• English
    • Login / Register

    ಮೊದಲ ಬಾರಿಗೆ Mahindra Thar Roxx ನ ಇಂಟೀರಿಯರ್‌ನ ಟೀಸರ್‌ ಔಟ್‌, ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು ಇರೋದು ಪಕ್ಕಾ..!

    ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ ansh ಮೂಲಕ ಆಗಸ್ಟ್‌ 06, 2024 03:48 pm ರಂದು ಪ್ರಕಟಿಸಲಾಗಿದೆ

    • 42 Views
    • ಕಾಮೆಂಟ್‌ ಅನ್ನು ಬರೆಯಿರಿ

    ಇದು ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, 10.25-ಇಂಚಿನ  ಡ್ಯುಯಲ್ ಸ್ಕ್ರೀನ್‌ಗಳು ಮತ್ತು ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ

    Mahindra Thar Roxx's Interior Teased

    • ಥಾರ್ ರೋಕ್ಸ್ ಬಿಳಿ ಲೆಥೆರೆಟ್ ಕವರ್‌ ಮತ್ತು ಕಪ್ಪು ಲೆದರ್ ಸುತ್ತಿದ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. 
    • ಇತ್ತೀಚಿನ ಟೀಸರ್‌ನಲ್ಲಿ ಯಾವುದೇ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಗೋಚರಿಸುವುದಿಲ್ಲ, ಆದರೆ ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು ಆಫರ್‌ನಲ್ಲಿ ಇರಬಹುದೆಂದು ನಿರೀಕ್ಷಿಸಲಾಗಿದೆ.
    • ಸುರಕ್ಷತಾ ತಂತ್ರಜ್ಞಾನವು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿರಬಹುದು.
    • ಪವರ್‌ಟ್ರೇನ್ ಆಯ್ಕೆಗಳು 3-ಡೋರ್ ಆವೃತ್ತಿಯಂತೆಯೇ 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ಗಳು ಇರಬಹುದೆಂದು ನಿರೀಕ್ಷಿಸಲಾಗಿದೆ.
    • ಆಗಸ್ಟ್ 15 ರಂದು ಬಿಡುಗಡೆಯಾಗಲಿದ್ದು, ಎಕ್ಸ್‌ಶೋರೂಮ್‌ ಬೆಲೆಗಳು 12.99 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು. 

    5-ಡೋರ್‌ ಮಹೀಂದ್ರಾ ಥಾರ್ ಎಂದೂ ಕರೆಯಲ್ಪಡುವ ಮಹೀಂದ್ರಾ ಥಾರ್ ರೋಕ್ಸ್ ಅನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಮತ್ತು ಕಾರು ತಯಾರಕರು ಬಿಡುಗಡೆಗೆ ಕೆಲದಿನವಿರುವಾಗಲೇ ಈ ಆಫ್-ರೋಡರ್‌ನ ಟೀಸರ್‌ ಅನ್ನು ಬಿಡುಗಡೆ ಮಾಡಿದ್ದಾರೆ. ಥಾರ್ ರೋಕ್ಸ್‌ನ ಇತ್ತೀಚಿನ ಟೀಸರ್ ಮೊದಲ ಬಾರಿಗೆ ಅದರ ಇಂಟಿರೀಯರ್‌ನ ಒಂದು ನೋಟದ ಜೊತೆಗೆ ಥಾರ್ ಬ್ರ್ಯಾಂಡ್‌ಗೆ ಸೇರಿಸಲಾಗುತ್ತಿರುವ ಕೆಲವು ಹೊಸ ಫೀಚರ್‌ಗಳ ಕುರಿತು ತಿಳಿಸಿದೆ. ಥಾರ್ ರೋಕ್ಸ್ ಕ್ಯಾಬಿನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

    ಟೀಸರ್‌ನಲ್ಲಿ ಏನು ವಿವರಿಸಲಾಗಿದೆ ?

    Mahindra Thar Roxx Dashboard

    ಈ ಟೀಸರ್‌ನಿಂದ, ದೊಡ್ಡ ಥಾರ್‌ನ ಕ್ಯಾಬಿನ್ ಥೀಮ್ ಬಗ್ಗೆ ನಾವು ಕಲ್ಪನೆಯನ್ನು ಪಡೆಯುತ್ತೇವೆ. ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಬಿಳಿ ಥೀಮ್ ಅನ್ನು ಪಡೆಯುತ್ತದೆ, ಅಲ್ಲಿ ಸೀಟ್‌ಗಳನ್ನು ಬಿಳಿ ಲೆಥೆರೆಟ್ ಕವರ್‌ನಿಂದ ಮುಚ್ಚಲಾಗುತ್ತದೆ ಮತ್ತು ಡ್ಯಾಶ್‌ಬೋರ್ಡ್ ಅನ್ನು ಕಪ್ಪು ಲೆಥೆರೆಟ್ ಪ್ಯಾಡಿಂಗ್‌ನಲ್ಲಿ ಸುತ್ತಿ, ವ್ಯತಿರಿಕ್ತ ತಾಮ್ರದ ಹೊಲಿಗೆಯನ್ನು ಹೊಂದಿರುತ್ತದೆ.

    Mahindra Thar Roxx Harman Kardon Sound System
    Mahindra Thar Roxx Touchscreen Infotainment System

    ಥಾರ್ ರೋಕ್ಸ್ ಪ್ಯಾನರೋಮಿಕ್‌ ಸನ್‌ರೂಫ್ ಅನ್ನು ಪಡೆಯುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದ್ದರೂ, ಟೀಸರ್ ನಮಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (ಬಹುಶಃ 10.25-ಇಂಚಿನ ಯುನಿಟ್‌ಗಳು) ಮತ್ತು ಸಿಂಗಲ್‌-ಝೋನ್‌ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಇರುವುದನ್ನು ಸಹ ದೃಢಪಡಿಸಿದೆ. ಮಹೀಂದ್ರಾ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಸಹ ಟೀಸರ್‌ನಲ್ಲಿ ತೋರಿಸಿದೆ ಮತ್ತು ಥಾರ್ ರೋಕ್ಸ್ ಸಹ ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ.

    Mahindra Thar Roxx Digital Driver's Display

    ಸುರಕ್ಷತೆಯ ದೃಷ್ಟಿಯಿಂದ, ಇದು 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಬರುವ ನಿರೀಕ್ಷೆಯಿದೆ. ಇದು ಎಕ್ಸ್‌ಯುವಿ700 ನಿಂದ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಸ್ವಾಯತ್ತ ತುರ್ತು ಬ್ರೇಕಿಂಗ್‌ನಂತಹ ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಫೀಚರ್‌ಗಳನ್ನು ಸಹ ಎರವಲು ಪಡೆಯಬಹುದು.

    ನಿರೀಕ್ಷಿತ ಪವರ್‌ಟ್ರೈನ್‌ಗಳು

    Mahindra Thar 3-door engine

    ಥಾರ್ ರೋಕ್ಸ್ ಪ್ರಸ್ತುತ 3-ಡೋರ್ ಥಾರ್ ಆವೃತ್ತಿಯಂತೆಯೇ 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ. ಆದರೆ, ಈ ಎಂಜಿನ್‌ಗಳು ಸ್ವಲ್ಪ ವಿಭಿನ್ನವಾದ ಔಟ್‌ಪುಟ್ ಅಂಕಿಅಂಶಗಳನ್ನು ಹೊಂದಿರುವ ಸಾಧ್ಯತೆ ಇದೆ. 

    ಇದನ್ನೂ ಓದಿ: 2 ತಿಂಗಳ ನಂತರ Toyota Innova Hycross ನ ಟಾಪ್-ಎಂಡ್ ಬುಕಿಂಗ್‌ಗಳು ಮತ್ತೆ ಪ್ರಾರಂಭ 

    ಅಲ್ಲದೆ, ಇದು 3-ಡೋರ್ ಆವೃತ್ತಿಯಂತೆಯೇ ಹಿಂಬದಿ-ಚಕ್ರ-ಡ್ರೈವ್ (RWD), ಮತ್ತು ನಾಲ್ಕು-ಚಕ್ರ-ಡ್ರೈವ್ (4WD) ಆಯ್ಕೆಗಳೊಂದಿಗೆ ಬರಬಹುದು.

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    Mahindra Thar Roxx will get LED headlights

     ಮಹೀಂದ್ರಾ ಥಾರ್ ರೋಕ್ಸ್‌ನ ಬೆಲೆಯು 12.99 ಲಕ್ಷ ರೂ.ನಿಂದ(ಎಕ್ಸ್-ಶೋರೂಮ್) ಪ್ರಾರಂಭವಾಗಬಹುದೆಂದು ಅಂದಾಜಿಸಲಾಗಿದೆ ಮತ್ತು 5-ಡೋರ್ ಫೋರ್ಸ್ ಗೂರ್ಖಾಗೆ ಇದು ನೇರ ಪ್ರತಿಸ್ಪರ್ಧಿಯಾಗಲಿದೆ. ಇದು ಮಾರುತಿ ಜಿಮ್ನಿಗೆ ಹೆಚ್ಚು ಪ್ರೀಮಿಯಂ ಪರ್ಯಾಯವಾಗಿಯೂ ಕಾರ್ಯನಿರ್ವಹಿಸುತ್ತದೆ.

    ಮಹೀಂದ್ರಾ ಕಾರುಗಳ ಕುರಿತ ಇತ್ತೀಚಿನ ಎಲ್ಲಾ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಆನ್ನು ಫಾಲೋ ಮಾಡಿ.

    ಇನ್ನಷ್ಟು ಓದಿ : ಥಾರ್ ಆಟೋಮ್ಯಾಟಿಕ್‌

    was this article helpful ?

    Write your Comment on Mahindra ಥಾರ್‌ ROXX

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience