• English
  • Login / Register

Mahindra Thar 5-door ಕೆಸರಿನಲ್ಲಿ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಪತ್ತೆ

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ shreyash ಮೂಲಕ ಫೆಬ್ರವಾರಿ 26, 2024 11:27 am ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು 5-ಡೋರ್ ಥಾರ್‌ನಲ್ಲಿ ಆಫ್-ರೋಡಿಂಗ್ ಹೋಗಲು ಬಯಸಿದರೆ ನೀವು ಬಹುಶಃ 4WD ವೇರಿಯಂಟ್ ಅನ್ನು ಖರೀದಿಸುವುದು ಉತ್ತಮ ಎಂದು ಇತ್ತೀಚಿನ ಸ್ಪೈ ವೀಡಿಯೊ ತೋರಿಸುತ್ತದೆ

Mahindra Thar 5-door Stuck In Manali

  •  ಟೆಸ್ಟ್ ಆಗುತ್ತಿರುವ ಗಾಡಿ ರಿಯರ್-ವೀಲ್-ಡ್ರೈವ್ (RWD) ವೇರಿಯಂಟ್ ಆಗಿರಬಹುದು ಎಂದು ತೋರುತ್ತದೆ.
  •  ಅಲ್ಲಿರುವ ಟ್ರಾಕ್ಷನ್ ಮತ್ತು ಟೈರ್‌ಗಳ ಕಂಡೀಶನ್ ನಿಂದಾಗಿ ಇದು ಕೆಸರಿನಲ್ಲಿ ಸಿಲುಕಿರಬಹುದು
  •  ಮಹೀಂದ್ರಾ ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಥಾರ್‌ನ ಉದ್ದವಾದ ವರ್ಷನ್ ಅನ್ನು ನೀಡಲಿದೆ.
  •  ಇದರ ಬೆಲೆಯು ರೂ.15 ಲಕ್ಷಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.

 ಇಂಟರ್ನೆಟ್‌ನಲ್ಲಿ ಮಹೀಂದ್ರಾ ಥಾರ್ 5-ಡೋರ್ ಟೆಸ್ಟ್ ಗಾಡಿಯ ಹಲವಾರು ಸ್ಪೈ ಶಾಟ್‌ಗಳಿದ್ದರೂ ಕೂಡ, ಒಂದು ಹೊಸ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ, ಅದು 4WD SUVಯ ಬದಲು ರಿಯರ್-ವೀಲ್-ಡ್ರೈವ್ ವೇರಿಯಂಟ್ ಅನ್ನು ಆಯ್ಕೆಮಾಡುವುದರಿಂದ ಆಗಬಹುದಾದ ಸಮಸ್ಯೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. 5-ಡೋರ್ ಥಾರ್‌ನ ಈ ಟೆಸ್ಟ್ ಗಾಡಿಯನ್ನು ಮನಾಲಿಯಲ್ಲಿ ಸ್ಪೈ ಮಾಡಲಾಯಿತು, ಅಲ್ಲಿ ಅದು ಕೆಸರಿನಿಂದ ಹೊರಬರಲು ಒದ್ದಾಡುತಿತ್ತು.

A post shared by Rajesh Thakur (@rajeshhimalayan)

 ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಟೆಸ್ಟ್ ಗಾಡಿಯ ಹಿಂಬದಿಯ ಚಕ್ರಗಳು ಮಾತ್ರ ತಿರುಗುತ್ತಿರುವುದನ್ನು ಕಾಣಬಹುದು, ಹಾಗಾಗಿ ಇದು 4X2 (ರಿಯರ್-ವೀಲ್-ಡ್ರೈವ್) ವೇರಿಯಂಟ್ ಆಗಿರಬಹುದು ಅಥವಾ ಇದರಲ್ಲಿ 4WD ಇಲ್ಲ ಎಂದು ಸೂಚಿಸುತ್ತದೆ. ಹಾಗೆಯೇ, ಕೆಸರಿನಿಂದ ಕೂಡಿದ ಈ ಜಾಗದಲ್ಲಿ ನ್ಯಾವಿಗೇಟ್ ಮಾಡಲು ಸಾಕಷ್ಟು ಟ್ರಾಕ್ಷನ್ ಇಲ್ಲದಿರಬಹುದು. ಆದರೆ, ಈ ಒಂದು ವಿಡಿಯೋದಿಂದ ಥಾರ್ 5-ಡೋರ್ ನ ಆಫ್-ರೋಡ್ ಸಾಮರ್ಥ್ಯಗಳನ್ನು ಕಡೆಗಣಿಸುವುದು ಸರಿಯಲ್ಲ. ಮಂಜುಗಡ್ಡೆಯಿಂದ ಕೂಡಿದ ಮಣ್ಣು ಕೂಡ ಇದಕ್ಕೆ ಕಾರಣವಾಗಿರಬಹುದು, ಏಕೆಂದರೆ ಇಳಿಜಾರಿನ ಜಾಗದಲ್ಲಿ ಸಾಮಾನ್ಯ ಟೈರ್‌ಗಳೊಂದಿಗೆ SUVಯನ್ನು ನ್ಯಾವಿಗೇಟ್ ಮಾಡುವುದು ಕಷ್ಟಕರವಾಗಿರುತ್ತದೆ.

 ಡ್ರೈವರ್ ನ ಕೌಶಲ್ಯ ಮತ್ತು ಟೆಸ್ಟ್ ಗಾಡಿಯಲ್ಲಿ ಬಳಸಿದ ಟೈರ್‌ಗಳ ಸ್ಥಿತಿ ಕೂಡ ಇದಕ್ಕೆ ಕಾರಣವಾಗಿರಬಹುದು.

 ಮುಂಬರುವ ಮಹೀಂದ್ರಾ ಥಾರ್ 5-ಡೋರ್ ಬಗ್ಗೆ ಇನ್ನಷ್ಟು ವಿವರಗಳು

5-door Mahindra Thar Cabin

ಮಹೀಂದ್ರ ಥಾರ್ 5-ಡೋರ್ ಅದರ 3-ಡೋರ್ ಥಾರ್ ನಲ್ಲಿ ಬಳಸಿದ ಅದೇ ಎಂಜಿನ್ ಆಯ್ಕೆಗಳನ್ನು ಬಳಸುತ್ತದೆ, ಆದರೆ ಉನ್ನತ ಸ್ಥಿತಿಗಳಲ್ಲಿ. ಅವುಗಳೆಂದರೆ, 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್. ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗುತ್ತದೆ ಮತ್ತು ಸಾಮಾನ್ಯ ಥಾರ್‌ನಂತೆಯೇ, 5-ಡೋರ್ ವರ್ಷನ್ ಕೂಡ 4-ವೀಲ್-ಡ್ರೈವ್ (4WD) ಮತ್ತು ರಿಯರ್-ವೀಲ್-ಡ್ರೈವ್ (RWD) ಆಯ್ಕೆಯೊಂದಿಗೆ ಬರಲಿದೆ.

 ಇದನ್ನು ಕೂಡ ಓದಿ: ಇತ್ತೀಚಿನ ಸ್ಪೈ ಶಾಟ್‌ಗಳನ್ನು ನೋಡಿದರೆ ಫೋರ್ಸ್ ಗೂರ್ಖಾ 5-ಡೋರ್  ಲಾಂಚ್‌ಗೆ ಸಿದ್ಧವಾಗಿದೆ ಎಂದು ಅನಿಸುತ್ತದೆ

 ಥಾರ್ 3-ಡೋರ್ ಗೆ ಹೋಲಿಸಿದರೆ ಹೆಚ್ಚು ಫೀಚರ್ ಗಳು

5-door Mahindra Thar Spied

 3-ಡೋರ್ ವರ್ಷನ್ ಗೆ ಹೋಲಿಸಿದರೆ ಮಹೀಂದ್ರಾ ತನ್ನ ಥಾರ್‌ನ 5-ಡೋರ್ ವರ್ಷನ್ ಅನ್ನು ಹೆಚ್ಚು ಫೀಚರ್ ಗಳೊಂದಿಗೆ ನೀಡಲಿದೆ, ಅವುಗಳೆಂದರೆ ದೊಡ್ಡ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸಿಂಗಲ್ ಪೇನ್ ಸನ್‌ರೂಫ್, ಹಿಂಭಾಗದ AC ವೆಂಟ್‌ಗಳು ಮತ್ತು ಆಟೋ-ಡಿಮ್ಮಿಂಗ್ IRVM. 5-ಡೋರ್ ಥಾರ್ ತನ್ನ ರೆಗ್ಯುಲರ್ ವರ್ಷನ್ ಗೆ ಹೋಲಿಸಿದರೆ ಏನೇನು ಫೀಚರ್ ಗಳನ್ನು ಹೊಸದಾಗಿ ನೀಡಬಹುದು ಎಂಬುದರ ಕುರಿತು ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ.

 ಸುರಕ್ಷತೆಯ ವಿಷಯದಲ್ಲಿ, ಥಾರ್ 5-ಡೋರ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ರಿಯರ್‌ವ್ಯೂ ಕ್ಯಾಮೆರಾವನ್ನು ಪಡೆಯಬಹುದು ಮತ್ತು ಮೇಲ್ಮಟ್ಟದ ವೇರಿಯಂಟ್ ನಲ್ಲಿ ಇದು 360-ಡಿಗ್ರಿ ಕ್ಯಾಮೆರಾವನ್ನು ಕೂಡ ಪಡೆಯಬಹುದು.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಮಹೀಂದ್ರ ಥಾರ್ 5-ಡೋರ್ ಭಾರತದಲ್ಲಿ 2024 ರ ಎರಡನೇ ಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಬೆಲೆಯು ರೂ 15 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಇದು ಮಾರುತಿ ಜಿಮ್ನಿಗೆ ದೊಡ್ಡದಾದ ಪರ್ಯಾಯ ಆಯ್ಕೆಯಾಗಿದ್ದು, ಫೋರ್ಸ್ ಗೂರ್ಖಾದ 5-ಡೋರ್ ವರ್ಷನ್ ಗೆ ಪ್ರತಿಸ್ಪರ್ಧಿಯಾಗಲಿದೆ.

 ಇನ್ನಷ್ಟು ಓದಿ: ಥಾರ್ ಆಟೋಮ್ಯಾಟಿಕ್

was this article helpful ?

Write your Comment on Mahindra ಥಾರ್‌ ROXX

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience