• English
  • Login / Register

ಅಬ್ಬಬ್ಬಾ..!!: Mahindra Thar Roxx ನ ಮೊದಲ ಕಾರು 1.31 ಕೋಟಿ ರೂ.ಗೆ ಮಾರಾಟ

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ shreyash ಮೂಲಕ ಅಕ್ಟೋಬರ್ 09, 2024 04:25 pm ರಂದು ಪ್ರಕಟಿಸಲಾಗಿದೆ

  • 142 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಿಂಡಾ ಕಾರ್ಪೊರೇಷನ್ ಲಿಮಿಟೆಡ್‌ನ ಎಕ್ಸ್‌ಕ್ಯೂಟಿವ್‌ ಡೈರೆಕ್ಟರ್‌ ಆಕಾಶ್ ಮಿಂಡಾ ಅವರು 2020 ರಲ್ಲಿ ಥಾರ್ 3-ಡೋರ್‌ನ ಮೊದಲ ಕಾರನ್ನು ಸಹ 1.11 ಕೋಟಿ ರೂ.ಗಳ ಗೆಲುವಿನ ಬಿಡ್‌ ಮೂಲಕ ಮನೆಗೆ ಕೊಂಡೊಯ್ದಿದ್ದರು

Mahindra Thar Roxx

  • ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುವ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ನಾಂದಿ ಫೌಂಡೇಶನ್‌ಗೆ ಈ ಹಣವನ್ನು ನೀಡಲಾಗುವುದು.

  • ಆಕಾಶ್ ಮಿಂಡಾ ಅವರು ಥಾರ್ ರೋಕ್ಸ್‌ನ ನೆಬ್ಯುಲಾ ಬ್ಲೂ ಬಣ್ಣವನ್ನು ಆರಿಸಿಕೊಂಡರು.

  • ಥಾರ್ ರೋಕ್ಸ್‌ನ ಈ ನಿರ್ದಿಷ್ಟ ಕಾರು ಆನಂದ್ ಮಹೀಂದ್ರಾ ಅವರ ಸಹಿಯನ್ನು ಒಳಗೊಂಡ ಬ್ಯಾಡ್ಜ್‌ನೊಂದಿಗೆ 'VIN 0001' ಚಿಹ್ನೆಯನ್ನು ಹೊಂದಿದೆ.

  • ಟಾಪ್-ಸ್ಪೆಕ್ ಎಎಕ್ಸ್‌7 ಎಲ್‌ ಡೀಸೆಲ್ ಆಟೋಮ್ಯಾಟಿಕ್‌ 4WD (4-ವೀಲ್-ಡ್ರೈವ್) ವೇರಿಯೆಂಟ್‌ ಹರಾಜಿನಲ್ಲಿದ್ದ ಮೊಡೆಲ್‌ ಅಗಿತ್ತು.

  • ಇದು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ಗೆ ಜೋಡಿಸಲಾದ 175 ಪಿಎಸ್‌ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ.

  • ಭಾರತದಾದ್ಯಂತ ಥಾರ್ ರೋಕ್ಸ್‌ನ ಪರಿಚಯಾತ್ಮಕ, ಎಕ್ಸ್-ಶೋ ರೂಂ ಬೆಲೆಗಳು 12.99 ಲಕ್ಷ ರೂ.ನಿಂದ 20.49 ಲಕ್ಷ ರೂ.ವರೆಗೆ(RWDಗೆ ವೇರಿಯೆಂಟ್‌ಗೆ) ಇದೆ. 

ಮಹೀಂದ್ರಾ ಥಾರ್ ರೋಕ್ಸ್‌ನ ಮಾರಾಟದ ಮೊದಲ ಕಾರನ್ನು ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 16 ರವರೆಗೆ 3-ಡೋರ್ ಮೊಡೆಲ್‌ಗೆ 2020ರಲ್ಲಿ ಮಾಡಿದ ರೀತಿಯಲ್ಲಿಯೇ ಹರಾಜು ಮಾಡಲಾಯಿತು. 1.31 ಕೋಟಿ ರೂ.ಗಳಲ್ಲಿ ಬಿಡ್ಡಿಂಗ್ ಮುಕ್ತಾಯಗೊಂಡಿತು ಮತ್ತು ಮಿಂಡಾ ಕಾರ್ಪೊರೇಷನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಆಕಾಶ್ ಮಿಂಡಾ ಅವರು ವಿನ್ನಿಂಗ್‌ ಬಿಡ್ ಅನ್ನು ಪಡೆದುಕೊಂಡರು. ಮಹೀಂದ್ರಾ ಈಗ ಥಾರ್ ರೋಕ್ಸ್‌ನ ಮೊದಲ ಕಾರನ್ನು ವಿಜೇತರಿಗೆ ನೀಡಿದೆ. ಮಿಂಡಾ ಅವರು 2020 ರಲ್ಲಿಯೂ ಮೊದಲ 3-ಡೋರ್‌ನ ಮಹೀಂದ್ರಾ ಥಾರ್ ಅನ್ನು 1.11 ಕೋಟಿಗೆ ಬಿಡ್‌ ಮಾಡಿ, ಥಾರ್‌ನ ಮೊದಲ ಕಾರ್‌ನ ಮೊದಲ ಗ್ರಾಹಕರಾಗಿದ್ದರು.   

ಮೊತ್ತವನ್ನು ನಾಂದಿ ಫೌಂಡೇಶನ್‌ಗೆ ಹಸ್ತಾಂತರ

ಹರಾಜಿನಲ್ಲಿ ವಿಜೇತರನ್ನು ಆಯ್ಕೆ ಮಾಡಿದ ನಂತರ, ಸಂಗ್ರಹಿಸಿದ ಹಣವನ್ನು ಶಿಕ್ಷಣ ಮತ್ತು ಆರ್ಥಿಕ ಸದೃಢತೆಯನ್ನು ಬೆಂಬಲಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ಮೀಸಲಾಗಿರುವ ಲಾಭರಹಿತ ಸಂಸ್ಥೆಯಾದ ನಾಂದಿ ಫೌಂಡೇಶನ್‌ಗೆ ದೇಣಿಗೆ ನೀಡಲಾಗಿದೆ.

ಇದನ್ನು ಗಮನಿಸಿ: ಬುಕ್ಕಿಂಗ್‌ ಪ್ರಾರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದ Mahindra Thar Roxx

VIN 0001 ಥಾರ್ ರೋಕ್ಸ್‌ನ ವಿಶೇಷತೆ ಏನು?

5 Door Mahindra Thar Roxx

ಮಹೀಂದ್ರಾ ಥಾರ್ ರೋಕ್ಸ್‌ನ ಟಾಪ್-ಸ್ಪೆಕ್ ಎಎಕ್ಸ್‌7 ಎಲ್‌ ಡೀಸೆಲ್ ಆಟೋಮ್ಯಾಟಿಕ್‌ 4WD ವೇರಿಯೆಂಟ್‌ ಅನ್ನು ಹರಾಜು ಹಾಕಿದೆ. ಥಾರ್ ರೋಕ್ಸ್‌ನ ಈ ಮೊಡೆಲ್‌ 'VIN 0001' ಚಿಹ್ನೆಯನ್ನು ಹೊಂದಿದೆ ಮತ್ತು ಆನಂದ್ ಮಹೀಂದ್ರಾ ಅವರ ಸಹಿಯೊಂದಿಗೆ ವಿಶೇಷ ಬ್ಯಾಡ್ಜ್ ಅನ್ನು ಹೊಂದಿದೆ. ಆಕಾಶ್ ಮಿಂಡಾ ಅವರು ಥಾರ್ ರೋಕ್ಸ್‌ನ ನೆಬ್ಯುಲಾ ಬ್ಲೂ ಬಣ್ಣವನ್ನು ಆರಿಸಿಕೊಂಡರು.

Mahindra Thar Roxx Serial Number 1 Sold For A Winning Bid Of Rs 1.31 Crore

ಅವರ ಡೆಲಿವರಿಯ ಕುರಿತು ಪ್ರತಿಕ್ರಿಯಿಸಿದ ಆಕಾಶ್ ಮಿಂಡಾ, “2020 ರಲ್ಲಿ ಮೊದಲ ಥಾರ್ ಅನ್ನು ಪಡೆದುಕೊಂಡ ನಂತರ, 2024 ರಲ್ಲಿ ಇದೀಗ ಥಾರ್ ರೋಕ್ಸ್‌ನ ಮಾರಾಟದ ಮೊದಲ ಕಾರನ್ನು ಪಡೆದಿದ್ದು, ಈ ಮೂಲಕ ಐಕಾನಿಕ್ ಎಸ್‌ಯುವಿ ಪರಂಪರೆಯ ಜೊತೆಗಿನ ನನ್ನ ಅಭಿಮಾನವನ್ನು ಇನ್ನಷ್ಟು ಗಾಢಗೊಳಿಸುತ್ತದೆ. ಈ ಕ್ಷಣವನ್ನು ಇನ್ನಷ್ಟು ವಿಶೇಷಗೊಳಿಸುವುದು ಏನೆಂದರೆ, ಇದು ಮಾನವೀಯತೆಯ ಪ್ರೇರಿತ ಉದ್ದೇಶವಾಗಿದೆ ಮತ್ತು ಈವೆಂಟ್‌ನಿಂದ ಬರುವ ಮೊತ್ತವನ್ನು ಸಾಮಾಜಿಕ ಉದ್ದೇಶಕ್ಕಾಗಿ ಮಾನ್ಯತೆ ಪಡೆದ ಲಾಭರಹಿತ ಸಂಸ್ಥೆಗೆ ದೇಣಿಗೆ ನೀಡಲಾಗುತ್ತದೆ. ಥಾರ್‌ನ ವಿಕಸನದಲ್ಲಿ ಮತ್ತೊಂದು ಮೈಲಿಗಲ್ಲನ್ನು ಗುರುತಿಸುವ ಮೂಲಕ ಮಹೀಂದ್ರಾದ ಗಮನಾರ್ಹ ಪ್ರಯಾಣದ ಭಾಗವಾಗಿರುವುದು ನಂಬಲಾಗದ ಅನುಭವವಾಗಿದೆ.“

ಫೀಚರ್‌ & ಸುರಕ್ಷತೆ

5 Door Mahindra Thar Roxx Interior

ಇದು ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳು(ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಆಟೋ ಎಸಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಚಾಲಿತ ಡ್ರೈವರ್ ಸೀಟ್ ಮತ್ತು ಪನರೋಮಿಕ್‌ ಸನ್‌ರೂಫ್‌ನಂತಹ ಸೌಕರ್ಯಗಳನ್ನು ಹೊಂದಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್ ಒಳಗೊಂಡಿದೆ.

ಪವರ್‌ಟ್ರೈನ್‌ಗಳ ಕುರಿತು

ಥಾರ್ ರೋಕ್ಸ್‌ನ VIN 0001 ಕಾರು ಅದರ ಬಾನೆಟ್‌ನ ಅಡಿಯಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ ಮತ್ತು ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ವಿಶೇಷಣಗಳು 

ಮಹೀಂದ್ರಾ ಥಾರ್‌ ರೋಕ್ಸ್‌

ಎಂಜಿನ್‌

2.2-ಲೀಟರ್‌ ಡೀಸೆಲ್‌

ಪವರ್‌

175 ಪಿಎಸ್‌

ಟಾರ್ಕ್‌

370 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್‌ AT

ಡ್ರೈವ್‌ ಟೈಪ್‌

4WD

*AT - ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

^4WD - 4-ವೀಲ್-ಡ್ರೈವ್

ಥಾರ್ ರೋಕ್ಸ್ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮ್ಯಾನುವಲ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ನೀಡುತ್ತದೆ. ಥಾರ್ ರೋಕ್ಸ್‌ನ ವಿವರವಾದ ಪವರ್‌ಟ್ರೇನ್ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

2-ಲೀಟರ್‌ ಟರ್ಬೋ ಪೆಟ್ರೋಲ್‌

2.2-ಲೀಟರ್‌ ಪೆಟ್ರೋಲ್‌

ಪವರ್‌

162 ಪಿಎಸ್‌ (ಮ್ಯಾನುವಲ್‌)/ 177 ಪಿಎಸ್‌ (ಆಟೋಮ್ಯಾಟಿಕ್‌)

152 ಪಿಎಸ್‌ (ಮ್ಯಾನುವಲ್‌)/  175  ಪಿಎಸ್‌ ವರೆಗೆ (ಆಟೋಮ್ಯಾಟಿಕ್‌)

ಟಾರ್ಕ್‌

330 ಎನ್‌ಎಮ್‌ (ಮ್ಯಾನುವಲ್‌)/ 380ಎನ್‌ಎಮ್‌ (ಆಟೋಮ್ಯಾಟಿಕ್‌)

330 ಎನ್‌ಎಮ್‌ (ಮ್ಯಾನುವಲ್‌/ 370ಎನ್‌ಎಮ್‌ ವರೆಗೆ (ಆಟೋಮ್ಯಾಟಿಕ್‌)

ಗೇರ್‌ಬಾಕ್ಸ್‌

6-ಸ್ಪೀಡ್‌ ಮ್ಯಾನುವಲ್‌/6-ಸ್ಪೀಡ್‌ AT^

6-ಸ್ಪೀಡ್‌ ಮ್ಯಾನುಯಲ್‌/6-ಸ್ಪೀಡ್‌ AT

ಡ್ರೈವ್‌ ಟೈಪ್‌

RWD^

RWD^/ 4WD

^RWD - ರಿಯರ್‌ ವೀಲ್‌ ಡ್ರೈವ್‌

ಬೆಲೆ ರೇಂಜ್‌ & ಪ್ರತಿಸ್ಪರ್ಧಿಗಳು

ಭಾರತದಾದ್ಯಂತ ಮಹೀಂದ್ರಾ ಥಾರ್ ರೋಕ್ಸ್‌ನ ಪರಿಚಯಾತ್ಮಕ, ಎಕ್ಸ್-ಶೋರೂಂ ಬೆಲೆ 12.99 ಲಕ್ಷ ರೂ.ನಿಂದ 20.49 ಲಕ್ಷ ರೂ.ವರೆಗೆ ಇದೆ. ಥಾರ್ ರೋಕ್ಸ್‌ನ 4WD ವೇರಿಯೆಂಟ್‌ಗಳ ಬೆಲೆಗಳನ್ನು ಮಹೀಂದ್ರಾ ಇನ್ನೂ ಘೋಷಿಸಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಇದು ಫೋರ್ಸ್ ಗೂರ್ಖಾ 5-ಡೋರ್‌ ಮತ್ತು ಮಾರುತಿ ಜಿಮ್ನಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. 

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ :  ಥಾರ್‌ ರೋಕ್ಸ್‌ ಡೀಸೆಲ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌ ROXX

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience