ಮಾರುತಿ ಬ್ರೆಝಾ ಆಟೋಮ್ಯಾಟಿಕ್ ಈಗ ಮ್ಯಾನುವಲ್ ವೇರಿಯೆಂಟ್‌ಗಳಿಗಿಂತ ಹೆಚ್ಚು ಸಮರ್ಥ
ಈ ಮಾರುತಿ ಬ್ರೆಝಾ, ಪೆಟ್ರೋಲ್-ಮ್ಯಾನುವಲ್ ಮತ್ತು CNG ವೇರಿಯೆಂಟ್‌ಗಳಿಗೆ ಸಣ್ಣ ಮತ್ತು ಪ್ರಭಾವಶಾಲಿ ಫೀಚರ್ ರೀಶಫಲ್ ಅನ್ನು ಪಡೆಯುತ್ತಿದೆ
-
ಪ್ರಸ್ತುತ-ಪೀಳಿಗೆಯ ಬ್ರೆಝಾ ಅನ್ನು ಒಂದೇ ಇಂಜಿನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಲಾಗಿದೆ: ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗಿನ 1.5-ಲೀಟರ್ ಪೆಟ್ರೋಲ್
-
ಈಗ, ಮ್ಯಾನುವಲ್ ವೇರಿಯೆಂಟ್‌ಗಳು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಪಡೆಯುವುದಿಲ್ಲ, ಇದು ಕಡಿಮೆ ಕ್ಲೈಮ್ ಮಾಡಿದ ಇಂಧನ ಮಿತವ್ಯಯತೆಗೆ ಕಾರಣವಾಗುತ್ತದೆ.
-
ಬ್ರೆಝಾ ಈಗ ಆಟೋಮ್ಯಾಟಿಕ್ ವೇರಿಯೆಂಟ್‌ಗಳ 19.80kmpl ಅಂಕಿಗೆ ಹೋಲಿಸಿದರೆ, ಕ್ಲೈಮ್ ಮಾಡಲಾದ 17.38kmpl ಅನ್ನು ನೀಡುತ್ತದೆ.
-
ಮಾರುತಿ CNG ವೇರಿಯೆಂಟ್‌ಗಳಲ್ಲಿ ಕೂಡಾ ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್‌ಹೋಲ್ಡ್ ಅಸಿಸ್ಟ್ ಅನ್ನು ತೆಗೆದುಹಾಕಿದೆ.
-
ಹಿಂದಿನ ಸೀಟ್‌ಬೆಲ್ಟ್ ರಿಮೈಂಡರ್‌ಗಳು ಈಗ ಎಲ್ಲಾ ವೇರಿಯೆಂಟ್‌ಗಳಿಗೆ ಸ್ಟಾಂಡರ್ಡ್ ಆಗಿವೆ.
-
ಬೆಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ರೂ 7.29 ಲಕ್ಷದಿಂದ ರೂ 13.98 ಲಕ್ಷದ ತನಕ (ಎಕ್ಸ್-ಶೋರೂಂ) ಇದೆ.
ಈ ಮಾರುತಿ ಬ್ರೆಝಾಗೆ ಸದ್ದಿಲ್ಲದೇ ಕೆಲವು ಅಪ್‌ಡೇಟ್‌ಗಳನ್ನು ಮಾಡಲಾಗಿದ್ದು, ಈಗ ಇದರಲ್ಲಿ ಕೆಲವು ಪ್ರಮುಖ ಫೀಚರ್‌ಗಳು ಇರುವುದಿಲ್ಲ. ದೊಡ್ಡ ಬದಲಾವಣೆಯೆಂದರೆ, SUVಯ ಪೆಟ್ರೋಲ್-ಮ್ಯಾನುವಲ್ ವೇರಿಯೆಂಟ್‌ಗಳು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನ ಹೊಂದಿರುವುದಿಲ್ಲ, ಇದರಿಂದಾಗಿ ಇಂಧನ ಮಿತವ್ಯಯವು ಕಡಿಮೆಯಾಗುತ್ತದೆ.
ಬ್ರೆಝಾ ಮ್ಯಾನುವಲ್ ಈಗ ಕಡಿಮೆ ಸಮರ್ಥ
ಬ್ರೆಝಾ ಅನ್ನು 1.5 ಲೀಟರ್ ಪೆಟ್ರೋಲ್ ಇಂಜಿನ್‌ಗೆ ಜೋಡಿಸಲಾದ ಪೆಟ್ರೋಲ್ ಇಂಜಿನ್ ಜೊತೆಗೆ ಸ್ಟಾಂಡರ್ಡ್ ಆಗಿ ಬಿಡುಗಡೆ ಮಾಡಲಾಗಿತ್ತು. ಇದು ಆ್ಯಕ್ಸಿಲರೇಶನ್ ಸಂದರ್ಭದಲ್ಲಿ ಐಡ್ಲ್ ಸ್ಟಾರ್ಟ್-ಸ್ಟಾಪ್, ರಿಜನರೇಟಿವ್ ಬ್ರೇಕಿಂಗ್ ಮತ್ತು ಟಾರ್ಕ್ ಅಸಿಸ್ಟ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ. ಮ್ಯಾನುವಲ್ ವೇರಿಯೆಂಟ್‌ನಿಂದ ಈ ಫೀಚರ್ ಅನ್ನು ತೆಗೆದುಹಾಕಿದ ಕಾರಣ ಮೈಲೇಜ್ ಈ ಹಿಂದೆ ಕ್ಲೈಮ್ ಮಾಡಲಾಗುತ್ತಿದ್ದ 20.15kmpl (LXI ಮತ್ತು VXI MT) ನಿಂದ 2.77kmpl ನಷ್ಟು ಕುಸಿದು 17.38kmpl ಆಗಿದೆ.
ಆದಾಗ್ಯೂ, ಮಾರುತಿ ಬ್ರೆಝಾದ ಆಟೋಮ್ಯಾಟಿಕ್ ವೇರಿಯೆಂಟ್‌ಗಳು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೇ ಮುಂದುವರಿದಿದ್ದು ಮೊದಲಿನಂತೆಯೇ 19.80kmpl ಇಂಧನ ಮಿತವ್ಯಯವನ್ನು ಕ್ಲೈಮ್ ಮಾಡುತ್ತದೆ. ಹಾಗಾಗಿ, ಬ್ರೆಝಾದ ದುಬಾರಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಯನ್ನು ಆರಿಸುವವರು 5-ಸ್ಪೀಡ್ ಮ್ಯಾನುವಲ್ ಅನ್ನು ಆಯ್ಕೆ ಮಾಡುವುದಕ್ಕಿಂತ ಉತ್ತಮ ಮೈಲೇಜ್ ದೊರೆಯುತ್ತದೆ ಎಂದು ಹೇಳಿಕೊಳ್ಳಬಹುದು. ಟ್ರಾನ್ಸ್‌ಮಿಷನ್ ಹೊರತಾಗಿ, ಈ ಪವರ್‌ಟ್ರೇನ್ 103PS ಮತ್ತು 137Nm ಅನ್ನು ಉತ್ಪಾದಿಸುತ್ತದೆ.
ಇದನ್ನೂ ಓದಿ: ಮಾರುತಿ ಜಿಮ್ನಿ ವರ್ಸಸ್ ಬ್ರೆಝಾ - 5 ಪ್ರಮುಖ ವ್ಯತ್ಯಾಸಗಳು
ಮರುಜೋಡಣೆಗೊಂಡ CNG ವೇರಿಯೆಂಟ್‌ಗಳು
ಮಾರುತಿ ಬ್ರೆಝಾದ CNG ವೇರಿಯೆಂಟ್‌ಗಳನ್ನು ಅನುಗುಣವಾದ ಪೆಟ್ರೋಲ್ ವೇರಿಯೆಂಟ್‌ಗಳಿಗೆ ಹೋಲಿಸಿದರೆ, ಫೀಚರ್‌ಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲದೇ ಈ ವರ್ಷದ ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಆದಾಗ್ಯೂ, CNG ವೇರಿಯೆಂಟ್‌ಗಳು ಈಗ ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಹೊರತಾಗಿ ಕೆಲವು ಸುರಕ್ಷತಾ ಫೀಚರ್‌ಗಳನ್ನು ನೀಡುತ್ತವೆ.
ಬ್ರೆಝಾ CNG ವೇರಿಯೆಂಟ್‌ಗಳು ಮೊದಲಿನಂತೆಯೇ ಮುಂಭಾಗದ ಎರಡು ಏರ್‌ಬ್ಯಾಗ್‌ಗಳು, ರಿಯರ್ ವ್ಯೂ ಕ್ಯಾಮರಾ, ರಿಯರ್ ವೈಪರ್ ವಾಶರ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿವೆ. ಟಾಪ್-ಸ್ಪೆಕ್ ಪೆಟ್ರೋಲ್ ವೇರಿಯೆಂಟ್‌ಗಳು ಹೆಚ್ಚುವರಿಯಾಗಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ, ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು ಡೇ/ನೈಟ್ IRVM ಅನ್ನು ಪಡೆಯುತ್ತವೆ.
ಹೊಸದಾಗಿ ಪರಿಚಯಿಸಲಾದ ಸ್ಟಾಂಡರ್ಡ್ ಸುರಕ್ಷತಾ ಫೀಚರ್‌ಗಳು
ಈ ಅಪ್‌ಡೇಟ್ ಕೇವಲ ಫೀಚರ್‌ಗಳನ್ನು ಕೈಬಿಟ್ಟಿರುವ ಬಗ್ಗೆ ಮಾತ್ರವಲ್ಲ, ಮಾರುತಿಯು ಬ್ರೆಝಾ SUVಗೆ ಸ್ಟಾಂಡರ್ಡ್ ಫಿಟ್‌ಮೆಂಟ್ ಆಗಿ ಹಿಂಭಾಗದ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನೂ ಸೇರಿಸಿದೆ. ಹಿಂಭಾಗದ ಸೀಟುಗಳಿಗೆ ವೆಯ್ಟ್ ಸೆನ್ಸರ್‌ಗಳು ಇರುವುದಿಲ್ಲ, ಆದ್ದರಿಂದ ಹಿಂಭಾಗದಲ್ಲಿ ಪ್ರಯಾಣಿಕರು ಕುಳಿತಿರುವ ಹೊರತಾಗಿಯೂ, ಸೀಟ್ ಬೆಲ್ಟ್‌ಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಕಾರಿನ ಒಳಗೆ ಪ್ರವೇಶಿಸಿ, ಬೆಲ್ಟ್ ತೆಗೆದು ಮತ್ತೆ ಹಾಕಲು ತುಸು ಅನನುಕೂಲವೆನಿಸಬಹುದು.
ಇದನ್ನೂ ಓದಿ: ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್ – ಬೆಲೆ ಪರಿಶೀಲನೆ
ಮಾರುತಿ ಬ್ರೆಝಾದಲ್ಲಿ ಬದಲಾವಣೆಯಿಂದಾಗಿ ಬೆಲೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ, ಅದರ ಬೆಲೆಗಳು ರೂ 7.29ಲಕ್ಷದಿಂದ ರೂ 13.98 ಲಕ್ಷದ (ಎಕ್ಸ್ ಶೋರೂಂ ದೆಹಲಿ) ತನಕ ಇದೆ. ಇದು ಕಿಯಾ ಸೋನೆಟ್, HYPERLINK "https://kannada.cardekho.com/renault/hbc" \hರೆನಾಲ್ಟ್ ಕೈಗರ್, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮತ್ತು ಮುಂಬರುವ ಮಾರುತಿ ಫ್ರಾಂಕ್ಸ್‌ಗೆ ಪೈಪೋಟಿ ನೀಡುತ್ತದೆ.
ಇನ್ನಷ್ಟು ಓದಿ : ಮಾರುತಿ ಬ್ರೆಝಾ ಆನ್‌ರೋಡ್ ಬೆಲೆ
Write your Comment on Maruti ಬ್ರೆಜ್ಜಾ
मारुति वालो 2 टायर और एक सीट और काम कर दो ,तीन टायर की ब्रेजा ले आओ