Login or Register ಅತ್ಯುತ್ತಮ CarDekho experience ಗೆ
Login

Mahindra XUV 3XO ವರ್ಸಸ್ Maruti Brezza: ಸ್ಪೆಸಿಫಿಕೇಷನ್ ಗಳ ಹೋಲಿಕೆ

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಗಾಗಿ samarth ಮೂಲಕ ಜೂನ್ 05, 2024 08:46 pm ರಂದು ಪ್ರಕಟಿಸಲಾಗಿದೆ

XUV 3XO ಮತ್ತು ಬ್ರೆಝಾ ಎರಡೂ ಕೂಡ 360-ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿವೆ. XUV 3XO ಪನರೋಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ AC ಅನ್ನು ಕೂಡ ಹೊಂದಿದೆ, ಆದರೆ ಇದು ಬ್ರೆಝಾದಲ್ಲಿ ಲಭ್ಯವಿಲ್ಲ.

ಹೊಸ ಮಹೀಂದ್ರಾ XUV 3XO ತನ್ನ ಸೆಗ್ಮೆಂಟ್ ನ ಇತರ ಕಾರುಗಳು ಹೊಂದಿರದ ಕೆಲವು ಫೀಚರ್ ಗಳನ್ನು ಹೊಂದಿದೆ, ಉದಾಹರಣೆಗೆ ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು. ಮಹೀಂದ್ರಾದ ಈ ಹೊಸ ಮಾಡೆಲ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಆಯ್ಕೆಗಳಲ್ಲಿ ಬರುತ್ತದೆ, ಎರಡರಲ್ಲಿ ಕೂಡ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಲಭ್ಯವಿದೆ. XUV 3XO ನ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಮಾರುತಿ ಬ್ರೆಝಾ ಮುಂಚೂಣಿಯಲ್ಲಿದೆ, ಇದು ಈ ಸೆಗ್ಮೆಂಟ್ ನಲ್ಲಿ ಅತ್ಯಂತ ಜನಪ್ರಿಯ ಮಾಡೆಲ್ ಆಗಿದೆ. XUV 3XO ಹೆಚ್ಚು ಶಕ್ತಿಶಾಲಿ ಎಂಜಿನ್‌ಗಳು ಮತ್ತು ಸೆಗ್ಮೆಂಟ್ ನಲ್ಲಿ ಮೊದಲು ಬಂದಿರುವ ಫೀಚರ್ ಗಳು ಹೆಚ್ಚು ಮಾರಾಟವಾಗುತ್ತಿರುವ ಬ್ರೆಝಾವನ್ನು ಮೀರಿಸಬಹುದೇ? ಬನ್ನಿ, ಎರಡು ಸಬ್-ಕಾಂಪ್ಯಾಕ್ಟ್ SUV ಗಳ ವಿವರವಾದ ಸ್ಪೆಸಿಫಿಕೇಷನ್ ಗಳ ಹೋಲಿಕೆ ಮಾಡುವ ಮೂಲಕ ಕಂಡುಹಿಡಿಯೋಣ:

ಡೈಮೆನ್ಷನ್ಸ್

ಮಾಡೆಲ್

ಮಹೀಂದ್ರ XUV 3XO

ಮಾರುತಿ ಬ್ರೆಝಾ

ಉದ್ದ

3990 ಮಿ.ಮೀ

3995 ಮಿ.ಮೀ

ಅಗಲ

1821 ಮಿ.ಮೀ

1790 ಮಿ.ಮೀ

ಎತ್ತರ

1647 ಮಿ.ಮೀ

1685 ಮಿ.ಮೀ

ವೀಲ್ಬೇಸ್

2600 ಮಿ.ಮೀ

2500 ಮಿ.ಮೀ

ಬೂಟ್ ಸ್ಪೇಸ್

364 ಲೀಟರ್

328 ಲೀಟರ್

  • ಡೈಮೆನ್ಷನ್ ನಲ್ಲಿ, ಮಾರುತಿ ಬ್ರೆಝಾ XUV 3XO ಗಿಂತ 5 ಮಿ.ಮೀ ಉದ್ದ ಮತ್ತು 38 ಮಿ.ಮೀ ಎತ್ತರವಾಗಿದೆ.
  • ಆದರೆ, XUV 3XO ವಿಶಾಲವಾಗಿದೆ ಮತ್ತು 100 mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ, ಇದು ಕ್ಯಾಬಿನ್‌ನೊಳಗೆ ಹೆಚ್ಚಿನ ಸ್ಥಳವನ್ನು ನೀಡುತ್ತದೆ.
  • ಇಲ್ಲಿ ನೀಡಿರುವ ಮಾಹಿತಿಯನ್ನು ನೋಡಿದರೆ ಮಹೀಂದ್ರಾ SUV ಹೆಚ್ಚು ಲಗೇಜ್ ಜಾಗವನ್ನು ನೀಡುತ್ತದೆ.

ಪವರ್‌ಟ್ರೇನ್

ಮಾಡೆಲ್

ಮಹೀಂದ್ರ XUV 3XO

ಮಾರುತಿ ಬ್ರೆಝಾ

ಇಂಜಿನ್

1.2-ಲೀಟರ್ ಟರ್ಬೊ-ಪೆಟ್ರೋಲ್

1.2-ಲೀಟರ್ (ಡೈರೆಕ್ಟ್ ಇಂಜೆಕ್ಷನ್) ಟರ್ಬೊ-ಪೆಟ್ರೋಲ್

1.5-ಲೀಟರ್ ಪೆಟ್ರೋಲ್ ಎಂಜಿನ್

1.5-ಲೀಟರ್ ಪೆಟ್ರೋಲ್ ಎಂಜಿನ್ (CNG)

ಪವರ್

112 PS

130 PS

103 PS

101 PS

ಟಾರ್ಕ್

200 Nm

250 Nm ವರೆಗೆ

137 Nm

136 Nm

ಟ್ರಾನ್ಸ್‌ಮಿಷನ್

6MT, 6AT

6MT, 6AT

5MT, 6AT

5MT

ಕ್ಲೇಮ್ ಮಾಡಿರುವ ಮೈಲೇಜ್

MT: 18.89 kmpl

AT: 17.96 kmpl

MT: 20.1 kmpl

AT: 18.2 kmpl

MT: 19.89 kmpl

AT: 19.80 kmpl

25.51 km/kg

  • ಬ್ರೆಝಾ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದ ಒಂದೇ ಮತ್ತು ದೊಡ್ಡದಾದ 1.5-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಮಾತ್ರ ಹೊಂದಿದೆ, ಆದರೆ XUV 3XO ಎರಡು ಟರ್ಬೊ-ಪೆಟ್ರೋಲ್ ಎಂಜಿನ್‌ಗಳು ಮತ್ತು ಡೀಸೆಲ್ ಆಯ್ಕೆಯನ್ನು ನೀಡುತ್ತದೆ.

  • XUV 3XO ನ ಸ್ಟ್ಯಾಂಡರ್ಡ್ ಪೆಟ್ರೋಲ್ ವರ್ಷನ್ ಬ್ರೆಝಾ ಎಂಜಿನ್‌ಗಿಂತ 9PS ಹೆಚ್ಚಿನ ಶಕ್ತಿ ಮತ್ತು 63 Nm ಹೆಚ್ಚಿನ ಟಾರ್ಕ್ ಅನ್ನು ನೀಡುತ್ತದೆ.

  • ಎರಡೂ ವಾಹನಗಳು ತಮ್ಮ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಜೋಡಿಸಿದಾಗ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ನೀಡುತ್ತವೆ.

  • ಇಲ್ಲಿ ಬ್ರೆಝಾ ಮಾತ್ರ ಫ್ಯಾಕ್ಟರಿ-ಫಿಟ್ ಆಗಿರುವ CNG ಕಿಟ್‌ನ ಆಯ್ಕೆಯನ್ನು ಪಡೆಯುತ್ತದೆ.

ಫೀಚರ್ ಗಳು

ಫೀಚರ್ ಗಳು

ಮಹೀಂದ್ರ XUV 3XO

ಮಾರುತಿ ಬ್ರೆಝಾ

ಹೊರಭಾಗ

  • ಬೈ-LED ಆಟೋಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲೈಟ್ ಗಳು

  • ಟರ್ನ್ ಇಂಡಿಕೇಟರ್ ಗಳೊಂದಿಗೆ LED DRL ಗಳು

  • LED ಮುಂಭಾಗದ ಫಾಗ್ ಲ್ಯಾಂಪ್ ಗಳು

  • 17-ಇಂಚಿನ ಅಲೊಯ್ ವೀಲ್ಸ್

  • ಕನೆಕ್ಟೆಡ್ LED ಟೈಲ್ ಲೈಟ್‌ಗಳು

  • ರೂಫ್ ರೈಲ್ಸ್

  • ಆಟೋ-LED ಪ್ರೊಜೆಕ್ಟರ್ ಹೆಡ್ ಲೈಟ್ ಗಳು
  • LED DRL ಗಳು

  • LED ಮುಂಭಾಗದ ಫಾಗ್ ಲ್ಯಾಂಪ್ ಗಳು

  • 16-ಇಂಚಿನ ಅಲೊಯ್ ವೀಲ್ಸ್

  • ರೂಫ್ ರೈಲ್ಸ್

ಒಳಭಾಗ

  • ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್

  • ಡ್ಯಾಶ್‌ಬೋರ್ಡ್ ಅಥವಾ ಡೋರ್ ಟ್ರಿಮ್‌ಗಳಲ್ಲಿ ಸಾಫ್ಟ್-ಟಚ್ ಲೆಥೆರೆಟ್

  • 60:40 ಸ್ಪ್ಲಿಟ್ ಫೋಲ್ಡ್ ಮಾಡುವ ಹಿಂದಿನ ಸೀಟುಗಳು

  • ಸ್ಟೋರೇಜ್ ನೊಂದಿಗೆ ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್

  • ಕಪ್‌ಹೋಲ್ಡರ್‌ಗಳೊಂದಿಗೆ ರಿಯರ್ ಸೆಂಟರ್ ಆರ್ಮ್‌ರೆಸ್ಟ್

  • ಎಲ್ಲಾ ಸೀಟ್ ಗಳಿಗೆ ಎತ್ತರ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • ಬ್ರೌನ್ ಇನ್ಸರ್ಟ್ ನೊಂದಿಗೆ ಆಲ್ ಬ್ಲಾಕ್ ಕ್ಯಾಬಿನ್ ಥೀಮ್

  • ಸೆಮಿ-ಲೆಥೆರೆಟ್ ಆಸನ ಅಪ್ಹೋಲಿಸ್ಟ್ರೀ

  • 60:40 ಸ್ಪ್ಲಿಟ್ ಫೋಲ್ಡ್ ಮಾಡುವ ಹಿಂದಿನ ಸೀಟುಗಳು

  • ಸ್ಟೋರೇಜ್ ನೊಂದಿಗೆ ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್

  • ಕಪ್‌ಹೋಲ್ಡರ್‌ಗಳೊಂದಿಗೆ ರಿಯರ್ ಸೆಂಟರ್ ಆರ್ಮ್‌ರೆಸ್ಟ್

  • ಎಲ್ಲಾ ಸೀಟ್ ಗಳಿಗೆ ಎತ್ತರ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • ರಿಯರ್ ಪಾರ್ಸೆಲ್ ಟ್ರೇ

ಸೌಕರ್ಯ ಮತ್ತು ಅನುಕೂಲತೆ

  • ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್

  • ಪವರ್ ಫೋಲ್ಡಿಂಗ್ ಮತ್ತು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು

  • ಕ್ರೂಸ್ ಕಂಟ್ರೋಲ್

  • ಪನೋರಮಿಕ್ ಸನ್‌ರೂಫ್

  • ಹಿಂಭಾಗದ ವೆಂಟ್ ಗಳೊಂದಿಗೆ ಡ್ಯುಯಲ್-ಝೋನ್ AC

  • ವೈರ್‌ಲೆಸ್ ಫೋನ್ ಚಾರ್ಜರ್

  • ಕೂಲ್ಡ್ ಗ್ಲೋವ್ ಬಾಕ್ಸ್

  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಕೀಲೆಸ್ ಎಂಟ್ರಿ

  • ಡ್ರೈವರ್ ಸೈಡ್ ಒನ್-ಟಚ್ ಡೌನ್‌ನೊಂದಿಗೆ ಪವರ್ ವಿಂಡೋ

  • ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್

  • ಪವರ್ ಫೋಲ್ಡಿಂಗ್ ಮತ್ತು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು

  • ಕ್ರೂಸ್ ಕಂಟ್ರೋಲ್

  • ಸಿಂಗಲ್ ಪೇನ್ ಸನ್‌ರೂಫ್

  • ಹಿಂಭಾಗದ ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ AC

  • ವೈರ್‌ಲೆಸ್ ಫೋನ್ ಚಾರ್ಜರ್

  • ಕೂಲ್ಡ್ ಗ್ಲೋವ್ ಬಾಕ್ಸ್

  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಕೀಲೆಸ್ ಎಂಟ್ರಿ

  • ಡ್ರೈವರ್ ಸೈಡ್ ಒನ್-ಟಚ್ ಡೌನ್‌ನೊಂದಿಗೆ ಪವರ್ ವಿಂಡೋ

  • ಹೆಡ್ಸ್ ಅಪ್ ಡಿಸ್ಪ್ಲೇ

ಇನ್ಫೋಟೈನ್ಮೆಂಟ್

  • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • 6-ಸ್ಪೀಕರ್‌ಗಳು

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

  • ಕನೆಕ್ಟೆಡ್ ಕಾರು ಟೆಕ್ನೋಲೊಜಿ

  • 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್
  • 6-ಸ್ಪೀಕರ್ ಸಿಸ್ಟಮ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

  • ಕನೆಕ್ಟೆಡ್ ಕಾರು ಟೆಕ್ನೋಲೊಜಿ

ಸುರಕ್ಷತೆ

  • 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್)

  • ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS)

  • ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

  • EBD ಜೊತೆಗೆ ABS

  • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ರಿಯರ್ ಡಿಫಾಗರ್

  • ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಆಟೋಮ್ಯಾಟಿಕ್ ವೈಪರ್‌ಗಳು

  • ಆಲ್ ವೀಲ್ಸ್ ಡಿಸ್ಕ್ ಬ್ರೇಕ್‌ಗಳು

  • ● ISOFIX ಚೈಲ್ಡ್ ಸೀಟ್ ಅನ್ಕರೇಜ್

  • 6 ಏರ್‌ಬ್ಯಾಗ್‌ಗಳು

  • 360-ಡಿಗ್ರಿ ಕ್ಯಾಮೆರಾ

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

  • EBD ಜೊತೆಗೆ ABS

  • ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

  • ರಿಯರ್ ಡಿಫಾಗರ್

  • ಆಲ್ ವೀಲ್ಸ್ ಡಿಸ್ಕ್ ಬ್ರೇಕ್‌ಗಳು

  • ISOFIX ಚೈಲ್ಡ್ ಸೀಟ್ ಅನ್ಕರೇಜ್

ಪ್ರಮುಖ ಟೇಕ್ಅವೇಗಳು

  • XUV 3XO ಅದರ ಕನೆಕ್ಟೆಡ್ LED ಟೈಲ್ ಲೈಟ್‌ಗಳು ಮತ್ತು ದೊಡ್ಡ 17-ಇಂಚಿನ ಅಲೊಯ್ ವೀಲ್ಸ್ ನೊಂದಿಗೆ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದೆ.

  • XUV 3XO ಅದರ ಪ್ರೀಮಿಯಂ ಫೀಚರ್ ಗಳಾದ ಪನರೋಮಿಕ್ ಸನ್‌ರೂಫ್, ಡ್ಯುಯಲ್-ಜೋನ್ AC, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಕ್ಯಾಬಿನ್‌ನೊಳಗೆ ದೊಡ್ಡ ಡಿಸ್‌ಪ್ಲೇ ನಿಂದಾಗಿ ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರವಾಗಿದೆ. XUV 3XO ಗೆ ಹೋಲಿಸಿದರೆ ಬ್ರೆಝಾ ಹೊಂದಿರುವ ಏಕೈಕ ಪ್ರಯೋಜನವೆಂದರೆ ಹೆಡ್ಸ್-ಅಪ್ ಡಿಸ್ಪ್ಲೇ.

  • XUV 3XO ತನ್ನ ಟಾಪ್-ಸ್ಪೆಕ್ ವೇರಿಯಂಟ್ ಗಳಲ್ಲಿ ಲೆವೆಲ್ 2 ADAS, ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್‌ನಂತಹ ಫೀಚರ್ ಗಳನ್ನು ನೀಡುತ್ತದೆ, ಇವೆಲ್ಲವೂ ಬ್ರೆಝಾದಲ್ಲಿ ಲಭ್ಯವಿಲ್ಲ. XUV 3XO ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳನ್ನು ನೀಡುತ್ತದೆ ಆದರೆ ಬ್ರೆಜ್ಜಾ ತನ್ನ ಟಾಪ್ ವೇರಿಯಂಟ್ ನಲ್ಲಿ ಮಾತ್ರ ಆರು ಏರ್‌ಬ್ಯಾಗ್‌ಗಳನ್ನು ನೀಡುತ್ತದೆ.

ಇದನ್ನು ಕೂಡ ಓದಿ: 2030 ರ ವೇಳೆಗೆ ಮಹೀಂದ್ರಾ ತನ್ನ ಯಾವ 6 SUV ಗಳನ್ನು ಬಿಡುಗಡೆ ಮಾಡಬಹುದು, ಬನ್ನಿ ನೋಡೋಣ!

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಮಹೀಂದ್ರ XUV 3XO

ಮಾರುತಿ ಬ್ರೆಝಾ

ರೂ. 7.49 ಲಕ್ಷದಿಂದ 15.49 ಲಕ್ಷದವರೆಗೆ

ರೂ. 8.34 ಲಕ್ಷದಿಂದ 14.14 ಲಕ್ಷದವರೆಗೆ

ಮಾರುತಿ ಬ್ರೆಝಾದ ಪ್ರಾರಂಭಿಕ ಬೆಲೆಯು ಮಹೀಂದ್ರಾ XUV 3XO ಗಿಂತ ಹೆಚ್ಚಾಗಿದೆ. ಆದರೆ, ಟಾಪ್ ವೇರಿಯಂಟ್ ಗಳಲ್ಲಿ, ಹೆಚ್ಚು ಫೀಚರ್ ಗಳು ಮತ್ತು ಡೀಸೆಲ್ ಎಂಜಿನ್ ಲಭ್ಯತೆಯು ಮಹೀಂದ್ರಾವನ್ನು ಮಾರುತಿಗಿಂತ ಹೆಚ್ಚು ದುಬಾರಿಯಾಗಿಸಿದೆ. ಎರಡೂ SUVಗಳು ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ಟಾಟಾ ನೆಕ್ಸನ್ ಮತ್ತು ಕಿಯಾ ಸೋನೆಟ್‌ಗಳಿಗೆ ಪ್ರತಿಸ್ಪರ್ಧಿಯಾಗಿವೆ.

ಇನ್ನಷ್ಟು ಓದಿ: ಮಹೀಂದ್ರ XUV 3XO AMT

Share via

Write your Comment on Mahindra ಎಕ್ಸ್ ಯುವಿ 3ಎಕ್ಸ್ ಒ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ