• English
  • Login / Register

ಮಹೀಂದ್ರಾ XUV 3XOನ ಬೆಲೆಗಳಲ್ಲಿ 30,000 ರೂ.ವರೆಗೆ ಹೆಚ್ಚಳ, ಏನಿದರ ಗುಟ್ಟು ?

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಗಾಗಿ rohit ಮೂಲಕ ಅಕ್ಟೋಬರ್ 09, 2024 07:47 pm ರಂದು ಪ್ರಕಟಿಸಲಾಗಿದೆ

  • 49 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಕ್ಸ್‌ಯುವಿ 3ಎಕ್ಸ್‌ಒನ ಕೆಲವು ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳಲ್ಲಿ ಗರಿಷ್ಠ ಹೆಚ್ಚಳವಾಗಿದೆ, ಆದರೆ ಕೆಲವು ಡೀಸೆಲ್ ವೇರಿಯೆಂಟ್‌ಗಳು10,000 ರೂ.ರಷ್ಟು ಹೆಚ್ಚಳ ಕಂಡಿದೆ

Mahindra XUV 3XO prices hiked

  • ಮಹೀಂದ್ರಾ ಫೇಸ್‌ಲಿಫ್ಟೆಡ್ ಎಕ್ಸ್‌ಯುವಿ300 ಅನ್ನು (ಈಗ XUV 3XO ಎಂದು ಕರೆಯಲಾಗುತ್ತದೆ) 2024ರ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿತು.

  • ಇದರ ಪರಿಚಯಾತ್ಮಕ ಬೆಲೆಗಳು 7.49 ಲಕ್ಷ ರೂ.ನಿಂದ 15.49 ಲಕ್ಷ ರೂ. ಆಗಿದೆ. 

  • ಮಹೀಂದ್ರಾ ಎಸ್‌ಯುವಿಯ ಆಪ್‌ಡೇಟ್‌ ಮಾಡಿದ ಬೆಲೆಗಳು 7.79 ಲಕ್ಷ ರೂ.ನಿಂದ 15.49 ಲಕ್ಷ ರೂ.ಗಳ ನಡುವೆ ಇರಲಿದೆ. 

  • ಮ್ಯಾನುವಲ್ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎರಡನ್ನೂ ಪಡೆಯುತ್ತದೆ.

2024ರ ಏಪ್ರಿಲ್‌ನಲ್ಲಿ, ನಾವು ಫೇಸ್‌ಲಿಫ್ಟೆಡ್ ಮಹೀಂದ್ರಾ ಎಕ್ಸ್‌ಯುವಿ300 ಅನ್ನು ಪಡೆದುಕೊಂಡಿದ್ದೇವೆ, ಅದನ್ನು ಈಗ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಂದು ಕರೆಯಲಾಗುತ್ತದೆ. ಭಾರತದಾದ್ಯಂತ ಇದನ್ನು 7.49 ಲಕ್ಷ ರೂ.ಗಳ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಗಳೊಂದಿಗೆ ಪ್ರಾರಂಭಿಸಲಾಗಿದೆ. ಈಗ, ಮಹೀಂದ್ರಾವು ಈ ಸಬ್-4ಎಮ್‌ ಎಸ್‌ಯುವಿ ಬೆಲೆಗಳನ್ನು ಹೆಚ್ಚಿಸಿದೆ, ಇದರ ಪರಿಣಾಮವಾಗಿ ಅದರ ಪರಿಚಯಾತ್ಮಕ ಬೆಲೆಗಳನ್ನು ಸ್ಥಗಿತಗೊಳಿಸಲಾಗಿದೆ. 

ಆಪ್‌ಡೇಟೆಡ್‌ ವೇರಿಯೆಂಟ್‌-ವಾರು ಬೆಲೆಗಳು

ವೇರಿಯೆಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

1.2- ಲೀಟರ್‌ ಟರ್ಬೋ ಪೆಟ್ರೋಲ್‌

ಎಮ್‌ಎಕ್ಸ್‌1 ಮ್ಯಾನುವಲ್‌

7.49 ಲಕ್ಷ ರೂ.

7.79 ಲಕ್ಷ ರೂ.

+ 30,000 ರೂ.

ಎಮ್‌ಎಕ್ಸ್‌2 ಪ್ರೋ ಮ್ಯಾನುವಲ್‌

8.99 ಲಕ್ಷ ರೂ.

9.24 ಲಕ್ಷ ರೂ.

+ 25,000 ರೂ.

ಎಮ್‌ಎಕ್ಸ್‌2 ಪ್ರೋ ಆಟೋಮ್ಯಾಟಿಕ್‌

9.99 ಲಕ್ಷ ರೂ.

10.24 ಲಕ್ಷ ರೂ.

+ 25,000 ರೂ.

ಎಮ್‌ಎಕ್ಸ್‌3 ಮ್ಯಾನುವಲ್‌

9.49 ಲಕ್ಷ ರೂ.

9.74 ಲಕ್ಷ ರೂ.

+ 25,000 ರೂ.

ಎಮ್‌ಎಕ್ಸ್‌3 ಆಟೋಮ್ಯಾಟಿಕ್‌

10.99 ಲಕ್ಷ ರೂ.

11.24 ಲಕ್ಷ ರೂ.

+ 25,000 ರೂ.

ಎಮ್‌ಎಕ್ಸ್‌3 ಪ್ರೋ ಮ್ಯಾನುವಲ್‌

9.99 ಲಕ್ಷ ರೂ.

9.99 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

ಎಮ್‌ಎಕ್ಸ್‌3 ಪ್ರೋ ಆಟೋಮ್ಯಾಟಿಕ್‌

11.49 ಲಕ್ಷ ರೂ.

11.49 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

ಎಎಕ್ಸ್‌5 ಮ್ಯಾನುವಲ್‌

10.69 ಲಕ್ಷ ರೂ.

10.99 ಲಕ್ಷ ರೂ.

+ 30,000 ರೂ.

ಎಎಕ್ಸ್‌5 ಆಟೋಮ್ಯಾಟಿಕ್‌

12.19 ಲಕ್ಷ ರೂ.

12.49 ಲಕ್ಷ ರೂ.

+ 30,000 ರೂ.

1.2-ಲೀಟರ್‌ TGDi ಟರ್ಬೋ ಪೆಟ್ರೋಲ್‌

ಎಎಕ್ಸ್‌5 ಎಲ್‌ ಮ್ಯಾನುವಲ್‌

11.99 ಲಕ್ಷ ರೂ.

12.24 ಲಕ್ಷ ರೂ.

+ 25,000 ರೂ.

ಎಎಕ್ಸ್‌5 ಎಲ್‌ ಆಟೋಮ್ಯಾಟಿಕ್‌

13.49 ಲಕ್ಷ ರೂ.

13.74 ಲಕ್ಷ ರೂ.

+ 25,000 ರೂ.

ಎಎಕ್ಸ್‌7 ಮ್ಯಾನುವಲ್‌

12.49 ಲಕ್ಷ ರೂ.

12.49 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

ಎಎಕ್ಸ್‌7 ಆಟೋಮ್ಯಾಟಿಕ್‌

13.99 ಲಕ್ಷ ರೂ.

13.99 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

ಎಎಕ್ಸ್‌7 ಎಲ್‌ ಮ್ಯಾನುವಲ್‌

13.99 ಲಕ್ಷ ರೂ.

13.99 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

ಎಎಕ್ಸ್‌7 ಎಲ್‌ ಆಟೋಮ್ಯಾಟಿಕ್‌

15.49 ಲಕ್ಷ ರೂ.

15.49 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

1.5-ಲೀಟರ್‌ ಡೀಸೆಲ್‌

ಎಮ್‌ಎಕ್ಸ್‌2 ಮ್ಯಾನುವಲ್‌

9.99 ಲಕ್ಷ ರೂ.

9.99 ಲಕ್ಷ ರೂ.

Nಯಾವುದೇ ಬದಲಾವಣೆ ಇಲ್ಲ

ಎಮ್‌ಎಕ್ಸ್‌2 ಪ್ರೋ ಮ್ಯಾನುವಲ್‌

10.39 ಲಕ್ಷ ರೂ.

10.49 ಲಕ್ಷ ರೂ.

10,000 ರೂ.

ಎಮ್‌ಎಕ್ಸ್‌3 ಮ್ಯಾನುವಲ್‌

10.89 ಲಕ್ಷ ರೂ.

10.99 ಲಕ್ಷ ರೂ.

10,000 ರೂ.

ಎಮ್‌ಎಕ್ಸ್‌3 ಎಎಮ್‌ಟಿ

11.69 ಲಕ್ಷ ರೂ.

11.79 ಲಕ್ಷ ರೂ.

10,000 ರೂ.

ಎಮ್‌ಎಕ್ಸ್‌3 ಪ್ರೋ ಮ್ಯಾನುವಲ್‌

11.39 ಲಕ್ಷ ರೂ.

11.39 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

ಎಎಕ್ಸ್‌5 ಮ್ಯಾನುವಲ್‌

12.09 ಲಕ್ಷ ರೂ.

12.19 ಲಕ್ಷ ರೂ.

10,000 ರೂ.

ಎಎಕ್ಸ್‌5 ಎಎಮ್‌ಟಿ

12.89 ಲಕ್ಷ ರೂ.

12.99 ಲಕ್ಷ ರೂ.

10,000 ರೂ.

ಎಎಕ್ಸ್‌7 ಮ್ಯಾನುವಲ್‌

13.69 ಲಕ್ಷ ರೂ.

13.69 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

ಎಎಕ್ಸ್‌7 ಎಎಮ್‌ಟಿ

14.49 ಲಕ್ಷ ರೂ.

14.49 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

ಎಎಕ್ಸ್‌7 ಎಲ್‌ ಮ್ಯಾನುವಲ್‌

14.99 ಲಕ್ಷ ರೂ.

14.99 ಲಕ್ಷ ರೂ.

ಯಾವುದೇ ಬದಲಾವಣೆ ಇಲ್ಲ

  • ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳನ್ನು ರೂ 30,000 ವರೆಗೆ ಹೆಚ್ಚಿಸಲಾಗಿದೆ, ಬೇಸ್-ಸ್ಪೆಕ್ ಎಮ್‌ಎಕ್ಸ್‌1 ಮತ್ತು ಟಾಪ್‌-ಸ್ಪೆಕ್ ಎಎಕ್ಸ್‌5 ಟ್ರಿಮ್‌ಗಳು ಗರಿಷ್ಠ ಏರಿಕೆಗೆ ಸಾಕ್ಷಿಯಾಗಿದೆ.

  • ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒದ ಡೀಸೆಲ್ ವೇರಿಯೆಂಟ್‌ಗಳ ಬೆಲೆಗಳನ್ನು ರೂ 10,000 ವರೆಗೆ ಹೆಚ್ಚಿಸಿದೆ.

  • ಎಂಟ್ರಿ ಲೆವೆಲ್ ಎಮ್‌ಎಕ್ಸ್‌2 ಡೀಸೆಲ್ ಸೇರಿದಂತೆ ಕೆಲವು ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್‌ಗಳು ಯಾವುದೇ ಬೆಲೆ ಏರಿಕೆಯನ್ನು ಪಡೆದಿಲ್ಲ .

ಇದನ್ನೂ ಓದಿ : ಅಬ್ಬಬ್ಬಾ..!!: Mahindra Thar Roxx ನ ಮೊದಲ ಕಾರು 1.31 ಕೋಟಿ ರೂ.ಗೆ ಮಾರಾಟ

ಪವರ್‌ಟ್ರೈನ್‌ಗಳ ಕುರಿತು

ಮಹೀಂದ್ರಾದ ಸಬ್-4ಎಮ್‌ ಎಸ್‌ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೆರಡರಲ್ಲೂ ಲಭ್ಯವಿದೆ, ಅದರ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

Mahindra XUV 3XO engine

ವಿಶೇಷಣಗಳು

1.2-ಲೀಟರ್‌ ಟರ್ಬೋ ಪೆಟ್ರೋಲ್‌

1.2-ಲೀಟರ್‌ TGDi ಟರ್ಬೋ ಪೆಟ್ರೋಲ್‌

1.5-ಲೀಟರ್‌ ಡೀಸೆಲ್‌

ಪವರ್‌

111 ಪಿಎಸ್‌

130 ಪಿಎಸ್‌

117 ಪಿಎಸ್‌

ಟಾರ್ಕ್‌

200 ಎನ್‌ಎಮ್‌

230 ಎನ್‌ಎಮ್‌, 250 ಎನ್‌ಎಮ್‌

300 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಎಎಮ್‌ಟಿ

ಕ್ಲೈಮ್‌ ಮಾಡಲಾದ ಮೈಲೇಜ್‌

ಪ್ರತಿ ಲೀ.ಗೆ 18.89 ಕಿ.ಮೀ, ಪ್ರತಿ ಲೀ.ಗೆ 17.96 ಕಿ.ಮೀ

ಪ್ರತಿ ಲೀ.ಗೆ 20.1 ಕಿ.ಮೀ, ಪ್ರತಿ ಲೀ.ಗೆ 18.2 ಕಿ.ಮೀ

ಪ್ರತಿ ಲೀ.ಗೆ 20.6 ಕಿ.ಮೀ, ಪ್ರತಿ ಲೀ.ಗೆ 21.2 ಕಿ.ಮೀ

ಪೆಟ್ರೋಲ್-ಆಟೋಮ್ಯಾಟಿಕ್‌ ವೇರಿಯೆಂಟ್‌ಗಳಲ್ಲಿ ಜಿಪ್, ಜ್ಯಾಪ್ ಮತ್ತು ಜೂಮ್ ಎಂಬ ಮೂರು ಡ್ರೈವ್ ಮೋಡ್‌ಗಳಿವೆ.

ಪ್ರತಿಸ್ಪರ್ಧಿಗಳ ಕುರಿತು

Mahindra XUV 3XO rear

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್, ಮಾರುತಿ ಬ್ರೆಝಾ, ಕಿಯಾ ಸೋನೆಟ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಹ್ಯುಂಡೈ ವೆನ್ಯೂ ಜೊತೆ ಸ್ಪರ್ಧೆಯನ್ನು ಒಡ್ಡುತ್ತದೆ. ಇದು ಟೊಯೋಟಾ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್‌ನಂತಹ ಸಬ್‌-4ಎಮ್‌ ಕ್ರಾಸ್‌ಒವರ್‌ಗಳಿಗೆ ಪರ್ಯಾಯವಾಗಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಎಕ್ಸ್ ಯುವಿ 3ಎಕ್ಸ್ ಒ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience