Mahindra BE 6 ಮತ್ತು XEV 9e ಟೆಸ್ಟ್ ಡ್ರೈವ್, ಬುಕಿಂಗ್ ಮತ್ತು ಡೆಲಿವರಿ ಕುರಿತ ವಿವರಗಳು ಬಹಿರಂಗ
ಮಹೀಂದ್ರ be 6 ಗಾಗಿ dipan ಮೂಲಕ ಜನವರಿ 10, 2025 05:18 pm ರಂದು ಪ್ರಕಟಿಸಲಾಗಿದೆ
- 28 Views
- ಕಾಮೆಂಟ್ ಅನ್ನು ಬರೆಯಿರಿ
BE 6 ಕಾರಿನ ಬೆಲೆ 18.90 ಲಕ್ಷ ರೂಪಾಯಿಗಳಿಂದ 26.90 ಲಕ್ಷ ರೂಪಾಯಿಗಳವರೆಗೆ ಇದ್ದರೆ, XEV 9e ಕಾರಿನ ಬೆಲೆ 21.90 ಲಕ್ಷ ರೂಪಾಯಿಗಳಿಂದ 30.50 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋ ರೂಂ) ಇದೆ
-
ಎರಡೂ ಮಹೀಂದ್ರಾ ಎಸ್‌ಯುವಿಗಳನ್ನು ಪ್ಯಾಕ್ ಒನ್, ಪ್ಯಾಕ್ ಟು ಮತ್ತು ಪ್ಯಾಕ್ ತ್ರೀ ಎಂಬ 3 ವಿಶಾಲ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ.
-
59 ಕಿ.ವ್ಯಾಟ್ ಮತ್ತು 79 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಗಳು ಮತ್ತು 500 ಕಿ.ಮೀ.ಗಿಂತ ಹೆಚ್ಚಿನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡಲಾಗುತ್ತದೆ.
-
ಸದ್ಯಕ್ಕೆ ಸಿಂಗಲ್-ಮೋಟಾರ್ ರಿಯರ್-ವೀಲ್-ಡ್ರೈವ್ (RWD) ಸೆಟಪ್ ಮಾತ್ರ ಲಭ್ಯವಿದೆ.
-
ಬಹು ಹಲವು ಸ್ಕ್ರೀನ್‌ಗಳು, ಸೆಲ್ಫಿ ಕ್ಯಾಮೆರಾ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಫೀಚರ್‌ಗಳಲ್ಲಿ ಸೇರಿವೆ.
-
ಸುರಕ್ಷತಾ ಪ್ಯಾಕೇಜ್‌ನಲ್ಲಿ 7 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿದೆ.
ಮಹೀಂದ್ರಾ BE 6 ಮತ್ತು XEV 9e ಮಹೀಂದ್ರಾದ ಇತ್ತೀಚಿನ EV ಗಳಾಗಿ 2024ರ ನವೆಂಬರ್‌ನಲ್ಲಿ ಪರಿಚಯಿಸಲಾಯಿತು. ಇತ್ತೀಚೆಗೆ, ಎರಡೂ ಇವಿಗಳ ದೊಡ್ಡ 79 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಟಾಪ್-ಸ್ಪೆಕ್ 'ಪ್ಯಾಕ್ ತ್ರೀ' ವೇರಿಯೆಂಟ್‌ನ ಬೆಲೆಗಳನ್ನು ಬಹಿರಂಗಪಡಿಸಲಾಯಿತು. ಬೆಲೆ ಬಹಿರಂಗದೊಂದಿಗೆ, ಭಾರತೀಯ ಬ್ರ್ಯಾಂಡ್‌ನ ಎರಡೂ ಎಲೆಕ್ಟ್ರಿಕ್ ಎಸ್‌ಯುವಿಗಳ ಬುಕಿಂಗ್ ಮತ್ತು ಡೆಲಿವೆರಿಗಾಗಿ ಕೆಲವು ಪ್ರಮುಖ ದಿನಾಂಕಗಳನ್ನು ಸಹ ಅನಾವರಣಗೊಳಿಸಿದೆ, ಅದನ್ನು ನಾವು ಕೆಳಗೆ ವಿವರಿಸಿದ್ದೇವೆ.
ಮಹೀಂದ್ರಾ BE 6 ಮತ್ತು XEV 9e: ಟೆಸ್ಟ್ ಡ್ರೈವ್‌ಗಳು
ಮಹೀಂದ್ರಾ BE 6 ಮತ್ತು XEV 9e EV ಗಳ ಟೆಸ್ಟ್ ಡ್ರೈವ್‌ಗಳು ಜನವರಿ 14 ರಿಂದ ಹಂತ ಹಂತವಾಗಿ ಪ್ರಾರಂಭವಾಗಲಿದ್ದು, ಅದರ ವಿವರಗಳು ಈ ಕೆಳಗಿನಂತಿವೆ:
ಹಂತ |
ದಿನಾಂಕ |
ನಗರಗಳು |
ಹಂತ 1 |
ಜನವರಿ 14, 2025 |
ದೆಹಲಿ ಎನ್‌ಸಿಆರ್, ಮುಂಬೈ ಎಂಎಂಆರ್, ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ |
ಹಂತ 2 |
ಜನವರಿ 24, 2025 |
ಹಂತ 1 ನಗರಗಳು + ಅಹಮದಾಬಾದ್, ಭೋಪಾಲ್, ಕೊಚ್ಚಿನ್, ಕೊಯಮತ್ತೂರು, ಗೋವಾ, ಹೌರಾ, ಇಂದೋರ್, ಜೈಪುರ, ಜಲಂಧರ್, ಲಕ್ನೋ, ಕೋಲ್ಕತ್ತಾ, ಲುಧಿಯಾನ, ಸೂರತ್, ವಡೋದರಾ, ಚಂಡೀಗಢ, ಟ್ರಿಸಿಟಿ |
ಹಂತ 3 |
ಫೆಬ್ರವರಿ 7, 2025 |
ದೇಶದಾದ್ಯಂತ |
ನೀವು ಜನವರಿ 7, 2025 ರಿಂದ ನಿಮ್ಮ ಆದ್ಯತೆಯ ವೇರಿಯೆಂಟ್ ಅನ್ನು ಬುಕಿಂಗ್ ಮಾಡಲು ಪ್ರಾರಂಭಿಸಬಹುದು.
ಇದನ್ನೂ ಓದಿ: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ನಲ್ಲಿ ಭಾರತದಕ್ಕೆ ಪಾದಾರ್ಪಣೆ ಮಾಡಲಿರುವ BYD ಸೀಲಿಯನ್ 7
ಮಹೀಂದ್ರಾ BE 6 ಮತ್ತು XEV 9e: ಬುಕಿಂಗ್‌ಗಳು
79 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ BE 6 ಮತ್ತು XEV 9e ಎರಡರ ಟಾಪ್-ಸ್ಪೆಕ್ 'ಪ್ಯಾಕ್ ತ್ರೀ' ವೇರಿಯೆಂಟ್‌ನ ಬುಕಿಂಗ್‌ಗಳು 2025ರ ಫೆಬ್ರವರಿ 14ರಿಂದ ಪ್ರಾರಂಭವಾಗಲಿವೆ. ಮುಂದಿನ ಹಂತದ ಬುಕಿಂಗ್‌ಗಳು ಮಾರ್ಚ್ 2025 ರ ಅಂತ್ಯದ ವೇಳೆಗೆ ಪ್ರಾರಂಭವಾಗಲಿದ್ದು, ಇದರಲ್ಲಿ ಎಲ್ಲಾ ವೇರಿಯೆಂಟ್‌ಗಳನ್ನು ನೀಡಲಾಗುವುದು.
ಮಹೀಂದ್ರ ಬಿಇ 6 ಮತ್ತು ಎಕ್ಸ್‌ಇವಿ 9ಇ: ಡೆಲಿವೆರಿಗಳು
ಮಾರ್ಚ್ 2025ರ ಆರಂಭದಿಂದ ಇವಿಗಳ ಡೆಲಿವೆರಿಗಳು ಪ್ರಾರಂಭವಾಗಲಿವೆ ಎಂದು ಕಾರು ತಯಾರಕರು ದೃಢಪಡಿಸಿದ್ದಾರೆ. ಟಾಪ್-ಸ್ಪೆಕ್ ವೇರಿಯೆಂಟ್‌ನ ಡೆಲಿವೆರಿಗಳು ಮೊದಲು ಪ್ರಾರಂಭವಾಗುತ್ತವೆ, ಆದರೆ ಇತರ ವೇರಿಯೆಂಟ್‌ನ ಡೆಲಿವೆರಿಗಳು ಕೆಲವು ತಿಂಗಳುಗಳ ನಂತರ ಪ್ರಾರಂಭವಾಗುವ ನಿರೀಕ್ಷೆಯಿದೆ. ಮಹೀಂದ್ರಾ ಥಾರ್ ರಾಕ್ಸ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ಸೇರಿದಂತೆ ಮಹೀಂದ್ರಾದ ಇತರ ಹೊಸ ಮೊಡೆಲ್‌ಗಳಲ್ಲಿ ಇದೇ ರೀತಿ ನೀಡಲಾಗಿತ್ತು.
ಮಹೀಂದ್ರಾ BE 6 ಮತ್ತು XEV 9e: ಫೀಚರ್‌ಗಳು ಮತ್ತು ಸುರಕ್ಷತೆ
![Mahindra XEV 9e Dashboard](https://stimg.cardekho.com/pwa/img/spacer3x2.png)
![Mahindra BE 6 interior](https://stimg.cardekho.com/pwa/img/spacer3x2.png)
ಮಹೀಂದ್ರಾ XEV 9e ಮತ್ತು BE 6e ಕಾರುಗಳನ್ನು ಪನೋರಮಿಕ್ ಸನ್‌ರೂಫ್, ಮಲ್ಟಿ-ಝೋನ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಮತ್ತು ಪವರ್ಡ್ ಮುಂಭಾಗದ ಸೀಟುಗಳು ಮತ್ತು 1400-ವ್ಯಾಟ್ 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್‌ನಂತಹ ಪ್ರೀಮಿಯಂ ಫೀಚರ್‌ಗಳೊಂದಿಗೆ ಸಜ್ಜುಗೊಳಿಸಿದೆ. ಎರಡೂ EVಗಳು ಆಗ್ಮೆಂಟೆಡ್ ರಿಯಾಲಿಟಿ (AR) ಆಧಾರಿತ ಹೆಡ್-ಅಪ್ ಡಿಸ್‌ಪ್ಲೇಯನ್ನು ಸಹ ಒಳಗೊಂಡಿವೆ. XEV 9e ಮೂರು 12.3-ಇಂಚಿನ ಸ್ಕ್ರೀನ್‌ಗಳನ್ನು ಹೊಂದಿದೆ (ಡ್ರೈವರ್‌ಗಾಗಿ ಡಿಸ್‌ಪ್ಲೇ, ಟಚ್‌ಸ್ಕ್ರೀನ್ ಮತ್ತು ಪ್ಯಾಸೆಂಜರ್ ಡಿಸ್‌ಪ್ಲೇಗಾಗಿ ತಲಾ ಒಂದು), ಆದರೆ BE 6e ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಪಡೆಯುತ್ತದೆ.
ಸುರಕ್ಷತಾ ದೃಷ್ಟಿಯಿಂದ, ಎರಡೂ ಮೊಡೆಲ್‌ಗಳು 7 ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಬರುತ್ತವೆ. ಇವುಗಳು ಪಾರ್ಕ್ ಅಸಿಸ್ಟ್ ಸಿಸ್ಟಮ್ ಜೊತೆಗೆ ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಫಾರ್ವರ್ಡ್ ಡಿಕ್ಕಿ ಎಚ್ಚರಿಕೆಯಂತಹ ಫೀಚರ್‌ಗಳೊಂದಿಗೆ ಲೆವೆಲ್-2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು) ಅನ್ನು ಸಹ ನೀಡುತ್ತದೆ.
ಇದನ್ನೂ ಓದಿ: Mahindra XEV 9eನ ಟಾಪ್ ವೇರಿಯೆಂಟ್‌ನ ಬೆಲೆಗಳು ಬಹಿರಂಗ; 30.50 ಲಕ್ಷ ರೂ.ನಿಂದ ಪ್ರಾರಂಭ
ಮಹೀಂದ್ರಾ BE 6 ಮತ್ತು XEV 9e: ಪವರ್‌ಟ್ರೇನ್ ಆಯ್ಕೆಗಳು
ಮಹೀಂದ್ರಾ ಬಿಇ6 ಮತ್ತು XEV 9e ಎರಡೂ ಒಂದೇ ರೀತಿಯ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತವೆ, ಆದರೆ ವೈವಿಧ್ಯಮಯ ರೇಂಜ್‌ಗಳನ್ನು ಹೊಂದಿವೆ, ಅವುಗಳ ವಿವರಗಳು ಈ ಕೆಳಗಿನಂತಿವೆ:
ಬ್ಯಾಟರಿ ಪ್ಯಾಕ್ |
59 ಕಿ.ವ್ಯಾಟ್ |
79 ಕಿ.ವ್ಯಾಟ್ |
ಎಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ |
1 |
1 |
ಪವರ್ |
231 ಪಿಎಸ್ |
286 ಪಿಎಸ್ |
ಟಾರ್ಕ್ |
380 ಎನ್‌ಎಮ್ |
380 ಎನ್‌ಎಮ್ |
ರೇಂಜ್ (ಎಂಐಡಿಸಿ ಭಾಗ 1 + ಭಾಗ 2) |
535 ಕಿಮೀ (BE 6) / 542 ಕಿಮೀ (XEV 9e) |
682 ಕಿಮೀ (BE 6) / 656 ಕಿಮೀ (XEV 9e) |
ಡ್ರೈವ್‌ಟ್ರೈನ್ |
ರಿಯರ್ ವೀಲ್ ಡ್ರೈವ್ |
ರಿಯರ್ ವೀಲ್ ಡ್ರೈವ್ |
ಮಹೀಂದ್ರಾ BE 6 ಮತ್ತು XEV 9e: ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಬಿಇ 6ನ ಬೆಲೆಗಳು 18.90 ಲಕ್ಷ ರೂ.ನಿಂದ 26.90 ಲಕ್ಷ ರೂ.ಗಳವರೆಗೆ ಇರಲಿದೆ, ಆದರೆ XEV 9e ಬೆಲೆ 21.90 ಲಕ್ಷ ರೂ.ಗಳಿಂದ 30.50 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಇದೆ. ಈ ಬೆಲೆಗಳು ಹೋಮ್ ಚಾರ್ಜರ್‌ನ ಬೆಲೆಯನ್ನು ಒಳಗೊಂಡಿಲ್ಲ ಎಂಬುದನ್ನು ಗಮನಿಸಬೇಕು, ಇದನ್ನು ಕಾರು ತಯಾರಕರು ಪ್ರತ್ಯೇಕವಾಗಿ ವಿಧಿಸುತ್ತಾರೆ.
ಮಹೀಂದ್ರಾ BE 6 ಕಾರು, ಟಾಟಾ ಕರ್ವ್ ಇವಿ, ಎಂಜಿ ಝಡ್ಎಸ್ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಮತ್ತು ಮಾರುತಿ ಇ ವಿಟಾರಾ ಕಾರುಗಳಿಗೆ ಪೈಪೋಟಿ ನೀಡಲಿದೆ. ಮತ್ತೊಂದೆಡೆ, ಮಹೀಂದ್ರಾ XEV 9e ಗೆ ಈಗ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ, ಆದರೆ ಇದು ಬಿವೈಡಿ ಆಟ್ಟೋ 3, ಮುಂಬರುವ ಟಾಟಾ ಹ್ಯಾರಿಯರ್ ಇವಿ ಮತ್ತು ಟಾಟಾ ಸಫಾರಿ ಇವಿಗಳೊಂದಿಗೆ ಪೈಪೋಟಿ ನಡೆಸಲಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ