7 ಫೋಟೋಗಳಲ್ಲಿ ಮಾರುತಿ ಬ್ರೆಝಾ ಬ್ಲ್ಯಾಕ್ ಆವೃತ್ತಿ ವಿವರಣೆ
ಮಾರುತಿ ಬ್ರೆಜ್ಜಾ ಗಾಗಿ shreyash ಮೂಲಕ ಮಾರ್ಚ್ 27, 2023 10:08 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಈ ಸಬ್‌ಕಾಂಪ್ಯಾಕ್ಟ್ SUVಯ ಹೊಸ ಬ್ಲ್ಯಾಕ್ ಆವೃತ್ತಿ ಯೂನಿಟ್‌ಗಳು ಈಗ ಡೀಲರ್‌ಶಿಪ್‌ಗಳಿಗೆ ಆಗಮಿಸಿವೆ
ಮಾರುತಿ ತನ್ನ ಅರೆನಾ ಲೈನ್ಅಪ್‌ನಾದ್ಯಂತ (ಆಲ್ಟೋ 800 ಮತ್ತು ಇಕೋ ಹೊರತಾಗಿ) ಬ್ಲ್ಯಾಕ್ ಆವೃತ್ತಿಗಳನ್ನು ಪರಿಚಯಿಸಿದೆ, ಇದು "ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ " ಎಕ್ಸ್‌ಟೀರಿಯರ್ ಶೇಡ್‌ನಲ್ಲಿ ಬರುತ್ತದೆ. ಮಾರುತಿ ಈ ಕಲರ್ ಆಯ್ಕೆಯನ್ನು ಬ್ರೆಝಾದ ZXi ಮತ್ತು ZXi+ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ ಎಂದು ಪ್ರಕಟಿಸಿದ್ದು ಇದಕ್ಕೆ ಯಾವುದೇ ಹೆಚ್ಚುವರಿ ವೆಚ್ಚ ಇರುವುದಿಲ್ಲ ಎಂದು ಹೇಳಿದೆ.
ಬ್ರೆಝಾದ ಬ್ಲ್ಯಾಕ್ ಆವೃತ್ತಿಯ ಯೂನಿಟ್‌ಗಳು ಈಗಾಗಲೇ ಡೀಲರ್‌ಶಿಪ್‌ಗಳಿಗೆ ತಲುಪಿದ್ದು ನಮಗೆ ತಿಳಿದುಬಂದಿದೆ ಮತ್ತು ಈ ಕಲರ್ ಆಯ್ಕೆಯ ಕುರಿತು ನಿಮ್ಮ ಮೊದಲ ನೋಟ ಇಲ್ಲಿದೆ:
ಇದು ಬ್ರೆಝಾದ ZXi ಟ್ರಿಮ್ ಆಗಿದ್ದು, ಡ್ಯುಯಲ್ -LED ಪ್ರಾಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಫ್ಲೋಟಿಂಗ್ ಡೇ ಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ. ಇದು ಮುಂಭಾಗದ ಬಂಪರ್‌ನಲ್ಲಿ ಬ್ಲ್ಯಾಕ್ ಗ್ರಿಲ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಟಾಪ್ ಮಾಡೆಲ್‌ನಲ್ಲಿ ಎರಡನೆಯದಾಗಿದ್ದರೂ, ಇದರಲ್ಲಿ ಫಾಗ್ ಲೈಟ್‌ಗಳು ಇರುವುದಿಲ್ಲ.
ಬ್ರೆಝಾದ ಟಾಪ್ ವೇರಿಯೆಂಟ್‌ಗಳಲ್ಲಿ ಈಗಾಗಲೇ ಸಂಪೂರ್ಣ ಬ್ಲ್ಯಾಕ್‌ನ 16-ಇಂಚು ಅಲಾಯ್ ವ್ಹೀಲ್‌ಗಳು ಇವೆ. ಬ್ಲ್ಯಾಕ್ ಕ್ಲಾಡಿಂಗ್ ಮತ್ತು ಸೈಡ್ ಬಾಡಿ ಮೌಲ್ಡಿಂಗ್‌ನೊಂದಿಗೆ ಇದು ಹೊಸ ಬ್ಲ್ಯಾಕ್ ಎಡಿಷನ್‌ನ ನೋಟವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಮಾರುತಿ ಬ್ರೆಝಾ CNG ರೂ 9.14 ಲಕ್ಷಕ್ಕೆ ಬಿಡುಗಡೆಯಾಗಿದೆ
ಬ್ರೆಝಾದ ಈ ಬ್ಲ್ಯಾಕ್ ಆವೃತ್ತಿ ಹಿಂಭಾಗದಲ್ಲಿಯೂ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಟೈಲ್‌ಲ್ಯಾಂಪ್‌ಗಳ ಸುತ್ತಲಿನ ಬ್ಲ್ಯಾಕ್ ಔಟ್‌ಲೈನ್‌ಗಳು ಇದರ ಗಾಢ ಸೌಂದರ್ಯವನ್ನು ಹೆಚ್ಚಿಸಿದೆ.
ಈ ಬ್ಲ್ಯಾಕ್ ಆವೃತ್ತಿ ಸಬ್‌ಕಾಂಪ್ಯಾಕ್ಟ್ SUVಯ ಇಂಟೀರಿಯರ್ ಅನ್ನು ಬದಲಿಸಲಾಗಿಲ್ಲ. ಇದು ಸಾಮಾನ್ಯ ವೇರಿಯೆಂಟ್‌ಗಳಂತೆಯೇ ಡ್ಯುಯಲ್-ಟೋನ್ ಇಂಟೀರಿಯರ್ ಅನ್ನು ಪಡೆದಿದೆ. ಇಲ್ಲಿ ಕಾಣುವ ZXi ವೇರಿಯೆಂಟ್ ಏಳು-ಇಂಚಿನ ಸ್ಮಾರ್ಟ್‌ಪ್ಲೇ ಪ್ರೋ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. ಅಲ್ಲದೇ ಇದು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್, ಆಟೋಮ್ಯಾಟಿಕ್ ಏರ್ ಕಂಡೀಷನಿಂಗ್, ಕ್ರ್ಯೂಸ್ ಕಂಟ್ರೋಲ್ ಮತ್ತು ಡಿಜಿಟಲ್ TFT MID ಅನ್ನು ಹೊಂದಿದೆ.
ಎರಡರ ಅಪ್‌ಹೋಲ್ಸ್‌ಟ್ರಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಈ ವಿಷಯದಲ್ಲಿ ಬ್ರೆಝಾ ಸಾಮಾನ್ಯ ವೇರಿಯೆಂಟ್‌ಗಳಂತೆಯೇ ಕಾಣುತ್ತದೆ.
ಇದನ್ನೂ ಓದಿ: ಮಾರುತಿ ಬ್ರೆಝಾ ವರ್ಸಸ್ ಗ್ರ್ಯಾಂಡ್ ವಿಟಾರಾ: ಯಾವ CNG SUV Is ಹೆಚ್ಚು ಇಂಧನ ದಕ್ಷತೆ ಹೊಂದಿದೆ?
ಈ ಹೊಸ ಬ್ಲ್ಯಾಕ್ ಆವೃತ್ತಿ ಬ್ರೆಝಾದಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಇದು 1.5-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಇಂಜಿನ್‌ನೊಂದಿಗೆ (103PS/137Nm) ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನೊಂದಿಗೆ ಜೋಡಿಸಲಾಗಿದೆ. ಸಬ್‌ಕಾಂಪ್ಯಾಕ್ಟ್ SUVಯ CNG ವೇರಿಯೆಂಟ್‌ಗಳಲ್ಲಿ, ಅದೇ ಇಂಜಿನ್ ಅನ್ನು ಅಳವಡಿಸಲಾಗಿದ್ದು 88PS/121.5Nm ನಷ್ಟು ಕಡಿಮೆ ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಬ್ರೆಝಾದ ಬ್ಲ್ಯಾಕ್ ಆವೃತ್ತಿಯಲ್ಲಿ ಯಾವುದೇ ಪ್ರೀಮಿಯಂ ಇರುವುದಿಲ್ಲ ಮತ್ತು ಆದರ ಸಾಮಾನ್ಯ ಕಲರ್ ವೇರಿಯೆಂಟ್‌ಗಳಂತೆಯೇ ಅನುಗುಣವಾದ ಬೆಲೆಯಲ್ಲಿ ನೀಡಲಾಗುತ್ತದೆ. ಬ್ಲ್ಯಾಕ್ ಆವೃತ್ತಿ ಹೊಂದಿರುವ ZXi ಮತ್ತು ZXi+ ವೇರಿಯೆಂಟ್‌ಗಳ ಬೆಲೆಗಳನ್ನು ಈ ಕೆಳಗೆ ವಿವರಿಸಲಾಗಿದೆ:
ವೇರಿಯೆಂಟ್ |
ಬೆಲೆ |
ZXi |
ರೂ 10.95 ಲಕ್ಷ |
ZXi CNG MT |
ರೂ 11.90 ಲಕ್ಷ |
ZXi+ |
ರೂ 12.38 ಲಕ್ಷ |
ZXi AT |
ರೂ 12.45 ಲಕ್ಷ |
ZXi+ AT |
ರೂ 13.88 ಲಕ್ಷ |
ಎಲ್ಲಾ ಬೆಲೆಗಳು ಎಕ್ಸ್‌ಶೋರೂಂ ದೆಹಲಿಗೆ ತಕ್ಕಂತೆ ಇರುತ್ತದೆ
ಮಾರುತಿ ಬ್ರೆಝಾಗೆ ಟಾಟಾ ನೆಕ್ಸಾನ್, ಕಿಯಾ ಸೋನೆಟ್ , ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗಾರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಹೀಂದ್ರಾ XUV300 ಪ್ರತಿಸ್ಪರ್ಧಿಗಳಾಗಿವೆ. ಬ್ರೆಝಾದ ಈ ಬ್ಲ್ಯಾಕ್ ಆವೃತ್ತಿಯು ಟಾಟಾ ನೆಕ್ಸಾನ್‌ನ ಡಾರ್ಕ್ ಆವೃತ್ತಿಗೆ ನೇರ ಪ್ರತಿಸ್ಪರ್ಧಿಯಾಗಿದೆ. ಏತನ್ಮಧ್ಯೆ, ಸೋನೆಟ್ ಸೀಮಿತ ರನ್ X-ಲೈನ್ ವೇರಿಯೆಂಟ್‌ನಲ್ಲಿ ಮ್ಯಾಟಿ ಗ್ರೇ ಫಿನಿಷ್ ಅನ್ನು ಪಡೆಯುತ್ತದೆ.
ಇನ್ನಷ್ಟು ಓದಿ : ಬ್ರೆಝಾದ ಆನ್ ರೋಡ್ ಬೆಲೆ