10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx
ಲೆಕ್ಕ ನೋಡಿದರೆ, ಮಾರಾಟವಾಗಿರುವ ಪ್ರತಿ ನಾಲ್ಕು ಫ್ರಾಂಕ್ಸ್ ಯೂನಿಟ್ ಗಳಲ್ಲಿ ಒಂದು ಆಟೋಮ್ಯಾಟಿಕ್ ವೇರಿಯಂಟ್ ಆಗಿದೆ. ಇದು ಎಂಜಿನ್ ಅನ್ನು ಅವಲಂಬಿಸಿ 5-ಸ್ಪೀಡ್ AMT ಮತ್ತು 6-ಸ್ಪೀಡ್ AT ಆಯ್ಕೆಯನ್ನು ಪಡೆಯುತ್ತದೆ.
2023 ರ ಏಪ್ರಿಲ್ ಕೊನೆಯಲ್ಲಿ ಮಾರುಕಟ್ಟೆಗೆ ಬರುವ ಮೊದಲು, ಮಾರುತಿ ಫ್ರಾಂಕ್ಸ್ ಜನವರಿಯಲ್ಲಿ ಆಟೋ ಎಕ್ಸ್‌ಪೋ 2023 ನಲ್ಲಿ ತನ್ನ ಜಾಗತಿಕ ಪಾದಾರ್ಪಣೆಯನ್ನು ಮಾಡಿತು. ಕಳೆದ ಒಂಬತ್ತು ತಿಂಗಳಲ್ಲಿ, ಇದು ಈಗಾಗಲೇ 1 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಲು ಯಶಸ್ವಿಯಾಗಿದೆ. ಫ್ರಾಂಕ್ಸ್ ಮೂಲಭೂತವಾಗಿ ಗ್ರ್ಯಾಂಡ್ ವಿಟಾರಾ ಕಾಂಪ್ಯಾಕ್ಟ್ SUV ಯ ಸ್ಟೈಲಿಂಗ್ ಪಡೆದಿರುವ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಧಾರಿತ ಕ್ರಾಸ್‌ಒವರ್ ಆಗಿದೆ. ಇದು ಮಾರುತಿ ನೆಕ್ಸಾ ಲೈನ್ ಅಪ್ ನಲ್ಲಿ ಈ ಎರಡು ಮಾಡೆಲ್ ಗಳ ನಡುವೆ ನಿಲ್ಲುತ್ತದೆ.
ಮಾರುತಿಯ ಈ ಹೊಸ ಮಾಡೆಲ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿವೆ.
ಫ್ರಾಂಕ್ಸ್ ಫೀಚರ್ ಗಳು
ಮಾರುತಿ ಫ್ರಾಂಕ್ಸ್ ಸುತ್ತಲೂ LED ಲೈಟಿಂಗ್, ಡ್ಯುಯಲ್-ಟೋನ್ ಕ್ಯಾಬಿನ್ ಮತ್ತು ಹಲವಾರು ಪ್ರೀಮಿಯಂ ಫೀಚರ್ ಗಳೊಂದಿಗೆ ಬರುತ್ತದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು 360-ಡಿಗ್ರಿ ವ್ಯೂ ಕ್ಯಾಮೆರಾವನ್ನು ಪಡೆಯುತ್ತದೆ. ನೀಡಲಾಗಿರುವ ಇತರ ಸೌಕರ್ಯಗಳಲ್ಲಿ ರಿಯರ್ ವೆಂಟ್ ನೊಂದಿಗೆ ಆಟೋ AC, ಕ್ರೂಸ್ ಕಂಟ್ರೋಲ್ ಮತ್ತು ಕನೆಕ್ಟೆಡ್ ಕಾರ್ ಟೆಕ್ನೋಲೊಜಿ ಸೇರಿವೆ.
ಸಂಬಂಧಿಸಿದ ಲೇಖನ: ಮಾರುತಿ ಬಲೆನೊ ವರ್ಸಸ್ ಮಾರುತಿ ಫ್ರಾಂಕ್ಸ್
ಫ್ರಾಂಕ್ಸ್ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್
ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುವ ಕೆಲವೇ ಕೆಲವು ಮಾರುತಿ ನೆಕ್ಸಾ ಮಾಡೆಲ್ ಗಳಲ್ಲಿ ಫ್ರಾಂಕ್ಸ್ ಒಂದಾಗಿದೆ, ಅವುಗಳೆಂದರೆ 1-ಲೀಟರ್ ಟರ್ಬೊ-ಪೆಟ್ರೋಲ್ (100 PS/ 148 Nm) ಮತ್ತು 1.2-ಲೀಟರ್ ಪೆಟ್ರೋಲ್ (90 PS/ 113 Nm). ಅವೆರಡನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ: ಮೊದಲನೆಯದು 5-ಸ್ಪೀಡ್ AMT ಆಯ್ಕೆಯನ್ನು ಪಡೆಯುತ್ತದೆ ಆದರೆ ಎರಡನೆಯದು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 6-ಸ್ಪೀಡ್ AT ಆಯ್ಕೆಯನ್ನು ಪಡೆಯುತ್ತದೆ. 1.2-ಲೀಟರ್ ಪೆಟ್ರೋಲ್ ಗರಿಷ್ಠ ಇಂಧನ ದಕ್ಷತೆಗಾಗಿ CNG ಆಯ್ಕೆಯನ್ನು ಕೂಡ ಪಡೆಯುತ್ತದೆ.
ಮಾರುತಿಯು ತನ್ನ ಫ್ರಾಂಕ್ಸ್‌ನ ಮಾರಾಟದಲ್ಲಿ 24 ಪ್ರತಿಶತದಷ್ಟು ಆಟೋಮ್ಯಾಟಿಕ್ ವೇರಿಯಂಟ್ ಗಳನ್ನು ಹೊಂದಿದೆ ಎಂದು ಬಹಿರಂಗಪಡಿಸಿತು, ಆದರೆ ಇದರಲ್ಲಿ ಕೈಗೆಟುಕುವ ಬೆಲೆಯ AMT ಆಯ್ಕೆ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಹೆಚ್ಚು ರಿಫೈನ್ ಆಗಿರುವ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಯ ಕಾರುಗಳ ಸಂಖ್ಯೆ ಎಷ್ಟು ಎಂಬುದನ್ನು ತಿಳಿಸಿಲ್ಲ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಸುಜುಕಿ ಫ್ರಾಂಕ್ಸ್ ಬೆಲೆಯು ಪ್ರಸ್ತುತ ರೂ 7.46 ಲಕ್ಷದಿಂದ ಶುರುವಾಗಿ ರೂ 13.13 ಲಕ್ಷದವರೆಗೆ (ಎಕ್ಸ್ ಶೋರೂಂ, ದೆಹಲಿ) ಇದೆ. ಇದು ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ ಆದರೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ಮತ್ತು ಟಾಟಾ ಪಂಚ್, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ನಂತಹ ಸಬ್‌ಕಾಂಪ್ಯಾಕ್ಟ್ SUV ಗಳಿಗೆ ಪರ್ಯಾಯ ಆಯ್ಕೆಯಾಗಿದೆ
ಇನ್ನಷ್ಟು ಓದಿ: ಫ್ರಾಂಕ್ಸ್ AMT