Login or Register ಅತ್ಯುತ್ತಮ CarDekho experience ಗೆ
Login

Mahindra XUV300 ಫೇಸ್‌ಲಿಫ್ಟ್: ಏನೇನು ನಿರೀಕ್ಷಿಸಬಹುದು ?

published on ಫೆಬ್ರವಾರಿ 22, 2024 11:27 am by rohit for ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

ಫೇಸ್‌ಲಿಫ್ಟ್ ಆಗಿರುವ XUV300 ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ, ಮತ್ತು ಇದರ ಬೆಲೆಯ ರೂ 8.5 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ)

ಮಹೀಂದ್ರಾ XUV300, ಅದರ ಪ್ರಸ್ತುತ ಅವತಾರದಲ್ಲಿ, 2019 ರಿಂದ ಮಾರುಕಟ್ಟೆಯಲ್ಲಿದೆ ಮತ್ತು ಇದೀಗ ಶೀಘ್ರದಲ್ಲೇ ಫೇಸ್‌ಲಿಫ್ಟ್ ಆಗಿರುವ ವರ್ಷನ್ ನಲ್ಲಿ ಬರಲು ಸಿದ್ಧವಾಗಿದೆ. ಟೆಸ್ಟ್ ಮಾಡುವಾಗ ಇದನ್ನು ಹಲವು ಬಾರಿ ಸ್ಪೈ ಮಾಡಲಾಗಿದೆ, ಹಾಗಾಗಿ ಮಿಡ್‌ಲೈಫ್ ಅಪ್‌ಡೇಟ್‌ನಲ್ಲಿ ಏನೆಲ್ಲಾ ಬದಲಾವಣೆಗಳು ಬರಬಹುದು ಎಂಬುದು ಕೂಡ ಸ್ವಲ್ಪ ಹಂತದವರೆಗೆ ಗುರುತಿಸಲಾಗಿದೆ. ನೀವು XUV300 ಫೇಸ್‌ಲಿಫ್ಟ್‌ಗಾಗಿ ಕಾಯುತ್ತಿದ್ದರೆ, ನೀವು ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು:

ಹೊಸ ಡಿಸೈನ್

ಮಹೀಂದ್ರಾ ತನ್ನ ಫೇಸ್‌ಲಿಫ್ಟ್ ಆಗಿರುವ XUV300 ಗಾಗಿ ಹೊಸ ಡಿಸೈನ್ ಅನ್ನು ನೀಡಿದೆ, ಇದು ಮುಂಬರುವ ಶ್ರೇಣಿಯ ಬಾರ್ನ್ ಎಲೆಕ್ಟ್ರಿಕ್ (BE) ಕೊಡುಗೆಗಳಿಗೆ ಅನುಗುಣವಾಗಿರುತ್ತದೆ. BE.05 ಕಾನ್ಸೆಪ್ಟ್ ನಲ್ಲಿ ನೋಡಿದಂತೆ ಮುಂಭಾಗದಲ್ಲಿ ಫಾಂಗ್-ಆಕಾರದ LED DRL ಗಳನ್ನು ಮತ್ತು ಕನೆಕ್ಟೆಡ್ ಟೈಲ್‌ಲೈಟ್‌ಗಳನ್ನು ಹಲವಾರು ಸ್ಪೈ ಶಾಟ್‌ಗಳ ಆಧಾರದ ಮೇಲೆ ಈಗಾಗಲೇ ದೃಢೀಕರಿಸಲಾಗಿದೆ. ಇತರ ಹೊರಭಾಗದ ಬದಲಾವಣೆಗಳಲ್ಲಿ ರೀಡಿಸೈನ್ ಮಾಡಲಾದ ಅಲೊಯ್ ವೀಲ್ಸ್ ಮತ್ತು ಟ್ವೀಕ್ ಮಾಡಿದ ಬಂಪರ್ ಗಳನ್ನು ಕೂಡ ಒಳಗೊಂಡಿರುತ್ತದೆ. ಇದು ಸಂಪೂರ್ಣ ಹೊಸ ಸ್ಟೈಲ್ ಗಿಂತ ಅಸ್ತಿತ್ವದಲ್ಲಿರುವ ಮಹೀಂದ್ರ ಡಿಸೈನ್ ನ ವಿಕಸನವಾಗಿದೆ.

ಒಂದು ಹೊಚ್ಚ ಹೊಸ ಕ್ಯಾಬಿನ್

ಈಗಿರುವ XUV300 ನ ಕ್ಯಾಬಿನ್ ಚಿತ್ರವನ್ನು ರೆಫರೆನ್ಸ್ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ

ಒಳಭಾಗದಲ್ಲಿ, XUV300 ರೀಡಿಸೈನ್ ಮತ್ತು ರೀಪೊಸಿಷನ್ ಮಾಡಲಾದ ಸೆಂಟ್ರಲ್ AC ವೆಂಟ್ ಗಳನ್ನು ಒಳಗೊಂಡಿರುವ ರಿವೈಸ್ ಮಾಡಲಾಗಿರುವ ಡ್ಯಾಶ್‌ಬೋರ್ಡ್‌, ರಿಯರ್ AC ವೆಂಟ್ ಗಳೊಂದಿಗೆ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ಎರಡು ಹೊಸ ಡಿಸ್ಪ್ಲೇಗಳೊಂದಿಗೆ (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್ಸ್ಟ್ರುಮೆಂಟೇಷನ್ ಗಾಗಿ) ಬರುತ್ತದೆ. ಫೇಸ್‌ಲಿಫ್ಟ್ ಮಾಡಲಾಗಿರುವ XUV300 ನಲ್ಲಿ ಮಹೀಂದ್ರಾ ಹೊಚ್ಚ ಹೊಸ ಸೀಟ್ ಅಪ್ಹೋಲ್ಸ್ಟರಿಯನ್ನು ಕೂಡ ನೀಡುವ ನಿರೀಕ್ಷೆಯಿದೆ.

ಇದನ್ನು ಕೂಡ ಓದಿ: 2024ರ ಜನವರಿಯ ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಿದ Mahindra Scorpio ಮತ್ತು XUV700

ಹೊಸ ಫೀಚರ್ ಗಳು

XUV400 EVಯ ಕ್ಯಾಬಿನ್

ಮೇಲೆ ತಿಳಿಸಿದಂತೆ, 2024 ರ XUV300 ಅಪ್ಡೇಟ್ ಆಗಿರುವ XUV400 EV ಯಿಂದ ಎರಡು ಹೊಸ ದೊಡ್ಡ ಡಿಜಿಟಲ್ ಡಿಸ್ಪ್ಲೇ (ಎರಡೂ 10.25-ಇಂಚು) ಮತ್ತು ಬಹುಶಃ ಈ ಸೆಗ್ಮೆಂಟ್ ನಲ್ಲಿ ಮೊದಲ ಪನೋರಮಿಕ್ ಸನ್‌ರೂಫ್‌ ಅನ್ನು ಪಡೆಯುವ ಸಾಧ್ಯತೆಯಿದೆ. ನೀಡಿರುವ ಇತರ ಫೀಚರ್ ಗಳಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಡ್ಯುಯಲ್-ಝೋನ್ AC, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಕೂಡ ಒಳಗೊಂಡಿದೆ.

ಸುರಕ್ಷತಾ ವಿಷಯದಲ್ಲಿ, ಮಹೀಂದ್ರಾ ಇದನ್ನು 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ನೊಂದಿಗೆ (ADAS) ಸಜ್ಜುಗೊಳಿಸುವ ನಿರೀಕ್ಷೆಯಿದೆ. ಅಪ್ಡೇಟ್ ಆಗಿರುವ SUVಯು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ ಬರುವಂತೆ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಕೂಡ ಪಡೆಯಬಹುದು.

ಎಂಜಿನ್ ಒಳಗೆ ಏನಿದೆ?

ಮಹೀಂದ್ರಾ ತನ್ನ ಹೊಸ XUV300 ಅನ್ನು ಅಸ್ತಿತ್ವದಲ್ಲಿರುವ ಮಾಡೆಲ್ ನಲ್ಲಿ ಇರುವ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡುವ ಸಾಧ್ಯತೆಯಿದೆ. ಇದರಲ್ಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS/200 Nm) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (117 PS/300 Nm) ಸೇರಿವೆ. ಎರಡನ್ನೂ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ AMTಯೊಂದಿಗೆ ಪಡೆಯಬಹುದು.

XUV300 T-GDi (ನೇರ-ಇಂಜೆಕ್ಷನ್) ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಕೂಡ ಲಭ್ಯವಿದೆ (130 PS/250 Nm ವರೆಗೆ), ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಆಟೋಮ್ಯಾಟಿಕ್ ಆಯ್ಕೆಗಾಗಿ ಮಹೀಂದ್ರಾ ಅದರ ಪ್ರಸ್ತುತ AMT ಅನ್ನು ಟಾರ್ಕ್ ಕನ್ವರ್ಟರ್ ಯೂನಿಟ್ ನೊಂದಿಗೆ ಬದಲಾಯಿಸಬಹುದು ಎಂದು ನಾವು ಅಂದುಕೊಂಡಿದ್ದೇವೆ.

ಮಾರುಕಟ್ಟೆಯಲ್ಲಿ ಯಾವಾಗ ನಿರೀಕ್ಷಿಸಬಹುದು, ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಫೇಸ್‌ಲಿಸ್ಟ್ ಆಗಿರುವ ಮಹೀಂದ್ರಾ XUV300 ಈ ವರ್ಷದ ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬರಬಹುದು. ಇದರ ಬೆಲೆಯು ರೂ 8.5 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ. ಹೊಸ XUV300 ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ಹ್ಯುಂಡೈ ವೆನ್ಯೂಗಳೊಂದಿಗೆ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ: ಮಹೀಂದ್ರಾ XUV300 AMT

r
ಅವರಿಂದ ಪ್ರಕಟಿಸಲಾಗಿದೆ

rohit

  • 27 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ XUV 3XO

ಪೋಸ್ಟ್ ಕಾಮೆಂಟ್
3 ಕಾಮೆಂಟ್ಗಳು
D
duraisingh
Mar 14, 2024, 9:50:14 PM

Will the boot space be increased to carry luggage? Thats one of the biggest drawbacks in XUV300

S
s kumar
Mar 13, 2024, 11:38:59 PM

Can we expect hill hold assist in lower MT variants of XUV300, as peers are providing the same.

S
santanu bera
Feb 22, 2024, 8:17:06 PM

What will be the tyre size and ground clearance of new XUV300 facelift 2025?

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ