Mahindra Thar 5-door ಅನ್ನು 2024ರ ಈ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ
ಮಹೀಂದ್ರ ಥಾರ್ ರಾಕ್ಸ್ ಗಾಗಿ ansh ಮೂಲಕ ಫೆಬ್ರವಾರಿ 28, 2024 07:23 pm ರಂದು ಪ್ರಕಟಿಸಲಾಗಿದೆ
- 39 Views
- ಕಾಮೆಂಟ್ ಅನ್ನು ಬರೆಯಿರಿ
ಹೂಡಿಕೆದಾರರ ಸಭೆಯಲ್ಲಿ, ಥಾರ್‌ನ ದೊಡ್ಡ ಆವೃತ್ತಿಯನ್ನು ವರ್ಷದ ಮಧ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಾರು ತಯಾರಕರು ಘೋಷಿಸಿದರು
- ಮಹೀಂದ್ರಾ ಆಗಸ್ಟ್ 15 ರಂದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ/ಪ್ರದರ್ಶಿಸುವ ಪದ್ಧತಿಯನ್ನು ಹೊಂದಿದೆ.
- 5-ಬಾಗಿಲಿನ ಥಾರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು 4WD ಮತ್ತು RWD ಸೆಟಪ್‌ಗಳ ಆಯ್ಕೆಗಳೊಂದಿಗೆ ಪಡೆಯುತ್ತದೆ.
- ಇದರ ಎಕ್ಸ್ ಶೋರೂಂ ಬೆಲೆ 15 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
5-ಡೋರ್‌ನ ಮಹೀಂದ್ರ ಥಾರ್ ಈ ವರ್ಷದ ಅತ್ಯಂತ ನಿರೀಕ್ಷಿತ ಮಾದರಿಗಳಲ್ಲಿ ಒಂದಾಗಿದೆ ಮತ್ತು ದೀರ್ಘಕಾಲಗಳಿಂದ ತಯಾರಿ ಪ್ರಕ್ರಿಯೆಯಲ್ಲಿದೆ. ಪ್ರತಿ ಬಾರಿಯೂ, ಆಫ್-ರೋಡರ್‌ನ ಪರೀಕ್ಷಾ ಆವೃತ್ತಿಗಳು ರಸ್ತೆಯಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುತ್ತವೆ, ಹಾಗೆಯೇ ಅದರ ವಿನ್ಯಾಸ ಮತ್ತು ಕ್ಯಾಬಿನ್‌ನ ಸುಳಿವುಗಳನ್ನು ನಮಗೆ ನೀಡುತ್ತಾ ಇರುತ್ತದೆ. ಆದರೆ, ನಾವು ಇನ್ನು ಹೆಚ್ಚು ಸಮಯ ಕಾಯಬೇಕಾಗಿಲ್ಲ, ಏಕೆಂದರೆ ಮಹೀಂದ್ರಾವು 5-ಡೋರ್‌ನ ಥಾರ್‌ಗಾಗಿ ಬಿಡುಗಡೆಯ ಸಮಯವನ್ನು ಖಚಿತಪಡಿಸಿದೆ ಮತ್ತು ಇದು ಖಂಡಿತವಾಗಿಯೂ ಈ ವರ್ಷ ಬರಲಿದೆ.
ಮತ್ತೆ ಆಗಸ್ಟ್ 15?
ಹೂಡಿಕೆದಾರರ ಸಭೆಯಲ್ಲಿ, ಮಹೀಂದ್ರಾ ಮತ್ತು ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ (ಆಟೋ ಮತ್ತು ಫಾರ್ಮ್ ವಲಯ) ರಾಜೇಶ್ ಜೆಜುರಿಕರ್ ಹೇಳಿರುವಂತೆ, ಕಾರು ತಯಾರಕರು ಕ್ಯಾಲೆಂಡರ್ ವರ್ಷದ ಮಧ್ಯದಲ್ಲಿ 5-ಬಾಗಿಲಿನ ಮಹೀಂದ್ರಾ ಥಾರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಹೇಳಿದರು. ಇದರರ್ಥ, ಇದು ಜುಲೈ 2024 ರ ಸುಮಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.
ಇದನ್ನು ಸಹ ಓದಿ: Mahindra Thar 5-door ಕೆಸರಿನಲ್ಲಿ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಪತ್ತೆ
ಆದಾಗಿಯೂ, ಮಹೀಂದ್ರಾ ದೇಶಭಕ್ತಿಯ ಸೂಚಕವಾಗಿ ಆಗಸ್ಟ್ 15 ರಂದು (ಭಾರತದ ಸ್ವಾತಂತ್ರ್ಯ ದಿನ) ಹೊಸ ಪ್ರಾಡಕ್ಟ್‌ಗಳ ಬಿಡುಗಡೆ ಅಥವಾ ಪ್ರದರ್ಶನವನ್ನು ಮಾಡುವ ಇತಿಹಾಸವನ್ನು ಹೊಂದಿದೆ. ಮತ್ತು 5-ಬಾಗಿಲಿನ ಥಾರ್ ಹೆಚ್ಚು ನಿರೀಕ್ಷಿತ ಮೊಡೆಲ್ ಆಗಿರುವುದರಿಂದ ಮತ್ತು ಮೊದಲಿಗೆ ಭಾರತದಲ್ಲಿ ಮಾತ್ರ ಬಿಡುಗಡೆಯಾಗುವ ಕಾರು ಆಗಿರುವುದರಿಂದ, ಮಹೀಂದ್ರಾ 2024 ಆಗಸ್ಟ್ 15ರಂದು ಈ ದೊಡ್ಡ ಥಾರ್‌ನ ಬೆಲೆಗಳನ್ನು ಘೋಷಿಸಬಹುದು.
ಪವರ್‌ಟ್ರೇನ್ ವಿವರಗಳು
ಥಾರ್‌ನ 5-ಬಾಗಿಲಿನ ಆವೃತ್ತಿಯು 3-ಬಾಗಿಲಿನ 4WD ಮಾದರಿಯ ಅದೇ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ: 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್. ಈ ಎಂಜಿನ್‌ಗಳನ್ನು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುವುದು ಮತ್ತು ಹೆಚ್ಚಾಗಿ ಫೋರ್-ವೀಲ್-ಡ್ರೈವ್ ಮತ್ತು ಹಿಂಬದಿ-ವೀಲ್-ಡ್ರೈವ್ ಸೆಟಪ್‌ಗಳನ್ನು ಪಡೆಯುತ್ತದೆ.
ಇದನ್ನೂ ಓದಿ: ಥಾರ್ 3-ಡೋರ್ ಗೆ ಹೋಲಿಸಿದರೆ ಈ 10 ಫೀಚರ್ ಗಳನ್ನು ನೀಡುವ Mahindra Thar 5-door
3-ಡೋರ್ ಆವೃತ್ತಿಯಲ್ಲಿ, ಟರ್ಬೊ-ಪೆಟ್ರೋಲ್ ಎಂಜಿನ್ 152 PS/300 Nm ಮತ್ತು ಡೀಸೆಲ್ ಘಟಕವು 132 PS/300 Nm ಅನ್ನು ಉತ್ಪಾದಿಸುತ್ತದೆ. ಆದಾಗಿಯೂ, 5-ಬಾಗಿಲಿನ ಆವೃತ್ತಿಯಲ್ಲಿ, ಈ ಎಂಜಿನ್‌ಗಳು ಹೆಚ್ಚಿನ ಹಂತದ ಟ್ಯೂನ್‌ನಲ್ಲಿ ಬರಬಹುದು, ಬಹುಶಃ ಸ್ಕಾರ್ಪಿಯೋ ಎನ್‌ಗೆ ಸಮವಾಗಿರಬಹುದು.
ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ಮಾಹಿತಿಗಾಗಿ ಮಹೀಂದ್ರಾ ಎಕ್ಸ್‌ಯುವಿ400 ನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನ ಚಿತ್ರ ಬಳಸಲಾಗಿದೆ
5-ಬಾಗಿಲಿನ ಥಾರ್‌ನ ವಿವಿಧ ವಿವರಗಳನ್ನು ಅನೇಕ ವೀಕ್ಷಣೆಗಳಲ್ಲಿ ಬಹಿರಂಗಪಡಿಸಲಾಗಿದೆ. ಇದು ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚಿನ ಘಟಕ), ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಅದರ ಸ್ಥಿರ ಮೆಟಲ್ ರೂಫ್‌ಗೆ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಪಡೆಯುತ್ತದೆ.
ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚು-ಕಮ್ಮಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಿಂದ ಖಾತ್ರಿಪಡಿಸಲಾಗುತ್ತದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
5-ಬಾಗಿಲಿನ ಮಹೀಂದ್ರಾ ಥಾರ್‌ನ ಎಕ್ಸ್-ಶೋರೂಮ್ ಬೆಲೆಗಳು 15 ಲಕ್ಷ ರೂ.ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಮುಂಬರುವ 5-ಡೋರ್ ಫೋರ್ಸ್ ಗೂರ್ಖಾಗೆ ಇದು ನೇರ ಪ್ರತಿಸ್ಪರ್ಧಿಯಾಗಿದೆ. ಇದು ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಿಯೂ ಕಾರ್ಯನಿರ್ವಹಿಸಲಿದೆ.
ಇನ್ನಷ್ಟು ಓದಿ: ಮಹೀಂದ್ರಾ ಥಾರ್ ಆಟೋಮ್ಯಾಟಿಕ್