ಮಹೀಂದ್ರಾ BE6 ಮತ್ತು XEV 9e ಗಳ 2ನೇ ಹಂತದ ಟೆಸ್ಟ್ ಡ್ರೈವ್‌ಗಳು ಈಗ ಪ್ರಾರಂಭ
ಮಹೀಂದ್ರ ಬಿಇ 6 ಗಾಗಿ kartik ಮೂಲಕ ಜನವರಿ 28, 2025 04:28 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಎರಡನೇ ಹಂತದ ಟೆಸ್ಟ್ ಡ್ರೈವ್‌ಗಳು ಆರಂಭಗೊಂಡಿದ್ದು, ಇಂದೋರ್, ಕೋಲ್ಕತ್ತಾ ಮತ್ತು ಲಕ್ನೋದ ಗ್ರಾಹಕರು ಈಗ ಎರಡೂ ಮಹೀಂದ್ರಾ ಇವಿಗಳನ್ನು ನೇರವಾಗಿ ಪರೀಶಿಲಿಸಬಹುದು
-
ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಪುಣೆಯಂತಹ ನಗರಗಳಲ್ಲಿ ಈಗಾಗಲೇ ಮೊದಲ ಹಂತದ ಟೆಸ್ಟ್ ಡ್ರೈವ್‌ಗಳು ನಡೆಯುತ್ತಿವೆ.
-
ಎರಡನೇ ಹಂತದಲ್ಲಿ ಅಹಮದಾಬಾದ್, ಭೋಪಾಲ್ ಮತ್ತು ಇಂದೋರ್‌ನಂತಹ ನಗರಗಳು ಸೇರಿವೆ.
-
ಮೂರನೇ ಹಂತದ ಟೆಸ್ಟ್ ಡ್ರೈವ್‌ಗಳು ಫೆಬ್ರವರಿ 7ರಿಂದ ಭಾರತಾದ್ಯಂತ ಲಭ್ಯವಿರುತ್ತವೆ.
-
ಎರಡೂ ಇವಿಗಳು ಪ್ಯಾಕ್ ಒನ್, ಪ್ಯಾಕ್ ಟು ಮತ್ತು ಪ್ಯಾಕ್ ತ್ರೀ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಬರುತ್ತವೆ.
-
ಈ ಎಲೆಕ್ಟ್ರಿಕ್ ವಾಹನಗಳ ಫೀಚರ್‌ಗಳಲ್ಲಿ ಮಲ್ಟಿ ಝೋನ್ ಆಟೋ ಎಸಿ, 16-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಆಟೋ ಪಾರ್ಕಿಂಗ್ ಸೇರಿವೆ. ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ಸೇರಿವೆ.
-
ಈ ಎಲೆಕ್ಟ್ರಿಕ್ ವಾಹನಗಳು ಸ್ಟ್ಯಾಂಡರ್ಡ್ 59 ಕಿ.ವ್ಯಾಟ್ ಮತ್ತು ದೊಡ್ಡ 79 ಕಿವ್ಯಾಟ್ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತವೆ, ಇವುಗಳು ಒಂದೇ ಮೋಟಾರ್ ಸೆಟಪ್ ಅನ್ನು ಹೊಂದಿದ್ದು, ಹಾಗೆಯೇ, XEV 9e ಗೆ 656 ಕಿಮೀ ವರೆಗಿನ ಮತ್ತು BE 6 ಗೆ 683 ಕಿಮೀ.ವರೆಗಿನ ರೇಂಜ್ ಅನ್ನು ಹೊಂದಿದೆ.
-
BE 6 ಬೆಲೆ ಶ್ರೇಣಿ 18.9 ಲಕ್ಷದಿಂದ 26.9 ಲಕ್ಷ ರೂ.ಗಳವರೆಗೆ ಇದ್ದರೆ, ಫ್ಲ್ಯಾಗ್‌ಶಿಪ್ XEV 9e ಬೆಲೆ 21.9 ಲಕ್ಷದಿಂದ 30.5 ಲಕ್ಷ ರೂ.ಗಳವರೆಗೆ ಇದೆ.
ಭಾರತದ ಜನಪ್ರೀಯ ಕಾರು ತಯಾರಕ ಕಂಪೆನಿಯಾದ ಮಹೀಂದ್ರಾವು, INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಮೊದಲ ಎರಡು EVಗಳಾದ ಮಹೀಂದ್ರಾ ಬಿಇ6 ಮತ್ತು ಎಕ್ಸ್‌ಇವಿ 9ಇ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ ಮತ್ತು ಅದರ ಮೊದಲ ಹಂತದ ಟೆಸ್ಟ್ ಡ್ರೈವ್‌ಗಳು ಈಗಾಗಲೇ ದೆಹಲಿ, ಮುಂಬೈ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ ನಡೆಯುತ್ತಿವೆ. ಮಹೀಂದ್ರಾ ಕಂಪನಿಯು ಇಂದಿನಿಂದ ಭೋಪಾಲ್, ಕೊಚ್ಚಿನ್, ಕೊಯಮತ್ತೂರು, ಗೋವಾ, ಹೌರಾ, ಇಂದೋರ್, ಜೈಪುರ ಮತ್ತು ಜಲಂಧರ್ ನಂತಹ ನಗರಗಳಲ್ಲಿ ಎರಡನೇ ಹಂತದ ಟೆಸ್ಟ್ ಡ್ರೈವ್‌ಗಳನ್ನು ಆರಂಭಿಸಿದೆ. ಈ ಎರಡು ಹಂತದ ಟೆಸ್ಟ್ ಡ್ರೈವ್‌ಗಳಲ್ಲಿ ಒಳಗೊಳ್ಳದ ನಗರಗಳ ಜನರು ಫೆಬ್ರವರಿ 7 ರವರೆಗೆ ಕಾಯಬೇಕಾಗುತ್ತದೆ, ಆಗ ಪ್ಯಾನ್-ಇಂಡಿಯಾ ಟೆಸ್ಟ್ ಡ್ರೈವ್‌ಗಳು ಪ್ರಾರಂಭವಾಗುತ್ತವೆ. ನೀವು ಈ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಆಸಕ್ತಿ ಹೊಂದಿದ್ದರೆ, ಮಹೀಂದ್ರಾ BE 6 ಮತ್ತು XEV 9e ಗಳಲ್ಲಿ ನೀವು ಏನನ್ನು ಪಡೆಯುತ್ತೀರಿ ಎಂಬುದರ ಕುರಿತು ಒಂದು ಸಣ್ಣ ಅವಲೋಕನ ಇಲ್ಲಿದೆ.
ಮಹೀಂದ್ರಾ BE 6 ಮತ್ತು XEV 9e ಫೀಚರ್‌ಗಳು ಮತ್ತು ಸುರಕ್ಷತೆ
ಮಹೀಂದ್ರಾ ಕಂಪನಿಯು ಈ ಎಲೆಕ್ಟ್ರಿಕ್ ವಾಹಗಳಲ್ಲಿ BE 6 ಗಾಗಿ 12.3-ಇಂಚಿನ ಡಬಲ್-ಸ್ಕ್ರೀನ್ ಸೆಟಪ್ ಮತ್ತು XEV 9e ಗಾಗಿ ಟ್ರಿಪಲ್-ಸ್ಕ್ರೀನ್ ಸೆಟಪ್ ಜೊತೆಗೆ 1400 W 16-ಸ್ಪೀಕರ್ ಹಾರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನಂತಹ ಫೀಚರ್‌ಗಳನ್ನು ಹೊಂದಿದೆ. ಸೌಕರ್ಯ ಮತ್ತು ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸಲು ಇವಿಗಳು ಮಲ್ಟಿ-ಝೋನ್ ಆಟೋ ಎಸಿ, ಚಾಲಿತ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ವರ್ಧಿತ ರಿಯಾಲಿಟಿ ಹೆಡ್-ಅಪ್ ಡಿಸ್‌ಪ್ಲೇಯೊಂದಿಗೆ ಬರುತ್ತವೆ.
ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು BE 6 ಮತ್ತು XEV 9e ಗಳು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಬ್ಲೈಂಡ್ ಸ್ಪಾಟ್ ಮಾನಿಟರ್, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಅನ್ನು ಪಡೆಯುತ್ತವೆ.
ಮಹೀಂದ್ರಾ BE 6 ಮತ್ತು XEV 9e ಪವರ್‌ಟ್ರೇನ್
ಎರಡೂ ಇವಿಗಳು 59 ಕಿ.ವ್ಯಾಟ್ ಮತ್ತು 79 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತವೆ, ಹಿಂದಿನ ಚಕ್ರಗಳಿಗೆ ಒಂದೇ ಮೋಟಾರ್ ಶಕ್ತಿಯನ್ನು ನೀಡುತ್ತದೆ. ಮೋಟರ್‌ನ ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:
ಮಹೀಂದ್ರಾ ಬಿಇ 6 |
||
ಬ್ಯಾಟರಿ ಪ್ಯಾಕ್ |
59 ಕಿ.ವ್ಯಾಟ್ |
79 ಕಿ.ವ್ಯಾಟ್ |
ಕ್ಲೈಮ್ ಮಾಡಲಾದ ರೇಂಜ್ (MIDC Part 1+2) |
535 ಕಿ.ಮೀ. |
683 ಕಿ.ಮೀ. |
ಪವರ್ |
231 ಪಿಎಸ್ |
286 ಪಿಎಸ್ |
ಟಾರ್ಕ್ |
380 ಎನ್‌ಎಮ್ |
380 ಎನ್‌ಎಮ್ |
ಡ್ರೈವ್ ಟೈಪ್ |
ಸಿಂಗಲ್ ಮೋಟಾರ್, ರಿಯರ್-ವೀಲ್-ಡ್ರೈವ್ |
ಸಿಂಗಲ್ ಮೋಟಾರ್, ರಿಯರ್-ವೀಲ್-ಡ್ರೈವ್ |
ಇದನ್ನೂ ಸಹ ಓದಿ: 2025ರ ಆಟೋ ಎಕ್ಸ್‌ಪೋದಲ್ಲಿ VinFastನಿಂದ 6 ಎಲೆಕ್ಟ್ರಿಕ್ ಎಸ್‌ಯುವಿಗಳು ಮತ್ತು 1 ಎಲೆಕ್ಟ್ರಿಕ್ ಪಿಕಪ್ ಟ್ರಕ್ ಕಾನ್ಸೆಪ್ಟ್‌ನ ಪ್ರದರ್ಶನ
ಮಹೀಂದ್ರಾ ಎಕ್ಸ್‌ಇವಿ 9ಇ |
||
ಬ್ಯಾಟರಿ ಪ್ಯಾಕ್ |
59 ಕಿ.ವ್ಯಾಟ್ |
79 ಕಿ.ವ್ಯಾಟ್ |
ಕ್ಲೈಮ್ ಮಾಡಲಾದ ರೇಂಜ್ (MIDC Part 1+2) |
542 ಕಿ.ಮೀ. |
656 ಕಿ.ಮೀ. |
ಪವರ್ |
231 ಪಿಎಸ್ |
286 ಪಿಎಸ್ |
ಟಾರ್ಕ್ |
380 ಎನ್‌ಎಮ್ |
380 ಎನ್‌ಎಮ್ |
ಡ್ರೈವ್ ಟೈಪ್ |
ಸಿಂಗಲ್ ಮೋಟಾರ್, ರಿಯರ್-ವೀಲ್-ಡ್ರೈವ್ |
ಸಿಂಗಲ್ ಮೋಟಾರ್, ರಿಯರ್-ವೀಲ್-ಡ್ರೈವ್ |
ಬಿಇ 6 ಮತ್ತು ಎಕ್ಸ್‌ಇವಿ 9ಇ ಎರಡರ ಟಾಪ್-ಸ್ಪೆಕ್ ಪ್ಯಾಕ್ ತ್ರೀ ವೇರಿಯೆಂಟ್ 180 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್‌ನೊಂದಿಗೆ ಬರುತ್ತದೆ, ಇದು 20 ನಿಮಿಷಗಳಲ್ಲಿ ಬ್ಯಾಟರಿಯನ್ನು 20-80 ಪ್ರತಿಶತದಷ್ಟು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಬಿಇ 6 ಬೆಲೆ 18.9 ಲಕ್ಷ ರೂ.ಗಳಿಂದ 26.9 ಲಕ್ಷ ರೂ.ಗಳವರೆಗೆ ಇರುತ್ತದೆ. ಈ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ ಕಾರು, ಮಾರುತಿ ಸುಜುಕಿ ಇ ವಿಟಾರಾ, ಎಮ್‌ಜಿ ಜೆಡ್‌ಎಸ್ EV, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಮತ್ತು ಟಾಟಾ ಕರ್ವ್ ಇವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
XEV 9e ಬೆಲೆ 21.9 ಲಕ್ಷ ರೂ.ನಿಂದ 30.5 ಲಕ್ಷ ರೂ.ವರೆಗೆ ಇದ್ದು, ಟಾಟಾ ಸಫಾರಿ ಇವಿ ಮತ್ತು ಟಾಟಾ ಹ್ಯಾರಿಯರ್ ಇವಿಗಳಂತಹ ಇವಿಗಳಿಗೆ ಪರ್ಯಾಯವಾಗಿದೆ.
ದಯವಿಟ್ಟು ಗಮನಿಸಿ, ಮಹೀಂದ್ರಾ ಈವರೆಗೆ ಪ್ಯಾಕ್ ಒನ್ ಮತ್ತು ಪ್ಯಾಕ್ ತ್ರೀ ವೇರಿಯೆಂಟ್‌ಗಳ ಬೆಲೆಯನ್ನು ಮಾತ್ರ ಬಹಿರಂಗಪಡಿಸಿದೆ.
(ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಆಗಿದೆ)
ಇದನ್ನೂ ಸಹ ಓದಿ: ಡೀಲರ್‌ಶಿಪ್‌ಗಳಿಗೆ ಆಗಮಿಸಿದ ಹೊಸ Hyundai Creta Electric, ಸದ್ಯದಲ್ಲೇ ಟೆಸ್ಟ್ ಡ್ರೈವ್‌ಗೂ ಲಭ್ಯ..
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ