ಮೈಲ್ಡ್ ಹೈಬ್ರಿಡ್ ಟೆಕ್‌ನೊಂದಿಗೆ ಮತ್ತೆ ಬಂದ Maruti Brezza, ಟಾಪ್-ಎಂಡ್ ವೇರಿಯೆಂಟ್‌ಗಳಲ್ಲಿ ಮಾತ್ರ ಇದು ಲಭ್ಯ

published on ಜನವರಿ 23, 2024 03:57 pm by rohit for ಮಾರುತಿ ಬ್ರೆಜ್ಜಾ

  • 127 Views
  • ಕಾಮೆಂಟ್‌ ಅನ್ನು ಬರೆಯಿರಿ

ಮೈಲ್ಡ್-ಹೈಬ್ರಿಡ್ ಟೆಕ್‌ನೊಂದಿಗೆ ಸಜ್ಜುಗೊಂಡಿರುವ ಈ SUVಗಳ ಕ್ಲೈಮ್ ಮಾಡಲಾದ ಮೈಲೇಜ್ ಅಂಕಿ ಆಂಶಗಳು 17.38 kmpl ನಿಂದ 19.89 kmpl ಗೆ ಏರಿಕೆಯಾಗಿದೆ.

Maruti Brezza

  • 2023ರ ಮಧ್ಯದಲ್ಲಿ ಈ SUVಯ ಪವರ್‌ಟ್ರೇನ್ ಸೆಟಪ್‌ನಿಂದ ಮೈಲ್ಡ್-ಹೈಬ್ರಿಡ್ ಟೆಕ್ ಅನ್ನು ಸ್ಥಗಿತಗೊಳಿಸಲಾಗಿತ್ತು.
  •  ಮಾರುತಿಯು ಈ SUVಯ ಹೈಯರ್-ಸ್ಪೆಕ್ ZXi ಮತ್ತು ZXi+ MT ವೇರಿಯೆಂಟ್‌ಗಳಿಗೆ ಈ ಟೆಕ್ ಅನ್ನು ಮತ್ತೆ ನೀಡುತ್ತಿದೆ.
  •  ಆರಂಭಿಕ-ಸ್ಪೆಕ್ LXi ಮತ್ತು VXi MT ವೇರಿಯೆಂಟ್‌ಗಳಲ್ಲಿ ಈ ಮೈಲ್ಡ್-ಹೈಬ್ರಿಡ್ ಟೆಕ್ ಲಭ್ಯವಿರುವುದಿಲ್ಲ.
  •  CNG ವೇರಿಯೆಂಟ್‌ಗಳ ಕ್ಲೈಮ್ ಮಾಡಲಾದ ಮೈಲೇಜ್‌ನಲ್ಲಿ ಯಾವುದೇ ವ್ಯತ್ಯಾಸಲವಿಲ್ಲದೇ 25.51 km/kg ಆಗಿರುತ್ತದೆ. 
  •  ಬ್ರೆಝಾ 5-ಸ್ಪೀಡ್ MT ಮತ್ತು 6-ಸ್ಪೀಡ್ AT ಎರಡರೊಂದಿಗೂ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ.
  •  ಈ SUV ಬೆಲೆಗಳು ರೂ 8.29 ಲಕ್ಷದಿಂದ 14.14 ಲಕ್ಷದ ತನಕ (ಎಕ್ಸ್-ಶೋರೂಂ) ಇದೆ.

 2023ರ ಮಧ್ಯದಲ್ಲಿ ಮಾರುತಿ ಬ್ರೆಝಾ ದ ಮ್ಯಾನುವಲ್ ಪವರ್‌ಟ್ರೇನ್ ಸೆಟಪ್‌ನಿಂದ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿಯನ್ನು ಕೈಬಿಟ್ಟ ನಂತರ, ಕಾರುತಯಾರಕರು ಈಗ ಅದನ್ನು ಮರಳಿ ತಂದಿದ್ದಾರೆ. ಸಬ್-4m SUVಯ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ಸಜ್ಜುಗೊಂಡಿರುವ ಹೈಯರ್-ಸ್ಪೆಕ್ ZXi ಮತ್ತು ZXi+ ವೇರಿಯೆಂಟ್‌ಗಳಿಗೆ ಮಾತ್ರವೇ ಇವುಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಲಾಗಿದೆ. ಆರಂಭಿಕ-ವೇರಿಯೆಂಟ್‌ಗಳಲ್ಲಿ ಈ ತಂತ್ರಜ್ಞಾನ ಇರುವುದಿಲ್ಲ.

 ಈ ಮರುಪರಿಚಯದಲ್ಲಿನ ವಿಶೇಷತೆ ಏನು?

 ಮೈಲ್ಡ್-ಹೈಬ್ರಿಡ್ ಸೆಟಪ್ ಅನ್ನು ಕೈಬಿಟ್ಟಾಗ, ಪೆಟ್ರೋಲ್-MT ಕಾಂಬೋಗೆ SUVಯ ಇಂಧನ ದಕ್ಷತೆ ಅಂಕಿ-ಅಂಶಗಳು ಸುಮಾರು 3 kmpl ರಷ್ಟು ಕುಸಿದು, 17.38 kmplಗೆ ಇಳಿದಿದೆ. ಆದರೆ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿಯ ಮರುಪರಿಚಯದೊಂದಿಗೆ ಈ SUVಯ ZXi ಮತ್ತು ZXi+ MT ವೇರಿಯೆಂಟ್‌ಗಳ ಕ್ಲೈಮ್ ಮಾಡಲಾದ ಮೈಲೇಜ್ 19.89 kmpl ನೀಡುತ್ತಿದ್ದು, ಇದು 2.5 kmplನಷ್ಟು ಹಚ್ಚಿದೆ. ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಆರಂಭಿಕ-ಬೆಲೆಯ LXi ಮತ್ತು VXi ವೇರಿಯೆಂಟ್‌ಗಳು ಈ ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿಯನ್ನು ಪಡೆದಿರುವುದಿಲ್ಲವಾದರೂ, 17.38 kmpl ನೀಡುತ್ತವೆ.

ಕೇವಲ ಪೆಟ್ರೋಲ್ ಆಫರಿಂಗ್ ಮಾತ್ರ ಲಭ್ಯ

Maruti Brezza 6-speed automatic gearbox

 ಈ ಮೈಲ್ಡ್-ಹೈಬ್ರಿಡ್ ಸೆಟಪ್ SUVಗಳು 1.5-ಲೀಟರ್‌ನ ನೈಸರ್ಗಿಕವಾಗಿ ಆಸ್ಪಿರೇಟ್ ಮಾಡುವ ಪೆಟ್ರೋಲ್ ಇಂಜಿನ್‌ಗೆ (103 PS/ 137 Nm) ಜೋಡಿಸಲಾದ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಬರುತ್ತದೆ. ಅಲ್ಲದೇ ಮಾರುತಿಯು 5-ಸ್ಪೀಡ್ MT ವೇರಿಯೆಂಟ್‌ನ ಐಚ್ಛಿಕ CNG ಕಿಟ್‌ನೊಂದಿಗೆ ಕೂಡಾ ಇದೇ ಇಂಜಿನ್ ಅನ್ನು ನೀಡುತ್ತಿದೆ. CNG ಆವೃತ್ತಿಯ ಕ್ಲೈಮ್ ಮಾಡಲಾದ ಇಂಧನ ದಕ್ಷತೆಯು ಇನ್ನೂ 25.51 km/kg ಆಗಿಯೇ ಉಳಿದಿದೆ.

 ಇದನ್ನೂ ಓದಿ: ಮಾರುತಿ eVX ಇಲೆಕ್ಟ್ರಿಕ್ SUV 2024ರ ಅಂತ್ಯದಲ್ಲಿ ಆಗಮನ ದೃಢಪಟ್ಟಿದೆ 

 

ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು

Maruti Brezza rear

 ಮಾರುತಿಯು ಬ್ರೆಝಾದ ಬೆಲೆಯನ್ನು ರೂ.29 ಲಕ್ಷ ಮತ್ತು ರೂ 14.14 ಲಕ್ಷದ (ಎಕ್ಸ್-ಶೋರೂಂ ದೆಹಲಿ) ನಡುವೆ ನಿಗದಿಪಡಿಸಿದೆ. ಈ SUV ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್, ಮತ್ತು ಮಾರುತಿ ಫ್ರಾಂಕ್ಸ್  ಸಬ್-4m ಕ್ರಾಸ್ಓವರ್ SUVಗಳಿಗೆ ಪೈಪೋಟಿ ನೀಡುತ್ತದೆ.

 ಇನ್ನಷ್ಟು ಓದಿ : ಮಾರುತಿ ಬ್ರೆಝಾ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಬ್ರೆಜ್ಜಾ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience