Mahindra XUV 3XO (XUV300 ಫೇಸ್‌ಲಿಫ್ಟ್) ಕಾರ್ಯಕ್ಷಮತೆ ಮತ್ತು ಮೈಲೇಜ್ ವಿವರಗಳ ಟೀಸರ್ ಔಟ್
ಇತ್ತೀಚಿನ ಟೀಸರ್ XUV 3XO ಡೀಸೆಲ್ ಎಂಜಿನ್‌ಗಾಗಿ ಹೊಸ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ ಎಂದು ತೋರಿಸುತ್ತದೆ
ಅಪ್‌ಡೇಟ್ (29/04/24): ಮಹೀಂದ್ರಾ XUV 3XO ಅನ್ನು ಬಿಡುಗಡೆ ಮಾಡಿದೆ, ಇದುXUV300ನ ಫೇಸ್‌ಲಿಫ್ಟೆಡ್ ಆವೃತ್ತಿಯಾಗಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆ 7.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.
- ಮಹೀಂದ್ರಾವು ಏಪ್ರಿಲ್ 29 ರಂದು ಫೇಸ್‌ಲಿಫ್ಟೆಡ್ XUV300 (ಈಗ XUV 3XO ಎಂದು ಕರೆಯಲಾಗುತ್ತದೆ) ಅನ್ನು ಬಿಡುಗಡೆಗೊಳಿಸಲಿದೆ.
- ಹೊಸ ಟೀಸರ್ ಡೀಸೆಲ್ ಎಂಜಿನ್‌ನೊಂದಿಗೆ ಹಳೆಯ 6-ಸ್ಪೀಡ್ ಎಎಮ್‌ಟಿ ಬದಲಿಗೆ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ನೀಡುವುದನ್ನು ಖಚಿತಪಡಿಸುತ್ತದೆ.
- 4.5 ಸೆಕೆಂಡ್‌ಗಳಲ್ಲಿ 0 ರಿಂದ 60 kmph ವೇಗವರ್ಧನೆಯನ್ನು ಮಾಡುತ್ತದೆ.
- ಈ ಹಿಂದಿನ XUV300ನಂತೆ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಪಡೆಯುತ್ತದೆ.
- ಹೊಸ ಮಹೀಂದ್ರ ಎಸ್‌ಯುವಿಗಳಲ್ಲಿ ನೀಡಲಾದ ಅದೇ ಡ್ರೈವ್ ಮೋಡ್‌ಗಳನ್ನು (ಜಿಪ್, ಝಾಪ್ ಮತ್ತು ಜೂಮ್) ಸಹ ಹೊಂದಿರುತ್ತದೆ.
- ಅನಾವರಣಗೊಂಡ ನಂತರ ಶೀಘ್ರದಲ್ಲೇ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ; ಬೆಲೆಗಳು 9 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು.
Mahindra XUV 3XO (ಫೇಸ್‌ಲಿಫ್ಟೆಡ್ XUV300) ಜಾಗತಿಕವಾಗಿ ಪಾದಾರ್ಪಣೆ ಮಾಡಲು ಬಹುತೇಕವಾಗಿ ಸಮಯ ಸನ್ನಿಹಿತವಾಗಿದೆ. ಏಪ್ರಿಲ್ 29 ರಂದು ಅದರ ಅನಾವರಣಗೊಳಿಸುವ ಮುಂಚಿತವಾಗಿ, ಕಾರು ತಯಾರಕರು ಆಪ್‌ಗ್ರೇಡ್ ಮಾಡಿರುವ ಎಸ್‌ಯುವಿಯನ್ನು ಅದರ ಕೆಲವು ಬಾಹ್ಯ ಮತ್ತು ಆಂತರಿಕ ವೈಶಿಷ್ಟ್ಯಗಳನ್ನು ದೃಢೀಕರಿಸುತ್ತಿದ್ದಾರೆ. ಇತ್ತೀಚಿನ ಟೀಸರ್, ಎಸ್‌ಯುವಿಯ ಒಳಭಾಗವನ್ನು ತೋರಿಸುತ್ತದೆ, ಅದರ ಕೆಲವು ಪ್ರಮುಖ ತಾಂತ್ರಿಕ ವಿಶೇಷಣಗಳ ಒಳನೋಟವನ್ನು ನಮಗೆ ನೀಡಿದೆ:
ಪವರ್‌ಟ್ರೇನ್ ಮತ್ತು ವಿಶೇಷಣಗಳ ಟೀಸರ್
XUV 3XO ಹೊರಹೋಗುವ XUV300 ನಂತೆ ಅದೇ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಪಡೆಯಬಹುದೆಂದು ನಾವು ನಿರೀಕ್ಷಿಸುತ್ತೇವೆ, ಕೆಳಗೆ ವಿವರಿಸಲಾಗಿದೆ:
ವಿಶೇಷಣಗಳು |
1.2-ಲೀಟರ್ ಟರ್ಬೊ-ಪೆಟ್ರೋಲ್ |
1.2-ಲೀಟರ್ TGDi ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
110 ಪಿಎಸ್ |
130 ಪಿಎಸ್ |
117 ಪಿಎಸ್ |
ಟಾರ್ಕ್ |
200 ಎನ್ಎಂ |
250 ಎನ್ಎಂ ವರೆಗೆ |
300 ಎನ್ಎಂ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಎಎಮ್‌ಟಿ |
6-ಸ್ಪೀಡ್ ಮ್ಯಾನುಯಲ್ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಆಟೋಮ್ಯಾಟಿಕ್ (ನಿರೀಕ್ಷಿತ) |
ಇತ್ತೀಚಿನ ಟೀಸರ್ ಅನ್ನು ಆಧರಿಸಿ, ಮಹೀಂದ್ರಾ XUV 3XO ಅನ್ನು ಡೀಸೆಲ್ ಎಂಜಿನ್‌ನೊಂದಿಗೆ AMT ಯುನಿಟ್ ಬದಲಿಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ನೀಡಬಹುದು ಎಂದು ತೋರುತ್ತಿದೆ. ಮಹೀಂದ್ರಾವು ಈ ಸಬ್-4ಮೀ ಎಸ್‌ಯುವಿಗಾಗಿ ಯಾವುದೇ ಇತರ ಪವರ್‌ಟ್ರೇನ್-ನಿರ್ದಿಷ್ಟ ಬದಲಾವಣೆಗಳನ್ನು ಬಹಿರಂಗಪಡಿಸಲಾಗಿಲ್ಲ.
ಇತ್ತೀಚಿನ ವೀಡಿಯೊವು XUV 3XOವು 20.1 kmpl ಮೈಲೇಜ್ ಅನ್ನು ಹೊಂದಿದೆ ಎಂದು ARAI ಹೇಳಿಕೊಂಡಿದೆ ಎಂದು ಹೇಳುತ್ತದೆ, ಇದು ಹೊಸ ಡೀಸೆಲ್-ಆಟೋ ಸಂಯೋಜನೆಗಾಗಿ ಎಂದು ನಾವು ನಂಬುತ್ತೇವೆ. ನವೀಕರಿಸಿದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಅನಾವರಣದ ಸಮಯದಲ್ಲಿ ಮಹೀಂದ್ರಾ ಇತರ ಪವರ್‌ಟ್ರೇನ್-ವಾರು ಕ್ಲೈಮ್ ಮಾಡಿದ ಮೈಲೇಜ್ ಅಂಕಿಅಂಶಗಳನ್ನು ಬಹಿರಂಗಪಡಿಸುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ.
ಮಹೀಂದ್ರಾ 4.5 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ಹಚ್ಚಿಸುತ್ತದೆ ಎಂದು ಸಹ ಘೋಷಿಸಿದೆ. ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ N ಸೇರಿದಂತೆ ಬ್ರ್ಯಾಂಡ್‌ನ ಇತರ ಎಸ್‌ಯುವಿಗಳಂತೆಯೇ ಜಿಪ್, ಝಾಪ್ ಮತ್ತು ಜೂಮ್ ಎಂಬ ಅದೇ ಡ್ರೈವ್ ಮೋಡ್‌ಗಳನ್ನು ಹೊಂದಿದೆ ಎಂದು ಟೀಸರ್ ಖಚಿತಪಡಿಸುತ್ತದೆ.
ವಿನ್ಯಾಸದಲ್ಲಿನ ಬದಲಾವಣೆಗಳ ವಿವರ
ಎಕ್ಸ್‌ಯುವಿ 3ಎಕ್ಸ್‌ಒ ತಾಜಾ ಗ್ರಿಲ್ ಅನ್ನು ತ್ರಿಕೋನ ಅಲಂಕರಣಗಳು, ಹೊಸ ಅಲಾಯ್ ವೀಲ್ ವಿನ್ಯಾಸ ಮತ್ತು ಎಲ್‌ಇಡಿ ಕನೆಕ್ಟೆಡ್ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ ಎಂದು ಹಿಂದಿನ ಟೀಸರ್‌ಗಳು ತೋರಿಸಿವೆ. ಒಳಭಾಗದಲ್ಲಿ, ಕ್ಯಾಬಿನ್ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿರುತ್ತದೆ, ಈಗ ಫ್ರೀ-ಫ್ಲೋಟಿಂಗ್ ಟಚ್‌ಸ್ಕ್ರೀನ್ ಮತ್ತು ಆಪ್‌ಡೇಟ್ ಮಾಡಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಒಳಗೊಂಡಿದೆ.
ಸೌಕರ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನ
ಮಹೀಂದ್ರಾದ ಹೊಸ ಎಕ್ಸ್‌ಯುವಿ 3ಎಕ್ಸ್‌ಒ ಅನ್ನು 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳೊಂದಿಗೆ ನೀಡುತ್ತದೆ (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಯಾಗಿ). ಇತರ ದೃಢಪಡಿಸಿದ ವೈಶಿಷ್ಟ್ಯಗಳಲ್ಲಿ ಈ ಸೆಗ್ಮೆಂಟ್‌ನ ಮೊದಲ ಪ್ಯಾನೊರಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಸೇರಿವೆ. ಇದು ಹಿಂಭಾಗದ ಎಸಿ ವೆಂಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.
ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.
ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಅನಾವರಣಗೊಂಡ ನಂತರ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ, ಇದರ ಬೆಲೆಗಳು 9 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್ ಮತ್ತು ಮುಂಬರುವ ಸ್ಕೋಡಾ ಸಬ್-4ಮೀ ಎಸ್‌ಯುವಿ ಹಾಗು ಎರಡು ಸಬ್-4ಮೀ ಕ್ರಾಸ್ಓವರ್‌ಗಳಾದ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ನೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಎಮ್‌ಟಿ