು XEV 9e ಪವರ್‌ಟ್ರೇನ್ ಆಯ್ಕೆಗಳು

    Mahindra BE 6

    ಮಹೀಂದ್ರಾ BE 6 ಮತ್ತು XEV 9e ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರುತ್ತವೆ. ಅದರ ವಿವರವಾದ ವಿಶೇಷಣಗಳು ಇಲ್ಲಿವೆ:

    ಮೊಡೆಲ್‌

    ಮಹೀಂದ್ರಾ ಬಿಇ6

    ಮಹೀಂದ್ರಾ ಎಕ್ಸ್‌ಇವಿ 9ಇ

    ಬ್ಯಾಟರಿ ಪ್ಯಾಕ್‌

    59 ಕಿ.ವ್ಯಾಟ್‌

    79 ಕಿ.ವ್ಯಾಟ್‌

    59 ಕಿ.ವ್ಯಾಟ್‌

    79 ಕಿ.ವ್ಯಾಟ್‌

    ಎಲೆಕ್ಟ್ರಿಕ್ ಮೋಟರ್‌ಗಳ ಸಂಖ್ಯೆ

    1

    1

    1

    1

    ಪವರ್‌

    231 ಪಿಎಸ್‌

    286 ಪಿಎಸ್‌

    231 ಪಿಎಸ್‌

    286 ಪಿಎಸ್‌

    ಟಾರ್ಕ್‌

    380 ಎನ್‌ಎಮ್‌

    380 ಎನ್‌ಎಮ್‌

    380 ಎನ್‌ಎಮ್‌

    380 ಎನ್‌ಎಮ್‌

    ಕ್ಲೈಮ್ಡ್‌ ರೇಂಜ್‌ (MIDC ಪಾರ್ಟ್‌ 1+ ಪಾರ್ಟ್‌ 2)

    557 ಕಿ.ಮೀ.

    683 ಕಿ.ಮೀ.

    542 ಕಿ.ಮೀ.

    656 ಕಿ.ಮೀ

    ಡ್ರೈವ್‌ಟ್ರೈನ್‌

    RWD*

    RWD

    RWD

    RWD

    *RWD = ರಿಯರ್‌ ವೀಲ್‌ ಡ್ರೈವ್‌

    ಎರಡೂ ಇವಿಗಳ ಎಲ್ಲಾ ವೇರಿಯೆಂಟ್‌ಗಳು 59 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುತ್ತವೆ, ಆದರೆ ಎರಡೂ ಕಾರುಗಳಲ್ಲಿನ ಪ್ಯಾಕ್ ತ್ರೀ ಟ್ರಿಮ್ ಎರಡೂ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ.

    ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

    Mahindra BE 6

     ಮಹೀಂದ್ರಾ ಬಿಇ 6 ಬೆಲೆ 18.90 ಲಕ್ಷದಿಂದ 26.90 ಲಕ್ಷ ರೂ.ಗಳವರೆಗೆ ಇದ್ದು, ಇದು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ ಇವಿ, ಎಂಜಿ ಝಡ್ಎಸ್ ಇವಿ ಮತ್ತು ಮುಂಬರುವ ಮಾರುತಿ ಇ ವಿಟಾರಾಗಳಿಗೆ ಪ್ರತಿಸ್ಪರ್ಧಿಯಾಗಿದೆ.

    Mahindra XEV 9e

    ಮತ್ತೊಂದೆಡೆ, ಮಹೀಂದ್ರಾ ಎಕ್ಸ್‌ಇವಿ 9e ಬೆಲೆ 21.90 ಲಕ್ಷ ರೂ.ಗಳಿಂದ 30.50 ಲಕ್ಷ ರೂ.ಗಳವರೆಗೆ ಇದೆ. ಇದು ಭಾರತದಲ್ಲಿ ಬಿಡುಗಡೆಯಾದಾಗ ಟಾಟಾ ಹ್ಯಾರಿಯರ್ ಇವಿ ಜೊತೆ ಪೈಪೋಟಿ ನಡೆಸಲಿದೆ.  

    ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಮ್ ಬೆಲೆಯಾಗಿದೆ ಮತ್ತು ಇದರಲ್ಲಿ ಚಾರ್ಜರ್ ವೆಚ್ಚ ಒಳಗೊಂಡಿರುವುದಿಲ್ಲ.

    ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

    was this article helpful ?

    Write your Comment on Mahindra ಬಿಇ 6

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience