• English
  • Login / Register

Mahindra XEV 9eನ ಟಾಪ್‌ ವೇರಿಯೆಂಟ್‌ನ ಬೆಲೆಗಳು ಬಹಿರಂಗ; 30.50 ಲಕ್ಷ ರೂ.ನಿಂದ ಪ್ರಾರಂಭ

ಮಹೀಂದ್ರ xev 9e ಗಾಗಿ dipan ಮೂಲಕ ಜನವರಿ 07, 2025 10:26 pm ರಂದು ಪ್ರಕಟಿಸಲಾಗಿದೆ

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಟಾಪ್-ಸ್ಪೆಕ್ ಪ್ಯಾಕ್ 3 ವೇರಿಯೆಂಟ್‌ನ ಬುಕಿಂಗ್‌ಗಳು 2025ರ ಫೆಬ್ರವರಿ 14ರಿಂದ ಪ್ರಾರಂಭವಾಗುತ್ತವೆ

Mahindra XEV 9e Fully Loaded Pack 3 Variant's Prices Revealed; Launched At Rs 30.50 Lakh

  • 79 ಕಿ.ವ್ಯಾಟ್‌ ಬ್ಯಾಟರಿಯೊಂದಿಗೆ ಟಾಪ್-ಸ್ಪೆಕ್ ಪ್ಯಾಕ್ ತ್ರೀ ವೇರಿಯೆಂಟ್‌ನ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆ 30.50 ಲಕ್ಷ ರೂ.ನಿಂದ (ಭಾರತದಾದ್ಯಂತ) ಪ್ರಾರಂಭವಾಗಲಿದೆ.

  • ಟೆಸ್ಟ್ ಡ್ರೈವ್‌ಗಳು ಜನವರಿ 14 ರಿಂದ ಹಂತ ಹಂತವಾಗಿ ಪ್ರಾರಂಭವಾಗಲಿವೆ.

  • ಟಾಪ್-ಎಂಡ್ ವೇರಿಯೆಂಟ್‌ನ ಡೆಲಿವೆರಿಗಳು ಮಾರ್ಚ್‌ನಿಂದ ಪ್ರಾರಂಭವಾಗುತ್ತವೆ.

  • ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳು, ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು 20-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ.

  • ಒಳಭಾಗದಲ್ಲಿ, ಇದು 12.3-ಇಂಚಿನ ಮೂರು  ಡಿಸ್‌ಪ್ಲೇಗಳನ್ನು ಮತ್ತು ಪ್ರಕಾಶಿತ ಲೋಗೋದೊಂದಿಗೆ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.

  • ಪನೋರಮಿಕ್ ಗ್ಲಾಸ್ ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸೆಲ್ಫಿ ಕ್ಯಾಮೆರಾ ಇತರ ಫೀಚರ್‌ಗಳನ್ನು ಒಳಗೊಂಡಿದೆ.

  • ಸುರಕ್ಷತಾ ಪ್ಯಾಕೇಜ್‌ 9 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಪಾರ್ಕ್ ಅಸಿಸ್ಟ್ ಮತ್ತು ಲೆವೆಲ್-2 ಎಡಿಎಎಸ್ ಅನ್ನು ಒಳಗೊಂಡಿದೆ.

  • 656 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ.

ಮಹೀಂದ್ರಾ XEV 9e ನ 79 ಕಿ.ವ್ಯಾಟ್‌ ಬ್ಯಾಟರಿಯೊಂದಿಗೆ ಸಂಪೂರ್ಣವಾಗಿ ಲೋಡ್ ಮಾಡಲಾದ 'ಪ್ಯಾಕ್ ಥ್ರೀ' ವೇರಿಯೆಂಟ್‌ನ ಬೆಲೆಗಳನ್ನು ಬಹಿರಂಗಪಡಿಸಲಾಗಿದೆ, ಇದು 30.90 ಲಕ್ಷ ರೂ.ನಿಂದ (ಎಕ್ಸ್-ಶೋರೂಮ್, ಪ್ಯಾನ್-ಇಂಡಿಯಾ) ಪ್ರಾರಂಭವಾಗುತ್ತದೆ. ಗಮನಾರ್ಹವಾಗಿ, ಈ ಬೆಲೆ ಹೋಮ್ ಚಾರ್ಜರ್ ಅನ್ನು ಒಳಗೊಂಡಿಲ್ಲ, ಇದನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. XEV 9eಯು ಪ್ಯಾಕ್ ಒನ್, ಪ್ಯಾಕ್ ಟು ಮತ್ತು ಪ್ಯಾಕ್ ಥ್ರೀ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ ಮತ್ತು  ಎಂಟ್ರಿ ಲೆವೆಲ್‌ ವೇರಿಯೆಂಟ್‌ನ ಬೆಲೆಯನ್ನು 2024ರ ನವೆಂಬರ್ ನಲ್ಲಿ ಅನಾವರಣಗೊಳಿಸುವ ಸಮಯದಲ್ಲಿ ಬಹಿರಂಗಪಡಿಸಲಾಗಿತ್ತು. ಟಾಪ್-ಸ್ಪೆಕ್ ವೇರಿಯೆಂಟ್‌ನ ಬುಕಿಂಗ್‌ಗಳು ಫೆಬ್ರವರಿ 14, 2024 ರಿಂದ ಪ್ರಾರಂಭವಾಗುತ್ತದೆ ಮತ್ತು ಟೆಸ್ಟ್ ಡ್ರೈವ್‌ಗಳು ಹಂತ ಹಂತವಾಗಿ ಜನವರಿ 14, 2025 ರಿಂದ ಪ್ರಾರಂಭವಾಗುತ್ತವೆ. XEV 9e ನ ಟಾಪ್-ಎಂಡ್ ವೇರಿಯೆಂಟ್‌ನ ಡೆಲಿವೆರಿಗಳು 2025ರ ಮಾರ್ಚ್‌ನಿಂದ ಪ್ರಾರಂಭವಾಗಲಿದೆ. ಮಹೀಂದ್ರಾ XEV 9e ನ ವಿವರವಾದ ಬೆಲೆಗಳು ಇಲ್ಲಿವೆ:

ಮಹೀಂದ್ರಾ XEV 9e ನ ವೇರಿಯಂಟ್-ವಾರು ಬೆಲೆಯನ್ನು ನಾವು ನೋಡೋಣ:

ವೇರಿಯೆಂಟ್‌

ಬ್ಯಾಟರಿ ಪ್ಯಾಕ್‌ ಆಯ್ಕೆಗಳು

59 ಕಿ.ವ್ಯಾಟ್‌

79 ಕಿ.ವ್ಯಾಟ್‌

ಪ್ಯಾಕ್‌ ಒನ್‌

  21.90 ಲಕ್ಷ ರೂ. 

ಪ್ಯಾಕ್‌ ಟೂ

ಘೋಷಿಸಲಾಗುವುದು

ಘೋಷಿಸಲಾಗುವುದು

ಪ್ಯಾಕ್‌  ಥ್ರೀ

ಘೋಷಿಸಲಾಗುವುದು

30.50 ಲಕ್ಷ ರೂ. 

ಮಹೀಂದ್ರಾ XEV 9e ಒದಗಿಸುವ ಎಲ್ಲಾ ಫೀಚರ್‌ಗಳನ್ನು  ನಾವು ವಿವರವಾಗಿ ನೋಡೋಣ: 

ಎಕ್ಸ್‌ಟೀರಿಯರ್‌

Mahindra XEV 9e Front

ಮಹೀಂದ್ರಾ XEV 9e ವಿಶಿಷ್ಟವಾದ ಮತ್ತು ಎದ್ದುಕಾಣುವ ವಿನ್ಯಾಸವನ್ನು ಹೊಂದಿದೆ. ಲಂಬವಾಗಿ ಜೋಡಿಸಲಾದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳ ಬದಿಗಳಿಗೆ ವಿಸ್ತರಿಸುವ ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಇದು ಪಡೆಯುತ್ತದೆ. ವಿಶಿಷ್ಟವಾದ EV ಶೈಲಿಯಲ್ಲಿ, ಗ್ರಿಲ್ ಅನ್ನು ಖಾಲಿ ಮಾಡಲಾಗಿದೆ. ಕೆಳಗಿನ ಬಂಪರ್ ದಪ್ಪನಾದ ಸ್ಕಿಡ್ ಪ್ಲೇಟ್‌ನೊಂದಿಗೆ ಕಪ್ಪು ಬಣ್ಣದ್ದಾಗಿದೆ.

Mahindra XEV 9e Side

XEV 9e ಒಂದು ಎಸ್‌ಯುವಿ-ಕೂಪ್ ಆಗಿರುವುದರಿಂದ, ಇದು ಇಳಿಜಾರಾದ ರೂಫ್‌ಅನ್ನು ಹೊಂದಿದ್ದು ಅದು ಕಾರಿನ ಹಿಂಭಾಗದ ಕಡೆಗೆ ತಗ್ಗುತ್ತದೆ. ಇದು ಫ್ಲಶ್ ಡೋರ್ ಹ್ಯಾಂಡಲ್‌ಗಳು, ಬಾಡಿ-ಕಲರ್‌ನ ORVM ಗಳು ಮತ್ತು EV ಯ ಉದ್ದಕ್ಕೂ ಚಲಿಸುವ ವೀಲ್‌ ಆರ್ಚ್‌ಗಳ ಮೇಲೆ ಕಪ್ಪು ಹೊದಿಕೆಯೊಂದಿಗೆ ಬರುತ್ತದೆ. ಇದು 19-ಇಂಚಿನ ಚಕ್ರಗಳನ್ನು ಸ್ಟ್ಯಾಂಡರ್ಡ್‌ ಆಗಿ ಪಡೆಯುತ್ತದೆ ಮತ್ತು ಏರೋಡೈನಾಮಿಕಲಿ ವಿನ್ಯಾಸದ ದೊಡ್ಡದಾದ 20-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳನ್ನು ಒಪ್ಶನಲ್‌ ಆಕ್ಸಸ್ಸರಿಯಾಗಿ ಆಯ್ಕೆ ಮಾಡಬಹುದು.

Exterior

ಹಿಂಭಾಗದ ವಿನ್ಯಾಸವು ಕನೆಕ್ಟೆಡ್‌ ಎಲ್ಇಡಿ ಟೈಲ್ ಲೈಟ್ ಸೆಟಪ್‌ನೊಂದಿಗೆ ಮುಂಭಾಗವನ್ನು ಹೋಲುತ್ತದೆ. ಚಾಚಿಕೊಂಡಿರುವ ಟೈಲ್‌ಗೇಟ್ ಪ್ರಕಾಶಿತ ಇನ್ಫಿನಿಟಿ ಲೋಗೋವನ್ನು ಹೊಂದಿದೆ, ಇದನ್ನು ಕಾರು ತಯಾರಕರು ನಿರ್ದಿಷ್ಟವಾಗಿ ಅದರ ಇವಿಗಳಿಗಾಗಿ ಬಳಸುತ್ತಾರೆ. ಹಿಂಭಾಗದ ಬಂಪರ್ ಕಪ್ಪು ಮತ್ತು ಅದರ ಮೇಲೆ ಕ್ರೋಮ್ ಅಪ್ಲಿಕ್ ಅನ್ನು ಹೊಂದಿದೆ.

ಇಂಟೀರಿಯರ್‌

Mahindra XEV 9e Dashboard

ಎಕ್ಸ್‌ಇವಿ 9ಇ ನ ಇಂಟೀರಿಯರ್‌ ಸಹ ಬಾಹ್ಯ ವಿನ್ಯಾಸದಂತೆಯೇ ದೂರದೃಷ್ಟಿಯುಳ್ಳದ್ದಾಗಿದೆ. ಇದು ಲೇಯರ್ಡ್ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಬರುತ್ತದೆ, ಅದರ ಮೇಲ್ಭಾಗದ ವಿಭಾಗವು 12.3-ಇಂಚಿನ ಮೂರು ಸ್ಕ್ರೀನ್‌ಗಳು ಮತ್ತು ಪ್ರಕಾಶಿತ ಲೋಗೋದೊಂದಿಗೆ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ, ಆದರೆ ಕೆಳಗಿನ ಭಾಗವು ಕೇಂದ್ರ ಕನ್ಸೋಲ್‌ಗೆ ಒಗ್ಗೂಡಿಸುತ್ತದೆ.

Interior

ಸ್ಟೀರಿಂಗ್ ವೀಲ್, ಆಡಿಯೋ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್‌ಗಾಗಿ ಬಟನ್‌ಗಳನ್ನು ಒಳಗೊಂಡಿರುವ ಜೊತೆಗೆ, 10 ಸೆಕೆಂಡುಗಳ ಕಾಲ ಪವರ್‌ನಲ್ಲಿ ಹೆಚ್ಚುವರಿ ವರ್ಧಕಕ್ಕಾಗಿ ಬಟನ್ ಅನ್ನು ಸಹ ಪಡೆಯುತ್ತದೆ.

ಸೆಂಟರ್ ಕನ್ಸೋಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ರೈವಿಂಗ್ ಮೋಡ್‌ಗಳಿಗೆ ಕಂಟ್ರೋಲ್‌ಗಳನ್ನು ಹೊಂದಿದೆ ಮತ್ತು ಡ್ರೈವ್ ಸೆಲೆಕ್ಟರ್ ಲಿವರ್ ಅನ್ನು ಸಹ ಹೊಂದಿದೆ. ಇದು ಎರಡು ಕಪ್ ಹೋಲ್ಡರ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಸಹ ಒಳಗೊಂಡಿದೆ.

Mahindra XEV 9e Rear Seats

ಸೀಟ್‌ಗಳು ಲೆಥೆರೆಟ್ ಕವರ್‌ನೊಂದಿಗೆ ಬರುತ್ತವೆ ಮತ್ತು ಎಲ್ಲಾ ಸೀಟ್‌ಗಳು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಹೊಂದಾಣಿಕೆಯ ಹೆಡ್‌ರೆಸ್ಟ್‌ಗಳೊಂದಿಗೆ ಬರುತ್ತವೆ. ಹಿಂಭಾಗದ ಪ್ರಯಾಣಿಕರಿಗೆ ಕಂಫರ್ಟ್‌ ಅನ್ನು ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ವರ್ಧಿಸಲಾಗಿದೆ.

ಇದನ್ನೂ ಓದಿ : Kia Syrosನ ಬಿಡುಗಡೆ ದಿನಾಂಕ ಮತ್ತು ಡೆಲಿವರಿ ಕುರಿತ ಮಾಹಿತಿಗಳು ಬಹಿರಂಗ

ಫೀಚರ್‌ಗಳು ಮತ್ತು ಸುರಕ್ಷತೆ

Mahindra XEV 9e Rear Seat Speakers

ಮಹೀಂದ್ರಾ XEV 9e ಜೊತೆಗೆ ಪ್ರೀಮಿಯಂ ಫೀಚರ್ ಸೂಟ್ ಅನ್ನು ಸಹ ನೀಡುತ್ತಿದೆ, ಅದರಲ್ಲಿ ಲೈಟಿಂಗ್‌ ಅಂಶಗಳೊಂದಿಗೆ ಪನರೋಮಿಕ್‌ ಗ್ಲಾಸ್‌ ರೂಫ್‌, ಮಲ್ಟಿ-ಝೋನ್‌ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, 1400-ವ್ಯಾಟ್ 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಮತ್ತು ವೆಂಟಿಲೇಶನ್‌ ಮತ್ತು ಚಾಲಿತ ಮುಂಭಾಗದ ಸೀಟ್‌ಗಳನ್ನು ಒಳಗೊಂಡಿದೆ. ಇದು ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು ಸಹ ಒಳಗೊಂಡಿದೆ.

ಸುರಕ್ಷತಾ ಪ್ಯಾಕೇಜ್ 7 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್‌ಗಳನ್ನು ಒಳಗೊಂಡಿದೆ. ಇದು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಲೆವೆಲ್-2 ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ತಂತ್ರಜ್ಞಾನದೊಂದಿಗೆ ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳೊಂದಿಗೆ ಬರುತ್ತದೆ. ಕೆಲವು ಐಷಾರಾಮಿ ಮೊಡೆಲ್‌ಗಳಲ್ಲಿ ಕಂಡುಬರುವಂತೆ ಪಾರ್ಕ್ ಅಸಿಸ್ಟ್  ಫೀಚರ್‌ ಅನ್ನು ಮಹೀಂದ್ರಾ ತನ್ನ XEV 9eನಲ್ಲಿ ಸಹ ನೀಡುತ್ತಿದೆ.

ಬ್ಯಾಟರಿ ಪ್ಯಾಕ್, ಪರ್ಫಾರ್ಮೆನ್ಸ್‌ ಮತ್ತು ರೇಂಜ್‌

Mahindra XEV 9e Rear Seat Console

ಮಹೀಂದ್ರಾ XEV 9e ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು ಮತ್ತು ಹಿಂದಿನ-ಚಕ್ರ-ಡ್ರೈವ್ (RWD) ಸೆಟಪ್‌ನೊಂದಿಗೆ ಬರುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ ಪ್ಯಾಕ್‌

59 ಕಿ.ವ್ಯಾಟ್‌

79 ಕಿ.ವ್ಯಾಟ್‌

ಎಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ

1

1

ಪವರ್‌

231 ಪಿಎಸ್‌

286 ಪಿಎಸ್‌

ಟಾರ್ಕ್‌

380 ಎನ್‌ಎಮ್‌

380 ಎನ್‌ಎಮ್‌

ರೇಂಜ್‌ (MIDC ಪಾರ್ಟ್‌ 1 + ಪಾರ್ಟ್‌ 2)

542 ಕಿ.ಮೀ.

656 ಕಿ.ಮೀ. 

ಡ್ರೈವ್‌ಟ್ರೈನ್‌

ರಿಯರ್‌ ವೀಲ್‌ ಡ್ರೈವ್‌

ರಿಯರ್‌ ವೀಲ್‌ ಡ್ರೈವ್‌

ಈ ಇವಿಯು 175 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಕೇವಲ 20 ನಿಮಿಷಗಳಲ್ಲಿ ಬ್ಯಾಟರಿ 20 ಪ್ರತಿಶತದಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಲು ಅನುಮತಿಸುತ್ತದೆ. ಹೆಚ್ಚುವರಿಯಾಗಿ, ಮಹೀಂದ್ರಾ 7.3 kWh ಮತ್ತು 11.2 kWhನ ಎರಡು ಒಪ್ಶನಲ್‌ ಹೋಮ್‌ ಚಾರ್ಜಿಂಗ್ ಘಟಕಗಳನ್ನು ನೀಡುತ್ತಿದೆ, ಖರೀದಿಗೆ ಲಭ್ಯವಿರಲಿದೆ. ಇದರಲ್ಲಿ ರೇಂಜ್, ಎವೆರಿಡೇ ಮತ್ತು ರೇಸ್ ಎಂಬ ಮೂರು ಡ್ರೈವ್ ಮೋಡ್‌ಗಳಿವೆ.

ಪ್ರತಿಸ್ಪರ್ಧಿಗಳು

Verdict

 ಮಹೀಂದ್ರಾ XEV 9e ಗೆ ಸದ್ಯಕ್ಕೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ, ಆದರೆ ಇದು BYD Atto 3, ಮುಂಬರುವ ಟಾಟಾ ಹ್ಯಾರಿಯರ್ EV ಮತ್ತು ಟಾಟಾ ಸಫಾರಿ EV ಯೊಂದಿಗೆ ಸ್ಪರ್ಧೆಯನ್ನು ಒಡ್ಡಲಿದೆ, ಇವುಗಳನ್ನು 2025 ರಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಇದರ ಫೀಚರ್‌ಗಳು ಇದನ್ನು ಹೆಚ್ಚಾಗಿ ದುಬಾರಿ ಹ್ಯುಂಡೈ ಅಯೋನಿಕ್ 5 ಗೆ ಸಮನಾಗಿ ಇರಿಸಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

 

was this article helpful ?

Write your Comment on Mahindra xev 9e

explore ಇನ್ನಷ್ಟು on ಮಹೀಂದ್ರ xev 9e

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience